ಭಾರತದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees Provident Fund) ಹೊಸ ಟ್ರೆಂಡ್ ಸೃಷ್ಟಿಸಿದೆ. ಪಿಎಫ್ ಖಾತೆ ಹೊಂದಿರುವವರಿಗೆ ಕೊನೆಗೂ ಗುಡ್ ನ್ಯೂಸ್. ಪಿಂಚಣಿ ನಿಧಿ ಸಂಸ್ಥೆ (EPFO) ಆಧಾರಿತ ನಿವೃತ್ತಿ ಉಳಿತಾಯ ವ್ಯವಸ್ಥೆಯು ಅತಿದೊಡ್ಡ ತಂತ್ರಜ್ಞಾನ ಪ್ರಗತಿಗೆ ಸಜ್ಜಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಇದರಲ್ಲಿ ಇಪಿಎಫ್‌ಒ 3.0 (EPFO 3.0) ಆವೃತ್ತಿಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದ್ದು, ಇದು ಹೊಸ ಪೋರ್ಟಲ್ ಒಳಗೊಂಡ ಬೃಹತ್ ಪ್ರಮಾಣದ ಡಿಜಿಟಲ್ ಬದಲಾವಣೆಯಾಗಿದೆ.

ಹೌದು, ಇನ್ಮೇಲೆ ಪಿಎಫ್ ಖಾತೆಯಲ್ಲಿರುವ ಹಣವನ್ನು ಯುಪಿಐ (UPI) ಮೂಲಕ ವಿತ್‌ಡ್ರಾ ಮಾಡಬಹುದು. ಅಲ್ಲದೇ ಬ್ಯಾಂಕ್ ರೀತಿಯಲ್ಲೇ ಇನ್ಮೇಲೆ ಇಪಿಎಫ್‌ಒ ಕೆಲಸ ಮಾಡಲಿದೆ ಎಂದು ವರದಿಯಾಗಿದೆ. ಈ ಕುರಿತು ಹಲವು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಪ್ರಸ್ತುತ ಗೂಗಲ್ ಟ್ರೆಂಡ್ಸ್‌ನಲ್ಲೂ 'EPFO 3.0' ಟ್ರೆಂಡಿಂಗ್‌ನಲ್ಲಿದೆ.
ಹೊಸತನ, ಹೊಸ ಸೇವೆಯೊಂದಿಗೆ EPFO!
ಇಪಿಎಫ್‌ಒ 3.0 ಹೊಸ ಬ್ಯಾಕೆಂಡ್ ಸಾಫ್ಟ್‌ವೇರ್ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಭಾಷಾ ಸಾಧನಗಳೊಂದಿಗೆ ಬರಲಿದ್ದು, ದೇಶಾದ್ಯಂತ ಕೋಟ್ಯಂತರ ಸದಸ್ಯರಿಗೆ ಸೇವೆ ಸಲ್ಲಿಸುವ ಗುರಿಯನ್ನು ಇದು ಹೊಂದಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವಂತೆ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಇದನ್ನು ದೃಢಪಡಿಸಿದ್ದು, ಭವಿಷ್ಯ ನಿಧಿ ಸೇವೆಗಳನ್ನು ವೇಗವಾಗಿ, ಹೆಚ್ಚು ಸುಲಭವಾಗಿ ಮತ್ತು ಬ್ಯಾಂಕುಗಳ ಮಾದರಿಯಲ್ಲೇ ಕೆಲಸ ಮಾಡುವುದು ಇದರ ಮುಖ್ಯ ಗುರಿ.
ಒಂದು ಸೇವೆ, ಹಲವು ಪ್ರಯೋಜನ!
ಪ್ರಸ್ತುತ ಚರ್ಚೆಯಲ್ಲಿರುವ ಬದಲಾವಣೆ ಒಂದು ವೇಳೆ ಜಾರಿಗೆ ಬಂದರೆ, ಎಂಟು ಕೋಟಿಗೂ ಹೆಚ್ಚು ಸಕ್ರಿಯ ಸದಸ್ಯರು ತಮ್ಮ ಖಾತೆಗಳನ್ನು ಟ್ರ್ಯಾಕ್ ಮಾಡುವ, ಕುಂದುಕೊರತೆಗಳನ್ನು ಸಲ್ಲಿಸುವ ಮತ್ತು ಹಣವನ್ನು ಹಿಂಪಡೆಯುವ ವಿಧಾನದ ಮೇಲೆ ಪ್ರಭಾವ ಬೀರಲಿದೆ. ಮುಂಬರುವ ಕಾರ್ಮಿಕ ಸುಧಾರಣೆಗಳ ಅಡಿಯಲ್ಲಿ ಇಪಿಎಫ್‌ಒ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಣಿಗೆ ಪ್ರಾಮುಖ್ಯತೆ ಪಡೆದಿದೆ.
ಇದು ಹೇಗೆ ಕೆಲಸ ಮಾಡುತ್ತದೆ?
- ಪಿಎಫ್ ಬ್ಯಾಲೆನ್ಸ್ ಅನ್ನು ತೋರಿಸುತ್ತದೆ: ಒಟ್ಟು ಬ್ಯಾಲೆನ್ಸ್, ತೆಗೆಯಬಹುದಾದ ಬ್ಯಾಲೆನ್ಸ್ ಮತ್ತು ಕಡ್ಡಾಯವಾಗಿ ಉಳಿಸಬೇಕಾದ ಕನಿಷ್ಠ ಬ್ಯಾಲೆನ್ಸ್ ಬಗ್ಗೆ ತಿಳಿಸುತ್ತದೆ.
- ಯುಪಿಐ ಪಿನ್ ಬಳಸಿ ಸುರಕ್ಷಿತವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು. ನಂತರ ಆ ಹಣವನ್ನು ಎಟಿಎಂ ಮೂಲಕ ಅಥವಾ ಯುಪಿಐ ಮೂಲಕ ವಿಥ್‌ಡ್ರಾ ಮಾಡಬಹುದು
- ಇದರಿಂದ ಸದಸ್ಯರು ಇನ್ಮೇಲೆ ಸುಲಭವಾಗಿ ಹಣ ಪಡೆಯುವಂತೆ ಮಾಡುತ್ತದೆ.
ಯಾವಾಗ ಆರಂಭ?
- ಹೊಸ ಅಪ್ಡೇಟ್ ಶೀಘ್ರದಲ್ಲೇ ಜಾರಿಗೆ ಬರಲಿದೆ. ಇಪಿಎಫ್‌ಒ ಇದನ್ನು ಹಂತ ಹಂತವಾಗಿ ಅಳವಡಿಸಲು ಸಜ್ಜಾಗಿದೆ. ಮೊದಲು ಪೈಲಟ್ ಟೆಸ್ಟಿಂಗ್ (ಪರೀಕ್ಷಾ ಹಂತ) ಮಾಡಲಾಗುತ್ತದೆ. ಆ ಬಳಿಕ ಸಂಪೂರ್ಣ ಕಾರ್ಯರೂಪಕ್ಕೆ ತರಲಾಗುತ್ತದೆ.
- ತಾಂತ್ರಿಕ ಸೌಲಭ್ಯಗಳು: ಹೊಸ ಬ್ಯಾಂಕ್‌ಎಂಡ್ ಸಾಫ್ಟ್‌ವೇರ್, ಎಐ ಆಧಾರಿತ ಭಾಷಾ ಟೂಲ್‌ಗಳು ಮತ್ತು ಡಿಜಿಟಲರ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯ ಸಾಫ್ಟ್‌ವೇರ್ ಅಳವಡಿಕೆ ಬಗ್ಗೆ ಕೆಲಸಗಳು ನಡೆಯುತ್ತಿದೆ ಎನ್ನಲಾಗಿದೆ.
- ಸುರಕ್ಷತೆ: ಯುಪಿಐ ಪಿನ್ ಮೂಲಕ ಸುರಕ್ಷಿತ ಮತ್ತು ಕೇವಲ ಅರ್ಹ ಬ್ಯಾಲೆನ್ಸ್ ಮಾತ್ರ ಹಣ ವಿತ್ ಡ್ರಾ ಮಾಡುವ ಅವಕಾಶ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಪ್ರತೀ ಟ್ರಾನ್ಸಾಕ್ಷನ್‌ಗೆ 25 ಸಾವಿರ ಮಿತಿ ಇರಬಹುದು ಎನ್ನಲಾಗಿದೆ.
ಅಂದಾಜು ಏಪ್ರಿಲ್ 2026 ರೊಳಗೆ ಪ್ರಾರಂಭಿಸಲು ಸಜ್ಜಾಗಿದೆ. ಇದು EPFO 3.0 ನ ಭಾಗವಾಗಿದ್ದು, ಎಲ್ಲಾ ಕಾರ್ಯಗಳು ಸಂಪೂರ್ಣಗೊಂಡರೆ ಸದ್ಯದಲ್ಲೇ ಬಿಡುಗಡೆಯಾಗಲಿದೆ.


Click it and Unblock the Notifications