ನವದೆಹಲಿ, ಆಗಸ್ಟ್ 15: ಕೆಲವೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಎಲ್ಲಿಯೂ ಸಾಲ ಸಿಗದ ಸ್ಥಿತಿ ನಿರ್ಮಾಣವಾಗಿರುತ್ತದೆ. ಆದರೆ ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಇರುವಂತೆ ಇಲ್ಲಿಯೂ ಸಾಲ ಪಡೆದುಕೊಳ್ಳಲು ದಾರಿಯೊಂದು ಇದೆ. ನೀವು ಹೂಡಿಕೆ ಮಾಡಿದ ಮ್ಯೂಚುವಲ್ ಫಂಡ್ ಮೇಲೆಯೂ ಸಾಲ ಪಡೆದುಕೊಳ್ಳಲು ಸಾಧ್ಯವಿದೆ.
ಸಮೀಕ್ಷೆ ಒಂದು ಹೇಳುವಂತೆ 48.7% ಈಕ್ವಿಟಿ ಹೂಡಿಕೆದಾರರು ಎರಡು ವರ್ಷಗಳೊಳಗೆ ತಮ್ಮ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೋಗಳು ಅಥವಾ ಹೂಡಿಕೆಗಳನ್ನು ಮಾರಾಟ ಮಾಡಿಬಿಡುತ್ತಾರೆ. ಎಎಂಎಫ್‌ಐ ಡೇಟಾ ಪ್ರಕಾರ, 22.2% ಈಕ್ವಿಟಿ ಹೂಡಿಕೆದಾರರು 12 ರಿಂದ 24 ತಿಂಗಳುಗಳವರೆಗೆ ತಮ್ಮ ಫಂಡ್‌ಗಳನ್ನು ಇಟ್ಟುಕೊಳ್ಳುತ್ತಾರೆ. ಇನ್ನು, 15.6% ಈಕ್ವಿಟಿ ಹೂಡಿಕೆಗಳು 6 ತಿಂಗಳವರೆಗೂ ಇಟ್ಟುಕೊಳ್ಳುವುದಿಲ್ಲ. 10.9% ಈಕ್ವಿಟಿ ಅಸೆಟ್‌ಗಳನ್ನು 6 ರಿಂದ 12 ತಿಂಗಳುಗಳವರೆಗೆ ಹೂಡಿಕೆ ಮಾಡಲಾಗಿರುತ್ತದೆ.

ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟ್‌ನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳದೇ ಮೊದಲೇ ವಿತ್‌ಡ್ರಾ ಮಾಡುವುದು ಒಳ್ಳೆಯ ವಿಧಾನವಲ್ಲ. ಮೊದಲೇ ವಿತ್‌ಡ್ರಾ ಮಾಡಿದರೆ ಕ್ರೋಢೀಕರಣದ ಅನುಕೂಲ ಅಥವಾ ಪವರ್ ಆಫ್ ಕಾಂಪೌಂಡಿಂಗ್‌ನ ಲಾಭ ನಿಮಗೆ ಸಿಗುವುದಿಲ್ಲ. ವಿತ್‌ಡ್ರಾ ಮಾಡುವ ಬದಲು ಅದೇ ಮ್ಯೂಚುವಲ್ ಫಂಡ್ ಮೇಲೆ ಸಾಲ ತೆಗೆದುಕೊಂಡರೆ ಹೂಡಿಕೆಯೂ ಸುರಕ್ಷಿತವಾಗಿರುವಂತೆ ಆಗುತ್ತದೆ. 3 ತಿಂಗಳಿಂದ 1 ವರ್ಷದ ಅವಧಿಗೆ ನಿಮಗೆ ಹಣ ಬೇಕು ಎಂದಾದರೆ, ದೊಡ್ಡ ಮೊತ್ತ ಬೇಡ ಎಂದಾದರೆ, ನೀವು ಮ್ಯೂಚುವಲ್ ಫಂಡ್ ಮೇಲೆ ಸಾಲ ತೆಗೆದುಕೊಳ್ಳಬಹುದು.
ಮ್ಯೂಚುವಲ್ ಫಂಡ್ ಸಾಲ ಸೆಕ್ಯೂರ್ಡ್ ಸಾಲ. ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಯಲ್ಲಿ ನೀವು ಸಾಲ ತೆಗೆದುಕೊಳ್ಳಬಹುದು. ಸಾಲ ತೆಗೆದುಕೊಳ್ಳುವಾಗ, ಮ್ಯೂಚುವಲ್ ಫಂಡ್ ಅನ್ನು ಅಡಮಾನವಾಗಿ ಇಡಲಾಗುತ್ತದೆ. ಸಾಲ ಮರುಪಾವತಿ ಮಾಡುವವರೆಗೆ ಮ್ಯೂಚುವಲ್ ಫಂಡ್‌ನ ಸ್ವಾಧೀನ ಬ್ಯಾಂಕ್ ಬಳಿ ಇರುತ್ತದೆ. ಸಾಲ ಪಾವತಿ ಮಾಡಿದಾಗ ಈ ಒಪ್ಪಂದವೂ ಮುಗಿಯುತ್ತದೆ. ಪಾವತಿ ಮಾಡದೇ ಇದ್ದರೆ, ನೀವು ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿರುವ ಮ್ಯೂಚುವಲ್ ಫಂಡ್ ಅನ್ನು ಸಾಲ ವಸೂಲಾತಿಗೆ ಅಂತ ಬ್ಯಾಂಕ್ ರಿಡೀಮ್ ಮಾಡಿಕೊಳ್ಳುತ್ತದೆ.
