ಷೇರು ಮಾರುಕಟ್ಟೆ ಹೂಡಿಕೆಗೆ ಅತ್ಯಗತ್ಯ ಸಾಧನವಾದ "ಡಿಮ್ಯಾಟ್ ಖಾತೆ". ಇದು ಹೂಡಿಕೆ ಪ್ರಕ್ರಿಯೆಯನ್ನು ಸುರಕ್ಷಿತ, ಪರಿಣಾಮಕಾರಿ ಮತ್ತು ಅನುಕೂಲಕರವಾಗಿಸುತ್ತದೆ. ನಾವು ಬ್ಯಾಂಕ್ ವ್ಯವಹಾರಗಳನ್ನು ಹೇಗೆ ಉಳಿತಾಯ ಖಾತೆ ಮೂಲಕ ಮಾಡುತ್ತೆವೋ ಅದೇ ರೀತಿ ಷೇರು ಮಾರುಕಟ್ಟೆಗೆ ಸಂಬಂಧಿತ ವ್ಯವಹರ ಡಿಮ್ಯಾಟ್ ಅಕೌಂಟ್ ಮೂಲಕ ಮಾಡಬೇಕಾಗುತ್ತದೆ.
ಡಿಮ್ಯಾಟ್ ಖಾತೆ ಎಂದರೆ "ಡಿಮೆಟೀರಿಯಲೈಸ್ಡ್ ಖಾತೆ". ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು ಮತ್ತು ಇತರ ಭದ್ರತೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇರಿಸಿಕೊಳ್ಳಲು ಈ ಖಾತೆಯನ್ನು ಬಳಸಲಾಗುತ್ತದೆ. ಹಿಂದೆ, ಷೇರು ಪ್ರಮಾಣಪತ್ರಗಳನ್ನು ಭೌತಿಕವಾಗಿ ಇಟ್ಟುಕೊಳ್ಳಲಾಗುತ್ತಿತ್ತು, ಆದರೆ ಡಿಮ್ಯಾಟ್ ಖಾತೆಯು ಆ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಡಿಮೆಟೀರಿಯಲೈಸೇಶನ್ ಎನ್ನುವುದು ಭೌತಿಕ ಷೇರು ಪ್ರಮಾಣಪತ್ರಗಳನ್ನು ಎಲೆಕ್ಟ್ರಾನಿಕ್ ರೂಪಕ್ಕೆ ಪರಿವರ್ತಿಸುವ ಪ್ರಕ್ರಿಯೆಯಾಗಿದೆ.

ಡಿಮ್ಯಾಟ್ ಖಾತೆ, ಇಂದಿನ ಡಿಜಿಟಲ್ ಯುಗದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅತ್ಯಗತ್ಯ ಸಾಧನವಾಗಿದೆ. ಇದನ್ನು ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಂತಹ ಸ್ಮಾರ್ಟ್ ಸಾಧನಗಳ ಮೂಲಕ ಮತ್ತು ಇಂಟರ್ನೆಟ್ ಸಂಪರ್ಕದೊಂದಿಗೆ ಸುಲಭವಾಗಿ ಪ್ರವೇಶಿಸಬಹುದು. ಡಿಮ್ಯಾಟ್ ಖಾತೆಯನ್ನು ಪ್ರವೇಶಿಸಲು, ನೀವು ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಹೊಂದಿರಬೇಕು.
ನಿಮ್ಮ ಉಳಿತಾಯ ಖಾತೆಯನ್ನು ಸುರಕ್ಷಿತವಾಗಿಡಲು ನೀವು ಹೇಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೀರೋ, ಹಾಗೆಯೇ ನಿಮ್ಮ ಡಿಮ್ಯಾಟ್ ಖಾತೆಯ ಸುರಕ್ಷತೆಯ ಬಗ್ಗೆಯೂ ನೀವು ಜಾಗರೂಕರಾಗಿರಬೇಕು. ಏಕೆಂದರೆ, ನಿಮ್ಮ ಡಿಮ್ಯಾಟ್ ಖಾತೆಯಲ್ಲಿ ನಿಮ್ಮ ಎಲ್ಲಾ ಷೇರುಗಳು ಮತ್ತು ಇತರ ಸೆಕ್ಯುರಿಟಿಗಳು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹವಾಗಿರುತ್ತವೆ. ಆದ್ದರಿಂದ, ನಿಮ್ಮ ಡಿಮ್ಯಾಟ್ ಖಾತೆಯ ಸುರಕ್ಷತೆ ಬಹಳ ಮುಖ್ಯ. ಇಲ್ಲವಾದ್ರೆ ನಿಮ್ಮ ಉಳಿತಾಯ ಖಾತೆಗೆ ಸೈಬರ್ ವಂಚಕರ ಕನ್ನ ಹಾಕುವಂತೆ ನಿಮ್ಮ ಡಿಮ್ಯಾಟ್ ಖಾತೆಯೂ ವಂಚನೆಗೆ ಬಲಿಯಾಗಬಹುದು. ನಿಮ್ಮ ಡಿಮ್ಯಾಟ್ ಖಾತೆಯನ್ನು ಸುರಕ್ಷಿತವಾಗಿಡಲು ಸಹಾಯಕವಾಗುವ ಸಲಹೆಗಳು ಇಲ್ಲಿವೆ.
ಈ ಮಾಹಿತಿ ಸುರಕ್ಷಿತವಾಗಿರಲಿ
ಸಾಮಾನ್ಯವಾಗಿ ಡಿಮ್ಯಾಟ್ ಸಂಖ್ಯೆ, ವಿಳಾಸ, ಬಳಕೆದಾರ ಹೆಸರು, ಪಾಸ್‌ವರ್ಡ್ ಇತ್ಯಾದಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ಅನೇಕ ಜನರು ಈ ಮಾಹಿತಿಯನ್ನು ಎಲ್ಲೋ ಬರೆದಿಟ್ಟುಕೊಳ್ಳುತ್ತಾರೆ, ಆದರೆ ನೀವು ಅದನ್ನು ನಿಮ್ಮ ಮನಸ್ಸಿನಲ್ಲಿ ಸುರಕ್ಷಿತವಾಗಿಟ್ಟರೆ ಉತ್ತಮ. ಅಲ್ಲಿಂದ ಯಾರೂ ಅದನ್ನು ಕದಿಯಲು ಸಾಧ್ಯವಿಲ್ಲ. ನೀವು ಅದನ್ನು ಬರೆಯಲೇಬೇಕಾದರೆ, ಈ ಮಾಹಿತಿಯನ್ನು ಬರೆದಿಟ್ಟುಕೊಳ್ಳಿ ಮತ್ತು ಬೇರೆ ಯಾರಿಗೂ ಸಿಗದ ಸ್ಥಳದಲ್ಲಿ ಲಾಕ್ ಮಾಡಿಡಿ.
ಸ್ಟ್ರಾಂಗ್ ಪಾಸ್‌ವರ್ಡ್ ರಚಿಸಿ
ನಿಮ್ಮ ಮೇಲ್ ಐಡಿ ಪಾಸ್‌ವರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಡಿಮ್ಯಾಟ್ ಖಾತೆಯಾಗಲಿ, ಇವುಗಳ ಸುರಕ್ಷತೆ ಬಹಳ ಮುಖ್ಯ. ನಿಮ್ಮ ಖಾತೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳಲು ಬಲವಾದ ಪಾಸ್‌ವರ್ಡ್‌ಗಳನ್ನು ಬಳಸುವುದು ಅತ್ಯಗತ್ಯ. ಪಾಸ್‌ವರ್ಡ್‌ನಲ್ಲಿ ಇಂಗ್ಲಿಷ್ ಪದಗಳು, ಸಂಖ್ಯಾತ್ಮಕ ಮತ್ತು ವಿಶೇಷ ಪದಗಳು ಇತ್ಯಾದಿಗಳನ್ನು ಬಳಸಿ. ನಿಮ್ಮ ಹೆಸರು, ಜನ್ಮ ದಿನಾಂಕ, ವಿವಾಹ ವಾರ್ಷಿಕೋತ್ಸವ, ಮಗುವಿನ ಹೆಸರು ಮುಂತಾದ ಸ್ಪಷ್ಟ ಪಾಸ್‌ವರ್ಡ್‌ಗಳನ್ನು ಬಳಸುವುದನ್ನು ಉತ್ತಮವಲ್ಲ.
