ಈ ವಾರದ ಆರಂಭದಲ್ಲಿ ಹಬ್ಬದ ಸೀಸನ್‌ನ ಮೊದಲ ವಾರ ಮುಕ್ತಾಯವಾಗಿದೆ. ಈ ಹಬ್ಬದ ಸೀಸನ್‌ನ ಮೊದಲ ವಾರದಲ್ಲಿ ಇ-ಕಾಮರ್ಸ್ ಕಂಪನಿಗಳ ಒಟ್ಟು ಮಾರಾಟದಲ್ಲಿ ಸುಮಾರು ಶೇಕಡ 19 ರಷ್ಟು ಜಿಗಿತ ಕಂಡು ಬಂದಿದೆ. ಸುಮಾರು 47,000 ಕೋಟಿ ರೂಪಾಯಿಗಳ ಮಾರಾಟವು ನಡೆದಿದೆ ಎಂದು ಶುಕ್ರವಾರ ವರದಿಯೊಂದು ತಿಳಿಸಿದೆ.
ಫ್ಲಿಪ್‌ಕಾರ್ಟ್, ಮಿಂತ್ರಾ, ಶಾಪ್ಸಿ ಒಳಗೊಂಡತೆ ಇ-ಕಾಮರ್ಸ್ ಸಂಸ್ಥೆಗಳು ಮೊದಲ ವಾರದಲ್ಲಿ ಒಟ್ಟು ವ್ಯಾಪಾರದ ಮೌಲ್ಯದಲ್ಲಿ (ಜಿಎಂವಿ) ಸುಮಾರು ಶೇಕಡ 63 ರಷ್ಟು ಪಾಲನ್ನು ಹೊಂದಿದೆ. 29,610 ಕೋಟಿ ರೂಪಾಯಿಗಳ ವ್ಯವಹಾರವನ್ನು ಹೊಂದಿದೆ ಎಂದು ಅಂದಾಜು ಎಂದು ವರದಿ ಹೇಳಿದೆ.

"ಅಕ್ಟೋಬರ್ 15 ರಂದು ಕೊನೆಯಾದ 2023 ರ ಹಬ್ಬದ ಸೀಸನ್ ಮಾರಾಟದ 1 ನೇ ವಾರದಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಸುಮಾರು 47,000 ಕೋಟಿ ರೂಪಾಯಿಗಳ ಮಾರಾಟವನ್ನು ಕಂಡಿದೆ. 2022 ರ ಹಬ್ಬದ ಸೀಸನ್‌ನಲ್ಲಿ ಮಾರಾಟದ 1 ನೇ ವಾರದಲ್ಲಿ ಸುಮಾರು ಶೇಕಡ 19 ರಷ್ಟು ಬೆಳವಣಿಗೆಯನ್ನು ಕಂಡಿದೆ,"" ಎಂದು ವರದಿ ಉಲ್ಲೇಖಿಸಿದೆ.
ಜಿಎಂವಿ ಷೇರುಗಳ ವಿಷಯದಲ್ಲಿ ಫ್ಲಿಪ್‌ಕಾರ್ಟ್‌ನ ನಂತರದ ಸ್ಥಾನದಲ್ಲಿ ಅಮೆಜಾನ್ ಇದೆ ಎಂದು ವರದಿ ಹೇಳಿದೆ. ಇನ್ನು ಆರ್ಡರ್ ಪರಿಮಾಣದ ಲೆಕ್ಕಾಚಾರದಲ್ಲಿ ನೋಡಿದಾಗ ಸಾಫ್ಟ್‌ಬ್ಯಾಂಕ್ ಬೆಂಬಲಿತ ಮೀಶೋ ಮತ್ತೆ ಅಮೆಜಾನ್ ಸಂಸ್ಥೆಯನ್ನು ಹಿಂದಿಕ್ಕಿದೆ.
"ಮೌಲ್ಯದ ಲೆಕ್ಕಾಚಾರದಲ್ಲಿ ನಾವು ನೋಡಿದಾಗ, ಮೀಶೋ ತನ್ನ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಗಮನಾರ್ಹವಾಗಿ 2023 ರ ಹಬ್ಬದ ಸೀಸನ್‌ನಲ್ಲಿ ಮಾರಾಟದ 1 ನೇ ವಾರದಲ್ಲಿ ಮಾರುಕಟ್ಟೆ ಪಾಲನ್ನು ಗಳಿಸಿದೆ. ಒಟ್ಟು ಆರ್ಡರ್‌ಗಳ ಲೆಕ್ಕಾಚಾರದಲ್ಲಿ ನೋಡಿದಾಗ ಶೇಕಡ 25 ರಷ್ಟು ಪಾಲು ಹೆಚ್ಚಾಗಿದೆ. 2022 ರ ಹಬ್ಬದ 1 ನೇ ವಾರದಲ್ಲಿ ಶೇಕಡ 21 ರಷ್ಟು ಹೆಚ್ಚಾಗಿದೆ," ಎಂದು ವರದಿ ತಿಳಿಸಿದೆ.
ಗ್ರಾಹಕರು, ಮಾರಾಟಗಾರರು ಮತ್ತು ವಿತರಣಾ ಪಾಲುದಾರರ ಸಮೀಕ್ಷೆಗಳು, ಅಪ್ಲಿಕೇಶನ್ ಡೌನ್‌ಲೋಡ್‌ಗಳು, ಮೊಬೈಲ್ ಸಾಗಣೆಗಳಲ್ಲಿನ ಆಮದು ಡೇಟಾ ಮತ್ತು ಸಾರ್ವಜನಿಕ ವರದಿಗಳನ್ನು ಒಳಗೊಂಡಿರುವ ಅಂದಾಜುಗಳಿಗಾಗಿ ಸಮಗ್ರ ಸಂಶೋಧನಾ ವಿಧಾನವನ್ನು ಅನುಸರಿಸುತ್ತದೆ ಎಂದು ರೀಡ್‌ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ಹೇಳಿದ್ದಾರೆ.
ವರದಿಯ ಪ್ರಕಾರ, ಮೊಬೈಲ್‌ಗಳು, ಎಲೆಕ್ಟ್ರಾನಿಕ್ಸ್ ಸರಕುಗಳು ಮತ್ತು ದೊಡ್ಡ ಉಪಕರಣಗಳಂತಹ ಹೆಚ್ಚಿನ ಮಾರಾಟ ಬೆಲೆಯ ವಸ್ತುಗಳು 1 ನೇ ವಾರದಲ್ಲಿ ಮಾರಾಟಕ್ಕೆ ಅತಿದೊಡ್ಡ ಕೊಡುಗೆಯಾಗಿದೆ. ಒಟ್ಟು ಮಾರಾಟದ ಸುಮಾರು ಶೇಕಡ 67 ರಷ್ಟು ಹೆಚ್ಚಿಸಿದೆ. ಹಬ್ಬದ ಸೀಸನ್ ಮಾರಾಟದ ಮೊದಲ ವಾರದ ಕೊನೆಯ ದಿನದ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇಕಡ 36 ರಷ್ಟು ಹೆಚ್ಚಳವಾಗಿದೆ.


Click it and Unblock the Notifications