ನವದೆಹಲಿ, ಸೆಪ್ಟೆಂಬರ್ 25: ಪರ್ಮನೆಂಟ್ ಅಕೌಂಟ್ ನಂಬರ್(ಶಾಶ್ವತ ಗುರುತಿನ ಸಂಖ್ಯೆ) ಅಥವಾ ಪ್ಯಾನ್ ಕಾರ್ಡ್ ಭಾರತೀಯ ನಾಗರಿಕರಿಗೆ ಇರುವ ಅಗತ್ಯ ಗುರುತಿನ ಪುರಾವೆಯಾಗಿದೆ. ಈ ಕಾರ್ಡ್'ನ್ನು ಪಡೆಯಲು ಬಯಸುವ ಪ್ರತಿ ನಾಗರಿಕನಿಗೂ ಇದನ್ನು ಪಡೆಯಲು ಸುಲಭವಾಗುವಂತೆ ತೆರಿಗೆ ಇಲಾಖೆಯೂ ಬಹಳಷ್ಟು ಕಾರ್ಯಯೋಜನೆಗಳನ್ನು ಹಾಕಿಕೊಂಡಿದೆ. ಸರ್ಕಾರ ಹೊಸ ಕಾರ್ಯಯೋಜನೆ ಅನುಷ್ಟಾನಗೊಂಡರೆ ' ಇ- ಪ್ಯಾನ್ ಕಾರ್ಡ್'ನ್ನು ಇನ್ಮುಂದೆ ಅರ್ಜಿದಾರರಿಗೆ ತಕ್ಷಣ ಪಡೆಯಬಹುದಾಗಿದೆ.
ಇತ್ತೀಚೆಗೆ ಲೋಕಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ನಮ್ಮ ಸರ್ಕಾರವೂ ಪ್ಯಾನ್ , ಟ್ಯಾನ್ ಪ್ರೊಸೆಸಿಂಗ್ ಸೆಂಟರ್ ನ್ನು ತೆರೆಯಲು ಯೋಜಿಸುತ್ತಿದೆ ಎಂದು ಹೇಳಿದ್ದು , ಎಲ್ಲವು ಅಂದುಕೊಂಡಂತೆ ಆದರೆ, ರಿಯಲ್ ಟೈಮ್ ನಲ್ಲಿ ಅಥವಾ ಗರಿಷ್ಟ ಹತ್ತೇ ನಿಮಿಷದಲ್ಲಿ ಇ- ಪ್ಯಾನ್ ಗಳನ್ನು ಹಂಚಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಇ - ಪ್ಯಾನ್ ಕಾರ್ಡ್ ಬಗ್ಗೆ ತಿಳಿದುಕೊಳ್ಳಬೇಕಾದ 5 ಮುಖ್ಯ ವಿಷಯಗಳು:
1)ಸಂಸತ್ತಿನಲ್ಲಿ ಠಾಕೂರ್ , ರಿಯಲ್ ಟೈಮ್ ಪ್ಯಾನ್/ಟ್ಯಾನ್ ಪ್ರೊಸೆಸಿಂಗ್ ಸೆಂಟರ್ (ಆರ್‌ಟಿಪಿಸಿ) ಅನ್ನು ಆಧಾರ್ ಆಧಾರಿತ ಇ-ಕೆವೈಸಿ ಮೂಲಕ ಇ-ಪ್ಯಾನ್‌ಗಳ ಹಂಚಿಕೆಯನ್ನು ರಿಯಲ್ ಟೈಮ್ ಮೂಲಕ ನೀಡುವ ಬಗ್ಗೆ ಯೋಜಿಸಲಾಗುತ್ತಿದೆ. ಇದು ಕೇವಲ ಹತ್ತೇ ನಿಮಿಷದಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ .
2) ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಡಿಸೆಂಬರ್ 2018 ರಲ್ಲಿ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಸಿ, QR ಕೋಡ್‌ನೊಂದಿಗೆ ವಿದ್ಯುನ್ಮಾನವಾಗಿ PDF ಸ್ವರೂಪದಲ್ಲಿ ನೀಡಲಾದ ಇ-ಪ್ಯಾನ್ ಕಾರ್ಡ್‌ಗಳನ್ನು ಮಾನ್ಯವಾದ PAN ಕಾರ್ಡ್‌ಗಳೆಂದು ಪರಿಗಣಿಸಲಾಗುತ್ತದೆ.
3)ಇ-ಕೆವೈಸಿ ಬಳಸಿಕೊಂಡು ಆದಾಯ ತೆರಿಗೆ ಇಲಾಖೆಯು ಎಲೆಕ್ಟ್ರಾನಿಕ್ ರೂಪದಲ್ಲಿ ಈ ಎಲೆಕ್ಟ್ರಾನಿಕ್ ಪ್ಯಾನ್ ಕಾರ್ಡ್ (ಇ-ಪ್ಯಾನ್) ನೀಡುತ್ತದೆ. ಇದನ್ನು ಸಾಮಾನ್ಯವಾಗಿ ಇ ಮೇಲ್ ಮೂಲಜ ಕಳುಹಿಸಲಾಗುತ್ತದೆ. ಇ- ಪ್ಯಾನ್ ಎನ್ನುವುದು ಡಿಜಿಟಲ್ ಸಹಿ ಮಾಡಲಾದ ಡಾಕ್ಯುಮೆಂಟ್ ಆಗಿದ್ದು, ಅದನ್ನು ಗುರುತಿನ ಪುರಾವೆಯಾಗಿ ವಿದ್ಯುನ್ಮಾನ ರೂಪದಲ್ಲೇ ಇತರ ಏಜೆನ್ಸಿಗಳಿಗೆ ಸಲ್ಲಿಸಬಹುದಾಗಿದೆ.
4) ಈ ಸೌಲಭ್ಯವು ಮಾನ್ಯವಾದ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಲಭ್ಯವಿರುತ್ತದೆ. ಇತರರಿಗೆ ಇದು ಪಡೆಯಲು ಸಾಧ್ಯವಾಗುವುದಿಲ್ಲ.
5) ಆದಾಯ ತೆರಿಗೆ ಇಲಾಖೆಯು ಇಂತಹ ಕಾರ್ಡ್ ಗಳ ಹಂಚಿಕೆ ಪ್ರಕ್ರಿಯೆಗಳಲ್ಲಿ ಮತ್ತು ಮೂಲ ಸೌಕರ್ಯಗಳಲ್ಲಿ ಸೂಕ್ತ ಆಪ್ ಡೇಟ್ ತರಲು ಪ್ರಯತ್ನವನ್ನು ಮಾಡುತ್ತಿದ್ದು, ಹೀಗಾಗಿ ಸಂಪ್ರದಾಯದ ಪ್ರಕಾರವಾಗಿ ಈವರೆಗೆ ಭೌತಿಕ ಪ್ಯಾನ್ ಕಾರ್ಡ್‌ಗಳ ಹಂಚಿಕೆಗೆ ತೆಗೆದುಕೊಳ್ಳುವ ಸಮಯವು ಶೀಘ್ರದಲ್ಲೇ ಕಡಿಮೆಯಾಗುವ ಸಾಧ್ಯತೆಯಿದೆ.
ಅದರಲ್ಲೂ ವಿಶೇಷವಾಗಿ ಯಾರೆಲ್ಲಾಆಧಾರ್ ಆಧಾರಿತ ಇ- ಕೆವೈಸಿ ಮಾರ್ಗದ ಮೂಲಕ ಅರ್ಜಿ ಸಲ್ಲಿಸುತ್ತಾರೊ ಅಂತಹ ಅರ್ಜಿದಾರರಿಗೆ ಪ್ಯಾನ್ ಹಂಚಿಕೆಗೆ ಬೇಕಾದ ಸಮಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ.


Click it and Unblock the Notifications