ಐಫೋನ್ (iPhone) ಹಲವು ಯುವಕರ ಕನಸಿನ ಮೊಬೈಲ್. ಬೈಕ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್ ಹೇಗೋ, ಮೊಬೈಲ್ ಮಾರುಕಟ್ಟೆಯಲ್ಲಿ ಐಫೋನ್ ಕೂಡಾ ತನ್ನ ಫ್ಯಾನ್ ಬೇಸ್ ಅನ್ನು ಕ್ರಿಯೇಟ್ ಮಾಡಿದೆ. ಎಷ್ಟೋ ಜನರಿಗೆ ಐಫೋನ್ ಖರೀದಿಸಬೇಕೆಂಬ ಆಸೆ ಇರುತ್ತೆ. ಆದ್ರೆ ಏನ್ ಮಾಡೋದು ದುಬಾರಿ ಬೆಲೆಯಿಂದಾಗಿ ಹಲವರ ಕನಸು ಕನಸಾಗಿಯೇ ಉಳಿಯುತ್ತೆ. ಆದ್ರೆ ಇದೀಗ ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್ ಒಂದಿದೆ ನೋಡಿ. ಈ ಮೂಲಕ ನೀವು ದುಬಾರಿ ಬೆಲೆಯ ಐಫೋನ್ ಅನ್ನು ಭಾರೀ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು. ಹಾಗಿದ್ರೆ ಐಫೋನ್ ಮೇಲೆ ಎಷ್ಟು ರಿಯಾಯಿತಿ ಲಭ್ಯವಿದೆ, ಯಾವ ಮಾಡೆಲ್? ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹೌದು, ಐಫೋನ್ ಖರೀದಿಸುವ ಪ್ಲಾನ್‌ನಲ್ಲಿದ್ದವರಿಗೆ ಗುಡ್ ನ್ಯೂಸ್‌ವೊಂದಿದೆ ನೋಡಿ. ಐಫೋನ್ 17 ಲಾಂಚ್ ಬೆನ್ನಲ್ಲೇ ಇದೀಗ ಐಫೋನ್ 16 ಪ್ಲಸ್ ಮಾದರಿಯನ್ನು ಭಾರಿ ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವೊಂದಿದೆ. ಜಿಯೋಮಾರ್ಟ್‌ನಲ್ಲಿ ಐಫೋನ್ ಖರೀದಿದಾರರಿಗೆ ವಿಶೇಷ ಆಫರ್ ಲಭ್ಯವಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..
ಐಫೋನ್ ಖರೀದಿದಾರರಿಗೆ ಬಂಪರ್!
ಹಬ್ಬದ ಸೀಸನ್ ಮುಗಿದು ಇಯರ್ ಎಂಡ್ ಸೇಲ್ ಬರುತ್ತಿದೆ. ಆದ್ರೆ ಇದೀಗ ಅದಕ್ಕೂ ಮುನ್ನವೇ ಐಫೋನ್ 16 ಪ್ಲಸ್ ಮೇಳೆ ಬಂಪರ್ ರಿಯಾಯಿತಿಯೊಂದು ಲಭ್ಯವಿದೆ. ಕೆಲವು ಆಕರ್ಷಕ ಕೊಡುಗೆಗಳ ಮೂಲಕ ಈ ಮಾದರಿಯನ್ನು ಭಾರೀ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಬ್ಯಾಂಕ್ ಕೊಡುಗೆಗಳನ್ನೆಲ್ಲಾ ಸೇರಿಸಿದ್ರೆ, ನೀವು ಐಫೋನ್ 16 ಪ್ಲಸ್ ಮೇಲೆ ₹25,000 ವರೆಗೆ ರಿಯಾಯಿತಿ ಪಡೆಯಬಹುದು.
ಆಪಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಐಫೋನ್ 16 ಪ್ಲಸ್‌ನ ಇತ್ತೀಚಿನ ರಿಯಾಯಿತಿ ಬೆಲೆ ₹79,900 ಆಗಿತ್ತು. ಆದರೆ, ಇದೀಗ ಜಿಯೋಮಾರ್ಟ್ ಅದಕ್ಕೂ ಕಡಿಮೆ ಬೆಲೆಯಲ್ಲಿ ಈ 16 ಪ್ಲಸ್ ಮಾದರಿಯನ್ನು ಮಾರಾಟ ಮಾಡುತ್ತಿದೆ. ಅಂದರೆ ಜಿಯೋ ಮಾರ್ಟ್‌ನಲ್ಲಿ ₹65,990 ರೂಪಾಯಿಗೆ ನೀವು ಇದನ್ನು ಖರೀದಿಸಬಹುದು. ಇನ್ನು ಈ ಫೋನ್ ಮೇಳೆ ಬ್ಯಾಂಕ್ ಆಫರ್ಸ್, ಎಕ್ಸ್‌ಚೇಂಜ್ ಆಫರ್‌ಗಳು ಲಭ್ಯವಿದ್ದು, ಇವೆಲ್ಲವನ್ನೂ ಸೇರಿಸಿದ್ರೆ ಒಟ್ಟು ₹25,000 ವರೆಗೆ ರಿಯಾಯಿತಿ ಪಡೆಯಬಹುದು.
ಜಿಯೋ ಮಾರ್ಟ್‌ನ ಈ ಬಂಪರ್ ಆಫರ್ ಆಪಲ್ ಕಂಪನಿಯ ಐಫೋನ್ 16 ಪ್ಲಸ್‌ನ 128GB ವೇರಿಯಂಟ್‌ಗೆ ಮಾತ್ರ ಅನ್ವಯವಾಗುತ್ತದೆ. ಈಗಾಗಲೇ ಐಫೋನ್ 17 ಸೀರಿಸ್ ಬಿಡುಗಡೆಯಾಗಿದೆ. ಆದ್ರೆ ಅದರಲ್ಲಿ ಪ್ಲಸ್ ಆವೃತ್ತಿ ಬಿಡುಗಡೆಯಾಗಿಲ್ಲ. ಈ ಬಾರಿ ಪ್ಲಸ್ ಮಾಡೆಲ್ ಬದಲಿಗೆ 17 ಸೀರಿಸ್‌ನಲ್ಲಿ ಐಫೋನ್ ಏರ್ ಮಾದರಿಯನ್ನು ಪರಿಚಯಿಸಲಾಗಿದೆ. ಅದರಿಂದ ಇತ್ತೀಚೆಗೆ ಐಫೋನ್ ಪ್ಲಸ್ ಆವೃತ್ತಿ ಮೇಲೆ ಡಿಮ್ಯಾಂಡ್ ಮತ್ತಷ್ಟು ಹೆಚ್ಚಾಗಿದೆ.
ಐಫೋನ್ 16 ಪ್ಲಸ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಅಲ್ಲದೇ ಡೈನಾಮಿಕ್ ಐಲ್ಯಾಂಡ್ ಫೀಚರ್ ಒಳಗೊಂಡಿದೆ. ಸೂಪರ್ ರೆಟಿನಾ XDR ಡಿಸ್‌ಪ್ಲೇ ಹೊಂದಿರುವ ಐಫೋನ್ 16 ಪ್ಲಸ್, A18 ಚಿಪ್‌ಸೆಟ್‌ನಿಂದ ಕಾರ್ಯ ನಿರ್ವಹಿಸುತ್ತದೆ. ವಿಶೇಷವಾಗಿ ಈ ಪ್ರೊಸೆಸರ್ ಅನ್ನು ಆಪಲ್ ಇಂಟೆಲಿಜೆನ್ಸ್ ಫೀಚರ್ಸ್‌ಗಾಗಿ ಅಳವಡಿಸಲಾಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications