ಪೋಸ್ಟ್ ಆಫೀಸ್ (Post Office), ಜನಸಾಮಾನ್ಯರಿಗಾಗಿ ಹಲವಾರು ಹೂಡಿಕೆ ಯೋಜನೆಗಳನ್ನು (Investment Schemes) ಜಾರಿಗೆ ತಂದಿದೆ. ಆದ್ರೆ ಕೆಲವು ಯೋಜನೆಗಳು ಬಹಳಷ್ಟು ಆದಾಯವನ್ನು ತನ್ನ ಗ್ರಾಹಕರಿಗೆ ನೀಡುತ್ತದೆ. ಅದರಲ್ಲೂ ಪೋಸ್ಟ್ ಆಫೀಸ್‌ನ ಬೆಸ್ಟ್ ಯೋಜನೆಯೊಂದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಅನೇಕರು ತಮ್ಮ ಸಂಬಳದ ಜೊತೆಗೆ ಮಾಸಿಕ ಹೆಚ್ಚುವರಿ ಆದಾಯ ಪಡೆಯಬೇಕೆಂದು ನಿರೀಕ್ಷಿಸುತ್ತಾರೆ. ಅಂತಹವರಿಗೆ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (MIS) ಒಂದು ಬೆಸ್ಟ್ ಯೋಜನೆಯಾಗಿದೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೂಡಿಕೆ ಮಾಡಿ, ಆದಾಯ ಗಳಿಸಬೇಕೆಂದುಕೊಂಡವರಿಗೆ ಬೆಸ್ಟ್. ಇದು ಅಪಾಯವನ್ನು ಇಷ್ಟಪಡದವರಿಗೆ ಮತ್ತು ನಿಯಮಿತ ಬಡ್ಡಿ ರೂಪದಲ್ಲಿ ಆದಾಯ ಬಯಸುವವರಿಗೆ ಸೂಕ್ತವಾಗಿದೆ.

1 ಲಕ್ಷ ಹೂಡಿಕೆ ಮಾಡಿದ್ರೆ ಎಷ್ಟು ಸಿಗುತ್ತೆ?
ಈ ಯೋಜನೆ ಕೇಂದ್ರ ಸರ್ಕಾರದ ಅಧೀನದೊಂದಿಗೆ ಜಾರಿಗೆ ಬಂದಿದ್ದು, ಸುರಕ್ಷಿತ ಹೂಡಿಕೆ ಎಂದು ಹೇಳಲಾಗಿದೆ. ಹಾಗಾಗಿಯೇ, ಸಣ್ಣ ಮತ್ತು ಮಧ್ಯಮ ವರ್ಗದ ಆದಾಯದ ಜನರು ಇದನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಪ್ರಸ್ತುತ, MIS ಯೋಜನೆಯಲ್ಲಿ ವಾರ್ಷಿಕ 7.4% ಬಡ್ಡಿ ದರವನ್ನು ನೀಡಲಾಗುತ್ತಿದೆ. ಅಂದರೆ, ನೀವು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಸುಮಾರು 616 ರೂ. ಬಡ್ಡಿದರ ಪಡೆಯಬಹುದು.
ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ ನಿಮ್ಮ ಹಣವನ್ನು ಒಮ್ಮೆ ಹೂಡಿಕೆ ಮಾಡಬೇಕು. ಇದರ ಮೇಲೆ ಪ್ರತಿ ತಿಂಗಳು ನಿರ್ದಿಷ್ಟ ಬಡ್ಡಿ ದರದ ಪ್ರಕಾರ ಆದಾಯ ಸಿಗುತ್ತದೆ. ಬ್ಯಾಂಕುಗಳ ಸ್ಥಿರ ಠೇವಣಿಗಳು (FDs) ಅಥವಾ ಇತರ ಕಡಿಮೆ ಅಪಾಯದ ಹೂಡಿಕೆ ಪ್ಲಾನ್‌ಗಳಿಗೆ ಹೋಲಿಸಿದರೆ, ಈ ಯೋಜನೆ ಹೆಚ್ಚಿನ ಆದಾಯವನ್ನು ನೀಡುತ್ತದೆ. ಹೀಗಾಗಿ, ಪ್ರತಿ ತಿಂಗಳು ಒಂದೇ ಮೊತ್ತದ ಆದಾಯ ಗಳಿಸಬಹುದು.
