ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ಉದ್ಯೋಗಿಯಾಗಲಿ ಪಿಎಫ್ ಖಾತೆಯನ್ನು ಹೊಂದಿರುತ್ತಾರೆ. ಭಾರತ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಈ ಇಪಿಎಫ್ ಕೂಡಾ ಒಂದು. 1952 ರಲ್ಲಿ Employees Provident Funds Scheme ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಆದ್ರೆ ಇದೀಗ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಇಪಿಎಫ್ ಖಾತೆಗಳಿಗೆ ಸಂಬಂಧಿಸಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (EPFO) ಅಡಿಯಲ್ಲಿ ಲಕ್ಷಾಂತರ ನಿಷ್ಕ್ರಿಯ ಖಾತೆಗಳಲ್ಲಿ ಬಿದ್ದಿರುವ ಅನ್‌ಕ್ಲೈಮ್‌ಡ್ ಹಣವನ್ನು ಆಟೋಮೆಟಿಕ್ ಆಗಿ ಹಿಂದಿರುಗಿಸುವ ಯೋಜನೆಯನ್ನು ಘೋಷಣೆ ಮಾಡಿದೆ. ಇದು ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ದೊಡ್ಡ ರಿಲೀಫ್ ಸಿಗಲಿದೆ.
ಸಾಮಾನ್ಯವಾಗಿ ಪಿಎಫ್ ಖಾತೆದಾರರು ಒಂದು ಕಂಪನಿ ಬಿಟ್ಟು ಮತ್ತೊಂದು ಕಂಪನಿಯಗೆ ಜಾಯಿನ್ ಆದಾಗ, ಹೊಸ ಪಿಎಫ್ ಖಾತೆ ಅಥವಾ ಅದನ್ನೇ ಮುಂದುವರೆಸುವ ಆಯ್ಕೆಗಳಿರುತ್ತದೆ. ಆದ್ರೆ ಹೊಸ ಪಿಎಫ್ ಖಾತೆಗೆ ವರ್ಗಾವಣೆ ಮಾಡದಿದ್ದರೆ ಅಥವಾ ಮೂರು ವರ್ಷಗಳಿಂದ ಹಳೇ ಖಾತೆಗೆ ಪ್ರೀಮಿಯಂ ಜಮಾ ಆಗದೇ ಇರುವ ಖಾತೆಗಳನ್ನು ಇನ್ಯಾಕ್ಟಿವ್ ಖಾತೆಗಳೆಂದು ಪರಿಗಣಿಸಲಾಗುತ್ತದೆ. ಅಂತಹ ಖಾತೆಗಳನ್ನು ಮೂರು ವರ್ಷಗಳ ನಂತರ ನಿಷ್ಕ್ರಿಯಗೊಳಿಸಲಾಗುತ್ತದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಮಹತ್ವದ ನಿರ್ಧಾರ!
ಈಗಾಗಲೇ ಲಕ್ಷಾಂತರ ಇಪಿಎಫ್ ಖಾತೆಗಳು ನಿಷ್ಕ್ರಿಯವಾಗಿದ್ದು, ಅದರಲ್ಲಿ ಅನ್‌ಕ್ಲೈಮ್ ಆಗದ ಹಣವನ್ನು ಸರ್ಕಾರ ಸ್ವಯಂ ಚಾಲಿತವಾಗಿ ಹಿಂತಿರುಗಿಸುವ ನಿರ್ಧಾರಕ್ಕೆ ಸಚಿವಾಲಯ ಬಂದಿದೆ ಎನ್ನಲಾಗಿದೆ. ಇದು ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಬಿಗ್ ರಿಲೀಫ್ ಸಿಗಲಿದೆ.
31 ಲಕ್ಷಕ್ಕೂ ಅಧಿಕ ಖಾತೆಗಳು ನಿಷ್ಕ್ರಿಯ!
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಈಗಾಗಲೇ 31.86 ಲಕ್ಷ ಇಪಿಎಫ್‌ಒ ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ ಎನ್ನಲಾಗಿದೆ. ಇದರಲ್ಲಿ ಒಟ್ಟು 10,903 ಕೋಟಿ ಹಣ ಅನಕ್ಲೈಮ್ಡ್ ಆಗಿದ್ದು, ಮೊದಲ ಹಂತದಲ್ಲಿ ಕೇವಲ 6 ಲಕ್ಷ ಖಾತೆಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಬಹುತೇಕ ಎಲ್ಲಾ ಖಾತೆಗಳಲ್ಲಿ 1000 ರೂ.ಗಿಂತಲೂ ಕಡಿಮೆ ಬ್ಯಾಲೆನ್ಸ್ ಹೊಂದಿದೆ. ಈ ಎಲ್ಲಾ ಹಣವನ್ನು ಸ್ವಯಂ ಚಾಲಿತವಾಗಿ ವರ್ಗಾಯಿಸುವ ಪ್ರಕ್ರಿಯೆ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.
ಇನ್ನು ಕೆಲವು ವರದಿಗಳು ಸರ್ಕಾರ ಈ ಅನ್‌ಕ್ಲೈಮ್‌ಡ್ ಹಣವನ್ನು ಸರ್ಕಾರಿ ಕಲ್ಯಾಣ ಯೋಜನೆಗಳಿಗೆ ಬಳಸುತ್ತದೆ ಎಂದು ಹೇಳಿದೆ. ಆದ್ರೆ ಅದೆಷ್ಟು ಸತ್ಯ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಸರ್ಕಾರವು ಈ ಅನ್‌ಕ್ಲೈಮ್‌ಡ್ ಹಣವನ್ನು ಯಾವುದೇ ಸರ್ಕಾರಿ ಫಂಡ್‌ಗೆ ವರ್ಗಾಯಿಸುವುದಿಲ್ಲ, ಬದಲಿಗೆ ಸದಸ್ಯರಿಗೆ ಅಥವಾ ನಾಮಿನಿಗೆ ಹಿಂತಿರುಗಿಸುತ್ತದೆ ಎನ್ನಲಾಗಿದೆ. ನಿಮ್ಮ ನಿಷ್ಕ್ರಿಯವಾದ ಇಪಿಎಫ್ ಅಕೌಂಟ್‌ನಲ್ಲಿ 1000 ರೂ. ಅಥವಾ ಅದಕ್ಕಿಂತ ಕಡಿಮೆ ಹಣ ಇದ್ದರೆ ಆಟೋಮೆಟಿಕ್ ಆಗಿ ರೀಫಂಡ್ ಆಗಲಿದೆ. ಒಂದು ವೇಳೆ ಜಾಸ್ತಿ ಇದ್ದರೆ ಅರ್ಜಿ ಸಲ್ಲಿಸಬೇಕಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications