ತೊಗರಿ ಹಾಗೂ ಉದ್ದಿನ ಬೇಳೆಯ ಸ್ಟಾಕ್ ಮೇಲೆ ಮಿತಿಯನ್ನು ಹೇರಿದ ಕೆಲವು ದಿನಗಳಲ್ಲೇ ಕೇಂದ್ರ ಸರ್ಕಾರವು ಹಲವಾರು ವಸ್ತುಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳಗೊಳಿಸಿದೆ. ಈ ಹಿಂದೆ ಕೇಂದ್ರ ಸರ್ಕಾರವು ಸರಕುಗಳ ಕಳಪೆ ಲಭ್ಯತೆಯಿಂದಾಗಿ ಸಂಗ್ರಹಣೆಯನ್ನು ತಡೆಗಟ್ಟಲು ತೊಗರಿ ಹಾಗೂ ಉದ್ದಿನ ಬೇಳೆಯ ಸ್ಟಾಕ್ ಮಿತಿಯನ್ನು ವಿಧಿಸಿದೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಸರಕುಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಅತ್ಯಧಿಕ ಏರಿಕೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಮುಖ ವಸ್ತುಗಳ ಕನಿಷ್ಠ ಬೆಂಬಲ ಬೆಲೆಯನ್ನು ಶೇಕಡ ರಷ್ಟು ಏರಿಕೆ ಮಾಡಲಾಗಿದೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳು, ವಾಣಿಜ್ಯ ಮತ್ತು ಜವಳಿ ಖಾತೆ ಸಚಿವ ಪಿಯೂಷ್ ಗೋಯಲ್ ಮಾತನಾಡಿದ್ದಾರೆ.

"ಪ್ರಸ್ತುತ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಗ್ರಹಣೆಯು ಅಧಿಕವಾಗಿದೆ. ಇದರಿಂದಾಗಿ ಸಾಮಾನ್ಯ ಜನರಿಗೆ ಸಂಪೂರ್ಣ ಹೊರೆಯಾಗುವುದಿಲ್ಲ. ಬೆಲೆ ಏರಿಕೆಯನ್ನು ಸರಕಾರವೇ ಭರಿಸುತ್ತಿದೆ," ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳು, ವಾಣಿಜ್ಯ ಮತ್ತು ಜವಳಿ ಖಾತೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಎಂಎಸ್‌ಪಿ ಎಷ್ಟು ಏರಿಕೆ ಮಾಡಲಾಗಿದೆ?
ಕಡಲೆಕಾಯಿಯ ಎಂಎಸ್‌ಪಿಯನ್ನು ಶೇಕಡ 10ರಷ್ಟು ಏರಿಕೆ ಮಾಡಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 6,357 ರೂಪಾಯಿಗೆ ತಲುಪಿದೆ. ತೊಗರಿಗೆ ಎಂಎಸ್‌ಪಿಯನ್ನು ಶೇಕಡ 7ರಷ್ಟು ಏರಿಕೆ ಮಾಡಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 7,000 ರೂಪಾಯಿಗೆ ತಲುಪಿದೆ. ಉದ್ದು ಪ್ರತಿ ಕ್ವಿಂಟಾಲ್‌ಗೆ 6,950 ರೂಪಾಯಿ ಆಗಿದೆ. ಮೆಕ್ಕೆಜೋಳ, ಜೋಳ ಮತ್ತು ರಾಗಿಯ ಎಂಎಸ್‌ಪಿಯನ್ನು ಶೇಕಡ 6ರಷ್ಟು ಏರಿಕೆ ಮಾಡಲಾಗಿದೆ.
ರೈತರು ತಮಗೆ ಬೇಕಾದಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಅನುವು ಮಾಡಿಕೊಡಲು ಸರ್ಕಾರವು ತೊಗರಿ, ಉದ್ದು ಹಾಗೂ ಮಸೂರ ಅವರೆ/ ಮಸೂರ ಬೇಳೆ ಖರೀದಿಯ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದ ಒಂದು ದಿನದ ನಂತರ ಎಲ್ಲಾ ಅಗತ್ಯ ವಸ್ತುಗಳ ಎಂಎಸ್‌ಪಿಯನ್ನು ಹೆಚ್ಚಳ ಮಾಡಲಾಗಿದೆ.
