ಹಣಕಾಸು ವರ್ಷ ಅಥವಾ ಮೌಲ್ಯಮಾಪನ ವರ್ಷ 2025-26 ಕ್ಕೆ (Assessment Year) ಸಂಬಂಧಿಸಿದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಡಿಸೆಂಬರ್ 31 ಅತ್ಯಂತ ಮಹತ್ವದ ದಿನವಾಗಿದೆ. ಒಂದು ವೇಳೆ ನಾಳೆಯೂ ಮಿಸ್ ಮಾಡಿದ್ರೆ, ನಂತರ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು (ITR) ಸಲ್ಲಿಸಲು ಸಾಧ್ಯವಿಲ್ಲ. ವರದಿ ಪ್ರಕಾರ, ಈಗಾಗಲೇ 70 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳನ್ನು ನೀಡಲು ಬಾಕಿ ಉಳಿದಿವೆ. ಆದರೆ ಇವುಗಳಿಗೆ ಮರುಪಾವತಿಯಾಗುತ್ತದೆ. ಒಂದು ವೇಳೆ ಏನಾದರು ದೋಷಗಳಿದ್ದರೆ ತಡವಾಗಬಹುದು ಎಂದು ವರದಿಯಾಗಿದೆ.

ಡಿಸೆಂಬರ್ 31 ರ ಗಡುವು ಬಿಲೇಟೆಡ್ ಐಟಿಆರ್ ಮತ್ತು ರಿವೈಸ್‌ಡ್ ಐಟಿಆರ್ ಸಲ್ಲಿಸುವವರಿಗೆ ಕೊನೆಯ ಅವಕಾಶವಾಗಿದೆ. ಇದು ತೆರಿಗೆ ಇಲಾಖೆಗಲ್ಲ, ಬದಲಿಗೆ ತೆರಿಗೆದಾರರ ಮೇಲೆ ಪರಿಣಾಮ ಬೀರುತ್ತದೆ.
ಡಿಸೆಂಬರ್ 31ರ ನಂತರ ಬದಲಾಗುವುದೇನು?
- ಒಂದು ವೇಳೆ ನೀವು ಸ್ವಯಂಪ್ರೇರಿತವಾಗಿ ಐಟಿಆರ್ ಕರೆಕ್ಷನ್ ಮಾಡುವ ಅವಕಾಶ ಕಳೆದುಕೊಳ್ಳುತ್ತೀರಿ.
- ಅಂದರೆ ನೀವು ಸಲ್ಲಿಸಿದ ಐಟಿಆರ್‌ನಲ್ಲಿ ತಪ್ಪುಗಳಿದ್ದರೂ (ಆದಾಯ ತೋರಿಸದೇ ಇರುವುದು, ಡಿಡಕ್ಷನ್ ಕ್ಲೈಮ್ ಮಾಡದೇ ಇರುವುದು, ದೇಣಿಗೆ) ಅದನ್ನು ಸರಿ ಮಾಡಿ ಹೊಸ ಐಟಿಆರ್ ಸಲ್ಲಿಸಲು ಸಾಧ್ಯವಾಗುವುದಿಲ್ಲ.
- ಇನ್ನು ಇಲಾಖೆಯಿಂದ ಪ್ರಾಸೆಸಿಂಗ್ ತಡವಾಗಿದೆ ಎಂದು, ರಿವೈಸ್ ಮಾಡುವು ಹಕ್ಕು ನಾಳೆಗೆ ಕೊನೆಗೊಳ್ಳುತ್ತದೆ.
ಲಕ್ಷಗಟ್ಟಲೆ ಬಾಕಿ ಉಳಿದ ಐಟಿಆರ್ ಪ್ರಾಸೆಸ್!
- ಡಿಸೆಂಬರ್ 25, 2025 ರವರೆಗೆ ಸುಮಾರು 8.53 ಕೋಟಿ ಐಟಿಆರ್‌ಗಳು ಸಲ್ಲಿಕೆಯಾಗಿದೆ.
- ಅದರಲ್ಲಿ 7.80 ಕೋಟಿ ಮಾತ್ರ ಪ್ರಾಸೆಸ್ ಮಾಡಲಾಗಿದೆ.
- ಇನ್ನೂ 73 ಲಕ್ಷಕ್ಕೂ ಅಧಿಕ ಐಟಿಆರ್‌ಗಳು ಸೆಂಟ್ರಲೈಸ್ಡ್ ಪ್ರಾಸೆಸಿಂಗ್ ಸೆಂಟರ್ (CPC) ಯಲ್ಲಿ ಪೆಂಡಿಂಗ್ ಉಳಿದಿದೆ.
- ಇನ್ನೂ ಕೆಲವು ಕೇಸ್‌ಗಳಲ್ಲಿ ರಿಫಂಡ್ ಕ್ಲೈಮ್ ಇದ್ದರೂ, ಫಾರ್ಮ್ 16 ಮತ್ತು ಐಟಿಆರ್ ನಡುವೆ ಮಿಸ್ ಮ್ಯಾಚ್ ಆಗಿರುವುದರಿಂದ ಸ್ಟಕ್ ಆಗಿದೆ ಎನ್ನಲಾಗಿದೆ.