MIS ಯೋಜನೆಯ ಮತ್ತೊಂದು ವಿಶೇಷತೆಯೆಂದರೆ, ಇದರ ಸೇಫ್ಟಿ. ಏಕೆಂದರೆ ಇದು ಸರ್ಕಾರಿ ಅಧೀನದಲ್ಲಿರುವುದರಿಂದ, ಹೂಡಿಕೆದಾರರಿಗೆ ಹಣ ಕಳೆದುಕೊಳ್ಳುವ ಭಯವಿರುವುದಿಲ್ಲ. ಈ ಯೋಜನೆಯು 5 ವರ್ಷಗಳ ಅವಧಿಯನ್ನು ಹೊಂದಿದೆ. ಈ ಐದು ವರ್ಷಗಳ ಕಾಲ ಪ್ರತಿ ತಿಂಗಳು ಬಡ್ಡಿಯು ನಿಮ್ಮ ಖಾತೆಗೆ ಜಮೆಯಾಗುತ್ತಾ ಇರುತ್ತದೆ. ಅವಧಿ ಮುಗಿದ ನಂತರ, ನೀವು ಮಾಡಿದ ಹೂಡಿಕೆ ಹಣವನ್ನು ಹಿಂಪಡೆಯಬಹುದು ಅಥವಾ ಹೆಚ್ಚಿನ ಹೂಡಿಕೆಯನ್ನೂ ಮಾಡಬಹುದು.
ಏನಿದರ ವಿಶೇಷತೆ?
ಯಾವುದೇ ಅಂಚೆ ಕಚೇರಿ ಶಾಖೆಯಲ್ಲೂ ಕೇವಲ 1,000 ರೂಪಾಯಿಯಿಂದ ಹೂಡಿಕೆ ಪ್ರಾರಂಭಿಸಬಹುದು. ಅಲ್ಲದೇ ಏಕ ವ್ಯಕ್ತಿ ಖಾತೆ ಮತ್ತು ಜಂಟಿ ಖಾತೆ ಎಂಬ ಎರಡು ಆಯ್ಕೆಗಳಿವೆ. ಏಕ ವ್ಯಕ್ತಿ ಖಾತೆಗಾಗಿ ಗರಿಷ್ಠ ಹೂಡಿಕೆ ಮಿತಿ ₹9 ಲಕ್ಷ, ಆದರೆ ಜಂಟಿ ಖಾತೆಗಾಗಿ ಈ ಮಿತಿಯು ₹15 ಲಕ್ಷದವರೆಗೂ ಮಾಡಬಹುದು. ಈ ಆಯ್ಕೆಯಿಂದಾಗಿ ಯಾರಾದರೂ ತಮ್ಮ ಫ್ಯಾಮಿಲಿಯೊಂದಿಗೆ, ಸಂಗಾತಿಯೊಂದಿಗೆ ಅಕೌಂಟ್ ಕ್ರಿಯೇಟ್ ಮಾಡಬಹುದು.
ನೀವು ಒಮ್ಮೆ 5 ಲಕ್ಷ ರೂ. ಹೂಡಿಕೆ ಮಾಡಿದರೆ, 7.4% ವಾರ್ಷಿಕ ಬಡ್ಡಿ ದರದೊಂದಿಗೆ ಪ್ರತಿ ತಿಂಗಳು ಸುಮಾರು ₹3,083 ಪಡೆಯಬಹುದು. ಅದೇ ಒಂದು ವೇಳೆ 9 ಲಕ್ಷ ಹೂಡಿಕೆ ಮಾಡಿದರೆ, ತಿಂಗಳ ಆದಾಯವು 5,550 ರೂ. ವರೆಗೆ ಹೆಚ್ಚಾಗುತ್ತದೆ. ಈ ರೀತಿಯಾಗಿ, ಪ್ರತಿ ತಿಂಗಳು ಸ್ಥಿರ ಬಡ್ಡಿ ರೂಪದಲ್ಲಿ ಹಣ ಸಂಪಾದಿಸಬಹುದು. ಈ ಹಣದಲ್ಲಿ ನೀವು ನಿಮ್ಮ ವೆಚ್ಚಗಳಿಗೂ ಬಳಸಬಹುದು ಅಥವಾ ಅದನ್ನೂ ಉಳಿತಾಯ ಮಾಡಿಟ್ಟುಕೊಳ್ಳಬಹುದು.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS) ತಿಂಗಳ ಆದಾಯ ಪಡೆಯಬೇಕೆಂದುಕೊಂಡವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಮಾರುಕಟ್ಟೆಯ ಏರಿಳಿತಗಳು ಮತ್ತು ಸ್ಟಾಕ್ ಹೂಡಿಕೆ ಅಪಾಯಗಳಿಂದ ತಪ್ಪಿಸಿಕೊಳ್ಳುವವರಿಗೆ ಇದು ಬಹಳ ಅನುಕೂಲಕರವಾಗಿದೆ. ಕಡಿಮೆ ಮೊತ್ತದಿಂದ ಪ್ರಾರಂಭಿಸಿ, ಹೆಚ್ಚಿನ ಆದಾಯ ಪಡೆಯಬೇಕೆಂದುಕೊಂಡವರಿಗೆ ಇದೂ ಸೂಕ್ತ. ಆದರೆ ಸರಿಯಾದ ಮಾಹಿತಿ ಪಡೆದುಕೊಂಡು, ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವುದು ಉತ್ತಮ.


Click it and Unblock the Notifications