ಹುಡುಗರಿಗೆ ವಾಹನದ ಕ್ರೇಜ್ ಜಾಸ್ತಿ. ಅದಕ್ಕಂತನೇ ಬೈಕ್, ಕಾರು ಖರೀದಿಸುತ್ತಲೇ ಇರುತ್ತಾರೆ. ಅದರಲ್ಲೂ ಹೊಸ ಕಾರ್ ಲಾಂಚ್ ಆದ್ರೆ ಸಾಕು, ಅದನ್ನೇ ನೋಡುತ್ತಾ ಕುಳಿತು ಬಿಡುತ್ತಾರೆ. ಒಂದು ಕಾರು (Car) ಖರೀದಿಸಿದ್ರೆ ಸಾಕು ಇಷ್ಟ ಬಂದ ಕರೆ, ಇಷ್ಟ ಪಟ್ಟ ಟೈಮಲ್ಲಿ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಹೋಗಿಬರಬಹುದು. ಇದೀಗ ನೀವೂ ಕೂಡಾ ಹೊಸ ಕಾರು ಖರೀದಿಸೋ ಪ್ಲಾನ್‌ನಲ್ಲಿದ್ದೀರಾ?

ಹೆಚ್ಚಿನವರಿಗೆ ಸ್ವಂತದ್ದೊಂದು ಕಾರು ಇರಬೇಕೆಂದು ಬಯಸುತ್ತಾರೆ. ಫ್ಯಾಮಿಲಿಯೊಂದಿಗೆ ಪ್ರಯಾಣ ಮಾಡಲು ಬಯಸುವವರಿಗೆ ಕಾರು ಉತ್ತಮ ಆಯ್ಕೆಯಾಗಿದೆ. ಹಾಗಿದ್ರೆ ನೀವು ಇನ್ನೂ ಕಾರು ಖರೀದಿ ಮಾಡದಿದ್ದರೆ ಅಥವಾ ಕಾರು ತೆಗೆದುಕೊಳ್ಳಬೇಕೆಂದು ಸಾಲ (Car Loan) ಮಾಡಲು ಪ್ಲಾನ್ ಮಾಡಿದ್ದರೆ. ಇಲ್ಲಿದೆ ನೋಡಿ. ಇಲ್ಲಿ ವಿವಿಧ ಬ್ಯಾಂಕುಗಳು ಕಡಿಮೆ ಬಡ್ಡಿಯೊಂದಿಗೆ ಸಾಲ ನೀಡುತ್ತದೆ. ಹಾಗಿದ್ರೆ ಕಡಿಮೆ ಬಡ್ಡಿ ದರದಲ್ಲಿ ಕಾರು ಸಾಲ ನೀಡುವ ಬ್ಯಾಂಕುಗಳು ಯಾವುದು ಎಂಬುದರ ಮಾಹಿತಿ ಇಲ್ಲಿದೆ.
ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು 5 ವರ್ಷಗಳ ಅವಧಿಯ ಹೊಸ ಕಾರಿಗಾಗಿ 10 ಲಕ್ಷ ರೂ. ಕಾರ್ ಲೋನ್ ನೀಡುತ್ತದೆ. ಈ ಸಾಲಗಳಿಗೆ ಶೇಕಡಾ 7.85% ರಿಂದ ಶೇಕಡಾ 9.99% ರವರೆಗೆ ಬಡ್ಡಿ ವಿಧಿಸುತ್ತವೆ. ಗ್ರಾಹಕರ ಕ್ರೆಡಿಟ್ ಪ್ರೊಫೈಲ್ ಮತ್ತು ಆದಾಯದ ಆಧಾರದ ಮೇಲೆ ಈ ಬಡ್ಡಿದರಗಳನ್ನು ನಿಗದಿಪಡಿಸಲಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಭಾರತದ ಅತಿದೊಡ್ಡ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಕಾರ್ ಲೋನ್ ನೀಡುತ್ತದೆ. ಐದು ವರ್ಷಗಳ ಅವಧಿಯ 10 ಲಕ್ಷ ರೂಪಾಯಿ ಸಾಲಕ್ಕೆ ಶೇಕಡಾ 8.75% ಬಡ್ಡಿಯನ್ನು ವಿಧಿಸಲಾಗುತ್ತದೆ. ಇದರ ಮಾಸಿಕ ಕಂತು 20,638 ರೂಪಾಯಿ ಆಗಿರುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): ಈ ಸಾರ್ವಜನಿಕ ವಲಯದ ಬ್ಯಾಂಕ್ ೫ ವರ್ಷಗಳ ಅವಧಿಗೆ 10 ಲಕ್ಷ ರೂಪಾಯಿ ಹೊಸ ಕಾರ್ ಲೋನ್‌ಗೆ ಶೇಕಡಾ 7.85% ಬಡ್ಡಿ ವಿಧಿಸುತ್ತದೆ. ಇದರ ಇಎಂಐ ತಿಂಗಳಿಗೆ 20,205 ರೂಪಾಯಿ ಆಗಿರುತ್ತದೆ.
ಐಡಿಬಿಐ ಬ್ಯಾಂಕ್: 10 ಲಕ್ಷ ರೂಪಾಯಿ ಸಾಲವನ್ನು ಹೊಸ ಕಾರಿಗಾಗಿ ಐಡಿಬಿಐ ಬ್ಯಾಂಕ್‌ನಲ್ಲಿ ತೆಗೆದುಕೊಂಡರೆ, ಐದು ವರ್ಷಗಳ ಅವಧಿಗೆ ಶೇಕಡಾ 7.95% ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಅಂದರೆ ತಿಂಗಳಿಗೆ ಇಎಂಐ 20,252 ರೂಪಾಯಿ ಆಗಿರುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್: ಶೇಕಡಾ 9.4% ಬಡ್ಡಿ ವಿಧಿಸಲಾಗುತ್ತದೆ. ಇದರ ಇಎಂಐ 20,953 ರೂಪಾಯಿ ಆಗಿರುತ್ತದೆ. ಇದು ಬ್ಯಾಂಕ್ ಗ್ರಾಹಕರ ಆದಾಯ, ಕ್ರೆಡಿಟ್ ಸ್ಕೋರ್ ಸಂಬಂಧಿಸಿ ಅನ್ವಯವಾಗುತ್ತದೆ
ಬ್ಯಾಂಕ್ ಆಫ್ ಬರೋಡಾ: ಐದು ವರ್ಷಗಳ ಅವಧಿಯ 10 ಲಕ್ಷ ರೂಪಾಯಿ ಹೊಸ ಕಾರಿಗಾಗಿ ಸಾಲ ಮಾಡಿದ್ರೆ, ಶೇಕಡಾ 8.15% ಬಡ್ಡಿ ವಿಧಿಸಲಾಗುತ್ತದೆ. ಇದರ ಇಎಂಐ 20,348 ರೂಪಾಯಿ ಆಗಿರುತ್ತದೆ.
ಐಸಿಐಸಿಐ ಬ್ಯಾಂಕ್: ಐದು ವರ್ಷಗಳ ಅವಧಿಗೆ, 10 ಲಕ್ಷ ಸಾಲಕ್ಕೆ ಶೇಕಡಾ 8.5% ಬಡ್ಡಿ ವಿಧಿಸುತ್ತದೆ. ಇದರ ಇಎಂಐ 20,517 ರೂಪಾಯಿ ಆಗಿರುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 5 ವರ್ಷಗಳ ಅವಧಿಗೆ 10 ಲಕ್ಷ ರೂಪಾಯಿ ಹೊಸ ಕಾರು ತೆಗೆದುಕೊಳ್ಳಲು ಸಾಲ ಮಾಡಿದ್ರೆ, ನಿಮಗೆ ಶೇಕಡಾ 7.90% ಬಡ್ಡಿ ದರವನ್ನು ವಿಧಿಸುತ್ತದೆ. ಇದರ ಮಾಸಿಕ ಕಂತು 20,229 ರೂಪಾಯಿ ಆಗಿರುತ್ತದೆ.
ಕೆನರಾ ಬ್ಯಾಂಕ್: 10 ಲಕ್ಷ ರೂಪಾಯಿ ಹೊಸ ಕಾರಿಗಾಗಿ ಐದು ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡರೆ, ಶೇಕಡಾ 8.20% ಬಡ್ಡಿ ಕಟ್ಟಬೇಕು. ಇದರ ಮಾಸಿಕ ಕಂತು 20,372 ರೂಪಾಯಿ.
ಆಕ್ಸಿಸ್ ಬ್ಯಾಂಕ್: ಐದು ವರ್ಷಗಳ ಅವಧಿಗೆ ಶೇಕಡಾ 8.8% ಬಡ್ಡಿ ವಿಧಿಸಲಾಗುತ್ತದೆ. ಅಂದರೆ ಈ ಸಾಲದ ಮೊತ್ತಕ್ಕೆ ಒಂದು ತಿಂಗಳ ಇಎಂಐ 20,661 ರೂಪಾಯಿ ಆಗಿರುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications