ಹೆಚ್ಚಿನ ಯುವಕರಿಗೆ ಮತ್ತೊಂದು ಕಂಪನಿಯಲ್ಲಿ ಹೋಗಿ ಕೆಲಸ ಮಾಡೋದು ಇಷ್ಟ ಇರಲ್ಲ. ಬದಲಿಗೆ ತಾನೇ ಒಂದು ವ್ಯವಹಾರ (Business) ಶುರು ಮಾಡ್ಬೇಕು, ಹಲವರಿಗೆ ಉದ್ಯೋಗ ನೀಡಬೇಕು ಎಂಬ ಕನಸನ್ನ ಇಟ್ಟುಕೊಂಡಿರುತ್ತಾರೆ. ಆದ್ರೆ ಬಂಡವಾಳದ ಕೊರತೆಯಿಂದಲೋ, ನಷ್ಟದ ಭಯದಿಂದಲೋ ಯಾವುದೇ ವ್ಯವಹಾರ ಶುರು ಮಾಡದೇ ಸುಮ್ಮನಿದ್ದು ಬಿಡುತ್ತಾರೆ. ಆದ್ರೆ ಇಂದು ನಾವು ಹೇಳುವ ಬ್ಯುಸಿನೆಸ್ ಐಡಿಯಾ (Business Idea) ನಿಮಗೆ ಪಕ್ಕಾ ಸಹಾಯ ಮಾಡುತ್ತೆ.

ನೀವೂ ಕೂಡಾ ಹೊಸ ವ್ಯವಹಾರವನ್ನು ಆರಂಭಿಸಲು ಪ್ಲಾನ್ ಮಾಡಿದ್ದೀರಾ? ಆಹಾರ ಉದ್ಯಮ ಆರಂಭಿಸಬೇಕು ಎಂಬ ಕನಸು ಕಂಡಿದ್ದೀರಾ? ಹಾಗಾದರೆ, ಈ ಟಿಪ್ಸ್ ನಿಮಗಾಗಿ. ಈ ವ್ಯವಹಾರದ ಮೂಲಕ ತಿಂಗಳಿಗೆ ₹90,000 ಗಳಿಸಬಹುದು. ಹಾಗಿದ್ರೆ ಆ ವ್ಯವಹಾರ ಯಾವುದು? ಆರಂಭಿಸುವುದು ಹೇಗೆ? ವೆಚ್ಚಗಳು, ಲಾಭಗಳು, ಲೈಸೆನ್ಸ್ ಮತ್ತು ಮಾರುಕಟ್ಟೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಸದ್ಯದ ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಆರೋಗ್ಯಕರ ಮತ್ತು ರುಚಿಕರವಾದ ಮನೆ ಊಟ ನೀಡುವುದು ಉತ್ತಮ ವ್ಯವಹಾರವಾಗಿದೆ. ಕಡಿಮೆ ಹೂಡಿಕೆ ಮತ್ತು ಸರಳ ಅಡುಗೆಮನೆಯ ವ್ಯವಸ್ಥೆಯೊಂದಿಗೆ ನಿಮ್ಮ ನಗರ ಅಥವಾ ಪ್ರದೇಶದಲ್ಲಿ ಪ್ರತಿದಿನ ಟಿಫಿನ್ ಮತ್ತು ಊಟ ನೀಡುವ ಮೂಲಕ ಆದಾಯ ಸಂಪಾದಿಸಬಹುದು. ಈ ವ್ಯಾಪಾರವು ಉತ್ತಮ ಆದಾಯದ ಮೂಲವಾಗಬಹುದು.
ಟಿಫಿನ್ ಅಥವಾ ಕ್ಯಾಟರಿಂಗ್ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಮಾರುಕಟ್ಟೆ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಬೆಂಗಳೂರು, ಮಂಗಳೂರು, ಮೈಸೂರು ನಗರಗಳಲ್ಲಿ ಐಟಿ ಕಂಪನಿಗಳು, ಪಿಜಿಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳ ಈ ಸಣ್ಣ ಅಂಗಡಿ ತೆರೆದರೆ ಸಾಕು. ನಿಮ್ಮ ಆಹಾರ ಚೆನ್ನಾಗಿದ್ರೆ ಅವರೇ ನಿಮಗೆ ಗ್ರಾಹಕರಾಗುತ್ತಾರೆ.
ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಊಟ, ದೊಡ್ಡ ದೊಡ್ಡ ಆಫೀಸ್‌ಗಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಆದಾಯ ಸಂಪಾದಿಸಬಹುದು. ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ಇನ್ನು ಇದರ ಸಪ್ಲೈಗಾಗಿ ಬೈಕ್ ಅಥವಾ ರಿಕ್ಷಾವನ್ನು ಬಳಸಿ.
ಆರಂಭಿಕ ಹೂಡಿಕೆಯ ವಿವರ:
ಅಡುಗೆಮನೆ ಸೆಟಪ್ ಮತ್ತು ಬಾಡಿಗೆ ಮುಂಗಡಕ್ಕೆ ₹1 ಲಕ್ಷ, ಸ್ಟೌವ್, ಫ್ರಿಡ್ಜ್, ಮಿಕ್ಸರ್ ಮತ್ತು ದೊಡ್ಡ ಪಾತ್ರೆಗಳಿಗೆ ₹1,20,000, ತರಕಾರಿ, ಅಕ್ಕಿ, ಎಣ್ಣೆ ಮತ್ತು ಮಸಾಲೆಗಳಿಗೆ ₹30,000, ಪ್ಯಾಕೇಜಿಂಗ್‌ಗೆ ₹20,000, ಲೋಗೋ ವಿನ್ಯಾಸ, ಪೋಸ್ಟರ್ ಮತ್ತು ಬ್ಯಾನರ್‌ಗಳಿಗೆ ₹15,000, ಸೆಕೆಂಡ್ ಹ್ಯಾಂಡ್ ಸ್ಕೂಟರ್ ಅಥವಾ ಡೌನ್‌ಪೇಮೆಂಟ್‌ಗೆ ₹50,000, ಪರವಾನಗಿ ಮತ್ತು ರಿಜಿಸ್ಟರ್‌ಗಳಿಗೆ ₹15,000, ಸಿಬ್ಬಂದಿ ಸಮವಸ್ತ್ರ ಮತ್ತು ಕ್ಲೀನಿಂಗ್ ಐಟಮ್‌ಗಳಿಗೆ ₹10,000 ಮತ್ತು ಇತರೆ ವೆಚ್ಚಗಳಿಗೆ ₹40,000. ಇಷ್ಟು ಹೂಡಿಕೆ ಮಾಡಬೇಕಾಗುತ್ತದೆ. ಈ ಮೂಲಕ 50-100 ಆರ್ಡರ್‌ಗಳನ್ನು ನಿರ್ವಹಿಸಬಹುದು.
ಪ್ರತಿ ತಿಂಗಳ ವೆಚ್ಚದ ಮಾಹಿತಿ:
ಕಚ್ಚಾ ವಸ್ತುಗಳಿಗೆ ₹60,000, ಇಬ್ಬರು ಅಡುಗೆ ಮಾಸ್ಟರ್‌ಗಳು ಮತ್ತು ಒಬ್ಬ ಡೆಲಿವರಿ ಏಜೆಂಟ್‌ಗೆ ₹45,000, ಬಾಡಿಗೆ, ವಿದ್ಯುತ್, ಗ್ಯಾಸ್, ನೀರಿನ ಬಿಲ್‌ಗಳಿಗೆ ₹20,000, ಪ್ಯಾಕೇಜಿಂಗ್‌ಗೆ ₹10,000, ಮಾರ್ಕೆಟಿಂಗ್ ಮತ್ತು ಆನ್‌ಲೈನ್ ಜಾಹೀರಾತುಗಳಿಗೆ ₹5,000, ಇಂಧನ ಮತ್ತು ವಿತರಣಾ ವೆಚ್ಚಗಳಿಗೆ ₹8,000 ಮತ್ತು ಇತರ ಸಣ್ಣ ವೆಚ್ಚಗಳಿಗೆ ₹2,000. ತಿಂಗಳಿಗೆ ಒಟ್ಟು ವೆಚ್ಚ ಸುಮಾರು ₹1,50,000 ರೂ.ನಷ್ಟು ಬೇಕಾಗಬಹುದು. ಒಂದು ವೇಳೆ ಇದಕ್ಕಿಂತ ಕಡಿಮೆಯೂ ಆಗಬಹುದು, ಹೆಚ್ಚೂ ಆಗಬಹುದು. ಇದೊಂದು ಅಂದಾಜು ಲೆಕ್ಕವಾಗಿದೆ.
ಆದಾಯ ಮತ್ತು ಲಾಭದ ಅಂದಾಜು ಲೆಕ್ಕ:
ಪ್ರತಿದಿನ 100 ಟಿಫಿನ್‌ಗಳು ಅಥವಾ ಊಟ ₹80 ಕ್ಕೆ ಮಾರಾಟ ಮಾಡಿದ್ದೀರಿ ಎಂದಾದರೆ, ತಿಂಗಳಿಗೆ ₹2,40,000 ಆದಾಯ ಬರುತ್ತದೆ. ಖರ್ಚು-ವೆಚ್ಚಗಳನ್ನೆಲ್ಲಾ ಲೆಕ್ಕಹಾಕಿದ ನಂತರ, ತಿಂಗಳಿಗೆ ಸುಮಾರು ₹90,000 ಲಾಭ ಪಡೆಯಬಹುದು ಎನ್ನಲಾಗಿದೆ. ಈ ಮೂಲಕ 6-8 ತಿಂಗಳಲ್ಲಿ ಹಾಕಿದ ಬಂಡವಾಳವನ್ನು ಮರಳಿ ಪಡೆಯಬಹುದು.
ಇನ್ನು ಯಾವುದೇ ವ್ಯವಹರ ಶುರು ಮಾಡಲು, ನಿಮ್ಮ ನಗರ ಅಥವಾ ಗ್ರಾಮ ಪಂಚಾಯತ್‌ನಿಂದ ವ್ಯಾಪಾರ ಪರವಾನಗಿ ಪಡೆಯುವುದು ಅವಶ್ಯಕ. ಆದಾಯವು ₹20 ಲಕ್ಷ ಮೀರಿದಾಗ ಜಿಎಸ್‌ಟಿ (GST) ನೋಂದಣಿ ಮಾಡಿಸಬೇಕು. ಕಾರ್ಮಿಕ ಇಲಾಖೆಯಿಂದ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆ ಅಡಿಯಲ್ಲಿ ಪರವಾನಗಿ ಪಡೆಯುವುದು ಕಡ್ಡಾಯ. ದೊಡ್ಡ ಅಡುಗೆಮನೆ ಅಥವಾ ಕ್ಯಾಟರಿಂಗ್ ಘಟಕಗಳಿದ್ದರೆ, ಅಗ್ನಿ ಸುರಕ್ಷತೆ ಮತ್ತು ಆಹಾರ ನೈರ್ಮಲ್ಯ ಪ್ರಮಾಣಪತ್ರಗಳನ್ನು ಪಡೆಯಬೇಕಾಗುತ್ತದೆ.
More From GoodReturns

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications