ಪೋಸ್ಟ್ ಆಫೀಸ್‌ನ (Post Office) RD ಯೋಜನೆಯು ಕಡಿಮೆ ಹೂಡಿಕೆ ಮಾಡಿ, ಹೆಚ್ಚು ಆದಾಯ ಗಳಿಸುವವರಿಗೆ ಬೆಸ್ಟ್ ಸ್ಕೀಮ್ ಆಗಿದೆ. ಈ ಯೋಜನೆಯಲ್ಲಿ, ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಇನ್ವೆಸ್ಟ್ ಮಾಡಲಾಗುತ್ತದೆ. ಇಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಐದು ವರ್ಷಗಳ ನಂತರ, ಹೂಡಿಕೆದಾರರಿಗೆ (Investment) ಬಡ್ಡಿಯೊಂದಿಗೆ ಅವರ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ. ಇನ್ನು ನಿಮಗೆ ಈ ಯೋಜನೆಯ ಅವಧಿಯನ್ನು ಐದು ವರ್ಷಗಳಿಂದ ಹತ್ತು ವರ್ಷಗಳವರೆಗೂ ವಿಸ್ತರಿಸಬಹುದು, ಇದು ನಿಮಗೆ ಹೆಚ್ಚಿನ ಆದಾಯವನ್ನು ನೀಡುತ್ತದೆ. ಪ್ರಸ್ತುತ ದಿನಗಳಲ್ಲಿ, ಯಾರಾದರೂ ಸುರಕ್ಷಿತ ಮತ್ತು ಉತ್ತಮ ಆದಾಯ ಬರುವ ಯೋಜನೆ ಹುಡುಕುತ್ತಿದ್ದರೆ, ಈ ಮಾಹಿತಿ ನಿಮಗಾಗಿ.

ಅಂತಹವರಿಗೆ, ಪೋಸ್ಟ್ ಆಫೀಸ್ RD ಯೋಜನೆಯು ಸುರಕ್ಷಿತ ಮತ್ತು ಸುಲಭ ಆಯ್ಕೆಯಾಗಿದೆ. ಇದು ಸಣ್ಣ ಹೂಡಿಕೆದಾರರಿಗೂ ಸೂಕ್ತವಾಗಿದ್ದು, ದೀರ್ಘಾವಧಿಯವರೆಗೆ ಉಳಿತಾಯ ಮಾಡುವವರಿಗೆ ಇದು ಬೆಸ್ಟ್. ಹಾಗಿದ್ರೆ ಈ ಯೋಜನೆಯ ಪ್ರಯೋಜನಗಳ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪೋಸ್ಟ್ ಆಫೀಸ್ RD ಯೋಜನೆಯ ಪ್ರಮುಖ ಪ್ರಯೋಜನವೆಂದರೆ, ಇದು ಸರ್ಕಾರದಿಂದ ನಡೆಸಲ್ಪಡುವುದರಿಂದ ನಿಮ್ಮ ಹೂಡಿಕೆ ಸಂಪೂರ್ಣವಾಗಿ ಸೇಫ್ ಆಗಿರುತ್ತೆ. ಇದಲ್ಲದೆ, ಇದು ಮಾಸಿಕ ಬಡ್ಡಿಯ ಪ್ರಯೋಜನವನ್ನು ನೀಡುತ್ತದೆ, ಇದು ನಿಮ್ಮ ಉಳಿತಾಯದ ಹಣವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಈ ಯೋಜನೆಯಲ್ಲಿ ಕಡಿಮೆ ಹಣದಿಂದ ಹೂಡಿಕೆಯನ್ನು ಪ್ರಾರಂಭಿಸಿ, ಹೆಚ್ಚು ಲಾಭಗಳಿಸಬಹುದು.