- ಈ ವರ್ಷ 15 ಲಕ್ಷಕ್ಕೂ ಅಧಿಕ ರಿವೈಸ್ಡ್ ಐಟಿಆರ್‌ಗಳು ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ.
ರಿವೈಸ್ಡ್ ಮಾಡದಿದ್ದರೆ ಏನಾಗುತ್ತದೆ?
- ನೀವು ಸರಿಯಾದ ಐಟಿಆರ್ ಫೈಲ್ ಮಾಡಿದಿದ್ದರೆ, ನಂತರ ಸಿಪಿಸಿ ಪ್ರಾಸೆಸ್ ಮಾಡುವ ಸಂದರ್ಭದಲ್ಲಿ ತಪ್ಪು ಕಂಡು ಬಂದರೆ ಹೆಚ್ಚುವರಿ ತೆರಿಗೆ, ಪೆನಾಲ್ಟಿ ಕಟ್ಟಬೇಕಾಗಬಹುದು.
- ಅಲ್ಲದೇ ತಪ್ಪನ್ನು, ಆದಾಯ ಮರೆಮಾಚುತ್ತಿದ್ದೀರಿ ಎಂದು ಪರಿಗಣಿಸಿ 50% ರಿಂದ 200% ವರೆಗೆ ದಂಡ ಹಾಕಬಹುದು.
- ಇನ್ನು ಮತ್ತೆ ಸಲ್ಲಿಸಬೇಕೆಂದರೆ ಅಪ್ಡೇಟೆಡ್ ರಿಟರ್ನ್ (ITR-U) ಸಲ್ಲಿಸಬಹುದು. ಆದರೆ ಇದರ ಜೊತೆಗೆ ನೀವು ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ.
ರಿಫಂಡ್ ಬರುವುದಿಲ್ವಾ?
- ಐಟಿಆರ್ ರಿವೈಸ್ಡ್ ಮಾಡದಿದ್ದರೆ ರಿಫಂಡ್ ಏನಾಗುವುದಿಲ್ಲ.
- ಸಿಪಿಸಿಗೆ ಐಟಿಆರ್ ಪ್ರಾಸೆಸ್ ಮಾಡಲು ಡಿಸೆಂಬರ್ 31, 2026ರವರೆಗೆ ಸಮಯವಿದೆ.
- ಪ್ರಾಸೆಸ್ ತಡವಾದರೂ ರಿಫಂಡ್ ಬರುತ್ತದೆ. ಅಲ್ಲದೇ ತಡವಾದರೆ ತಿಂಗಳಿಗೆ 0.5% ಬಡ್ಡಿ ಕೂಡಾ ಆಡ್ ಆಗುತ್ತದೆ.
- ಒಂದು ವೇಳೆ ಪ್ರಾಸೆಸ್ ವೇಳೆ ಮಿಸ್ ಮ್ಯಾಚ್ ಆದರೆ ರಿಫಂಡ್ ತಡವಾಗಬಹುದು. ಅಲ್ಲದೇ ರಿವೈಸ್ಡ್ ಮಾಡಬೇಕು.
ಇಲಾಖೆ ಎಷ್ಟು ದಿನದಲ್ಲಿ ಐಟಿಆರ್ ಪ್ರಾಸೆಸ್ ಮಾಡಬೇಕು?
- ಒಬ್ಬ ತೆರಿಗೆದಾರ ಸಲ್ಲಿಸಿದ ಐಟಿಆರ್ ಫೈಲ್ ಅನ್ನು ಹಣಕಾಸು ವರ್ಷದ ಅತ್ಯಂದಿಂದ ಮುಂದಿನ ತಿಂಗಳು ಪ್ರಾಸೆಸ್ ಮಾಡಬಹುದು.
- ಒಂದು ವೇಳೆ ಆ ಸಮಯದಲ್ಲಿ ಪ್ರಾಸೆಸ್ ಮಾಡದಿದ್ದರೆ ರಿಫಂಡ್ ಜೊತೆಗೆ ಬಡ್ಡಿಯೂ ಸೇರಿ ಹಣ ಜಮಾ ಆಗುತ್ತದೆ.
ತೆರಿಗೆದಾರರು ಏನು ಮಾಡಬೇಕು?
- ಇಂದು ಅಥವಾ ನಾಳೆಯೊಳಗೆ (ಡಿ.31) incometax.gov.in ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಐಟಿಆರ್ ಸ್ಟೇಟಸ್ ಚೆಕ್ ಮಾಡಬೇಕು.
- ನಂತರ ಎಸ್‌ಎಮ್‌ಎಸ್ ಅಥವಾ ಇಮೇಲ್‌ನಲ್ಲಿ ಮಿಸ್‌ಮ್ಯಾಚ್ ಅಲರ್ಟ್ ಬಂದಿದ್ಯಾ ಎಂದು ಚೆಕ್ ಮಾಡಿ. ಬಂದಿದ್ದರೆ ರಿವೈಸ್ಡ್ ಐಟಿಆರ್ ಸಲ್ಲಿಸಿ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications