ಇಪಿಎಫ್‌ಒ ಹೊಸ ಪ್ಲಾನ್: ಬಡ್ಡಿ ದರ ಸ್ಥಿರತೆಗೆ 25,000 ಕೋಟಿ ಮೀಸಲು, ವೇತನ ಮಿತಿ ಏರಿಕೆ!

ಪಿಎಫ್ ಬಡ್ಡಿದರದಲ್ಲಿ ಉಂಟಾಗುವ ಏರಿಳಿತಗಳನ್ನು ತಡೆಯಲು ಭಾರತದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 25,000 ಕೋಟಿ ರೂಪಾಯಿಗಳ 'ಬಡ್ಡಿ ಸ್ಥಿರೀಕರಣ ನಿಧಿ' (Interest Stabilisation Reserve) ರಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಸದ್ಯಕ್ಕಿದು ಪ್ರಸ್ತಾವನೆ ಹಂತದಲ್ಲಿದ್ದು, ಇನ್ನೂ ಅಧಿಕೃತ ನಿಯಮವಾಗಿ ಜಾರಿಯಾಗಿಲ್ಲ. ಇನ್ನೊಂದೆಡೆ, 2026ರ ಸೆಪ್ಟೆಂಬರ್ 17ರಿಂದ ಜಾರಿಗೆ ಬರುವಂತೆ ಇಪಿಎಫ್‌ನ ಕಡ್ಡಾಯ ವೇತನ ಮಿತಿಯನ್ನು 25,000 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ನಿರ್ಧಾರದಿಂದಾಗಿ ಉದ್ಯೋಗಿಗಳ ವಂತಿಕೆ ಹೆಚ್ಚಲಿದ್ದು, ಸಾಮಾಜಿಕ ಭದ್ರತೆಯ ವ್ಯಾಪ್ತಿಯೂ ವಿಸ್ತರಣೆಯಾಗಲಿದೆ.

ಷೇರು ಮಾರುಕಟ್ಟೆ ಕುಸಿದಾಗ ಅಥವಾ ಆರ್ಥಿಕ ಹಿಂಜರಿತದ ಸಮಯದಲ್ಲಿ ಈ ನಿಧಿಯು ಶೋಕ್ ಅಬ್ಸರ್ಬರ್ ರೀತಿ ಕೆಲಸ ಮಾಡಿ, ಇಪಿಎಫ್ ಪಾವತಿಗಳಿಗೆ ಧಕ್ಕೆಯಾಗದಂತೆ ಕಾಯಲಿದೆ. ಇಪಿಎಫ್‌ಒ ಹೂಡಿಕೆ ಸಮಿತಿಯು ಐಐಎಂ ಕೋಝಿಕ್ಕೋಡ್‌ ನಡೆಸಿದ ಅಧ್ಯಯನವನ್ನು ಪರಿಶೀಲಿಸಿದ್ದು, 2010-11 ರಿಂದ 2023-24ರ ವರೆಗಿನ ಆದಾಯವನ್ನು ವಿಶ್ಲೇಷಿಸಿದೆ. ಬಾಂಡ್ ಡಿಫಾಲ್ಟ್ ಅಥವಾ ಮಾರುಕಟ್ಟೆ ನಷ್ಟದ ಸಂದರ್ಭಗಳಲ್ಲಿ ಎದುರಾಗುವ ಕೊರತೆಯನ್ನು ನೀಗಿಸಲು 25,000 ಕೋಟಿ ರೂಪಾಯಿಗಳ ಮೂಲ ನಿಧಿ ಸಾಕಾಗುತ್ತದೆ ಎಂದು ಈ ವರದಿ ತಿಳಿಸಿದೆ. ಆದರೆ, ಇದನ್ನು ಜಾರಿಗೆ ತರಲು ಕೇಂದ್ರ ಮಂಡಳಿ ಮತ್ತು ಸರ್ಕಾರದ ಅಂತಿಮ ಒಪ್ಪಿಗೆ ಅಗತ್ಯವಿದೆ.

ಇಪಿಎಫ್‌ಒ ಹೊಸ ನಿಯಮ: ಬಡ್ಡಿ ಸ್ಥಿರತೆ ಮತ್ತು ವೇತನ ಮಿತಿ

ಬಡ್ಡಿ ಸ್ಥಿರೀಕರಣ ನಿಧಿ ಮತ್ತು ಪಿಎಫ್ ಆದಾಯ

ಇಪಿಎಫ್‌ಒ ಚಂದಾದಾರರಿಗೆ ತಕ್ಷಣಕ್ಕೇನೂ ಬದಲಾವಣೆಯಾಗುವುದಿಲ್ಲ. 2025-26ನೇ ಸಾಲಿಗೆ ಇಪಿಎಫ್‌ ಮೇಲಿನ ಬಡ್ಡಿದರವನ್ನು ಶೇ 8.25 ರಷ್ಟು ನೀಡಲು ಇಪಿಎಫ್‌ಒ ಮಂಡಳಿ ಶಿಫಾರಸು ಮಾಡಿದೆ. ವಾಡಿಕೆಯಂತೆ ಸರ್ಕಾರದ ಅಧಿಕೃತ ಸೂಚನೆ ಹೊರಬಿದ್ದ ನಂತರ ಈ ಬಡ್ಡಿ ಮೊತ್ತ ಚಂದಾದಾರರ ಖಾತೆಗೆ ಜಮೆಯಾಗಲಿದೆ. ಒಂದು ವೇಳೆ ಈ ಸ್ಥಿರೀಕರಣ ನಿಧಿಗೆ ಒಪ್ಪಿಗೆ ಸಿಕ್ಕರೆ, ಮುಂಬರುವ ವರ್ಷಗಳಲ್ಲಿ ದಿಢೀರ್ ಬಡ್ಡಿದರ ಕುಸಿಯುವ ಭೀತಿ ಇರುವುದಿಲ್ಲ ಮತ್ತು ಸ್ಥಿರವಾದ ಆದಾಯ ಸಿಗಲಿದೆ.

ಇಪಿಎಫ್‌ಒ ಹೂಡಿಕೆ ಶೈಲಿ ಮತ್ತು ಸ್ಥಿರೀಕರಣ ನಿಧಿ

ಇಪಿಎಫ್‌ಒ ಮುಖ್ಯವಾಗಿ ಸರ್ಕಾರಿ ಸೆಕ್ಯುರಿಟಿಗಳು, ಅತ್ಯುತ್ತಮ ಶ್ರೇಣಿಯ ಬಾಂಡ್‌ಗಳು ಹಾಗೂ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳ (ETF) ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತದೆ. ಈ ಹೂಡಿಕಾ ವಿಧಾನವು ಭಾರೀ ಮೊತ್ತದ ನಿಧಿಗೆ ಭದ್ರತೆ ಮತ್ತು ಉತ್ತಮ ಬೆಳವಣಿಗೆಯನ್ನು ತಂದುಕೊಡುತ್ತದೆ. ಬಡ್ಡಿ ಸ್ಥಿರೀಕರಣ ನಿಧಿಯು ಮಾರುಕಟ್ಟೆ ಚೆನ್ನಾಗಿದ್ದ ವರ್ಷಗಳಲ್ಲಿ ಬಂದ ಹೆಚ್ಚುವರಿ ಲಾಭವನ್ನು ಕಾಯ್ದಿರಿಸಿ, ಕಷ್ಟದ ಸಮಯದಲ್ಲಿ ನೆರವಾಗಲಿದೆ. ಮಾರುಕಟ್ಟೆ ಕುಸಿತ ಅಥವಾ ಬಾಂಡ್ ರೇಟಿಂಗ್‌ ಕಡಿಮೆಯಾದಾಗ ಎದುರಾಗುವ ನಷ್ಟವನ್ನು ನಿಭಾಯಿಸಲು ಇದು ಸಹಕಾರಿ.

₹25,000 ವೇತನ ಮಿತಿ ಮತ್ತು 80C ತೆರಿಗೆ ಪ್ಲಾನಿಂಗ್

2026ರ ಸೆಪ್ಟೆಂಬರ್ 17ರಿಂದ 25,000 ರೂಪಾಯಿಗಳ ಹೊಸ ವೇತನ ಮಿತಿ ಜಾರಿಗೆ ಬರಲಿದ್ದು, ಕಡ್ಡಾಯ ಇಪಿಎಫ್ ವ್ಯಾಪ್ತಿ ಇನ್ನಷ್ಟು ವಿಸ್ತರಿಸಲಿದೆ. ಈ ಮಿತಿಯೊಳಗಿನ ಉದ್ಯೋಗಿಗಳು ತಮ್ಮ ಮೂಲ ವೇತನದ ಶೇಕಡಾ 12 ರಷ್ಟು ಮೊತ್ತವನ್ನು ಪಿಎಫ್‌ಗೆ ನೀಡಬೇಕಾಗುತ್ತದೆ, ಅಷ್ಟೇ ಮೊತ್ತವನ್ನು ಉದ್ಯೋಗದಾತ ಕಂಪನಿಯೂ ಹೂಡಿಕೆ ಮಾಡುತ್ತದೆ. ಇದರಿಂದ ನಿಮ್ಮ ಕೈಗೆ ಸಿಗುವ ಶಂಬಳ ಸ್ವಲ್ಪ ಕಡಿಮೆಯಾಗಬಹುದು, ಆದರೆ ಸೆಕ್ಷನ್ 80C ಅಡಿಯಲ್ಲಿ ಹೆಚ್ಚಿನ ತೆರಿಗೆ ವಿನಾಯಿತಿ ಸಿಗಲಿದೆ. ವಿಶೇಷವಾಗಿ 15,000 ರಿಂದ 25,000 ರೂಪಾಯಿ ವೇತನ ಪಡೆಯುವ ಹೊಸ ಚಂದಾದಾರರಿಗೆ ಇದು ಹೆಚ್ಚಿನ ಸಾಮಾಜಿಕ ಭದ್ರತೆ ನೀಡಲಿದೆ.

ಇಪಿಎಫ್‌ಒ ಚಂದಾದಾರರು ಗಮನಿಸಬೇಕಾದ ಅಂಶಗಳು

ಚಂದಾದಾರರು ಇಪಿಎಫ್‌ಒ ಹೂಡಿಕೆ ಸಮಿತಿಯ ನಿರ್ಧಾರಗಳು, ಕೇಂದ್ರ ಮಂಡಳಿಯ ಸಭೆಯ ಅಜೆಂಡಾಗಳು ಮತ್ತು ಕಾರ್ಮಿಕ ಸಚಿವಾಲಯದ ಸುತ್ತೋಲೆಗಳನ್ನು ಗಮನಿಸುತ್ತಿರಬೇಕು. ಬಡ್ಡಿದರದ ಬದಲಾವಣೆಗಳ ಬಗ್ಗೆ ಸರ್ಕಾರದ ಗೇಜೆಟ್ ಅಧಿಸೂಚನೆ ಬರುವವರೆಗೆ ಕಾಯುವುದು ಸೂಕ್ತ. ಸೆಪ್ಟೆಂಬರ್ ತಿಂಗಳ ಪೇರೋಲ್ ಮತ್ತು ನಿಮ್ಮ 80C ತೆರಿಗೆ ಉಳಿತಾಯದ ಯೋಜನೆಯನ್ನು ಒಮ್ಮೆ ಪರಿಶೀಲಿಸಿ. ಇಪಿಎಫ್ ಜೊತೆಗೆ ನಿವೃತ್ತಿಗಾಗಿ ಮಾಡುವ ಎಸ್‌ಐಪಿ (SIP) ಹೂಡಿಕೆಯನ್ನು ಮುಂದುವರಿಸಿ. ಮುಖ್ಯವಾಗಿ ನಿಮ್ಮ UAN KYC, ನಾಮಿನಿ ವಿವರಗಳು ಮತ್ತು ಪಾಸ್‌ಬುಕ್ ದಾಖಲೆಗಳನ್ನು ನವೀಕರಿಸಿ ಇಟ್ಟುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+