ಯುಪಿಎ ಅಧಿಕಾರಾವಧಿಯಲ್ಲಿ ಹಣದುಬ್ಬರವು ಶೇಕಡ 10ರಿಂದ 12ರಷ್ಟು ಏರಿಕೆಯಾಗುವುದು ಸಾಮಾನ್ಯ ಸಂಗತಿಯಾಗಿದೆ. 2014-15 ರಿಂದ, ಶೇಕಡ 4.5ರಷ್ಟು ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯು ಶೇಕಡ 7ಕ್ಕೆ ತಲುಪಿದಾಗಲೂ ಸಹ, ಆರ್‌ಬಿಐ ಜೊತೆಗೆ ಸರ್ಕಾರವು ಅದನ್ನು ನಿಯಂತ್ರಣ ಮಾಡಲು ಯಶಸ್ವಿಯಾಗಿದೆ," ಎಂದು ಗೋಯಲ್ ಹೇಳಿದ್ದಾರೆ.
ದಾಸ್ತಾನು ಮಿತಿಯನ್ನು ವಿಧಿಸಿದ ಸರ್ಕಾರ
ಈ ಹಿಂದೆ ಬೆಲೆ ಏರಿಕೆಯನ್ನು ತಡೆಯಲು ಅಕ್ಟೋಬರ್‌ವರೆಗೆ ಸಗಟು ವ್ಯಾಪಾರಿಗಳು, ರಿಟೇಲ್ ವ್ಯಾಪಾರಿಗಳು, ಆಮದುದಾರರು ಮತ್ತು ಗಿರಣಿದಾರರು ಹೊಂದಬಹುದಾದ ಬೇಳೆಗಳ ಮೇಲೆ ಕೇಂದ್ರ ಸರ್ಕಾರವು ದಾಸ್ತಾನು ಮಿತಿಗಳನ್ನು ವಿಧಿಸಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಆದೇಶವನ್ನು ಹೊರಡಿಸಿದೆ.
ತೊಗರಿ ಬೇಳೆಯ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆಯು ಜೂನ್ 2 ರಂದು ಶೇಕಡ 19ರಷ್ಟು ಏರಿಕೆಯಾಗಿದ್ದು ಪ್ರತಿ ಕೆಜಿಗೆ 122.68 ರೂಪಾಯಿ ಆಗಿದೆ. ಒಂದು ವರ್ಷದ ಹಿಂದೆ ತೊಗರಿ ಬೇಳೆಯ ದರವು ಕೆಜಿಗೆ 103.25 ರೂಪಾಯಿ ಆಗಿದೆ. ಅದೇ ರೀತಿಯಾಗಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಉದ್ದಿನ ಬೇಳೆಯ ಸರಾಸರಿ ರಿಟೇಲ್ ದರವು ಶೇಕಡ 5.26ರಷ್ಟು ಏರಿಕೆಯಾಗಿ, ಪ್ರತಿ ಕೆಜಿಗೆ 105.05 ರೂಪಾಯಿಯಿಂದ 110.58 ರೂಪಾಯಿಗೆ ತಲುಪಿದೆ.
ಆದೇಶದ ಪ್ರಕಾರ ಸಗಟು ವ್ಯಾಪಾರಿಗಳಿಗೆ ತೊಗರಿ ಹಾಗೂ ಉದ್ದಿನ ಬೇಳೆಯ ಮಿತಿಯನ್ನು 200 ಟನ್ ಎಂದು ವಿಧಿಸಲಾಗಿದೆ. ರಿಟೇಲರ್‌ಗಳು ಮತ್ತು ರಿಟೇಲರ್ ಮಾರಾಟ ಮಳಿಗೆಗಳಿಗೆ ತಲಾ 5 ಟನ್ ಮಿತಿಯನ್ನು ವಿಧಿಸಲಾಗಿದೆ. ಇನ್ನು ಚೇನ್ ರಿಟೇಲರ್‌ಗಳಿಗೆ ಡಿಪೋದಲ್ಲಿ 200 ಟನ್‌ಗಳ ದಾಸ್ತಾನು ಮಿತಿಯನ್ನು ವಿಧಿಸಲಾಗಿದೆ.


Click it and Unblock the Notifications