ನಿಮಗೆ ತ್ವರಿತ ಸಾಲದ ಅವಶ್ಯಕತೆಯಿದ್ದರೆ ನೀವು ಚಿಂತಿಸುವ ಅಗತ್ಯ ಬೇಡ. ನೀವೀಗ ಪ್ಯಾನ್ ಕಾರ್ಡ್ ಬಳಸಿಕೊಡು ಸುಲಭವಾಗಿ ವೈಯಕ್ತಿಕ ಸಾಲವನ್ನ ಪಡೆಯಬಹುದು. ಈ ಲೋನ್‌ಗಳು ನಿಮಗೆ ಹೊಂದಿಕೊಳ್ಳುವ ಮರುಪಾವತಿ ಅವದಿಯನ್ನ ನೀಡುತ್ತವೆ. ನೀವು ತ್ವರಿತವಾಗಿ ಸುಲಭ ಮಾರ್ಗದಲ್ಲಿ 5,000 ರೂ. ಸಾಲವನ್ನ ಸುಲಭವಾಗಿ ಪಡೆಯಬಹುದು.
ಪ್ಯಾನ್ ಕಾರ್ಡ್ ಸಾಲಗಳು
ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ವಿಶೇಷವಾಗಿ ಪ್ಯಾನ್ ಕಾರ್ಡ್ ಮುಖ್ಯ ದಾಖಲೆಯಲ್ಲಿ ಒಂದಾಗಿದೆ. ಪ್ಯಾನ್ ಕಾರ್ಡ್ ಮೂಲಕ ಪಡೆಯುವ ಸಾಲವು ಅಸುರಕ್ಷಿತ ಸಾಲವಾಗಿದೆ. ಆದ್ರೆ ಈ ಸಾಲ ನಿಮ್ಮ ತುರ್ತು ಸಂದರ್ಭಗಳಿಗೆ ಬಳಕೆ ಬರುತ್ತದೆ. ಇನ್ನು ಈ ರೀತಿಯ ಸಾಲಗಳನ್ನ ಲೆಂಡಿಂಗ್ ಅಪ್ಲಿಕೇಶನ್‌ಗಳು ಮತ್ತು NBFಗಳು ಮತ್ತು ಕೆಲವು ಬ್ಯಾಂಕ್‌ಗಳು ಮಾತ್ರ ಒದಗಿಸುತ್ತವೆ.

5,000 ರೂ. ಸಾಲ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ಸರಿಯಾದ ಸಾಲದಾತನನ್ನು ಹುಡುಕುವುದು
ಮೊದಲು ನೀವು ಈ ಸಣ್ಣ ಸಾಲಗಳನ್ನ ನೀಡುವ ಬ್ಯಾಂಕ್‌ಗಳು ಅಥವಾ NBFCಗಳ ಪ್ರಕಾರಗಳನ್ನು ಗುರುತಿಸಿ. ಬಡ್ಡಿ ದರಗಳು, ಸಂಸ್ಕರಣಾ ಶುಲ್ಕ ಮತ್ತು ಮರುಪಾವತಿ ಅವಧಿಯ ಬಗ್ಗೆ ತಿಳಿಯಿರಿ. ಇದರಿಂದ ನೀವು ನಿಮಗಾಗಿ ಉತ್ತಮ ಆಯ್ಕೆಯನ್ನು ಹುಡುಕಬಹುದು ಜೊತೆಗೆ ಹೋಲಿಸಬಹುದು.
ಅರ್ಜಿಯನ್ನ ಸಲ್ಲಿಸಿ
ಸಾಲ ನೀಡುವವರ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಭೇಟಿ ನೀಡಿ, ನಿಮ್ಮ ಕ್ರೆಡಿಟ್ ಸ್ಕೋರ್ , ಸಾಲದ ಮೊತ್ತ ಹಾಗೆ ಇತರ ಪ್ರಮುಖ ಮಾಹಿತಿಗಳು ಸೇರಿದಂತೆ ಮುಖ್ಯ ಮಾಹಿತಿಗಳನ್ನ ನೀವು ನೀಡಬೇಕು.
ದಾಖಲೆಗಳನ್ನು ಸಲ್ಲಿಸಿ
ನಿಮ್ಮ ಪ್ಯಾನ್ ಕಾರ್ಡ್ ಅನ್ನು ಅಪ್ಲೋಡ್ ಮಾಡಿ. ಅಲ್ಲದೆ ಕೆಲವು ಸಾಲದಾತರು ಆಧಾರ್ ಕಾರ್ಡ್ ಅಥವಾ ಆದಾಯದ ಪುರಾವೆಗಳನ್ನ ಕೂಡ ಕೇಳಬಹುದು. ಅಗತ್ಯವಿರುವ ಎಲ್ಲಾ ವಿವರಗಳನ್ನ ಹಾಕಿದ ನಂತರ ನೀವು ಈಗಾಗಲೇ ಹಾಕಿರುವ ಎಲ್ಲಾ ಮಾಹಿತಿಗಳು ನಿಖರಾಗಿವೆಯೇ ಎಂದು ಪರಿಶೀಲಿಸಿ.
ಸಾಲ ಮಂಜೂರಾತಿ
ಸಾಲದ ಅರ್ಜಿಯನ್ನ ಪರಿಶೀಲಿಸಿದ ನಂತರ, ನಿಮಗೆ ಸಾಲವನ್ನ ನೀಡುವವರು ನಿಮ್ಮ ಅರ್ಹತಾ ಮಾನದಂಡಗಳ ಆಧಾರದ ಮೇಲೆ ನಿಮ್ಮ ಅರ್ಜಿಯನ್ನು ಅನುಮೋದನೆ ಮಾಡುತ್ತಾರೆ ಅಥವಾ ತಿರಸ್ಕರಿಸುತ್ತಾರೆ. ಅನುಮೋದನೆ ಮಾಡಿದರೆ, ಸಾಮಾನ್ಯವಾಗಿ ಕೆಲವೇ ಗಂಟೆಗಳಲ್ಲಿ ಸಾಲದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಪ್ಯಾನ್ ಕಾರ್ಡ್‌ನಲ್ಲಿ ಸಾಲ ಪಡೆಯುವದರ ಪ್ರಮುಖ ಪ್ರಯೋಜನಗಳು
ನಿಮ್ಮ ಪ್ಯಾನ್ ಕಾರ್ಡ್‌ನೊಂದಿಗೆ ನೀವು ಸುಲಭವಗಿ ಸಾಲವನ್ನ ಪಡೆಯಬಹುದು. ಇನ್ನು ಈ ಸಾಲಕ್ಕೆ ಯಾವುದೇ ಹೆಚ್ಚಿನ ದಾಖಲೆಗಳ ಅಗತ್ಯ ಬೀಳುವುದಿಲ್ಲ. ಆದ್ರೆ ಸಾಲದಾತನು ನಿಮ್ಮ ಆದಾಯವನ್ನ ಪರಿಶೀಲಿಸಿ ಹೆಚ್ಚುವರಿ ದಾಖಲೆಗಳನ್ನ ಕೇಳಬಹುದು.
ಸಂಪೂರ್ಣ ಆನ್‌ಲೈನ್ ಮೂಲಕವೇ ಸಾಲಕ್ಕೆ ಅರ್ಜಿ ಹಾಕಬಹುದು. ಸಾಲದ ಪ್ರಕ್ರಿಯೆ ಸಾಮಾನ್ಯವಾಗಿ ಕೆಲವು ದಿನಗಳಲ್ಲಿ ಪೂರ್ಣಗೊಳ್ಳುತ್ತದೆ.
ಈ ಸಾಲಗಳಿಗೆ ಮೇಲಾಧಾರ ಅವಶ್ಯಕತೆ ಇಲ್ಲ. ಆದ್ದರಿಂದ, ನೀವು ಯಾವುದೇ ಆಸ್ತಿಯನ್ನು ಹೊಂದಿಲ್ಲದಿದ್ದರೂ ಕೂಡ ನೀವು ಅರ್ಜಿಯನ್ನ ಹಾಕಬಹುದು.
ಪ್ಯಾನ್ ಕಾರ್ಡ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಗುರುತಿಸಬೇಕಾದ ಅಂಶಗಳು
ಬಡ್ಡಿದರಗಳು ಮತ್ತು ಶುಲ್ಕ: ಈ ಸಾಲಗಳಿಗೆ ಮೇಲಾಧಾರದ ಅಗತ್ಯವಿಲ್ಲದ ಕಾರಣ ಮತ್ತು ಅಸುರಕ್ಷಿತವಾಗಿರುವುದರಿಂದ ಈ ಸಾಲಗಳು ಹೆಚ್ಚಿನ ಬಡ್ಡಿದರಗಳನ್ನು ಹೊಂದಬಹುದು. ಆದ್ದರಿಂದ, ಸಾಲವನ್ನ ಪಡೆಯುವ ಮುನ್ನ ಬಡ್ಡಿದರಗಳು ಮತ್ತು ಇತರೆ ಶುಲ್ಕಗಳ ಬಗ್ಗೆ ತಿಳಿಯುವುದು ಉತ್ತಮ.
ಹಾಗೆ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಾಪಾಡಿಕೊಳ್ಳಲು ಸಾಲದ EMI ಅನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿ. ಇದು ನಿಮ್ಮ ಭವಿಷ್ಯದ ಸಾಲಗಳಿಗೆ ಕಡಿಮೆ ಬಡ್ಡಿದರಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.
ಸಾಲದ ಉದ್ದೇಶ: ನಿಮಗೆ ಸಾಲದ ಅಗತ್ಯವಿದ್ದರೆ ಮಾತ್ರ ನೀವು ಸಾಲವನ್ನು ಪಡೆಯುವುದು ಮುಖ್ಯ. ಹಾಗೆ ಯಾವುದೇ ಹಣಕಾಸಿನ ಹೊರೆಯನ್ನು ತಪ್ಪಿಸಲು ನಿಮಗೆ ಅವಶ್ಕತೆ ಇರುವಷ್ಟು ಹಣವನ್ನ ಮಾತ್ರ ಗೆದುಕೊಳ್ಳುವುದು ಸೂಕ್ತವಾಗಿದೆ.
ಹಾಗೆ ಸಾಲ ಪಡೆದ ನಂತರ ವಂಚನೆಯಿಂದ ತಪ್ಪಿಸಿಕೊಳ್ಳಲು ಉತ್ತಮ ಮಾನ್ಯತೆ ಪಡೆದ ಸಾಲದಾತರಿಂದ ಸಾಲವನ್ನು ಪಡೆಯುವುದು ಬಹಳ ಮುಖ್ಯ. ಮುಂಚಿತವಾಗಿ ಸರಿಯಾದ ಸಂಶೋಧನೆ ಮಾಡಿ ಸಾಲವನ್ನ ಪಡೆಯಿರಿ.


Click it and Unblock the Notifications