ಯಾವುದೇ ಬ್ಯುಸಿನೆಸ್ (Business) ಆರಂಭಿಸಬೇಕೆಂದರೆ ಹಣ ಬಹಳ ಮುಖ್ಯ. ಆದ್ದರಿಂದ ಹೂಡಿಕೆಗಾಗಿ ಕೆಲವರು ಉಳಿತಾಯದಿಂದ ಪಡೆದರೆ, ಇನ್ನೂ ಕೆಲವರು ಸಾಲ ಮಾಡುತ್ತಾರೆ. ಆದ್ದರಿಂದ ಒಂದು ವ್ಯವಹಾರ ವಿಸ್ತರಿಸಬೇಕೆಂದರೆ ಅಥವಾ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಹಣಕಾಸಿನ ಅಗತ್ಯವಿದ್ದಾಗ, ಉದ್ಯಮ ಸಾಲಗಳು (Business Loan) ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ಆದರೆ, ಸರಿಯಾದ ಸಿದ್ಧತೆಗಳಿಲ್ಲದೆ ಅರ್ಜಿ ಸಲ್ಲಿಸುವುದರಿಂದ ಬ್ಯಾಂಕುಗಳು ಅವುಗಳನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಹಾಗಿದ್ರೆ ನೀವು ವ್ಯವಹಾರ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ರಿಜೆಕ್ಟ್ ಆಗಲು ಮುಖ್ಯ ಕಾರಣಗಳೇನು ಗೊತ್ತಾ? ನೀವು ಮಾಡಬಾರದ ತಪ್ಪುಗಳೇನು? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
1. ಕಡಿಮೆ ಕ್ರೆಡಿಟ್ ಸ್ಕೋರ್: ಯಾವುದೇ ಸಾಲವನ್ನು ನೀಡುವ ಮೊದಲು ಬ್ಯಾಂಕುಗಳು ಅರ್ಜಿದಾರರ ಕ್ರೆಡಿಟ್ ಸ್ಕೋರ್ ಚೆಕ್ ಮಾಡುವುದು ಸಾಮಾನ್ಯ. ನಿಮ್ಮ ಹಿಂದಿನ ಸಾಲ ಮರುಪಾವತಿಗಳು ಸಮಯಕ್ಕೆ ಸರಿಯಾಗಿ ಆಗದಿದ್ದರೆ, ಕ್ರೆಡಿಟ್ ಸ್ಕೋರ್ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು 700 ಕ್ಕಿಂತ ಹೆಚ್ಚಿರುವಂತೆ ಕಾಪಾಡಿಕೊಳ್ಳಲು ಪ್ರಯತ್ನಿಸಿ. ಯಾವುದಾದರೂ ಸಾಲ ಬಾಕಿ ಉಳಿಸಬೇಡಿ, ಬದಲಿಗೆ ಸರಿಯಾದ ಸಮಯಕ್ಕೆ ಕ್ಲಿಯರ್ ಮಾಡಿ.
2. ಅಗತ್ಯ ದಾಖಲೆಗಳ ಕೊರತೆ: ದಾಖಲೆಗಳಲ್ಲಿ ಸಣ್ಣ ತಪ್ಪಿದ್ದರೂ ಸಾಲದ ಅರ್ಜಿ ರಿಜೆಕ್ಟ್ ಆಗಬಹುದು. ಗುರುತಿನ ಪುರಾವೆ ಮತ್ತು ವಿಳಾಸದಲ್ಲಿ, ವ್ಯವಹಾರ ನೋಂದಣಿ ಪ್ರಮಾಣಪತ್ರ, GST ರಿಟರ್ನ್ಸ್ ಮತ್ತು ಕಳೆದ 2-3 ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ (ITR) ಸಹ ಮುಖ್ಯ. ಅದಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಹಣಕಾಸು ದಾಖಲೆಗಳು ಸರಿಯಾಗಿವೆಯಾ ಎಂದು ಚೆಕ್ ಮಾಡಿ.
3. ಅಸ್ಪಷ್ಟ ವ್ಯವಹಾರ ಯೋಜನೆ: ಯಾವುದೇ ಬ್ಯಾಂಕ್‌ಗೆ ಸಾಲದ ಅರ್ಜಿ ಸಲ್ಲಿಸುವಾಗ, ನಿಮ್ಮ ವ್ಯವಹಾರವು ಹೇಗೆ ಲಾಭ ಪಡೆಯುತ್ತದೆ ಮತ್ತು ಸಾಲದ ಮೊತ್ತವನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದರ ಬಗ್ಗೆ ಬ್ಯಾಂಕ್‌ಗೆ ಸ್ಪಷ್ಟವಾದ ಪ್ಲಾನ್ ನೀಡಬೇಕು. ಒಂದು ವೇಳೆ ನಿಮ್ಮ ವ್ಯವಹಾರವು ಲಾಭದಾಯಕವಲ್ಲ ಎಂದು ಬ್ಯಾಂಕ್ ಭಾವಿಸಿದರೆ, ಅರ್ಜಿಯನ್ನು ರಿಜೆಕ್ಟ್ ಮಾಡಬಹುದು. ಅದಕ್ಕಾಗಿ, ವ್ಯವಹಾರದ ಗುರಿಗಳು ಮತ್ತು ಸಾಲದ ಬಳಕೆ ಬಗ್ಗೆ ಸ್ಪಷ್ಟ ಪ್ಲಾನ್ ನೀಡುವುದು ಅಗತ್ಯ.
4. ಮರುಪಾವತಿ ಲೆಕ್ಕಾಚಾರ: ಸಾಲ ಮರುಪಾವತಿಗೆ ನಿಮ್ಮ ವ್ಯವಹಾರದಿಂದ ಬರುವ ಮಾಸಿಕ ಆದಾಯವು ಸಾಕಾಗುತ್ತದೆಯೇ ಎಂದು ಬ್ಯಾಂಕುಗಳು ಪರಿಶೀಲಿಸುತ್ತವೆ. ಆದಾಯವು ಸರಿಯಾಗಿರದಿದ್ದರೆ, ಬ್ಯಾಂಕುಗಳು ಸಾಲ ನೀಡಲು ಹಿಂಜರಿಯುತ್ತವೆ. ಈ ಸಂದರ್ಭದಲ್ಲಿ ಅರ್ಜಿ ತಿರಸ್ಕರಿಸಬಹದು. ಆದ್ದರಿಂದ ನಿಮ್ಮ ವ್ಯವಹಾರದ ಎಲ್ಲಾ ವಹಿವಾಟುಗಳನ್ನು ಬ್ಯಾಂಕ್ ಖಾತೆಯ ಮೂಲಕವೇ ನಡೆಸಿ ಮತ್ತು ನಿಖರವಾದ ಲೆಕ್ಕಪತ್ರಗಳನ್ನು ನಿರ್ವಹಿಸಿ.
5. ಇತರ ಸಾಲಗಳು: ನೀವು ಈಗಾಗಲೇ ಇತರ ಸಾಲಗಳನ್ನು ಹೊಂದಿದ್ದರೆ, ಹೊಸ ಸಾಲವನ್ನು ಸಹ ನೀವು ಮರುಪಾವತಿಸಲು ಸಮರ್ಥರೇ ಎಂದು ಬ್ಯಾಂಕ್ ಪರಿಶೀಲಿಸುತ್ತದೆ. ಆದ್ದರಿಂದ ಈ ಎಲ್ಲವುಗಳನ್ನು ಪರಿಶೀಲಿಸಿ ನಂತರ ಬ್ಯಾಂಕುಗಳು ಸಾಲ ನೀಡುತ್ತದೆ. ಕೆಲವೊಮ್ಮೆ ಈ ಸಂದರ್ಭದಲ್ಲಿ ರಿಜೆಕ್ಟ್ ಕೂಡಾ ಮಾಡಬಹುದು. ಅದಕ್ಕಾಗಿ, ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಸಣ್ಣ ಸಾಲಗಳಿದ್ದರೆ, ಅದನ್ನು ಕ್ಲಿಯರ್ ಮಾಡಿ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications