EPFO 2025: ತಲೆನೋವು ಮಾಯ..ಇನ್ನು ಸುಲಭವಾಗಿ PF ಹಣ ಪಡೆಯಬಹುದು..ಚೆಕ್‌ ಅವಶ್ಯಕತೆ ಇಲ್ಲವೇ ಇಲ್ಲ!

EPFO ಕ್ಲೈಮ್‌ನಲ್ಲಿ ಬದಲಾವಣೆ: ಎಷ್ಟೇ ದುಡಿದರೂ ತಿಂಗಳಾಂತ್ಯದಲ್ಲಿ ಸ್ವಲ್ಪವೂ ಉಳಿಸಲಾಗುವುದಿಲ್ಲ. ಖರ್ಚು-ವೆಚ್ಚಗಳ ನಡುವೆ ಜೀವನ ನಡೆಸುವುದು ಒಂದು ಸಾಹಸ. ಹೀಗಾಗಿಯೇ ಉದ್ಯೋಗಿ ಕಲ್ಯಾಣ ಸಂಬಂಧಿತ ಬೆಳವಣಿಗೆಯಲ್ಲಿ, EPFO ಇರುತ್ತದೆ. ಇದು ಉದ್ಯೋಗಿಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ, ಸಾಕಷ್ಟು ರೀತಿಯಲ್ಲಿ ಸಹಾಯ ಮಾಡುತ್ತದೆ. ಆದರೆ ಈ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹಿಂಪಡೆಯಲು ಜನರಿಗೆ ಮೊದಲೆಲ್ಲ ತಲೆನೋವೇ ಎದುರಾಗುತ್ತಿತ್ತು. ಆದರೆ ಇನ್ನುಮುಂದೆ ಅಂತಹ ತಲೆನೋವಿಲ್ಲ. ಏಕೆಂದರೆ ಪಿಎಫ್ ಹಣ ಬೇಕಾದರೆ ಸುಲಭವಾಗಿ ಪಡೆಯಬಹುದು. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹಿಂಪಡೆಯುವಿಕೆ ಪ್ರಕ್ರಿಯೆಯೊಂದರಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ.

EPFO 2025: ಇನ್ನು ಸುಲಭವಾಗಿ PF ಹಣ ಪಡೆಯಬಹುದು!

ಹೌದು, ಏನಂಥಾ ಬದಲಾವಣೆ ಅಂತೀರಾ..ಇನ್ಮುಂದೆ EPFO ಸದಸ್ಯರು ತಮ್ಮ ಹಿಂಪಡೆಯುವಿಕೆ ಅರ್ಜಿಗಳನ್ನು ಸಲ್ಲಿಸುವಾಗ, ಕೆಲವು ಅವಶ್ಯಕ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಅಗತ್ಯವೇ ಇರುವುದಿಲ್ಲ. ಇದರಿಂದ ಹಿಂಪಡೆಯುವಿಕೆ ಪ್ರಕ್ರಿಯೆ ಹೆಚ್ಚು ಸುಗಮವಾಗಿದೆ. ಅಷ್ಟೇ ಅಲ್ಲ ಹಣ ಹಿಂಪಡೆಯುವಿಕೆಯೂ ಕೂಡ ಅಷ್ಟೇ ವೇಗವಾಗಿ ನಡೆಯುವಂತದ್ದಾಗಿದೆ. ಕಾರ್ಮಿಕ ಸಚಿವಾಲಯದಿಂದ ಈ ಬದಲಾವಣೆಗಳನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಇದು ಸುಮಾರು 8 ಕೋಟಿ ಸದಸ್ಯರಿಗೆ ಲಾಭವಾಗಲಿದೆ. ಹಾಗಾದರೆ ಏನೆಲ್ಲಾ ಬದಲಾವಣೆಯಾಗಿದೆ ಎಂದು ಇಲ್ಲಿ ತಿಳಿಯಿರಿ.

1. ರದ್ದಾದ ಚೆಕ್ ಅಥವಾ ಪಾಸ್‌ಬುಕ್ ಅಗತ್ಯವಿಲ್ಲ:

PF ಹಿಂಪಡೆಯುವಿಕೆಯು ಈಗ ರದ್ದಾದ ಚೆಕ್ ಅಥವಾ ಪಾಸ್‌ಬುಕ್‌ ಅಗತ್ಯವಿಲ್ಲದೇ ಸುಲಭವಾಗಿದೆ. ಯಾವುದೇ ಕ್ಲೈಮ್ ಸಲ್ಲಿಸುವಾಗ ಸದಸ್ಯರು ಈಗಾಗಲೇ ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಯುಎಎನ್ ಖಾತೆಗೆ ಲಿಂಕ್ ಮಾಡಿರುತ್ತಾರೆ. ಹೀಗೆ ಲಿಂಕ್ ಮಾಡಿರುವ ಖಾತೆಗೆ ಸದಸ್ಯರು ಇನ್ಮುಂದೆ ಮುಂದೆ ತಮ್ಮ ಚೆಕ್ ಲೀಫ್‌ನ ಚಿತ್ರ ಅಥವಾ ಪಾಸ್‌ಬುಕ್‌ನ ದೃಢೀಕೃತ ಪ್ರತಿಯನ್ನು ಅಪ್‌ಲೋಡ್ ಮಾಡುವ ಅಗತ್ಯವಿಲ್ಲ. ಈ ಬದಲಾವಣೆಯಿಂದ ಹಿಂಪಡೆಯುವಿಕೆ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಬಹಳ ಸುಲಭವಾಗಲಿದೆ. ಪಾಸ್‌ಬುಕ್ ಅಥವಾ ರದ್ದಾದ ಚೆಕ್‌ನ ಪ್ರತಿಯೊಂದು ಛಾಯಾಪ್ರತಿ ಅಪ್‌ಲೋಡ್ ಮಾಡುವುದು ಒಂದು ಕಠಿಣ ಹಂತವಾಗಿತ್ತು. ಕೆಲವೊಮ್ಮೆ ಕಡಿಮೆ ಗುಣಮಟ್ಟದ ಛಾಯಾಪ್ರತಿ ಅಥವಾ ಸ್ಪಷ್ಟವಿಲ್ಲದ ಚಿತ್ರದಿಂದ ಅರ್ಜಿ ನಿರಾಕರಣೆಗೆ ಕಾರಣವಾಗುತ್ತಿದ್ದವು.

2. ಉದ್ಯೋಗದಾತರ ಅನುಮೋದನೆ ಅಗತ್ಯವಿಲ್ಲ:

ಮೊದಲೆಲ್ಲ EPFO ಸದಸ್ಯರು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಸೇರಿಸಬೇಕಿತ್ತು. ಅದಕ್ಕೆ ತಾವು ಕೆಲಸ ಮಾಡುತ್ತಿರದ್ದ ಸಂಸ್ಥೆಯಲ್ಲಿರುವ ಉದ್ಯೋಗದಾತರು ಪರಿಶೀಲಿಸಿ ಅನುಮೋದನೆ ನೀಡಬೇಕಾಗುತ್ತಿತ್ತು. ಆದರೆ ಈ ಹೊಸ ನಿಯಮದಲ್ಲಿ ಈ ಅನುಮೋದನೆ ಹಂತವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಬ್ಯಾಂಕ್ ಖಾತೆಯ ಪ್ರಾಮಾಣಿಕತೆಯನ್ನು ಇಪಿಎಫ್‌ಓ ಸ್ವತಃ ತಾಂತ್ರಿಕವಾಗಿ ಪರಿಶೀಲಿಸುತ್ತದೆ. ಇದರ ಪರಿಣಾಮವಾಗಿ, ಹಲವು ದಿನಗಳು ಕಳೆಯುತ್ತಿದ್ದ ಸಮಯ ಈಗ ಕೆಲವೇ ಗಂಟೆಗಳಲ್ಲಿ ಅಥವಾ 1-2 ದಿನಗಳಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಈ ಪ್ರಕ್ರಿಯೆ ಸಾಕಷ್ಟು ವಿಳಂಬವಾಗುತ್ತಿದ್ದ ಕಾರಣದಿಂದಾಗಿ ಹಲವಾರು ಸದಸ್ಯರಿಗೆ ತಕ್ಷಣ ಹಿಂಪಡೆಯುವಿಕೆಯಲ್ಲಿ ತೊಂದರೆ ಆಗುತ್ತಿತ್ತು.

3. ಸರಳೀಕೃತ ಖಾತೆ ಬದಲಾವಣೆ ಪ್ರಕ್ರಿಯೆ:

ಇನ್ನು EPFO ಸದಸ್ಯರು ತಮ್ಮ ಖಾತೆಯನ್ನು ಸರಳವಾಗಿ ಬದಲಾಯಿಸಬಹುದು. ಅಂದರೆ ಈಗ ತಮ್ಮ ಲಿಂಕ್ ಮಾಡಲಾದ ಬ್ಯಾಂಕ್ ಖಾತೆನ್ನು ಬದಲಾಯಿಸಬೇಕಾದರೆ, ಹೊಸ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಅನ್ನು ನೇರವಾಗಿ ನಮೂದಿಸಬಹುದು. ಈ ಪ್ರಕ್ರಿಯೆಯನ್ನು ಆಧಾರ್ ಒಟಿಪಿ ಮೂಲಕ ದೃಢೀಕರಿಸಬೇಕಾಗುತ್ತದೆ ಅಷ್ಟೇ. ಈ ಹಂತದಿಂದ ಬ್ಯಾಂಕ್ ಬದಲಾವಣೆ ಪ್ರಕ್ರಿಯೆಯು ಹೆಚ್ಚು ಸುರಕ್ಷಿತ ಮತ್ತು ವೇಗವಾಗಿ ನಡೆಯುವಂತಾಗುತ್ತದೆ. ಆದರೆ ಮೊದಲು ಖಾತೆ ಬದಲಾವಣೆಗೂ ಉದ್ಯೋಗದಾತರ ಸಹಿ ಅಥವಾ ಅನುಮೋದನೆ ಬೇಕಾಗುತ್ತಿತ್ತು. ಆದರೆ, ಈಗ ಈ ನಿಯಮದಿಂದ ಸದಸ್ಯರು ಸ್ವತಃ ತಮ್ಮ ಖಾತೆ ವಿವರ ಬದಲಿಸಬಹುದಾದ ವ್ಯವಸ್ಥೆ ರೂಪಗೊಂಡಿದೆ.

4. ವೇಗವಾದ ಕ್ಲೈಮ್ ಪ್ರಕ್ರಿಯೆ:

EPFO ವ್ಯವಸ್ಥೆಯ ಹೊಸ ಬದಲಾವಣೆಯಿಂದ, EPFO ಕ್ಲೈಮ್ ಪ್ರಕ್ರಿಯೆ ಬಹುಮಟ್ಟಿಗೆ ಸರಳಗೊಂಡಿದೆ. ಅಂದರೆ ಅರ್ಜಿದಾರರು ಸಹಜವಾಗಿ ಹಣ ಪಡೆಯಲು ಈ ಹೊಸ ಬದಲಾವಣೆ ಸಹಾಯ ಮಾಡುತ್ತದೆ. ಹಾಗೂ ವೇಗವಾಗಿ ತಮ್ಮ ಪಿಎಫ್ ಹಣವನ್ನು ಕ್ಲೈಮ್ ಮಾಡುತ್ತದೆ. ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಉದ್ಯೋಗದಾತರು ನೀಡುತ್ತಿದ್ದ ವಿಳಂಬದಿಂದಾಗಿ ಶ್ರಮಿಕರಿಗೆ ತೊಂದರೆಯಾಗುತ್ತಿತ್ತು. ಉದ್ಯೋಗದಾತರ ಅನುಮೋದನೆಗೆ 13 ದಿನಗಳವರೆಗೂ ಇಡೀ ಪ್ರಕ್ರಿಯೆ ತಡವಾಗುತ್ತಿತ್ತು. ಈಗ ಈ ಹಂತಗಳು ತೆಗೆದುಹಾಕಲ್ಪಟ್ಟಿರುವುದರಿಂದ, ಸದಸ್ಯರಿಗೆ ವೇಗವಾಗಿ ಹಣ ಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದೆ.

5. ಕ್ಲೈಮ್ ನಿರಾಕರಣೆಗೆ ಬ್ರೇಕ್:

ಹಳೆಯ ವ್ಯವಸ್ಥೆಯಲ್ಲಿ ಕೆಲವೊಮ್ಮೆ ಕ್ಲೈಮ್ ನಿರಾಕರಣೆಯಾಗುತ್ತಿತ್ತು. ಅಂದರೆ ಯಾವುದಾದರೂ ದಾಖಲೆಗಳ ಕೊರತೆ ಬಂದಾಗಲೋ, ತಪ್ಪುಗಳಾದಾಗಲೋ ಕ್ಲೈಮ್ ನಿರಾಕರಣೆ ಸಹಜವಾಗಿತ್ತು. ಆದರೆ ಈ ಹೊಸ ಬದಲಾವಣೆಯಿಂದ ಇಂತಹ ನಿರಾಕರಣೆಗಳ ಸಂಖ್ಯೆ ಬಹುತೇಕ ಕಡಿಮೆಯಾಗಲಿದೆ.

ಈ ಹೊಸ ಬದಲಾವಣೆಯ ಲಾಭವೇನು..?

ಇನ್ನು EPFO ತಂದಿರುವ ಈ ಹೊಸ ಬದಲಾವಣೆಯಿಂದ, ಸದಸ್ಯರಿಗೆ ನಿಜವಾದ ease of access ಸಿಗುತ್ತದೆ. ಖಾಸಗಿ ಮತ್ತು ಸರ್ಕಾರಿ ಕ್ಷೇತ್ರಗಳಲ್ಲಿನ ಹಲವಾರು ಉದ್ಯೋಗಿಗಳು ತಮ್ಮ ಹಣವನ್ನು ತ್ವರಿತವಾಗಿ ಹಿಂಪಡೆಯುವ ಅಗತ್ಯ ಹೊಂದಿರುತ್ತಾರೆ. ಅದರಲ್ಲೂ ನಿವೃತ್ತರಾದವರು ಅಥವಾ ತುರ್ತು ಹಣದ ಅಗತ್ಯವಿರುವವರು ಈ ಬದಲಾವಣೆಯಿಂದ ತುಂಬಾ ಲಾಭ ಪಡೆಯಲಿದ್ದಾರೆ. ಇದರ ಜೊತೆಗೆ ಇಪಿಎಫ್‌ಒ ತನ್ನ ಇಡೀ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಿರುವುದರಿಂದ, ಪಾರದರ್ಶಕ ಮತ್ತು ಜನಸ್ನೇಹಿಯಾಗಿ ರೂಪಿಸುತ್ತಿದೆ. ಈ ಬದಲಾವಣೆಗಳು ದೇಶದ ಉದ್ಯೋಗಿ ವರ್ಗದ ಹಣಕಾಸು ವ್ಯವಸ್ಥೆಯಲ್ಲಿ ಬಹುಮುಖ್ಯವಾದ ಮೆಟ್ಟಿಲಾಗಿ ಪರಿಗಣಿಸಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+