ಕ್ರೆಡಿಟ್ ಕಾರ್ಡ್‌ಗಳು ಇಂದಿನ ದಿನಗಳಲ್ಲಿ ಅನೇಕ ಭಾರತೀಯರ ಆರ್ಥಿಕ ವ್ಯವಹಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವು ನಮಗೆ ಸುಲಭವಾದ ಪಾವತಿ ವಿಧಾನ ಮತ್ತು ರಿವಾರ್ಡ್ ಪಾಯಿಂಟ್‌ಗಳಂತಹ ಆಕರ್ಷಕ ಪ್ರಯೋಜನಗಳನ್ನು ನೀಡುತ್ತವೆ. ರಿವಾರ್ಡ್ ಪಾಯಿಂಟ್‌ಗಳು ಒಂದು ಪ್ರಮುಖ ಲಾಭವೆಂದು ಪರಿಗಣಿಸಲಾಗಿದ್ದರೂ, ಅವು ನಿಜವಾಗಿಯೂ ಲಾಭದಾಯಕವೇ? ಪರಿ ಭಾರಿಯೂ ಇದರಿಂದ ಅನುಕೂಲಗಳಾಗುತ್ತವೆಯೇ?
ಕ್ರೆಡಿಟ್ ಕಾರ್ಡ್‌ಗಳ ರಿವಾರ್ಡ್ ಪಾಯಿಂಟ್‌ಗಳ ನಿಜವಾದ ಮೌಲ್ಯವನ್ನು ನಿರ್ಧರಿಸಲು, ಕಾರ್ಡ್ ಬಳಕೆದಾರರು ತಮ್ಮ ಖರ್ಚು ಮಾದರಿಗಳು, ರಿವಾರ್ಡ್ ಪ್ರೋಗ್ರಾಂಗಳ ಸ್ವರೂಪ, ಕ್ರೆಡಿಟ್ ಬಳಕೆಯ ಪರಿಣಾಮಗಳು ಮತ್ತು ವೈಯಕ್ತಿಕ ಅಗತ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಅತ್ಯಗತ್ಯ. ಇದರಿಂದ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳು ಎಷ್ಟು ಪರಿಣಾಮಕಾರಿ ಮತ್ತು ಯೋಗ್ಯವಾಗಿವೆ ಎಂಬುದನ್ನು ಅವರು ನಿಜವಾಗಿಯೂ ಅರಿತುಕೊಳ್ಳಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಖರ್ಚುಗಳ ಇತ್ತೀಚಿನ ಸ್ಥಿತಿಗತಿ
ಅಸಿತ್ ಸಿ. ಮೆಹ್ತಾ ಇನ್ವೆಸ್ಟ್‌ಮೆಂಟ್ ಇಂಟರ್ಮೀಡಿಯೇಟ್ಸ್ ಲಿಮಿಟೆಡ್‌ನ ವರದಿಯ ಪ್ರಕಾರ, ಜನವರಿ 2024 ರಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಯ ಹೆಚ್ಚಾಗಿದ್ದು ಕಾರ್ಡ್ ಖರ್ಚು ತಿಂಗಳಿಂದ ತಿಂಗಳಿಗೆ 2% (MoM) ಕಡಿಮೆಯಾಗಿ ₹ 1.8 ಟ್ರಿಲಿಯನ್‌ಗೆ ತಲುಪಿದೆ ಮತ್ತು ವರ್ಷದಿಂದ ವರ್ಷಕ್ಕೆ 14% (YoY) ಹೆಚ್ಚಾಗಿದೆ .ಇನ್ನು ವಹಿವಾಟಿನ ಪ್ರಮಾಣ ಹಿಂದಿನ ತಿಂಗಳಿಗೆ ಹೋಲಿಸಿದರೆ 1% ರಷ್ಟು ಕಡಿಮೆಯಾಗಿ 430 ಮಿಲಿಯನ್ ವಹಿವಾಟುಗಳಿಗೆ ತಲುಪಿದೆ.ಹೆಚ್ಚುತ್ತಿರುವ ತಪ್ಪುಗಳಿಂದಾಗಿ ಈ ಪ್ರಮಾಣವು ನಿಧಾನವಾಗುತ್ತಿದೆ.
ಜನವರಿ 2024 ರಲ್ಲಿ, ಪ್ರತಿ ಕಾರ್ಡ್‌ನ ಸರಾಸರಿ ಖರ್ಚು 16,911 ರೂಪಾಯಿಗಳಷ್ಟಾಗಿದ್ದು, ಇದು ಹಿಂದಿನ ತಿಂಗಳಿಗಿಂತ 1% ಕಡಿಮೆಯಾಗಿದೆ. 1.2 ಮಿಲಿಯನ್ ಕಾರ್ಡ್‌ಗಳನ್ನು ರದ್ದುಗೊಳಿಸಿರುವುದರಿಂದ, ಒಟ್ಟು ಚಾಲ್ತಿಯಲ್ಲಿರುವ ಕಾರ್ಡ್‌ಗಳ ಸಂಖ್ಯೆ 109 ಮಿಲಿಯನ್‌ಗೆ ಇಳಿದಿದೆ. HDFC, SBI ಮತ್ತು ICICI ತಮ್ಮ ಮಾರುಕಟ್ಟೆ ಪ್ರಾಬಲ್ಯವನ್ನು ಕಾಯ್ದುಕೊಂಡಿವೆ, ಆದರೆ ಕೋಟಕ್ ಮಹೀಂದ್ರಾ ಬ್ಯಾಂಕ್ 10 ತಿಂಗಳ ಕಾಲ ಡಿಬಾರ್ ಮಾಡಿದ ನಂತರ ಮತ್ತೆ ಮಾರುಕಟ್ಟೆಗೆ ಸೇರಿಕೊಂಡಿದೆ. ಇದು ಏನೇ ಇರಲಿ ಕ್ರೆಡಿಟ್ ಕಾರ್ಡ್ ಬಳಕೆಯು ಜವಾಬ್ದಾರಿಯುತ ಆರ್ಥಿಕ ನಿರ್ವಹಣೆಯ ಒಂದು ಭಾಗವಾಗಿದೆ. ಆದ್ದರಿಂದ, ಕಾರ್ಡ್ ಹೊಂದಿರುವವರು ತಮ್ಮ ಕ್ರೆಡಿಟ್ ಪ್ರೊಫೈಲ್‌ಗಳು ಮತ್ತು ಕ್ರೆಡಿಟ್ ಸ್ಕೋರ್‌ಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಅತ್ಯಗತ್ಯ. ಜೊತೆಗೆ ಇಂದಿನ ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಜಗತ್ತಿನಲ್ಲಿ, ಕ್ರೆಡಿಟ್ ಕಾರ್ಡ್ ಹೊಂದಿರುವವರು ತಮ್ಮ ಕ್ರೆಡಿಟ್ ಕಾರ್ಡ್ ಸೌಲಭ್ಯಗಳು, ರಿವಾರ್ಡ್ ಪಾಯಿಂಟ್‌ಗಳು ಮತ್ತು ಸಂಬಂಧಿತ ಷರತ್ತುಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳು
ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳು ಬ್ಯಾಂಕುಗಳು ಗ್ರಾಹಕರನ್ನು ಆಕರ್ಷಿಸಲು ನೀಡುವ ವಿಶೇಷ ಕೊಡುಗೆಗಳಾಗಿವೆ. ನೀವು ಕ್ರೆಡಿಟ್ ಕಾರ್ಡ್ ಬಳಸಿ ಏನನ್ನಾದರೂ ಖರೀದಿಸಿದಾಗ, ನಿಮಗೆ ಕೆಲವು ಪಾಯಿಂಟ್‌ಗಳು ಸಿಗುತ್ತವೆ. ಈ ಪಾಯಿಂಟ್‌ಗಳನ್ನು ನಂತರ ಉಡುಗೊರೆಗಳು, ಪ್ರಯಾಣದ ರಿಯಾಯಿತಿಗಳು, ನಗದು ಅಥವಾ ಗಿಫ್ಟ್ ಕಾರ್ಡ್‌ಗಳಂತಹ ಬಹುಮಾನಗಳಾಗಿ ಬದಲಾಯಿಸಬಹುದು. ಈ ಪಾಯಿಂಟ್‌ಗಳ ಮೌಲ್ಯವು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಮತ್ತು ನೀವು ಅವುಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಬದಲಾಗುತ್ತದೆ.
ಮೌಲ್ಯ ಪ್ರಸ್ತಾಪದ ಲಾಭಗಳನ್ನು ಪರಿಶೀಲಿಸುವುದು
ರಿವಾರ್ಡ್ ಪಾಯಿಂಟ್‌ಗಳು ಆಕರ್ಷಕವಾಗಿ ಕಂಡರೂ, ಅವುಗಳ ನಿಜವಾದ ಮೌಲ್ಯವನ್ನು ಮೌಲ್ಯಮಾಪನ ಮಾಡುವುದು ಮುಖ್ಯ. ಈ ಪೈಕಿ ಪರಿಗಣಿಸಬೇಕಾದ ಕೆಲವು ವಿಷಯಗಳು:
ರಿಡೆಂಪ್ಶನ್ ಆಯ್ಕೆಗಳು: ರಿವಾರ್ಡ್ ಪಾಯಿಂಟ್‌ಗಳನ್ನು ಬಳಸುವ ವಿಧಾನ ಬದಲಾದಂತೆ ಅವುಗಳ ಮೌಲ್ಯವೂ ಬದಲಾಗುತ್ತದೆ. ಉದಾಹರಣೆಗೆ, ಸರಕುಗಳನ್ನು ಖರೀದಿಸಲು ಬಳಸುವ ಪಾಯಿಂಟ್‌ಗಳು ಪ್ರಯಾಣ ಅಥವಾ ನಗದು ರೂಪದಲ್ಲಿ ಬಳಸುವ ಪಾಯಿಂಟ್‌ಗಳಿಗಿಂತ ಕಡಿಮೆ ಮೌಲ್ಯವನ್ನು ಹೊಂದಿರಬಹುದು.
ಶುಲ್ಕಗಳು ಮತ್ತು ಫೀಸ್‌ಗಳು:ಉತ್ತಮ ರಿವಾರ್ಡ್ ಯೋಜನೆಗಳನ್ನು ಹೊಂದಿರುವ ಕೆಲವು ಕ್ರೆಡಿಟ್ ಕಾರ್ಡ್‌ಗಳು ಹೆಚ್ಚಿನ ಶುಲ್ಕಗಳನ್ನು ಹೊಂದಿರುತ್ತವೆ. ಈ ಶುಲ್ಕಗಳನ್ನು ಪಾವತಿಸುವುದಕ್ಕೆ ರಿವಾರ್ಡ್‌ಗಳು ಯೋಗ್ಯವೇ ಎಂದು ನೀವು ಲೆಕ್ಕಾಚಾರ ಮಾಡಬೇಕು
ಮುಕ್ತಾಯ ದಿನಾಂಕ(Expiry date):ಎಲ್ಲಾ ರಿವಾರ್ಡ್ ಪಾಯಿಂಟ್‌ಗಳು ಮುಕ್ತಾಯ ದಿನಾಂಕವನ್ನು ಹೊಂದಿರುತ್ತವೆ ಮತ್ತು ನೀವು ಅವುಗಳನ್ನು ನಿರ್ದಿಷ್ಟ ಸಮಯದೊಳಗೆ ಬಳಸಬೇಕು. ಬಳಸದ ಪಾಯಿಂಟ್‌ಗಳು ಮುಕ್ತಾಯವಾಗಿ ನಿಷ್ಪ್ರಯೋಜಕವಾಗುತ್ತವೆ.
ಖರ್ಚು ಮಾಡುವ ನಡೆ (Spending behavior):ನಿಮ್ಮ ಖರ್ಚಿನ ಅಭ್ಯಾಸದ ಮೇಲೆ ರಿವಾರ್ಡ್ ಪಾಯಿಂಟ್ ಗಳ ಮೌಲ್ಯ ನಿಂತಿದೆ. ಹೆಚ್ಚು ಪಾಯಿಂಟ್ ಗಳಿಸಬೇಕಾದರೆ, ಹೆಚ್ಚು ಖರ್ಚು ಮಾಡಬೇಕು. ಕಡಿಮೆ ಖರ್ಚು ಮಾಡಿದರೆ ರಿವಾರ್ಡ್ ಗಳಿಂದ ಹೆಚ್ಚಿನ ಲಾಭ ಸಿಗುವುದಿಲ್ಲ.
ರಿವಾರ್ಡ್ ಪಾಯಿಂಟ್‌ಗಳನ್ನು ಗರಿಷ್ಠಗೊಳಿಸುವುದು
ನೀವು ಕ್ರೆಡಿಟ್ ಕಾರ್ಡ್ ಬಹುಮಾನಗಳಿಗೆ ಸೈನ್ ಅಪ್ ಮಾಡಲು ಆಯ್ಕೆ ಮಾಡಿದರೆ , ಈ ಸಲಹೆಗಳು ಅವುಗಳ ಮೌಲ್ಯವನ್ನು ಹೆಚ್ಚಿಸುತ್ತವೆ:
ಸರಿಯಾದ ಕಾರ್ಡ್ ಆಯ್ಕೆ: ನಿಮ್ಮ ಖರ್ಚು ಮಾಡುವ ಅಭ್ಯಾಸಕ್ಕೆ ಸೂಕ್ತವಾದ ಕ್ರೆಡಿಟ್ ಕಾರ್ಡ್ ಅನ್ನು ಆರಿಸಿ
ಬುದ್ಧಿವಂತಿಕೆಯಿಂದ ಪಡೆದುಕೊಳ್ಳಿ: ನಿಮ್ಮ ಅಂಕಗಳಿಗೆ ಹೆಚ್ಚಿನ ಮೌಲ್ಯ ನೀಡುವ ರಿಡೆಂಪ್ಶನ್ ಕೊಡುಗೆಗಳನ್ನು ಆಯ್ಕೆ ಮಾಡಿ.
ಮುಕ್ತಾಯ ದಿನಾಂಕಗಳನ್ನು ಮೇಲ್ವಿಚಾರಣೆ ಮಾಡಿ: ನಿಮ್ಮ ಪಾಯಿಂಟ್‌ಗಳು ಯಾವಾಗ ಮುಕ್ತಾಯಗೊಳ್ಳುತ್ತಿವೆ ಎಂಬುದನ್ನು ಗುರುತಿಸಿ ಮತ್ತು ಅದಕ್ಕೂ ಮೊದಲು ಅವುಗಳನ್ನು ಬಳಸಿ.


Click it and Unblock the Notifications