ಮನೆ ಕಟ್ಟೋಕಾಗಲಿ, ಕಾರು ಖರೀದಿಸಲು, ಶಿಕ್ಷಣಕ್ಕಾಗಿ, ಆರೋಗ್ಯ ಸಮಸ್ಯೆಗಾಗಿ ಸಾಲ ಮಾಡೋದು ಸಾಮಾನ್ಯ. ಇಂದಿನ ದುಬಾರಿ ಕಾಲದಲ್ಲಿ ವೈಯಕ್ತಿಕ ಸಾಲದ ಅಗತ್ಯವಾಗಿಬಿಟ್ಟಿದೆ. ಆದರೆ, ತಿಂಗಳಿಗೆ 10,000 ರೂ. ಕಡಿಮೆ ಆದಾಯದವರಿಗೆ ಬ್ಯಾಂಕುಗಳು ವೈಯಕ್ತಿಕ ಸಾಲ (Personal Loan) ನೀಡುತ್ತವೆಯೇ ಎಂಬುದು ಅನೇಕರಿಗೆ ಉದ್ಭವಿಸುವ ಪ್ರಶ್ನೆ. ವೈಯಕ್ತಿಕ ಅಗತ್ಯಗಳಿಗೆ ನೀಡುವ ಈ ಸಾಲಕ್ಕೆ, ಅರ್ಹತೆ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಮುಖ್ಯ ಎಂಬುದು ಇದರಲ್ಲಿ ಉದ್ದೇಶ.

ವೈಯಕ್ತಿಕ ಸಾಲಗಳನ್ನು ನೀಡುವಾಗ ಬ್ಯಾಂಕುಗಳು ನೋಡುವುದೇನು?
ವೈಯಕ್ತಿಕ ಸಾಲವು ಯಾವುದೇ ಭದ್ರತೆ ಇಲ್ಲದ ಸಾಲವಾದ್ದರಿಂದ, ಬ್ಯಾಂಕುಗಳು ಅದನ್ನು ನೀಡುವಾಗ ಎಚ್ಚರಿಕೆ ವಹಿಸುವುದು ಗ್ಯಾರಂಟಿ. ಆದ್ದರಿಂದ ಸಾಲ ನೀಡುವ ಮುನ್ನ ಬ್ಯಾಂಕ್‌ಗಳು, ನಿಮ್ಮ ಮಾಸಿಕ ಆದಾಯ, ಉದ್ಯೋಗ, ಕ್ರೆಡಿಟ್ ಸ್ಕೋರ್ ಮತ್ತು ಖರ್ಚು ಮಾಡುವ ಅಭ್ಯಾಸಗಳನ್ನು ಚೆಕ್ ಮಾಡುತ್ತದೆ. ನಿಯಮಿತ ಆದಾಯವಿದ್ದು, ಖರ್ಚು ಕಡಿಮೆ ಇದ್ದರೂ, ಕಡಿಮೆ ಸಂಬಳವಿದ್ದರೂ ಸಾಲ ನೀಡಲು ಬ್ಯಾಂಕ್‌ಗಳು ಮುಂದಾಗುತ್ತದೆ.
ಸಾಲದ ನೀತಿ ವಿಭಿನ್ನ
ಪ್ರತೀ ಬ್ಯಾಂಕಿನ ಸಾಲದ ನೀತಿಗಳು ಭಿನ್ನವಾಗಿರುತ್ತವೆ. ಕೆಲವು ಸರ್ಕಾರಿ ಹಾಗೂ ಆಯ್ದ ಖಾಸಗಿ ಬ್ಯಾಂಕುಗಳು ಕಡಿಮೆ ಸಂಬಳದವರಿಗೂ ವೈಯಕ್ತಿಕ ಸಾಲ ನೀಡಲು ಮುಂದಾಗುತ್ತದೆ. ಇನ್ನು ಕೆಲವು ಕನಿಷ್ಠ 20,000-25,000 ರೂ.ಗಳ ಮಾಸಿಕ ಆದಾಯಕ್ಕೆ ಷರತ್ತು ವಿಧಿಸುತ್ತವೆ. ಸರ್ಕಾರಿ ನೌಕರರ ಉದ್ಯೋಗವು ಹೆಚ್ಚು ಸುರಕ್ಷಿತವಾದ್ದರಿಂದ, ಅವರಿಗೆ ಕಡಿಮೆ ಸಂಬಳವಿದ್ದರೂ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.
10 ಸಾವಿರ ಸಂಬಳ ಇದ್ರೆ, ಸಾಲ ಸಿಗುತ್ತಾ?
₹10,000 ರೂ. ಸಂಬಳಕ್ಕೆ ಸಾಲ ಸಿಗಬೇಕೆಂದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಅತ್ಯುತ್ತಮವಾಗಿರಬೇಕು. ಯಾವುದೇ ದೊಡ್ಡ ಸಾಲಗಳು ಬಾಕಿ ಇರಬಾರದು, ಉದ್ಯೋಗ ಸ್ಥಿರವಾಗಿರಬೇಕು ಹಾಗೂ ಉಳಿತಾಯ ಮಾಡುತ್ತಿರಬೇಕು. ಆದರೆ ಇಂತಹ ಸಂದರ್ಭಗಳಲ್ಲೂ, ಬ್ಯಾಂಕುಗಳು ದೊಡ್ಡ ಮೊತ್ತದ ಸಾಲ ನೀಡುವುದಿಲ್ಲ. ಅಲ್ಲದೇ, ಕಡಿಮೆ ಆದಾಯದವರಿಗೆ ಸಣ್ಣ ಮೊತ್ತದ ಮತ್ತು ಕಡಿಮೆ ಅವಧಿಯ ಸಾಲ ಲಭ್ಯವಿರುತ್ತದೆ.
ನಿಮ್ಮ ಸಂಬಳ 10,000 ರೂ. ಆಗಿದ್ದರೆ, ಬ್ಯಾಂಕುಗಳು ಸಾಮಾನ್ಯವಾಗಿ ನಿಮ್ಮ ವೇತನದ 6 ರಿಂದ 10 ಪಟ್ಟು ಮಾತ್ರ ಸಾಲ ನೀಡುತ್ತವೆ. ಹೀಗಾಗಿ, ಸಾಲದ ಮೊತ್ತ ಸೀಮಿತವಾಗಿರುತ್ತದೆ. ಇದರೊಂದಿಗೆ, ಬಡ್ಡಿ ದರವೂ ಸ್ವಲ್ಪ ಹೆಚ್ಚಾಗಿರಬಹುದು.
ಕಡಿಮೆ ಆದಾಯವಿದ್ದರೂ ಸಾಲ ಪಡೆಯುವುದು ಹೇಗೆ?
ಇನ್ನು ಕಡಿಮೆ ಆದಾಯದ ಬಿಲ್‌ಗಳು ಮತ್ತು ಹಳೆಯ ಸಾಲಗಳನ್ನು ಕ್ಲಿಯರ್ ಮಾಡಿ. ಇನ್ನು EMI ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿ. ಕ್ರೆಡಿಟ್ ಕಾರ್ಡ್ ನಿರಂತರವಾಗಿ ಬಳಸಿ. ಉದ್ಯೋಗದಲ್ಲಿ ನಿರಂತರತೆ ಕಾಯ್ದುಕೊಳ್ಳಿ. ಅಗತ್ಯಕ್ಕಿಂತ ಹೆಚ್ಚು ಸಾಲಕ್ಕೆ ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಿ.
ಆದ್ದರಿಂದ ಕಡಿಮೆ ಆದಾಯವಿದ್ದರೂ ವೈಯಕ್ತಿಕ ಸಾಲ ಸಿಗಲ್ಲ ಎಂದು ಆತಂಕ ಪಡೆಯಬೇಕಿಲ್ಲ. ಆದರೆ ಕೆಲವೊಮ್ಮೆ ಕಡಿಮೆ ಸಂಬಳ ಇದ್ದರೂ, ಸಾಲ ಪಡೆಯುವುದು ಕಷ್ಟವಾಗಬಹುದು. ಆದ್ದರಿಂದ ಕ್ರೆಡಿಟ್ ಸ್ಕೋರ್, ಖರ್ಚು, ಸೇವಿಂಗ್ಸ್, ಇಎಂಐ ಹೀಗೆ ಎಲ್ಲವನ್ನೂ ಸರಿಯಾಗಿ ನಿಭಾಯಿಸುವುದು ಮುಖ್ಯ.


Click it and Unblock the Notifications