ಸರ್ಕಾರಿ ಬೆಂಬಲಿತ ಯೋಜನೆ ಮೂಲಕ ಮಾಸಿಕ 9,000 ರೂ. ಗಳಿಸಿ: ಮತ್ತಷ್ಟು ವಿವರ ಇಲ್ಲಿದೆ!

ಅಂಚೆ ಕಚೇರಿಯು ಬಹಳ ಹಿಂದಿನಿಂದಲೂ ಗ್ರಾಹಕರಲ್ಲಿ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಬೆಳೆಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ವಯಸ್ಸಾದವರು ತಮ್ಮ ಹಣಕಾಸು ನಿರ್ವಹಣೆಗೆ ಸುರಕ್ಷಿತ ಸ್ಥಳವೆಂದು ಅಂಚೆ ಕಚೇರಿಯನ್ನು ಪರಿಗಣಿಸುತ್ತಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಇದು ಹಣವನ್ನು ಠೇವಣಿ ಮಾಡಲು ಮತ್ತು ವಹಿವಾಟು ನಡೆಸಲು ಸುರಕ್ಷಿತ ಮಾರ್ಗವನ್ನು ಒದಗಿಸುತ್ತದೆ.

ದೇಶದಾದ್ಯಂತ, ಪೋಸ್ಟ್ ಆಫೀಸ್ ಶಾಖೆಗಳು ವೈವಿಧ್ಯಮಯ ಆರ್ಥಿಕ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಹಲವಾರು ಉಳಿತಾಯ ಯೋಜನೆಗಳನ್ನು ನೀಡುತ್ತವೆ. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಆರ್ಥಿಕ ಸ್ಥಿರತೆಯನ್ನು ಬಯಸುವ ಯಾರಿಗಾದರೂ ಅತ್ಯುತ್ತಮ ಆಯ್ಕೆಯಾಗಿದೆ. ಎಲ್ಲರಿಗೂ ತಿಳಿದಿರುವಂತೆ ಪೋಸ್ಟ್‌ ಆಫೀಸ್‌ಗಳಲ್ಲಿ ಹಲವು ರೀತಿಯ ಯೋಜನೆಗಳನ್ನು ನೀಡಲಾಗುತ್ತಿದ್ದು, ಇವುಗಳಲ್ಲಿ ಹಣ ತೊಡಗಿಸಿಕೊಂಡರೆ ಉತ್ತಮ ಲಾಭವನ್ನು ಪಡೆಯಬಹುದು.

 ಈ ಸರ್ಕಾರಿ ಯೋಜನೆ ಮೂಲಕ ಮಾಸಿಕ 9,000 ರೂ. ಗಳಿಸಿ.!

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಎಂದರೇನು?

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಖಾತರಿಪಡಿಸಿದ ಮಾಸಿಕ ಪಾವತಿಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇನ್ನು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಪ್ರಮುಖ ಲಕ್ಷಣಗಳ ಬಗ್ಗೆ ಹೇಳುವುದಾದರೆ ಒಂದು ಸಾವಿರ ರೂ. ಕನಿಷ್ಠ ಠೇವಣಿಯ ಮೂಲಕ ಯೋಜನೆ ಆರಂಭಿಸಬಹುದು. ಇನ್ನು ಈ ಯೋಜನೆಯ ಗರಿಷ್ಠ ಠೇವಣಿಯ ವಿಚಾರದಲ್ಲಿ ಒಂದೇ ಖಾತೆಗೆ 9 ಲಕ್ಷ ರೂ. ವರೆಗೆ ಠೇವಣಿ ಮಾಡಬಹುದಾಗಿದ್ದು, ಜಂಟಿ ಖಾತೆಯಲ್ಲಿ 15 ಲಕ್ಷ ರೂ. ವರೆಗೆ ಮಾಡಬಹುದು. ಸುಮಾರು ಐದು ವರ್ಷಗಳ ಕಾಲ ಅವಧಿ ಹೊಂದಿರಲಿದೆ.

ಪೋಸ್ಟ್‌ ಆಫೀಸ್‌ ಮಾಸಿಕ ಆದಾಯ ಯೋಜನೆಯಲ್ಲಿ 2024 ರ ಪ್ರಕಾರ POMIS ಪ್ರಸ್ತುತ 7.4 ಶೇಕಡಾ ಸ್ಪರ್ಧಾತ್ಮಕ ವಾರ್ಷಿಕ ಬಡ್ಡಿ ದರವನ್ನು ಒದಗಿಸುತ್ತದೆ. ಇನ್ನು ಯಾರೆಲ್ಲಾ POMIS ಖಾತೆಯನ್ನು ತೆರೆಯಬಹುದು ಎಂಬ ಪ್ರಶ್ನೆಗೆ ಒಂದು ಖಾತೆ ಹೊಂದಿರುವ ಒಬ್ಬ ವಯಸ್ಕ ವ್ಯಕ್ತಿ ಖಾತೆ ತೆರೆಯಬಹುದು. ಜಂಟಿ ಖಾತೆಗಳನ್ನು ಮೂವರು ವಯಸ್ಕ ವ್ಯಕ್ತಿಗಳು ಹೊಂದಬಹುದು. ಅಪ್ರಾಪ್ತರು ಹಾಗೂ ಮಾನಸಿಕ ಅಸ್ವಸ್ಥ ಮನಸ್ಸಿನ ವ್ಯಕ್ತಿಗಳ ಪರವಾಗಿ ರಕ್ಷಕರು ಖಾತೆ ತೆರೆಯಬಹುದು. ಇನ್ನು 10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ತಮ್ಮ ಹೆಸರಿನಲ್ಲಿ ಖಾತೆಗಳನ್ನು ತೆರೆಯಬಹುದು.

ಇನ್ನು POMIS ನಿಂದ ನಿಮ್ಮ ಮಾಸಿಕ ಆದಾಯವು ಠೇವಣಿ ಮಾಡಿದ ಮೊತ್ತವನ್ನು ಅವಲಂಬಿಸಿರುತ್ತದೆ. ಅದನ್ನು ಲೆಕ್ಕಾಚಾರ ಮಾಡುವುದು ಹೇಗೆ ಎಂಬುದು ಇಲ್ಲಿದೆ. ಇಲ್ಲಿ ನಾವೊಂದು ಫಾರ್ಮುಲಾವನ್ನು ಬಳಸಬೇಕಿದೆ. ಅಂದರೆ ಮಾಸಿಕ ಆದಾಯ = ಠೇವಣಿ ಮೊತ್ತ × ಬಡ್ಡಿ ದರ ÷ 12 (ತಿಂಗಳು). ಉದಾಹರಣೆಗೆ ಹೇಳುವುದಾದರೆ ರೂ 5 ಲಕ್ಷ ರೂ. ಮೊತ್ತವನ್ನು ಠೇವಣಿ ಮಾಡಿದ್ದರೆ ತಿಂಗಳಿಗೆ ರೂ 3,083 ರೂ. ಬಡ್ಡಿ ಲಭಿಸಿದರೆ 9 ಲಕ್ಷ ರೂ.ಗೆ ಮಾಸಿಕ 5,550 ರೂ. ಬಡ್ಡಿ ಸಿಗುತ್ತದೆ. ಅದೇ ರೀತಿ 15 ಲಕ್ಷ ರೂ.ಗೆ 9,250 ರೂ. ಬಡ್ಡಿ ಸಿಗಲಿದೆ.

POMIS ನ ಪ್ರಮುಖ ಗುಣಲಕ್ಷಣಗಳು

ಒಬ್ಬ ವ್ಯಕ್ತಿಯು ಕನಿಷ್ಠ 1,000 ರೂ. ಮೂಲಕ ಖಾತೆ ತೆರೆಯಬಹುದು. ಆದರೆ ಒಬ್ಬ ವ್ಯಕ್ತಿಯ ಎಲ್ಲಾ ಖಾತೆಗಳ ಒಟ್ಟು ಠೇವಣಿಗಳು ರೂ 9 ಲಕ್ಷಗಳನ್ನು ಮೀರುವಂತಿಲ್ಲ. ಜಂಟಿ ಖಾತೆಗಳು ರೂ 15 ಲಕ್ಷದವರೆಗೆ ಹೂಡಿಕೆಗೆ ಅವಕಾಶ ನೀಡಲಾಗಿದೆ. ಹಾಗಾಗಿ ಖಾತೆದಾರರ ನಡುವೆ ಸಮಾನವಾಗಿ ಹಂಚಲಾಗುತ್ತದೆ. ಇನ್ನು ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕವಾಗಿ ಜಮಾ ಮಾಡಲಾಗುತ್ತದೆ. ಇನ್ನು ಪಾವತಿಗಳನ್ನು ECS ಮೂಲಕ ಸ್ವೀಕರಿಸಬಹುದು ಅಥವಾ ಲಿಂಕ್ ಮಾಡಲಾದ ಉಳಿತಾಯ ಖಾತೆಗೆ ಸ್ವಯಂ ಕ್ರೆಡಿಟ್ ಮಾಡಬಹುದು. ಬಡ್ಡಿ ಆದಾಯ ತೆರಿಗೆಗೆ ಒಳಪಡಲಿದೆ.

ಅಕಾಲಿಕ ಹಿಂತೆಗೆದುಕೊಂಡರೆ?

ಇನ್ನು ಯೋಜನೆಯಲ್ಲಿ ಒಂದು ವೇಳೆ ಒಬ್ಬ ಖಾತೆದಾರನು ಸಮಯಕ್ಕೆ ಮುಂಚಿತವಾಗಿ ಹಿಂಪಡೆದುಕೊಳ್ಳಲು ಒಂದು ವರ್ಷದ ಬಳಿಕ ಅವಕಾಶ ನೀಡಲಾಗುತ್ತದೆ. ಆದರೆ ಈ ವೇಳೆ ಎಲ್ಲಾ ಕಡಿತಗಳನ್ನು ಮಾಡಿದ ಬಳಿಕ ಮೊತ್ತವನ್ನು ನೀಡಲಾಗುತ್ತದೆ. ಇನ್ನು ಕಡಿತವು ಒಂದರಿಂದ ಮೂರು ವರ್ಷಗಳ ಅವಧಿಯಲ್ಲಿ ಎರಡರಷ್ಟು ಕಡಿತಗೊಳಿಸಲಾಗುತ್ತದೆ. ಅದೇ ರೀತಿ 3-5 ವರ್ಷಗಳಲ್ಲಿ ಠೇವಣಿಯ ಶೇಕಡಾ 1 ರಷ್ಟು ಕಡಿತಗೊಳಿಸಲಾಗುತ್ತದೆ.

ಮೆಚ್ಯುರಿಟಿಯ ಪ್ರಯೋಜನಗಳೇನು?

ಆದರೆ ಒಬ್ಬ ಖಾತೆದಾರನು ಯೋಜನೆಯ ಸಂಪೂರ್ಣ ಅವಧಿ ಅಂದರೆ ಐದು ವರ್ಷವನ್ನು ಬಳಸಿಕೊಂಡರೆ ಉತ್ತಮ ಲಾಭ ನೀಡಲಾಗುತ್ತದೆ. ಒಂದು ವೇಳೆ ಖಾತೆದಾರರ ಮರಣದ ಸಂದರ್ಭದಲ್ಲಿ, ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿ ಖಾತೆಯನ್ನು ಮುಚ್ಚಬಹುದು ಮತ್ತು ಮುಚ್ಚುವ ಹಿಂದಿನ ತಿಂಗಳವರೆಗೆ ಬಡ್ಡಿಯನ್ನು ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+