RD ಯೋಜನೆಯ ಪ್ರಯೋಜನಗಳು:
ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡುವುದಾದರೆ, ನೀವು ಪ್ರತಿ ತಿಂಗಳು ₹5,000 ಡೆಪಾಸಿಟ್ ಇಟ್ಟರೆ, ಐದು ವರ್ಷಗಳಲ್ಲಿ (60 ತಿಂಗಳುಗಳು) ಒಟ್ಟು 3 ಲಕ್ಷ ರೂಪಾಯಿ ಹೂಡಿಕೆ ಮಾಡಿದಂತಾಗುತ್ತದೆ. ಐದು ವರ್ಷಗಳ ನಂತರ, ಬಡ್ಡಿಯೊಂದಿಗೆ ಅಂದಾಜು ನೀವು 3,56,830 ಹಣ ಪಡೆಯಬಹುದು. ಈ ಮೂಲಕ 56,830 ರೂವರೆಗೆ ಲಾಭಾಂಶವನ್ನು ತರುತ್ತದೆ.
ಹತ್ತು ವರ್ಷಗಳ ಅವಧಿಗೆ ಹೂಡಿಕೆ ಮಾಡುವುದಾದರೆ, ನೀವು ಪ್ರತಿ ತಿಂಗಳು 5,000 ರೂ. ಠೇವಣಿ ಮಾಡಿದರೆ, ಹತ್ತು ವರ್ಷಗಳಲ್ಲಿ ಒಟ್ಟು 6,00,000 ರೂ. ಹೂಡಿಕೆ ಮಾಡಿದಂತಾಗುತ್ತದೆ. ಹತ್ತು ವರ್ಷಗಳ ನಂತರ, ಬಡ್ಡಿಯೊಂದಿಗೆ ಅಂದಾಜು ₹8,54,272 ಪಡೆಯಬಹುದು. ಇದು 2,54,272 ರೂ. ಬಡ್ಡಿದರವನ್ನು ನೀಡುತ್ತದೆ.
RD ಅಕೌಂಟ್ ಅನ್ನು ಯಾರು ತೆರೆಯಬಹುದು?
ವೈಯಕ್ತಿಕ ಖಾತೆ: ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ ಆರ್‌ಡಿ ಖಾತೆಯನ್ನು ಓಪನ್ ಮಾಡಬಹುದು.
ಜಂಟಿ ಖಾತೆ: ಮೂರು ವ್ಯಕ್ತಿಗಳು ಒಟ್ಟಾಗಿ ಈ ಖಾತೆಯನ್ನು ಓಪನ್ ಮಾಡಬಹುದು. ಮೂರೂ ಸದಸ್ಯರು ಇದನ್ನು ಬಳಕೆ ಮಾಡಬಹುದು.
ಚಿಕ್ಕ ಮಕ್ಕಳಿಗಾಗಿ: ಪೋಷಕರ ಹೆಸರಲ್ಲಿ ಅಥವಾ ಪೋಷಕರು ತಮ್ಮ ಮಕ್ಕಳಿಗಾಗಿ ಈ ಖಾತೆಯನ್ನು ತೆರೆಯಬಹುದು. ಈ ಮೂಲಕ ನಿಮ್ಮ ಹೂಡಿಕೆ ಸ್ಟಾರ್ಟ್ ಮಾಡಬಹುದು.
ಖಾತೆ ತೆರೆಯುವುದು ಹೇಗೆ?
ನಿಮ್ಮ ಹತ್ತಿರದ ಪೋಸ್ಟ್ ಆಫೀಸ್‌ನಲ್ಲಿ ಈ RD ಖಾತೆಯನ್ನು ತೆರೆಯಿರಿ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಭಾವಚಿತ್ರದಂತಹ ಅಗತ್ಯ ದಾಖಲೆಗಳನ್ನು ಅಲ್ಲಿ ನೀಡಿದ್ರೆ ಸಾಕು. ಇನ್ನು ನೀವು ಹೂಡಿಕೆ ಮಾಡಲು ಬಯಸುವ ಹಣದಿಂದ ಈ ಖಾತೆಯನ್ನು ಪ್ರಾರಂಭಿಸಬಹುದು. ಆ ನಂತರ ಪ್ರತೀ ತಿಂಗಳು ಹೂಡಿಕೆ ಮಾಡಿದ್ರೆ ಸಾಕು.
(ಈ ವಿಶ್ಲೇಷಣೆ ಮತ್ತು ಶಿಫಾರಸುಗಳು ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆಗೆ ಖಾತರಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟವನ್ನು ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸ್ವತಂತ್ರವಾಗಿ ಪರಿಶೀಲಿಸಬೇಕು.)


Click it and Unblock the Notifications