ಕೆರಿಯರ್ ಮತ್ತು ಹಣಕಾಸು ನಿರ್ವಹಣೆ ನಡುವೆ ಒದ್ದಾಟವೇ ? ಹಣ ಉಳಿತಾಯಕ್ಕೆ ಈ ತಂತ್ರ ಪಾಲಿಸಿ

ಬಡವರ್ಗ ಹಾಗೂ ಮಧ್ಯಮ ವರ್ಗದ ಜನರು ತನ್ನ ಆರ್ಥಿಕ ನಿರ್ವಹಣೆಯಲ್ಲಿ ಸವಾಲಿನ ಸಂಗತಿಗಳನ್ನು ಎದುರಿಸುವುದು ಸಾಮಾನ್ಯ ಸಂಗತಿಯಾಗಿದೆ. ಇದೊಂದು ಸಹಜವಾಗಿದ್ದು, ಖರ್ಚು ವೆಚ್ಚಗಳನ್ನು ಅಲೆದು ತೂಗಿ ಮಾಡುತ್ತಾರೆ. ಅದೂ ಅಲ್ಲದೆ ತಾವು ಪಡೆಯುವ ಮಾಸಿಕ ವೇತನಕ್ಕೆ ಅನುಸಾರವಾಗಿ ತಮ್ಮ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಹರಸಾಹಸ ಪಡುವುದು ಸಹಜವೇ ಆಗಿದೆ. ಇನ್ನು 20ರ ಹರೆಯದಲ್ಲಿವವರು ಈಗಷ್ಟೇ ಕೆಲಸಕ್ಕೆ ಸೇರಿದ್ದರೆ ವೃತ್ತಿ ಮತ್ತು ಹಣದ ನಿರ್ವಹಣೆಯ ನಡುವೆ ಕುಶಲತೆಯಿಂದ ಹಣವನ್ನು ಉಳಿಸುವುದು ಕಠಿಣ ಕಾರ್ಯವಾಗಿ ತೋರಬಹುದು. ಹೆಚ್ಚಿನ ಯುವಕರು ತಮ್ಮ ಅಗತ್ಯಗಳು ಮತ್ತು ಆಸೆಗಳಿಗಾಗಿ ಹಣವನ್ನು ಉಳಿಸಲು ಅಸಾಧ್ಯವೆಂದು ಪರಿಗಣಿಸುತ್ತಾರೆ. ಇನ್ನು ನೀವು ನಿಮ್ಮ 20ರ ಹರೆಯದಲ್ಲಿ ಹಣವನ್ನು ಯಾವ ರೀತಿ ಉಳಿಸಬಹುದು ಎನ್ನುವ ನಿಟ್ಟಿನಲ್ಲಿ ಸಲಹೆ ಹಾಗೂ ತಂತ್ರಗಳನ್ನು ನಾವು ಹೇಳಿಕೊಡುತ್ತೇವೆ.

1. ಬಜೆಟ್ ಮಾಡಿ

ಹಣಕಾಸಿನ ಪ್ರತಿಯೊಂದು ವಿಚಾರದಲ್ಲಿ ನಾವು ಬಜೆಟ್‌ ಅನ್ವಯವೇ ಖರ್ಚು ವೆಚ್ಚಗಳನ್ನು ನಿರ್ವಹಿಸಬೇಕಿರುವುದು ಜಾಣತನವಾಗಿದೆ. ಬಜೆಟ್ ಅನ್ನು ರಚಿಸುವುದರಿಂದ ಖರ್ಚಾದ ನಿಮ್ಮ ಎಲ್ಲಾ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಬಿಲ್‌ಗಳು, ಬಾಡಿಗೆ ಮತ್ತು ಮನರಂಜನೆಗೆ ಹಣವನ್ನು ಹೊಂದಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಆದರೆ ಬಜೆಟ್‌ ರಚಿಸಿಕೊಳ್ಳಿ ಎಂದ ಮಾತ್ರಕ್ಕೆ ನಿಮ್ಮ ಎಲ್ಲಾ ಮನೋರಂಜನಾ ಖರ್ಚುಗಳನ್ನು ಸ್ಥಗಿತಗೊಳಿಸಿ ಎಂಬುದು ಅರ್ಥವಲ್ಲ.

 Tips: ವೃತ್ತಿ ಹಾಗೂ ಹಣಕಾಸು ನಿರ್ವಹಣೆ ನಡುವೆ ಇರಲಿ ಬ್ಯಾಲೆನ್ಸ್

2. ಆದಾಯದ ಒಂದು ಭಾಗ ಉಳಿಸಿ

ನಿಜವಾಗಿ ಉಳಿತಾಯವನ್ನು ಹೇಗೆ ಪ್ರಾರಂಭಿಸಬೇಕು ಎಂದು ನಿಮಗೆ ಖಚಿತವಿಲ್ಲದಿದ್ದರೆ ತಜ್ಞರ ಸಲಹೆ ಪಡೆದುಕೊಳ್ಳಿ. ನಿಮ್ಮ ಆದಾಯದ ಒಂದು ಭಾಗವನ್ನು ಮೀಸಲಿಡುವ ಮೂಲಕ ತಜ್ಞರು ತಿಂಗಳಿಗೆ ನಿಮ್ಮ ಆದಾಯದ ಕನಿಷ್ಠ ಮೂರನೇ ಒಂದು ಭಾಗವನ್ನು ಉಳಿಸಲು ಶಿಫಾರಸು ಮಾಡುತ್ತಾರೆ. ಹೀಗೆ ಉಳಿತಾಯ ಮಾಡಿದ ಹಣವನ್ನು ನೀವು ದುರಸ್ತಿ ವೆಚ್ಚ ಅಥವಾ ತುರ್ತು ಅಥವಾ ಇತರ ಅನಿರೀಕ್ಷಿತ ವೆಚ್ಚಗಳಂತಹ ಹೆಚ್ಚುವರಿ ವೆಚ್ಚಗಳಿಗೆ ವಿನಿಯೋಗಿಸಬಹುದು.

3. ಹೂಡಿಕೆ

ಹೂಡಿಕೆ ಮಾಡುವುದು ಕೆಲವರು ಆರಂಭದಲ್ಲಿ ಸವಾಲಿನ ಕೆಲಸವೆಂದು ತೋರಬಹುದು. ಆದರೆ ನೀವು ನಿಮ್ಮ ಆದಾಯದ ಸ್ವಲ್ಪ ಭಾಗವನ್ನು ಹೂಡಿಕೆ ಮಾಡಬಹುದು. ಉದಾಹರಣೆಗೆ ಒಂದು ವೇಳೆ ನೀವು ತಿಂಗಳಿಗೆ 20000 ರೂ. ಆದಾಯ ಗಳಿಸಿದರೆ ಅದರಲ್ಲಿ 1000 ರೂ. ಮೊತ್ತವನ್ನು ಹೂಡಿಕೆ ಮಾಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳವುದಿಲ್ಲ. ಇದರ ಜೊತೆಗೆ ನಿಮ್ಮ ಹೂಡಿಕೆಯು ದ್ವಿಗುಣವಾಗುತ್ತದೆ.

4. ನಿಮ್ಮ ಖರ್ಚುಗಳನ್ನು ಟ್ರ್ಯಾಕ್ ಮಾಡಿ

ನಿಮ್ಮ ಖರ್ಚು ವೆಚ್ಚಗಳನ್ನು ಟ್ರ್ಯಾಕ್‌ ಮಾಡುವುದರಿಂದ ಪ್ರತಿ ತಿಂಗಳು ನಿಮ್ಮ ಹಣ ಎಲ್ಲಿ ಖರ್ಚಾಗುತ್ತಿದೆ ಎಂಬ ಸ್ಪಷ್ಟ ಕಲ್ಪನೆಯನ್ನು ಪಡೆಯಬಹುದು. ಅದೂ ಅಲ್ಲದೆ ನೀವು ನಿರ್ದಿಷ್ಟ ವೆಚ್ಚವನ್ನು ಕಡಿತಗೊಳಿಸಬೇಕೇ ಎಂದು ಅರ್ಥಮಾಡಿಕೊಳ್ಳಲು ಸಹ ಇದು ನಿಮಗೆ ಸಹಾಯ ಮಾಡುತ್ತದೆ.

5. ಸಾಲ ಮಾಡಲು ಹೋಗಬೇಡಿ

ತಜ್ಞರ ಪ್ರಕಾರ ಸಾಲ ಪಡೆಯುವುದನ್ನು ಆದಷ್ಟು ಕಡಿಮೆ ಮಾಡಬೇಕಿದೆ. ಯಾಕೆಂದರೆ ಕೆಲವೊಮ್ಮೆ, ನೀವು ಪಾವತಿಸುವ ಬಡ್ಡಿದರಗಳು ನಿಮ್ಮ ಮೇಲೆ ದೊಡ್ಡ ಹೊರೆಯನ್ನು ಹಾಕಬಹುದು.

6. 50-30-20 ನಿಯಮ ಅನುಸರಿಸಿ

50-30-20 ನಿಯಮವೆಂದರೆ ಮೂಲಭೂತವಾಗಿ ನಿಮ್ಮ ಆದಾಯದ 50 ಪ್ರತಿಶತವನ್ನು ನಿಮ್ಮ ಅಗತ್ಯಗಳಿಗೆ, 30 ಪ್ರತಿಶತ ನಿಮ್ಮ ಆಸೆಗಳಿಗೆ ಮತ್ತು 20 ಪ್ರತಿಶತ ಮೊತ್ತವನ್ನು ನಿಮ್ಮ ಉಳಿತಾಯಕ್ಕೆ ನಿಯೋಜಿಸುವುದನ್ನು ಸೂಚಿಸುತ್ತದೆ. ಇದು ಹಣವನ್ನು ಉಳಿಸುವ ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ.

7. ಕ್ರೆಡಿಟ್ ಕಾರ್ಡ್ ನಿರ್ವಹಣೆ

ಇನ್ನು ಕ್ರೆಡಿಟ್ ಕಾರ್ಡ್ ನಿರ್ವಹಣೆಗೆ ಆರ್ಥಿಕ ಸಾಕ್ಷರತೆಯ ಅಂದರೆ ಆರ್ಥಿಕ ವಿಚಾರಗಳಲ್ಲಿ ಹೆಚ್ಚಿನ ಜ್ಞಾನದ ಅಗತ್ಯವಿರುತ್ತದೆ. ಒಂದು ವೇಳೆ ನೀವು ಸಾಲ ತೆಗೆದುಕೊಂಡಿದ್ದರೆ ಆ ನಿಮ್ಮ ಬಿಲ್‌ಗಳನ್ನು ಸಮಯಕ್ಕೆ ಪಾವತಿಸಲು ನೀವು ಪಾವತಿಸಬೇಕಿರುತ್ತದೆ. ಅಥವಾ ನೀವು ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ಕ್ರೆಡಿಟ್ ಬದಲಿಗೆ ನಗದು ಬಳಸಲು ಶಿಫಾರಸು ಮಾಡಲಾಗಿದೆ.

ಆರ್ಥಿಕ ಸಾಕ್ಷರತೆ ಎಂದರೇನು?

ಸರಳ ಮಾತಿನಲ್ಲಿ ಹೇಳುವುದಾದರೆ ನಿಮ್ಮ ಹಣವನ್ನು ಸರಿಯಾದ ರೀತಿಯಲ್ಲಿ ಹಾಗೂ ಆದಾಯದ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬಹುದು ಎಂಬ ವಿಚಾರದಲ್ಲಿ ನೆರವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+