ಉದ್ಯೋಗವಿಲ್ಲದೇ ಅದೆಷ್ಟೋ ಯುವಕರು ಕೃಷಿಯನ್ನ (Farming) ಅವಲಂಬಿಸಿದ್ದಾರೆ. ನಿರುದ್ಯೋಗ ಸಮಸ್ಯೆಯಿಂದ ಎಷ್ಟೋ ಮಂದಿ ಇಂದು ಕೃಷಿ ಮಾಡಿ, ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಅದರಲ್ಲೇ ಹೆಚ್ಚಿನವರು ತನ್ನ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಗೆಣಸು ಕೃಷಿ (Sweet Potato Farming) ಮೂಲಕವೇ ಹೆಚ್ಚಿನವರು ಲಾಭ ಗಳಿಸುತ್ತಿದ್ದಾರೆ. ಸದ್ಯ ಗೆಣಸು ಬಿತ್ತನೆಗೆ ಸೂಕ್ತ ಸಮಯ. ರೈತರು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ಗೆಣಸನ್ನು ಬಿತ್ತನೆ ಮಾಡುತ್ತಾರೆ, ಏಕೆಂದರೆ ಈ ಬೆಳೆ ಕೇವಲ 90 ದಿನಗಳಲ್ಲಿ ನಂತರ ಕಟಾವಿಗೆ ಸಿದ್ಧವಾಗುತ್ತದೆ. ಬಿತ್ತನೆಯಾದ 90 ದಿನಗಳ ನಂತರ, ಇದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಬಹುದು.

ಮುಂಗಾರು ಮಳೆ ಸಂದರ್ಭದಲ್ಲಿ ಗೆಣಸು, ಮಾರುಕಟ್ಟೆಗೆ ಬಂದ ತಕ್ಷಣ ಉತ್ತಮ ಬೇಡಿಕೆ ಪಡೆಯುತ್ತದೆ. ಈ ಬೆಳೆ ಪ್ರತಿ ಕೆ.ಜಿ.ಗೆ ₹50 ರಿಂದ ₹60 ರೂಪಾಯಿವರೆಗೆ ಮಾರಾಟವಾಗುತ್ತದೆ. ಇನ್ನು ಗೆಣಸು ಕೃಷಿ ಪ್ರಾರಂಭಿಸಲು ಮರಳು ಮಿಶ್ರಿತ ಕಣಿವೆ ಮಣ್ಣಿನ ಅಗತ್ಯವಿದೆ, ಏಕೆಂದರೆ ಈ ಬೆಳೆಯನ್ನು ಹೆಚ್ಚಾಗಿ ಚಳಿಗಾಲದಲ್ಲೇ ಬೆಳೆಯಲಾಗುತ್ತದೆ. ಇದಕ್ಕೆ ಕನಿಷ್ಠ 20-21 ಡಿಗ್ರಿ ಸೆಲ್ಸಿಯಸ್ ತಾಪಮಾನ ಬೇಕಾಗುತ್ತದೆ. ಗಂಗಾ ನದಿಯ ಕಣಿವೆ ಪ್ರದೇಶದಲ್ಲಿ ಹೆಚ್ಚಿನ ರೈತರು ಗೆಣಸು ಬೆಳೆಯಲು ಇಷ್ಟಪಡುತ್ತಾರೆ, ಏಕೆಂದರೆ ಮರಳು ಮಣ್ಣಿನಲ್ಲಿ ಬೆಳೆ ಬೆಳೆಯಲು ಕಡಿಮೆ ನೀರು ಬೇಕಾಗುತ್ತದೆ ಮತ್ತು ಹೆಚ್ಚು ಶ್ರಮವಿಲ್ಲದೆ ಆರಾಮವಾಗಿ ಗೆಣಸು ಬೆಳೆಯಬಹುದು.
ಗೆಣಸು ಬಿತ್ತನೆ ಮಾಡುವ ಮೊದಲು, ಹೊಲವನ್ನು ಚೆನ್ನಾಗಿ ಉಳುಮೆ ಮಾಡಬೇಕು. ಈ ಮೂಲಕ ಮಣ್ಣನ್ನು ಸಡಿಲಗೊಳಿಸಲಾಗುತ್ತದೆ. ನಂತರ ಹೊಲಕ್ಕೆ ಕೊಟ್ಟಿಗೆ ಗೊಬ್ಬರವನ್ನು ಹಾಕಲಾಗುತ್ತದೆ, ಏಕೆಂದರೆ ಇದು ಬೆಳೆಯ ಇಳುವರಿಯನ್ನು ಮತ್ತಷ್ಟು ಸುಧಾರಿಸುತ್ತದೆ. ಗೆಣಸು ಕೃಷಿಗೆ ಮೊದಲು ನರ್ಸರಿಯನ್ನು ರೆಡಿ ಮಾಡಬೇಕು. ಇನ್ನು ನರ್ಸರಿ ತಯಾರಿಸಲು ಸುಮಾರು 45 ರಿಂದ 60 ದಿನಗಳು ಬೇಕಾಗುತ್ತದೆ.
ಆ ಬಳಿಕ ಸಸಿಗಳನ್ನು ನೆಡಲು ಸಾಲುಗಳನ್ನು ತಯಾರಿಸಬೇಕು. ಈ ಸಸಿಗಳನ್ನು ನೆಟ್ಟ 90 ರಿಂದ 100 ದಿನಗಳ ನಂತರ ರೈತರು ಬೆಳೆ ಕಟಾವು ಮಾಡಬಹುದು. ಒಂದು ಎಕರೆ ಭೂಮಿಯಲ್ಲಿ ಗೆಣಸು ಕೃಷಿ ಮಾಡಲು ಸುಮಾರು ₹17,000-₹18,000 ಖರ್ಚು ಮಾಡಬೇಕಾಗುತ್ತದೆ. ಈ ಮೂಲಕ ಒಂದು ಎಕರೆಯಲ್ಲಿ ಗೆಣಸು ಬೆಳೆಯುವ ಮೂಲಕ ರೈತರು ಲಕ್ಷಗಟ್ಟಲೆ ಆದಾಯ ಸಂಪಾದಿಸಬಹುದು.
ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, "ಈ ಸಮಯ ಗೆಣಸು ಕೃಷಿಗೆ ತುಂಬಾ ಒಳ್ಳೆಯದಾಗಿದೆ. ಗೆಣಸು ನರ್ಸರಿ ತಯಾರಿಸಬೇಕೆಂದರೆ ಸುಮಾರು 45 ರಿಂದ 60 ದಿನಗಳು ಬೇಕಾಗುತ್ತದೆ. ಆ ಬಳಿಕ ಸಸಿಗಳನ್ನು ನೆಟ್ಟ 90 ರಿಂದ 100 ದಿನಗಳ ನಂತರ ರೈತರನ್ನು ಕಟಾವು ಮಾಡಬಹುದು. ಆದರೆ ಗೆಣಸು ಕೃಷಿ ಮಾಡಿದ ನಂತರ, ರೈತರು ಬೆಳೆಗಳಿಗೆ ರೋಗ ಬರದಂತೆ ಎಚ್ಚರವಹಿಸುವುದು ಬಹಳ ಮುಖ್ಯ. ಏಕೆಂದರೆ ಗೆಣಸು ಬೆಳೆಗಳಲ್ಲಿ ಕೀಟಗಳ ಸಮಸ್ಯೆಯೇ ಹೆಚ್ಚಾಗಿ ಬರುವುದು. ಆದ್ದರಿಂದ ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ಬಳಸಬೇಕು ಎಂದು ಹೇಳಿದ್ದಾರೆ.


Click it and Unblock the Notifications