ಹಬ್ಬದ ಆಫರ್‌ಗಳು ಮುಗಿಯಲು 48 ಗಂಟೆ ಬಾಕಿ: ಕ್ರೆಡಿಟ್ ಕಾರ್ಡ್ ಡಿಸ್ಕೌಂಟ್ ಕೈತಪ್ಪದಂತೆ ಹೀಗೆ ಮಾಡಿ!

ದೊಡ್ಡ ಬ್ಯಾಂಕ್‌ಗಳು ನೀಡುತ್ತಿರುವ ಹಬ್ಬದ ಸೀಸನ್‌ನ ಕ್ರೆಡಿಟ್ ಕಾರ್ಡ್ ಡಿಸ್ಕೌಂಟ್ ಮತ್ತು ನೋ-ಕಾಸ್ಟ್ ಇಎಮ್‌ಐ (No-cost EMI) ಆಫರ್‌ಗಳು ಮುಗಿಯಲು ಕೇವಲ 48 ಗಂಟೆಗಳಷ್ಟೇ ಬಾಕಿ ಇವೆ. ಬ್ಯಾಂಕ್ ಮತ್ತು ವ್ಯಾಪಾರಿಗಳ ಆಧಾರದ ಮೇಲೆ ಹೆಚ್ಚಿನ ಆಫರ್‌ಗಳು ನವೆಂಬರ್ 10 ಮತ್ತು ನವೆಂಬರ್ 11 ರಂದು ಕೊನೆಗೊಳ್ಳಲಿವೆ. ಪೇಮೆಂಟ್ ಗೇಟ್‌ವೇ ಹಾಗೂ ನೀವು ಆಯ್ಕೆ ಮಾಡುವ ಪಾವತಿ ವಿಧಾನದ ಆಧಾರದ ಮೇಲೆ ಆಫರ್ ಸಮಯದ ಗಡುವು (Cut-off time) ಬದಲಾಗಲಿದ್ದು, ಸಾಮಾನ್ಯವಾಗಿ ಸಂಜೆಯ ವೇಳೆಗೆ ಆಫರ್‌ಗಳು ಬಂದ್ ಆಗುತ್ತವೆ. ಗಡುವು ಮುಗಿದ ಮೇಲೆ ಯುಪಿಐ (UPI) ಅಥವಾ ನೆಟ್ ಬ್ಯಾಂಕಿಂಗ್ ಫೇಲ್ ಆದಲ್ಲಿ, ಮರಳಿ ಆಫರ್ ಸಿಗುವುದು ಕಷ್ಟ. ಹೀಗಾಗಿ ಚೆಕ್‌ಔಟ್ ಮಾಡುವ ಮುನ್ನವೇ ನಿಯಮಗಳನ್ನು ಒಮ್ಮೆ ಪರಿಶೀಲಿಸಿ, ನಿಮ್ಮ ರಿಯಾಯಿತಿ ಕೈತಪ್ಪದಂತೆ ನೋಡಿಕೊಳ್ಳಿ.

ನಿಮಗೆ ಅಂತಿಮವಾಗಿ ಎಷ್ಟು ಹಣ ಉಳಿತಾಯವಾಗಲಿದೆ ಎಂಬುದು ಬ್ಯಾಂಕ್‌ನ ನಿಯಮಗಳನ್ನು (Stacking rules) ಆಧರಿಸಿರುತ್ತದೆ. ಇನ್‌ಸ್ಟೆಂಟ್ ಡಿಸ್ಕೌಂಟ್‌ಗಳು ಪಾವತಿಯ ಸಮಯದಲ್ಲೇ ಸಿಕ್ಕರೆ, ಇಎಮ್‌ಐ ಕ್ಯಾಶ್‌ಬ್ಯಾಕ್ ನಿಮ್ಮ ಖಾತೆಗೆ ಕ್ರೆಡಿಟ್ ಆಗಲು ಸ್ವಲ್ಪ ಸಮಯ ಹಿಡಿಯುತ್ತದೆ. ಪ್ರತಿಯೊಂದು ಕಾರ್ಡ್ ಹಾಗೂ ಮರ್ಚೆಂಟ್‌ಗೆ ಗರಿಷ್ಠ ರಿಯಾಯಿತಿಯ ಮಿತಿ ಇರಲಿದೆ. ಒಂದೇ ಕಾರ್ಡ್ ಅನ್ನು ಬೇರೆ ಬೇರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಸಿದರೂ ಈ ಮಿತಿ ಅನ್ವಯಿಸಬಹುದು. ಜೊತೆಗೆ ವೋಚರ್‌ಗಳು, ಫ್ಯುಯೆಲ್, ವ್ಯಾಲೆಟ್ ಲೋಡ್, ಕಾರ್ಪೊರೇಟ್ ಕಾರ್ಡ್‌ಗಳು ಮತ್ತು ರೂಪೇ ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಯುಪಿಐ ಪಾವತಿಗಳಿಗೆ ಸಾಮಾನ್ಯವಾಗಿ ಇಂತಹ ಆಫರ್‌ಗಳು ಸಿಗುವುದಿಲ್ಲ.

ಕ್ರೆಡಿಟ್ ಕಾರ್ಡ್ ಆಫರ್ ಮುಗಿಯಲು 48 ಗಂಟೆ ಬಾಕಿ!

ಹಬ್ಬದ ಸೀಸನ್‌ನ ಕ್ರೆಡಿಟ್ ಕಾರ್ಡ್ ಡಿಸ್ಕೌಂಟ್‌ಗಳು: ಆಫರ್ ಗಡುವು, ಮಿತಿ ಮತ್ತು ನಿಯಮಗಳು

ಪಾವತಿ ಮಾಡುವ ಮುನ್ನ ನೀವು ಬಳಸುತ್ತಿರುವ ಪೇಮೆಂಟ್ ಗೇಟ್‌ವೇ ಅಥವಾ ಚಾನಲ್‌ನ ಗಡುವನ್ನು ಖಚಿತಪಡಿಸಿಕೊಳ್ಳಿ. ಸಮಯ ಕಡಿಮೆಯಿದ್ದಾಗ ನೇರವಾಗಿ ಕಾರ್ಡ್ ಮೂಲಕವೇ ಪಾವತಿಸುವುದು ಉತ್ತಮ; ಏಕೆಂದರೆ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಪ್ರಕ್ರಿಯೆಯಲ್ಲಿ ವಿಳಂಬವಾಗುವ ಸಾಧ್ಯತೆಯಿರುತ್ತದೆ. ರಿಯಾಯಿತಿಯ ಮಿತಿ ಕಡಿಮೆಯಿದ್ದರೆ, ದೊಡ್ಡ ಮೊತ್ತದ ಶಾಪಿಂಗ್ ಅನ್ನು ಭಾಗ ಮಾಡಿ (Split cart) ಆರ್ಡರ್ ಮಾಡಿ ಹಾಗೂ ಮಿಕ್ಸೆಡ್-ಪೇಮೆಂಟ್ ವಿಧಾನಗಳನ್ನು ತಪ್ಪಿಸಿ. ಸುರಕ್ಷತೆಗಾಗಿ ಆಫರ್ ಬ್ಯಾನರ್, ನಿಯಮಗಳು ಮತ್ತು ಅಂತಿಮ ಚೆಕ್‌ಔಟ್ ಪುಟದ ಸ್ಕ್ರೀನ್‌ಶಾಟ್ ತೆಗೆದಿಟ್ಟುಕೊಳ್ಳಿ. ಒಂದು ವೇಳೆ ಆಫರ್ ಸಿಗದಿದ್ದರೆ ದೂರು ನೀಡಲು ಅನಕೂಲವಾಗುವಂತೆ ಆರ್ಡರ್ ನಂಬರ್, ಪೇಮೆಂಟ್ ಐಡಿ ಮತ್ತು ಫೇಲ್ ಆದ ಸಮಯದ ವಿವರಗಳನ್ನು ಕಾಯ್ದಿರಿಸಿ.

ನೋ-ಕಾಸ್ಟ್ ಇಎಮ್‌ಐಗಳು: ನಿಜವಾದ ಲೆಕ್ಕಾಚಾರ, ಕ್ಲಾಬ್ಯಾಕ್ ಮತ್ತು ರಿಫಂಡ್ ನಿಯಮಗಳು

ಹೆಸರಿಗೆ ತಕ್ಕಂತೆ 'ನೋ-ಕಾಸ್ಟ್ ಇಎಮ್‌ಐ'ಗಳು ಸಂಪೂರ್ಣವಾಗಿ ಉಚಿತವೇನಲ್ಲ. ಬ್ಯಾಂಕ್‌ಗಳು ಬಡ್ಡಿಗೆ ರಿಯಾಯಿತಿ ನೀಡಿದರೂ ಸಹ ಪ್ರೊಸೆಸಿಂಗ್ ಫೀ ಹಾಗೂ ಜಿಎಸ್‌ಟಿ (GST) ಶುಲ್ಕಗಳನ್ನು ವಿಧಿಸುತ್ತವೆ. ಇನ್ನು ಆಫರ್‌ನ ಕ್ಯಾಶ್‌ಬ್ಯಾಕ್ ಮೊತ್ತವು ರಿಟರ್ನ್ ಪ್ರಕ್ರಿಯೆಯ ಸಮಯ ಮುಗಿದ ಮೇಲಷ್ಟೇ ಜಮೆಯಾಗುತ್ತದೆ. ಒಂದು ವೇಳೆ ನೀವು ಆರ್ಡರ್ ಕ್ಯಾನ್ಸಲ್ ಮಾಡಿದರೆ ಅಥವಾ ಡೌನ್‌ಗ್ರೇಡ್ ಮಾಡಿದರೆ, ನೀಡಲಾದ ರಿಯಾಯಿತಿಯನ್ನು ಬ್ಯಾಂಕ್ ಹಿಂಪಡೆಯಬಹುದು (Clawback). ಆದ್ದರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಅನ್ನು ಸರಿಯಾಗಿ ಗಮನಿಸಿ ಹಾಗೂ ಡೆಲಿವರಿ ವಿಳಂಬವಾದರೆ ಆ ದಾಖಲೆಗಳನ್ನು ಕಾಯ್ದಿಟ್ಟುಕೊಳ್ಳಿ.

ನವೆಂಬರ್ 10 ಮತ್ತು 11 ರ ಗಡುವು ಸಮೀಪಿಸುತ್ತಿದ್ದು, ಸಂಜೆಯ ವೇಳೆಗೆ ಸರ್ವರ್ ರಶ್ ಆಗುವ ಮುನ್ನವೇ ಶಾಪಿಂಗ್ ಪೂರ್ಣಗೊಳಿಸಿ. ಕೊನೆ ಗಳಿಗೆಯ ಪಾವತಿ ಗೊಂದಲಗಳನ್ನು ತಪ್ಪಿಸಲು ಇಂದೇ (ನವೆಂಬರ್ 9) ಆರ್ಡರ್ ಮಾಡಿ. ಆಫರ್ ಅವಧಿ ವಿಸ್ತರಣೆಯಾಗಿದೆಯೇ ಎಂದು ಬ್ಯಾಂಕ್ ಅಥವಾ ಮರ್ಚೆಂಟ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ, ಆದರೆ ಸಮಯ ವಿಸ್ತರಣೆಯಾಗುವುದಿಲ್ಲ ಎಂದೇ ಭಾವಿಸಿ ಯೋಜನೆ ಮಾಡಿ. ಬಿಲ್ ಸ್ಟೇಟ್‌ಮೆಂಟ್ ಅನ್ನು ಪರಿಶೀಲಿಸುತ್ತಿರಿ; ಒಂದು ವೇಳೆ ಕ್ಯಾಶ್‌ಬ್ಯಾಕ್ ಬರದಿದ್ದರೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ತಕ್ಷಣವೇ ಕಸ್ಟಮರ್ ಕೇರ್‌ಗೆ ದೂರು ನೀಡಿ. ಜಾಣತನದ ಹಾಗೂ ಶೀಘ್ರ ನಿರ್ಧಾರಗಳು ಮಾತ್ರ ನಿಮ್ಮ ಹಬ್ಬದ ಉಳಿತಾಯವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+