ಹೆಚ್ಚಿನವರಿಗೆ ನಿವೃತ್ತಿ ಎಂದರೆ ಕೆಲಸ ನಿಲ್ಲಿಸುವುದಲ್ಲ, ಬದಲಿಗೆ ನಿವೃತ್ತಿಯ ನಂತರ ಮಾಸಿಕ ಆದಾಯ ಗಳಿಸುವುದು ಹೇಘೆ ಎಂಬುದನ್ನು ತಿಳಿಯುವುದು ಮುಖ್ಯ. ಉದ್ಯೋಗದ ಸಂಬಳ (Salary) ನಿಂತ ನಂತರವೂ ದಿನನಿತ್ಯದ ಖರ್ಚುಗಳಾದ ದಿನಸಿ, ವೈದ್ಯಕೀಯ ಶುಲ್ಕ, ವಿದ್ಯುತ್, ಪ್ರಯಾಣ ಮತ್ತು ಕುಟುಂಬದ ಜವಾಬ್ದಾರಿಗಳು ನಿರಂತರವಾಗಿ ಮುಂದುವರೆಯುತ್ತವೆ. ಹಾಗಾಗಿ, ನಿವೃತ್ತಿ ಯೋಜನೆ ಕೇವಲ ಒಂದು ದೊಡ್ಡ ಉಳಿತಾಯ (Savings) ಮಾಡುವುದಲ್ಲ, ಬದಲಾಗಿ ನಿವೃತ್ತಿ ನಂತರ ಜೀವನ ಸಾಗಿಸೋದು ಹೇಗೆ ಎಂಬುದನ್ನು ಮೊದಲೇ ಪ್ಲಾನ್ ಮಾಡುವುದು.

ಷೇರು ಮಾರುಕಟ್ಟೆಯ ಏರಿಳಿತಗಳ ಬಗ್ಗೆ ಚಿಂತಿಸದೆ, ತಮ್ಮ ಹಣ ಸುರಕ್ಷಿತವಾಗಿರಬೇಕು ಮತ್ತು ಉತ್ತಮ ಆದಾಯ ನೀಡಬೇಕು ಎಂದು ಬಯಸುವವರಿಗೆ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳು ಉತ್ತಮ ದಾರಿಯಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಪೋಸ್ಟ್ ಆಫೀಸ್, ಉತ್ತಮ ಆದಾಯದ ಜೊತೆಗೆ ಸುರಕ್ಷಿತವೂ ಹೌದು. ಹೂಡಿಕೆದಾರರಿಗಾಗಿ ಅಂಚೆ ಕಚೇರಿ ಟೈಮ್ ಡೆಪಾಸಿಟ್ (Post Office TD) ಖಾತೆಯ ಮೂಲಕ ಹೂಡಿಕೆದಾರರು ಬಡ್ಡಿಯಿಂದ ಲಕ್ಷಾಂತರ ರೂಪಾಯಿ ಗಳಿಸಬಹುದು.
ಅಂಚೆ ಕಚೇರಿ ಟೈಮ್ ಡೆಪಾಸಿಟ್ ಸ್ಕೀಮ್, ಬ್ಯಾಂಕುಗಳ ಸ್ಥಿರ ಠೇವಣಿಗಳಿಗೆ (Fixed Deposit) ಹೋಲುತ್ತದೆ. ಹೂಡಿಕೆದಾರರು ತಮ್ಮ ಹಣಕಾಸು ಗುರಿಗಳಿಗೆ ಅನುಗುಣವಾಗಿ, ಒಂದು, ಎರಡು, ಮೂರು ಅಥವಾ ಐದು ವರ್ಷಗಳ ಹೂಡಿಕೆ ಅವಧಿ ಆಯ್ಕೆ ಮಾಡಿಕೊಳ್ಳಬಹುದು. ಪ್ರತಿಯೊಂದು ಅವಧಿಗೂ ವಿಭಿನ್ನ ಬಡ್ಡಿ ದರಗಳನ್ನು ನೀಡಲಾಗುತ್ತದೆ.
ಪ್ರಸ್ತುತ ಬಡ್ಡಿ ದರದ ಮಾಹಿತಿ:
1 ವರ್ಷದ ಹೂಡಿಕೆಗೆ 6.9%, 2 ವರ್ಷಕ್ಕೆ 7.0%, 3 ವರ್ಷಕ್ಕೆ 7.1%, ಹಾಗೂ 5 ವರ್ಷದ ಹೂಡಿಕೆಗೆ 7.5% ಬಡ್ಡಿ ಲಭ್ಯವಿದೆ. ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ಈ ಯೋಜನೆ ಭಾರೀ ಜನಪ್ರಿಯತೆ ಪಡೆದಿದೆ. ಕನಿಷ್ಠ ₹1,000 ರೂ.ನೊಂದಿಗೆ ಖಾತೆ ತೆರೆಯಬಹುದಾಗಿದ್ದು, ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ.
ಸರಿಯಾದ ಮೊತ್ತ ಮತ್ತು ಅವಧಿಯನ್ನು ಆಯ್ಕೆ ಮಾಡಿಕೊಂಡರೆ, ಹೂಡಿಕೆದಾರರು ಬಡ್ಡಿಯ ಮೂಲಕವೇ ತುಂಬಾ ಆದಾಯ ಗಳಿಸಬಹುದು. ಉದಾಹರಣೆಗೆ, ಒಬ್ಬರು ₹4.5 ಲಕ್ಷಗಳನ್ನು ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ, 7.5% ಬಡ್ಡಿ ದರದಲ್ಲಿ, ಮುಕ್ತಾಯದ ಸಮಯದಲ್ಲಿ ಅವರಿಗೆ ಸುಮಾರು ₹6.51 ಲಕ್ಷಗಳು ಹಿಂತಿರುಗುತ್ತವೆ. ಇದರಲ್ಲಿ ₹2.01 ಲಕ್ಷಗಳು ಬಡ್ಡಿಯಿಂದ ಬಂದ ಲಾಭವಾಗಿರುತ್ತದೆ.
ಅದೇ ರೀತಿ, ₹2.5 ಲಕ್ಷ ರೂಪಾಯಿಗಳನ್ನು ಐದು ವರ್ಷಗಳ ಕಾಲ ಹೂಡಿಕೆ ಮಾಡಿದರೆ, ಸುಮಾರು ₹1.12 ಲಕ್ಷ ರೂಪಾಯಿ ಬಡ್ಡಿ ಮೂಲಕ ಪಡೆಯಬಹುದು. ಈ ಮೂಲಕ, ಅಂಚೆ ಕಚೇರಿ ಟೈಮ್ ಡೆಪಾಸಿಟ್ ಯೋಜನೆಯು ನಿಮ್ಮ ಹಣವನ್ನು ಸುರಕ್ಷಿತವಾಗಿ ಮತ್ತು ಉತ್ತಮ ಆದಾಯ ಪಡೆಯಲು ಸಹಕಾರಿ.
ಐದು ವರ್ಷಗಳ ಟೈಮ್ ಡೆಪಾಸಿಟ್ ಆಯ್ಕೆ ಮಾಡುವ ಹೂಡಿಕೆದಾರರಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡಾ ಲಭ್ಯವಿದೆ. ಅಲ್ಲದೇ, ಸಂಪಾದಿಸುವ ಬಡ್ಡಿ ಸಂಪೂರ್ಣವಾಗಿ ತೆರಿಗೆ-ಮುಕ್ತವಾಗಿರುವುದಿಲ್ಲ. ಬಡ್ಡಿ ಆದಾಯ ನಿಗದಿತ ಮಿತಿಯನ್ನು ಮೀರಿದರೆ ತೆರಿಗೆ ಪಾವತಿಸುವುದು ಕಡ್ಡಾಯವಾಗಿರುತ್ತದೆ.
ಕೇಂದ್ರ ಹಣಕಾಸು ಸಚಿವಾಲಯವು ಪ್ರತಿ ಮೂರು ತಿಂಗಳಿಗೊಮ್ಮೆ ಅಂಚೆ ಕಚೇರಿ ಬಡ್ಡಿ ದರಗಳನ್ನು ಪರಿಶೀಲಿಸುತ್ತದೆ. ಮಾರುಕಟ್ಟೆ ಬದಲಾವಣೆಗಳಿಗೆ ಅನುಗುಣವಾಗಿ ಬಡ್ಡಿಯಲ್ಲಿ ಕೆಲವೊಮ್ಮೆ ಬದಲಾವಣೆಯಾಗುತ್ತದೆ. ಆದರೆ ಒಮ್ಮೆ ಹೂಡಿಕೆ ಮಾಡಿದರೆ, ಅವಧಿ ಮುಗಿಯುವವರೆಗೆ ಅದೇ ಬಡ್ಡಿ ನೀಡಲಾಗುತ್ತದೆದೆ. ಸುರಕ್ಷತೆ ಮತ್ತು ಉತ್ತಮ ಆದಾಯ ಎರಡನ್ನೂ ಬಯಸುವ ಜನರಿಗೆ ಪೋಸ್ಟ್ ಆಫೀಸ್‌ನ ಯಾವುದೇ ಯೋಜನೆಗಳು ಕೂಡಾ ಬೆಸ್ಟ್ ಆಗಿದೆ.


Click it and Unblock the Notifications