ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಏಪ್ರಿಲ್ 1, 2021 ರಿಂದ ನವೆಂಬರ್ 15, 2021 ರವರೆಗಿನ 1,19,093 ಕೋಟಿಗಿಂತ ಅಧಿಕ ಮರುಪಾವತಿ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ. ಕಳೆದ ಅಕ್ಟೋಬರ್ ಕೊನೆಯಲ್ಲಿ ಸಿಬಿಡಿಟಿ 77.92 ಲಕ್ಷ ತೆರಿಗೆದಾರರಿಗೆ 1.02 ಲಕ್ಷ ಕೋಟಿ ರೂ. ತೆರಿಗೆ ಮರುಪಾವತಿ ಮಾಡಿತ್ತು ಎಂದು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು.
1,00,42,619 ಪ್ರಕರಣಗಳಲ್ಲಿ ಆದಾಯ ತೆರಿಗೆ ಮರುಪಾವತಿ ರೂ. 38,034 ಕೋಟಿ ಒದಗಿಸಲಾಗಿದೆ. ಇದರಲ್ಲಿ ಕಾರ್ಪೊರೇಟ್ ತೆರಿಗೆ ಮರುಪಾವತಿ ರೂ. 1,80,407 ಪ್ರಕರಣಗಳಲ್ಲಿ 81,059 ಕೋಟಿ ಒದಗಿಸಲಾಗಿದೆ. ಹಾಗೆಯೇ ಇದು ಹಣಕಾಸು ವರ್ಷ 2021-22 ರ 67.99 ಲಕ್ಷ ಮರುಪಾವತಿಗಳನ್ನು ಒಳಗೊಂಡಿದೆ. ಹಣಕಾಸು ವರ್ಷ 2021-22 ರ ಮರುಪಾವತಿಯು 13,140.94 ಕೋಟಿ ರೂಪಾಯಿ ಆಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ವರದಿ ಮಾಡಿದೆ.
ಆದಾಯ ತೆರಿಗೆಯ ಈ ಟ್ವೀಟ್ ಅನ್ನು ನೋಡಿದಾಗ ಆದಾಯ ತೆರಿಗೆ ರಿಟರ್ನ್ ತಮಗೆ ಬಂದಿದೆಯೇ ಎಂದು ತೆರಿಗೆದಾರರು ನೋಡಲು ಸರಿಯಾದ ಸಮಯ ಆಗಿದೆ. ಇದಕ್ಕಾಗಿ ತೆರಿಗೆದಾರರು ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ನ ತೆರಿಗೆ ಮಾಹಿತಿ ನೆಟ್‌ವರ್ಕ್‌ಗೆ ಭೇಟಿ ನೀಡಬಹುದು ಅಥವಾ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟಾಕ್ಸಸ್ ಸುಮಾರು 23.99 ಲಕ್ಷಕ್ಕೂ ಅಧಿಕ ತೆರಿಗೆ ಪಾವತಿದಾರರಿಗೆ ಏಪ್ರಿಲ್ 1, 2021 ಮತ್ತು ಆಗಸ್ಟ್ 30, 2021 ರ ನಡುವೆ ಸುಮಾರು 67,401 ರೂಪಾಯಿ ಕೋಟಿ ಹಣವನ್ನು ರಿಫಂಡ್ ಮಾಡಿದೆ. 22,61,918 ಪ್ರಕರಣಗಳಲ್ಲಿ ಸುಮಾರು 16,373 ಕೋಟಿ ರೂಪಾಯಿ ಆದಾಯ ತೆರಿಗೆಯ ಮರು ಪಾವತಿಯನ್ನು ಪ್ರಕಟಿಸಲಾಗಿದೆ ಹಾಗೂ 1,37,327 ಪ್ರಕರಣಗಳಲ್ಲಿ ಸುಮಾರು 51,029 ಕೋಟಿ ರೂಪಾಯಿ ಕಾರ್ಪೋರೇಟ್ ತೆರಿಗೆ ಮರುಪಾವತಿಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದೆ.
ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್‌ಗೆ ಸಂಬಂಧಿಸಿ ತೆರಿಗೆದಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ನಡುವೆಯೂ ಆದಾಯ ತೆರಿಗೆಯ ಮರುಪಾವತಿ ಮಾಡಲಾಗಿದೆ. ಆದರೆ ಈ ನಡುವೆ ಅನೇಕ ತೆರಿಗೆದಾರರು ಈ ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್‌ನ ಸಮಸ್ಯೆಯಿಂದಾಗಿ ಇನ್ನೂ ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ಸಲ್ಲಿಸಿಲ್ಲ.
ಐಟಿಆರ್‌ನಲ್ಲಿ ರಿಫಂಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ನ್ಯಾಷನಲ್ ಸೆಕ್ಯೂರಿಟಿ ಡಿಪೋಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ವೆಬ್‌ಸೈಟ್ ಅಥವಾ ಆದಾಯ ತೆರಿಗೆ ದಾಖಲು ಮಾಡುವ ಪೋರ್ಟಲ್‌ನ ಮೂಲಕ ತೆರಿಗೆದಾರರು ತಮ್ಮ ರಿಫಂಡ್ ಸ್ಟೇಟಸ್ ಹೇಗಿದೆ ಎಂಬುವುದನ್ನು ಚೆಕ್ ಮಾಡಬಹುದಾಗಿದೆ. ನ್ಯಾಷನಲ್ ಸೆಕ್ಯೂರಿಟಿ ಡಿಪೋಸಿಟರಿ ಲಿಮಿಟೆಡ್ ಅಥವಾ ಎನ್‌ಎಸ್‌ಡಿಎಲ್ ಖಾತೆಯ ಮೂಲಕ ನೀವು ಪ್ಯಾನ್ ಹಾಗೂ ವರ್ಷವನ್ನು ಉಲ್ಲೇಖ ಮಾಡಿ Proceed ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬಳಿಕ ಈ ಪೋರ್ಟಲ್‌ನಲ್ಲಿ ನಿಮ್ಮ ರಿಫಂಡ್ ಸ್ಟೇಟಸ್ ಬಗ್ಗೆ ಮಾಹಿತಿ ಲಭಿಸಲಿದೆ. ಇನ್ನು ಐಟಿ ಡಿಪಾರ್ಟ್‌ಮೆಂಟ್ ಪೋರ್ಟಲ್ ಮೂಲಕ ನಿಮ್ಮ ರಿಫಂಡ್ ಸ್ಟೇಟಸ್ ಅನ್ನು ತಿಳಿಯಬೇಕಾದರೆ, ಪಾಲಿಸಬೇಕಾದ ಹಂತಗಳನ್ನು ಕೆಳಗೆ ವಿವರಿಸಲಾಗಿದೆ.
* ಮೊದಲು ನೀವು ಆದಾಯ ತೆರಿಗೆ ಇಲಾಖೆಯ ದಾಖಲು ಮಾಡುವ ಪೋರ್ಟಲ್‌ಗೆ ಲಾಗ್ ಇನ್ ಆಗಬೇಕು.
* View Returns/ Forms ಅನ್ನು ಆಯ್ಕೆ ಮಾಡಿಕೊಳ್ಳಬೇಕು
* My Account ಟಾಬ್‌ಗೆ ಹೋಗಿ Income Tax Returns ಆಯ್ಕೆ ಮಾಡಿಕೊಳ್ಳಿ
* ಬಳಿಕ submit ಮಾಡಿ
* ಬಳಿಕ ಸ್ವೀಕೃತಿ ಸಂಖ್ಯೆ ( acknowledgement number) ಮೇಲೆ ಕ್ಲಿಕ್ ಮಾಡಿ
* ಈ ಸಂದರ್ಭದಲ್ಲಿ ನಿಮ್ಮ ಆದಾಯ ತೆರಿಗೆ ಮರುಪಾವತಿಯ ವಿವರಗಳು ನಿಮಗೆ ಲಭಿಸಲಿದೆ.


Click it and Unblock the Notifications