ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ನವೆಂಬರ್ 2024ರ ತಾತ್ಕಾಲಿಕ ಡೇಟಾವನ್ನು ಬಿಡುಗಡೆ ಮಾಡಿದ್ದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ 14.63 ಲಕ್ಷ ಜನರು ಸೇರ್ಪಡೆಯಾಗಿದ್ದಾರೆ ಎಂದು ಉದ್ಯೋಗ ಸಚಿವಾಲಯ ತಿಳಿಸಿದೆ. ಈಗಾಗಳೇ ಸಾಕಷ್ಟು ಜನರು ಇಪಿಎಫ್‌ಒ ಸೇವೆಯನ್ನ ಪಡೆದುಕೊಳ್ಳುತ್ತಿದ್ದು, ಇದರ ನಡುವೆ ಮತ್ತಷ್ಟು ಜನರು ಇಪಿಎಫ್‌ಒಗೆ ಸೆರ್ಪಡೆಯಾಗ್ತಿದ್ದಾರೆ. ಅಲ್ಲದೆ ಅಕ್ಟೋಬರ್ 2024ಕ್ಕೆ ಹೋಲಿಕೆ ಮಾಡಿದ್ರೆ, ನವೆಂಬರ್‌ನಲ್ಲಿ ಸದಸ್ಯರ ಸಂಖ್ಯೆ ಹೆಚ್ಚಳವಾಗಿದೆ.
ಅಕ್ಟೋಬರ್‌ಗೆ ಹೋಲಿಕೆ ಮಾಡಿದ್ರೆ ನವೆಂಬರ್‌ನಲ್ಲಿ ಇಪಿಎಫ್‌ಒಗೆ ಶೇಕಡಾ 9.07 ರಷ್ಟು ಜನರು ಹೆಚ್ಚಳವಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಸದಸ್ಯರ ಸಂಖ್ಯೆ 4.88 ರಷ್ಟು ಏರಿಕೆಯಾಗಿದೆ ಎಂದು ಉದ್ಯೋಗ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಉದ್ಯೋಗವಕಾಶಗಳು ಹೆಚ್ಚುತ್ತಿದ್ದಂತೆ ಇಪಿಎಫ್‌ಒ ಸಧಸ್ಯರ ಸಂಖ್ಯೆ ಕೂಡ ಹೆಚ್ಚಳವಾಗ್ತಿದೆ. ಇಪಿಎಫ್‌ಒ ಮೂಲಕ ಉದ್ಯೋಗಿಗಳು ಪ್ರಯೋಜನಗಳನ್ನ ಪಡೆಯುತ್ತಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ.

EPFO ಹೊಸ ಸದಸ್ಯರ ಸಂಖ್ಯೆ ಹೆಚ್ಚಳ
ಇಪಿಎಫ್‌ಒಗೆ ಸೇರ್ಪಡೆಯಾಗಿರುವ ಹೊಸ ಸದಸ್ಯರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ನವೆಂಬರ್ 2024ರಲ್ಲಿ 8.74 ಲಕ್ಷ ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ. ಅಕ್ಟೋಬರ್ 2024ಕ್ಕೆ ಹೋಳಿಕೆ ಮಾಡಿದ್ರೆ ನವೆಂಬರ್‌ನಲ್ಲಿ ಹೊಸ ಸದಸ್ಯರ ಸಂಖ್ಯೆ 16.58 ರಷ್ಟು ಏರಿಕೆಯಾಗಿದೆ. ಇದರ ಜೊತೆಗೆ 2023ಕ್ಕೆ ಹೋಲಿಸಿದರೆ 2024ರಲ್ಲಿ ಅತೀ ಹೆಚ್ಚು ಸದಸ್ಯರು ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ. ಅಂದರೆ ವರ್ಷದಿಂದ ವರ್ಷಕ್ಕೆ ಶೇಕಡಾ 18.80 ರಷ್ಟು ಸದಸ್ಯರು ಸೇರ್ಪಡೆಯಾಗಿರುವುದನ್ನು ಸೂಚಿಸುತ್ತದೆ.
18 ರಿಂದ 25 ವಯಸ್ಸಿನ ಇಪಿಎಫ್‌ಒ ಸದಸ್ಯರ ಸಂಖ್ಯೆ ಹೆಚ್ಚಳ
ಇಪಿಎಫ್‌ಒನಲ್ಲಿ ಸೆರ್ಪಡೆಯಾಗುವವರಲ್ಲಿ ಹೆಚ್ಚಿನವರು 18 ರಿಂದ 25 ವಯಸ್ಸಿನವರಾಗಿದ್ದಾರೆ ಎಂದು ವರದಿ ಹೇಳಿದೆ. 2024ರಲ್ಲಿ ಇಪಿಎಪ್‌ಒಗೆ ಸೇರಿರುವ ಸದಸ್ಯರಲ್ಲಿ, 54.97% ಜನರು 18 ರಿಂದ 25 ವಯಸ್ಸಿನವರಾಗಿದ್ದಾರೆ. ಅಲ್ಲದೆ 2024ರಲ್ಲಿ 18 ರಿಂದ 25 ವಯಸ್ಸಿನವರ ಸಂಖ್ಯೆ ಶೇಕಡಾ 9.56 ರಷ್ಟು ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಸೇರ್ಪಡೆಗೊಂಡ ಸದಸ್ಯರಿಗೆ ಹೋಲಿಕೆ ಮಾಡಿದ್ರೆ, ಅಂಕಿ ಅಂಶಗಳ ಪ್ರಕಾರ ನವೆಂಬರ್ 2024ರಲ್ಲಿ ಶೇಕಡಾ 13.99 ರಷ್ಟು ಸದಸ್ಯರು ಹೆಚ್ಚಳವಾಗಿದ್ದಾರೆ.
ಈಗಾಗಲೇ ಸುಮಾರು 14.39 ಲಕ್ಷ ಸದಸ್ಯರು ತೊರೆದಿದ್ದರೂ ಕೂಡ ನಂತರ ಇಪಿಎಫ್‌ಒಗೆ ಅಷ್ಟೇ ಜನರು ಸೇರ್ಪಡೆಯಾಗಿದ್ದಾರೆ. ಅಲ್ಲದೆ ಅಕ್ಟೋಬರ್ 2024ಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಶೇಕಡಾ 11.47 ರಷ್ಟು ಜನರು ಏರಿಕೆಯಾಗಿದ್ದಾರೆ. ವಾರ್ಷಿಕವಾಗಿ ಶೇಕಡಾ 34.75 ರಷ್ಟು ಜನರು ಹೆಚ್ಚಳವಾಗಿದ್ದಾರೆ.
ಇಪಿಎಫ್‌ಒ ಸದಸ್ಯರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳ
2024ರಲ್ಲಿ ಇಪಿಎಫ್‌ಒಗೆ ಸೇರ್ಪಡೆಯಾಗಿರುವ ಮಹಿಳೆಯರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಅದರಲ್ಲೂ 2024ರಲ್ಲಿ ಸೇರ್ಪಡೆಯಾಗಿರುವ ಸದಸ್ಯರಲ್ಲಿ 2.40 ಲಕ್ಷ ಮಹಿಳಾ ಸದಸ್ಯರು ಸೇರ್ಪಡೆಯಾಗಿದ್ದಾರೆ. 2024ರ ಅಕ್ಟೋಬರ್‌ಗೆ ಹೋಲಿಕೆ ಮಾಡಿದ್ರೆ 14.94%ನಷ್ಟು ಜನರು ಹೆಚ್ಚಳವಾಗಿರುವುದು ತಿಳಿದುಬಂದಿದೆ.
ಇಪಿಎಫ್‌ಒ ಖಾತೆ ಹೊಂದಲು ಮುಖ್ಯ ಕಾರಣವೇನು?
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭಾರತದಲ್ಲಿನ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ನಿವೃತ್ತಿಯ ನಂತರ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ, ಅವರ ನಿವೃತ್ತಿಯ ನಂತರದ ವರ್ಷಗಳಲ್ಲಿ ಅವರು ಸ್ಥಿರವಾದ ಆದಾಯವನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. EPFO ಭಾರತದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಕಡ್ಡಾಯ ಉಳಿತಾಯ ಕಾರ್ಯವಿಧಾನವಾಗಿದೆ, ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಉದ್ಯೋಗಿಯ ಸಂಬಳದ ನಿರ್ದಿಷ್ಟ ಶೇಕಡಾವಾರು ನಿಧಿಗೆ ಕೊಡುಗೆ ನೀಡುತ್ತಾರೆ.
EPFO ಖಾತೆಯನ್ನು ಹೊಂದಲು ಪ್ರಾಥಮಿಕ ಕಾರಣವೆಂದರೆ ನಿವೃತ್ತಿಗಾಗಿ ಉಳಿಸುವುದು. ಇಪಿಎಫ್‌ಒ ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದ್ದು, ಉದ್ಯೋಗಿಯ ವೇತನದ ಒಂದು ಭಾಗವನ್ನು ಕಡಿತಗೊಳಿಸಿ ಭವಿಷ್ಯ ನಿಧಿ (ಪಿಎಫ್) ಖಾತೆಗೆ ಜಮಾ ಮಾಡಲಾಗುತ್ತದೆ. ಈ ಖಾತೆಯಲ್ಲಿನ ಹಣವು ಬಡ್ಡಿಯೊಂದಿಗೆ ಕಾಲಾನಂತರದಲ್ಲಿ ಬೆಳೆಯುತ್ತದೆ, ಮತ್ತು ನಿವೃತ್ತಿಯ ನಂತರ, ಇದು ಉದ್ಯೋಗಿಗೆ ಒಂದು ದೊಡ್ಡ ಮೊತ್ತ ಅಥವಾ ಮಾಸಿಕ ಪಿಂಚಣಿಯನ್ನು ಒದಗಿಸುತ್ತದೆ, ಅವರ ವೃದ್ಧಾಪ್ಯದಲ್ಲಿ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ.
EPFO ಖಾತೆಯನ್ನು ಹೊಂದಿರುವ ಪ್ರಮುಖ ಪ್ರಯೋಜನವೆಂದರೆ ಅದು ಉದ್ಯೋಗದಾತ ಮತ್ತು ಉದ್ಯೋಗಿಯ ನಡುವಿನ ಜಂಟಿ ಕೊಡುಗೆಯಾಗಿದೆ. ಎರಡೂ ಪಕ್ಷಗಳು ಉದ್ಯೋಗಿಯ ಮೂಲ ವೇತನದ ನಿಗದಿತ ಶೇಕಡಾವಾರು ಮೊತ್ತವನ್ನು EPF ಖಾತೆಗೆ ಕೊಡುಗೆಯಾಗಿ ನೀಡುತ್ತವೆ. ಇದು ಒಟ್ಟಾರೆ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, EPF ಕೊಡುಗೆಗಳ ಮೇಲೆ ಗಳಿಸಿದ ಬಡ್ಡಿಯು ಸಹ ತೆರಿಗೆ-ಮುಕ್ತವಾಗಿರುತ್ತದೆ ಮತ್ತು ನಿವೃತ್ತಿಯ ನಂತರ ಹಿಂತೆಗೆದುಕೊಳ್ಳುವ ಮೊತ್ತವು ಸಾಮಾನ್ಯವಾಗಿ ತೆರಿಗೆಯಿಂದ ವಿನಾಯಿತಿಯನ್ನು ಹೊಂದಿರುತ್ತದೆ, ಇದು ಗಮನಾರ್ಹವಾದ ದೀರ್ಘಕಾಲೀನ ತೆರಿಗೆ ಉಳಿತಾಯವನ್ನು ಒದಗಿಸುತ್ತದೆ.


Click it and Unblock the Notifications