ಮೊಬೈಲ್ ಸಿಮ್ ಕಾರ್ಡ್‌ನಿಂದ ಹಿಡಿದು ಬ್ಯಾಂಕ್ ಅಕೌಂಟ್‌ವರೆಗೂ (Bank Account) ಮೊಬೈಲ್ ನಂಬರ್ ಹೇಗೆ ಮುಖ್ಯವೋ, ಅದೇ ರೀತಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ಗಳು (Aadhaar Card-Pan Card) ಕೂಡಾ ಮುಖ್ಯ ದಾಖಲೆಯಾಗಿಬಿಟ್ಟಿದೆ. ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು ಇಂದು ಪ್ರತಿಯೊಬ್ಬ ವ್ಯಕ್ತಿಗೂ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇನ್ನು ಯಾವುದೇ ಸಾಲ ಪಡೆಯುವುದರಿಂದ ಹಿಡಿದು ತೆರಿಗೆ ಸಲ್ಲಿಸುವುದರವರೆಗೆ ಆಧಾರ್, ಪ್ಯಾನ್ ಬೇಕೇ ಬೇಕು. ಅಲ್ಲದೇ ಈ ಸಂದರ್ಭದಲ್ಲಿ ಹಣಕಾಸಿನ ವಂಚನೆ ತಡೆಯಲು (Fraud), ವ್ಯವಹಾರಗಳನ್ನು ಸರಿಯಾಗಿ ನಿರ್ವಹಿಸಲು ಸರ್ಕಾರವು ಇವೆರಡನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.

ಇದೇ ಕೊನೆಯ ದಿನ!
ಆಧಾರ್-ಪ್ಯಾನ್ ಲಿಂಕ್ ಮಾಡಲು ಅಂತಿಮ ದಿನಾಂಕ ಡಿಸೆಂಬರ್ 31, 2025. ಈ ದಿನಾಂಕದೊಳಗೆ ಲಿಂಕ್ ಮಾಡದಿದ್ದರೆ, ಜನವರಿ 1, 2026 ರಿಂದ ನಿಮ್ಮ ಪ್ಯಾನ್ ಮತ್ತು ಆಧಾರ್ ಎರಡೂ ಬ್ಲಾಕ್ ಆಗುತ್ತದೆ ಎಂದು ಇದೀಗ ವರದಿಯಾಗಿದೆ. ಇದರಿಂದ ಬಹುತೇಕ ಎಲ್ಲಾ ಹಣಕಾಸಿನ ವ್ಯವಹಾರಗಳಿಗೆ ತೊಂದರೆಯಾಗುವುದು ಖಚಿತ.
ಆಧಾರ್ ಕಾರ್ಡ್ ಪಡೆಯುವುದು ಹೇಗೆ?
ಹೊಸ ಆಧಾರ್ ಕಾರ್ಡ್ ಪಡೆಯಲು ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿ ಫೋಟೋ, ಫಿಂಗರ್‌ಪ್ರಿಂಟ್, ಐರಿಸ್ ಸ್ಕ್ಯಾನ್‌ನಂತಹ ಬಯೋಮೆಟ್ರಿಕ್ ಹಾಗೂ ಹೆಸರು, ಜನ್ಮ ದಿನಾಂಕ, ವಿಳಾಸದಂತಹ ಜನಸಂಖ್ಯಾ ವಿವರಗಳನ್ನು ನೀಡಬೇಕು. ಆಧಾರ್ ಕಾರ್ಡ್‌ಗೆ ₹100 ಶುಲ್ಕವಿದ್ದು, ದಾಖಲಾತಿ ನಂತರ ಅದು ನಿಮ್ಮ ವಿಳಾಸಕ್ಕೆ ರವಾನೆಯಾಗುತ್ತದೆ.
ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?
ಪ್ಯಾನ್ ಕಾರ್ಡ್ 10 ಅಂಕಿಯ ಅಲ್ಫಾನ್ಯೂಮರಿಕ್ ಸಂಖ್ಯೆಯಾಗಿದ್ದು, ಇ-ಪ್ಯಾನ್ ಸೇವೆಯಿಂದ ಕೆಲವೇ ನಿಮಿಷಗಳಲ್ಲಿ ಪಡೆಯಬಹುದು. ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ (www.incometax.gov.in) 'Get New e-PAN' ಆಯ್ಕೆ ಮಾಡಿ. ಆಧಾರ್ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ನೀಡಿ. OTP ಪರಿಶೀಲನೆ ಮಾಡಿದ ನಂತರ ನಿಮಗೆ ತಕ್ಷಣವೇ ಇ-ಪ್ಯಾನ್ ಲಭ್ಯವಾಗುತ್ತದೆ. ಬೇಕಿದ್ದರೆ, ₹107 ಶುಲ್ಕ ಪಾವತಿಸಿ ಭೌತಿಕ ಕಾರ್ಡ್ ಮನೆಗೆ ತರಿಸಿಕೊಳ್ಳಿ.
ಆನ್‌ಲೈನ್ ಮೂಲಕ ಲಿಂಕ್ ಮಾಡುವುದು ಹೇಗೆ?
ಆನ್‌ಲೈನ್ ಮೂಲಕ ಆಧಾರ್-ಪ್ಯಾನ್ ಲಿಂಕ್‌ಗಾಗಿ, ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ www.incometaxindiaefiling.gov.in ಗೆ ಭೇಟಿ ನೀಡಿ. 'Quick Links' ವಿಭಾಗದಲ್ಲಿ 'Link Aadhaar' ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಹೆಸರನ್ನು ಆಡ್ ಮಾಡಬೇಕು.. ಬಳಿಕ, ನಿಯಮಗಳನ್ನು ಒಪ್ಪಿಕೊಂಡು, ಕ್ಯಾಪ್ಚಾ ಕೋಡ್ ಭರ್ತಿ ಮಾಡಿ 'Submit' ಕ್ಲಿಕ್ ಮಾಡುವ ಮೂಲಕ ಲಿಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
SMS ಮೂಲಕ ಲಿಂಕ್ ಮಾಡಿ:
ಎಸ್‌ಎಂಎಸ್ ಮೂಲಕ ಆಧಾರ್-ಪ್ಯಾನ್ ಲಿಂಕ್ ಮಾಡಲು, ನಿಮ್ಮ ಮೊಬೈಲ್‌ನಿಂದ UIDPAN ಎಂದು ಟೈಪ್ ಮಾಡಿ. ನಂತರ ಒಂದು ಸ್ಪೇಸ್ ಬಿಟ್ಟು ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ, ಮತ್ತೊಂದು ಸ್ಪೇಸ್ ಬಿಟ್ಟು ನಿಮ್ಮ 10 ಅಂಕಿಯ ಪ್ಯಾನ್ ಸಂಖ್ಯೆಯನ್ನು ನಮೂದಿಸಿ. ಈ ಮೆಸೇಜ್ ಅನ್ನು 567678 ಅಥವಾ 56161 ನಂಬರ್‌ಗೆ ಕಳುಹಿಸಿ. ಸರಿಯಾದ ಮಾಹಿತಿ ನೀಡಿದರೆ, ಲಿಂಕ್ ಪ್ರಕ್ರಿಯೆ ತಕ್ಷಣವೇ ಪೂರ್ಣಗೊಳ್ಳುತ್ತದೆ. ಡಿಸೆಂಬರ್ 31, 2025 ರ ಗಡುವಿನೊಳಗೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯ.


Click it and Unblock the Notifications