ನೀವು ಯಾವ ಸ್ಕೀಮ್‌ನಲ್ಲಿ ಇನ್ವೆಸ್ಟ್ ಮಾಡಿದ್ದೀರಿ ಎಂಬುದನ್ನು ಆಧರಿಸಿ ಮ್ಯೂಚುವಲ್ ಫಂಡ್ ಮೇಲೆ ಎಷ್ಟು ಹಣವನ್ನು ಬ್ಯಾಂಕ್ ನೀಡಬಹುದು ಎಂಬುದು ನಿರ್ಧಾರವಾಗುತ್ತದೆ. ಈಕ್ವಿಟಿ ಮ್ಯೂಚುವಲ್ ಫಂಡ್ ಆಗಿದ್ದರೆ, ನೆಟ್ ಅಸೆಟ್ ವ್ಯಾಲ್ಯೂ (ಎನ್‌ಎವಿ) ಮೇಲೆ 50-60% ಸಾಲ ಪಡೆಯಬಹುದು. ಡೆಟ್ ಮ್ಯೂಚುವಲ್ ಫಂಡ್ ಆದರೆ, 85% ವರೆಗೆ ಸಾಲ ಸಿಗುತ್ತದೆ. ಇಂದು ನಿಮ್ಮ ಮ್ಯೂಚುವಲ್ ಫಂಡ್ ಒಟ್ಟು ಎನ್‌ಎವಿ 5 ಲಕ್ಷ ರೂ. ಆಗಿದ್ದರೆ, 2.5 ಲಕ್ಷದಿಂದ 3 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ಸಾಲದ ಮೊತ್ತದ ಮೇಲೆ ಗರಿಷ್ಠ ಮಿತಿಯನ್ನು ಹಲವು ಬ್ಯಾಂಕ್‌ಗಳು ಹಾಕಿರುತ್ತವೆ. ಈಕ್ವಿಟಿ ಮ್ಯೂಚುವಲ್ ಫಂಡ್‌ಗಳ ಮೇಲೆ 20 ಲಕ್ಷ ರೂ.ವರೆಗೆ ಎಸ್‌ಬಿಐ ಸಾಲ ಕೊಡುತ್ತದೆ. ಡೆಟ್ ಫಂಡ್ ಆಗಿದ್ದರೆ, ಈ ಮಿತಿ 5 ಕೋಟಿ ರೂ.ವರೆಗೆ ಇರುತ್ತದೆ.
ಮ್ಯೂಚುವಲ್ ಫಂಡ್ ಮಾಡದೇ ಸಾಲ ತೆಗೆದುಕೊಂಡರೆ ಅವರ ಇನ್ವೆಸ್ಟ್‌ಮೆಂಟ್ ಹಾಗೆಯೇ ಇರುತ್ತದೆ. ಇದರ ಮೇಲೆ ರಿಟರ್ನ್ಸ್ ಕೂಡ ಸಿಗುತ್ತದೆ. 10% ಕ್ಕಿಂತ ಹೆಚ್ಚು ದರದಲ್ಲಿ ಮ್ಯೂಚುವಲ್ ಫಂಡ್ ಬೆಳೆಯುವ ಅವಕಾಶ ಇರುವುದರಿಂದ, ಈಕ್ವಿಟಿ ಆಧಾರದಲ್ಲಿ ರಿಟರ್ನ್ಸ್ ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು.
ಮ್ಯೂಚುವಲ್ ಫಂಡ್ ಮೇಲೆ ಸಾಲ ತೆಗೆದುಕೊಳ್ಳುವುದರ ಅನುಕೂಲವೆಂದರೆ, ನಿಮ್ಮ ಒಟ್ಟು ಹೂಡಿಕೆ ಅಥವಾ ಎಸ್‌ಐಪಿ ಅನ್ನು ರಿಡೀಮ್ ಮಾಡುವ ಅಗತ್ಯವಿರುವುದಿಲ್ಲ. ನಿಮ್ಮ ದೀರ್ಘಕಾಲೀನ ಹಣಕಾಸಿನ ಗುರಿಗಳೂ ಇದರಲ್ಲಿ ಪೂರೈಸುತ್ತವೆ. ಕೌಂಪೌಂಡಿಂಗ್ ಇಂಟರೆಸ್ಟ್‌ನ ಲಾಭ ಕೂಡಾ ನಿಮಗೆ ಸಿಗುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್‌ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications