2026ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆಯು ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಇನ್ಮುಂದೆ ಹೊಸದಾಗಿ ಸಿಂಗಲ್ ಹೋಲ್ಡರ್ ಡಿಮ್ಯಾಟ್ ಖಾತೆ ಅಥವಾ ಮ್ಯೂಚುವಲ್ ಫಂಡ್ ಫೋಲಿಯೋ ತೆರೆಯುವಾಗ ನಾಮಿನಿ ವಿವರ ನೀಡುವುದು ಅಥವಾ 'ಆಪ್ಟ್ ಔಟ್' (ನಾಮಿನಿ ಬೇಡ ಎಂದು ಆಯ್ಕೆ ಮಾಡುವುದು) ಮಾಡುವುದು ಕಡ್ಡಾಯ. ಈ ಎರಡರಲ್ಲಿ ಒಂದನ್ನೂ ಮಾಡದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಇನ್ನು ಜಾಯಿಂಟ್ ಅಕೌಂಟ್‌ಗಳಿಗೆ ನಾಮಿನೇಷನ್ ಐಚ್ಛಿಕವಾಗಿದ್ದರೂ, ನಾಮಿನಿಯಲ್ಲಿ ಯಾವುದೇ ಬದಲಾವಣೆ ಮಾಡಲು ಎಲ್ಲ ಖಾತೆದಾರರ ಸಮ್ಮತಿ ಅಗತ್ಯ.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಈ ಸರ್ಕ್ಯುಲರ್‌ನಲ್ಲಿ ಸೂಚಿಸಲಾಗಿದೆ. ಆನ್‌ಲೈನ್ ನಾಮಿನೇಷನ್ ಪ್ರಕ್ರಿಯೆಯನ್ನು ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (DSC), ಆಧಾರ್ ಇ-ಸೈನ್ ಅಥವಾ OTP ಆಧಾರಿತ ಟೂ-ಫ್ಯಾಕ್ಟರ್ ಅಥೆಂಟಿಕೇಷನ್ ಮೂಲಕ ದೃಢೀಕರಿಸಬಹುದು. ಆಫ್‌ಲೈನ್ ಫಾರ್ಮ್‌ಗಳಿಗೆ ಕೇವಲ ನಿಮ್ಮ ಸಹಿ (Wet Signature) ಇದ್ದರೆ ಸಾಕು; ಹೆಬ್ಬೆರಳ ಗುರುತು ನೀಡುವ ಸಂದರ್ಭದಲ್ಲಿ ಮಾತ್ರ ಸಾಕ್ಷಿಗಳ (Witnesses) ಸಹಿ ಬೇಕಾಗುತ್ತದೆ. ಖಾತೆದಾರರ ನಿಧನದ ನಂತರ ಕುಟುಂಬಸ್ಥರಿಗೆ ಹಣ ಸುಲಭವಾಗಿ ತಲುಪಲಿ ಮತ್ತು ಕ್ಲೇಮ್ ಆಗದ ಆಸ್ತಿಗಳು ಉಳಿದುಕೊಳ್ಳುವುದು ತಪ್ಪಲಿ ಎಂಬುದೇ ಈ ನಿಯಮದ ಮುಖ್ಯ ಉದ್ದೇಶ.

NSDL, CDSL ಮತ್ತು MF Central ಮೂಲಕ ನಾಮಿನಿ ಸೇರಿಸುವುದು ಹೇಗೆ?
NSDL: ಆನ್‌ಲೈನ್ ನಾಮಿನೇಷನ್ ಪೇಜ್‌ಗೆ ಹೋಗಿ DP ID ಮತ್ತು Client ID ನಮೂದಿಸಿ, ಅಥೆಂಟಿಕೇಟ್ ಮಾಡಿ. ಗರಿಷ್ಠ ಮೂರು ನಾಮಿನಿಗಳನ್ನು ಸೇರಿಸಿ, ಆಧಾರ್ ಇ-ಸೈನ್ ಮಾಡಿ. CDSL: ನಿಮ್ಮ ಡಿಪಾಸಿಟರಿ ಪಾರ್ಟಿಸಿಪೆಂಟ್ (DP), myEasi ಅಥವಾ easiest ಪ್ಲಾಟ್‌ಫಾರ್ಮ್ ಮೂಲಕ ನಾಮಿನೇಷನ್ ಅಪ್‌ಡೇಟ್ ಮಾಡಿ, ಅಥೆಂಟಿಕೇಷನ್ ಮೂಲಕ ದೃಢೀಕರಿಸಿ. ಮ್ಯೂಚುವಲ್ ಫಂಡ್: MF Central ವೆಬ್‌ಸೈಟ್ ಅಥವಾ ಆಪ್‌ನಲ್ಲಿ PAN ಮತ್ತು OTP ಬಳಸಿ ಲಾಗಿನ್ ಆಗಿ, Update Nominee Details ಆಯ್ಕೆ ಮಾಡಿ, ನಿಮ್ಮ ಫೋಲಿಯೋಗಳನ್ನು ಸೆಲೆಕ್ಟ್ ಮಾಡಿ ಸಬ್ಮಿಟ್ ಮಾಡಿ.