SMS ಅಲರ್ಟ್ ಸೇವೆಯನ್ನು ಸಕ್ರಿಯಗೊಳಿಸಿ
ನಿಮ್ಮ ಡಿಮ್ಯಾಟ್ ಖಾತೆಯಲ್ಲಿನ ಯಾವುದೇ ವಹಿವಾಟು ನಡೆದಾಗ, SMS ಎಚ್ಚರಿಕೆಗಳನ್ನು ಸಕ್ರಿಯಗೊಳಿಸುವುದರಿಂದ ನಿಮಗೆ ತಕ್ಷಣ ಮಾಹಿತಿ ಸಿಗುತ್ತದೆ. ಇದರಿಂದ ಯಾವುದೇ ಅನುಮಾನಾಸ್ಪದ ಚಟುವಟಿಕೆಯ ಬಗ್ಗೆ ನಿಮಗೆ ತಕ್ಷಣ ತಿಳಿದಿರುತ್ತದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ತಕ್ಷಣವೇ ನಿಮ್ಮ ಬ್ರೋಕರ್ ಅಥವಾ ಠೇವಣಿದಾರರಿಗೆ ವರದಿ ಮಾಡಿ.
ಉಚಿತ ವೈಫೈ ಬಳಸಿ ಡಿಮ್ಯಾಟ್ ಖಾತೆಗೆ ಲಾಗಿನ್ ಆಗಬೇಡಿ.
ಸಾಮಾನ್ಯವಾಗಿ ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು ಇತ್ಯಾದಿಗಳಲ್ಲಿ ಸಿಗುವ ಉಚಿತ ವೈ-ಫೈ ಬಳಸಿ ನಿಮ್ಮ ಡಿಮ್ಯಾಟ್ ಖಾತೆಗೆ ಲಾಗಿನ್ ಮಾಡಬೇಡಿ. ಸುರಕ್ಷಿತ ನೆಟ್‌ವರ್ಕ್‌ನಿಂದ ಮಾತ್ರ ಡಿಮ್ಯಾಟ್ ಲಾಗಿನ್ ಮಾಡಿ. ನೀವು ನಿಮ್ಮ ಖಾತೆಗೆ ಲಾಗಿನ್ ಆಗಿದ್ದರೆ, ದಯವಿಟ್ಟು ಲಾಗ್ ಔಟ್ ಮಾಡಿ.
ನಿಮ್ಮ ಪಾಸ್‌ವರ್ಡ್ ಅನ್ನು ನಿಯಮಿತವಾಗಿ ಬದಲಾಯಿಸಿ
ಡಿಮ್ಯಾಟ್ ಖಾತೆಯ ಸುರಕ್ಷತೆಗಾಗಿ ಪಾಸ್‌ವರ್ಡ್ ಅನ್ನು ನಿಯಮಿತವಾಗಿ ಬದಲಾಯಿಸುವುದು ಬಹಳ ಮುಖ್ಯ. ನೀವು ತಿಂಗಳಿಗೊಮ್ಮೆಯಾದರೂ ನಿಮ್ಮ ಪಾಸ್‌ವರ್ಡ್ ಅನ್ನು ಬದಲಾಯಿಸಿದರೆ, ಅದು ಹ್ಯಾಕ್ ಆಗುವ ಸಾಧ್ಯತೆಗಳನ್ನು ನೀವು ಬಹಳವಾಗಿ ಕಡಿಮೆ ಮಾಡಬಹುದು.
ನೀವು ದೀರ್ಘಕಾಲದವರೆಗೆ ಬಳಸದಿದ್ದರೆ ಖಾತೆಯನ್ನು ಫ್ರೀಜ್ ಮಾಡಿ
ನೀವು ದೀರ್ಘಕಾಲದವರೆಗೆ ಡಿಮ್ಯಾಟ್ ಖಾತೆಯನ್ನು ಬಳಸದಿದ್ದರೆ, ನೀವು ಈ ಖಾತೆಯನ್ನು ಫ್ರೀಜ್ ಮಾಡಬಹುದು. ಇದರೊಂದಿಗೆ ನೀವು ವಂಚನೆಯನ್ನು ತಡೆಯಬಹುದು. ನೀವು ಅದನ್ನು ಬಳಸಲು ಬಯಸಿದಾಗ, ನೀವು ಅದನ್ನು ಸುಲಭವಾಗಿ ಫ್ರೀಜ್ ಮಾಡಬಹುದು.


Click it and Unblock the Notifications