ಆಪ್ಟ್ ಔಟ್ (Opt out) ಡಿಕ್ಲೇರೇಷನ್: ನಿಯಮಗಳು ಮತ್ತು ದೃಢೀಕರಣ
ನಿಮಗೆ ನಾಮಿನಿ ಸೇರಿಸಲು ಇಷ್ಟವಿಲ್ಲವೇ? ಹಾಗಿದ್ದರೆ ಡಿಕ್ಲೇರೇಷನ್‌ನಲ್ಲಿ "I hereby confirm that I do not wish to appoint any nominee(s)" ಎನ್ನುವ ವಾಕ್ಯ ಕಾಣಿಸುತ್ತದೆ. ಆನ್‌ಲೈನ್‌ನಲ್ಲಿ ಈ ಹೇಳಿಕೆಯನ್ನು ಒಪ್ಪಿಕೊಂಡು ನಾಮಿನಿ ಇಲ್ಲದೆಯೇ ಮುಂದುವರಿಯಬಹುದು. ಆಫ್‌ಲೈನ್‌ನಲ್ಲಾದರೆ ಫಾರ್ಮ್‌ಗೆ ಸಹಿ ಮಾಡಬೇಕಾಗುತ್ತದೆ (ಹೆಬ್ಬೆರಳ ಗುರುತು ನೀಡಿದರೆ ಮಾತ್ರ ಸಾಕ್ಷಿಗಳ ಅಗತ್ಯವಿರುತ್ತದೆ). ಆನ್‌ಲೈನ್‌ನಲ್ಲಿ ಆಧಾರ್ ಇ-ಸೈನ್, ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ಅಥವಾ ಟೂ-ಫ್ಯಾಕ್ಟರ್ ಅಥೆಂಟಿಕೇಷನ್ ಮೂಲಕ ಇದನ್ನು ದೃಢೀಕರಿಸಬಹುದು.
ಜಾಯಿಂಟ್ ಹೋಲ್ಡರ್ಸ್, ಮೈನರ್‌ಗಳು ಮತ್ತು ಎನ್‌ಆರ್‌ಐಗಳಿಗೆ ನಿಯಮಗಳು
ವಿಶೇಷ ಸಂದರ್ಭಗಳಿಗೆ ಸಂಬಂಧಿಸಿದಂತೆಯೂ ನಿಯಂತ್ರಕ ಸಂಸ್ಥೆ ಸ್ಪಷ್ಟನೆ ನೀಡಿದೆ. ಜಾಯಿಂಟ್ ಅಕೌಂಟ್ ಹೊಂದಿರುವವರಿಗೆ ನಾಮಿನೇಷನ್ ಐಚ್ಛಿಕ. ಆದರೆ ನಾಮಿನಿ ಬದಲಾವಣೆ ಮಾಡುವುದಿದ್ದರೆ ಎಲ್ಲ ಜಾಯಿಂಟ್ ಹೋಲ್ಡರ್‌ಗಳ ಸಮ್ಮತಿ ಬೇಕು. ಒಬ್ಬರು ಗರಿಷ್ಠ 3 ನಾಮಿನಿಗಳನ್ನು ಹೆಸರಿಸಬಹುದು. ಅಪ್ರಾಪ್ತರನ್ನೂ (Minors) ನಾಮಿನಿಯಾಗಿ ಹೆಸರಿಸಬಹುದು; ಅದಕ್ಕಾಗಿ ಅವರ ಜನ್ಮ ದಿನಾಂಕ ಹಾಗೂ ಲಭ್ಯವಿದ್ದರೆ ಪೋಷಕರ (Guardian) ವಿವರ ನೀಡಬೇಕು. ಅನಿವಾಸಿ ಭಾರತೀಯರು (NRI) ಕೂಡ ನಾಮಿನೇಷನ್ ಮಾಡಬಹುದು ಅಥವಾ ಅವರ ಹೆಸರನ್ನು ನಾಮಿನಿಯಾಗಿ ನೀಡಬಹುದು. ನೆನಪಿಡಿ, ನಾಮಿನೇಷನ್ ಮಾಡದಿದ್ದರೆ ಆಸ್ತಿ ಅಥವಾ ಹಣದ ವರ್ಗಾವಣೆಗೆ ಹೆಚ್ಚುವರಿ ಕಾನೂನು ದಾಖಲೆಗಳು ಬೇಕಾಗುತ್ತವೆ ಮತ್ತು ಪ್ರಕ್ರಿಯೆಯೂ ತಡವಾಗುತ್ತದೆ.


Click it and Unblock the Notifications