ನವದೆಹಲಿ: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಾಂವಿಧಾನಿಕ ಸಂಸ್ಥೆಯಾಗಿದ್ದು, ದೇಶದಲ್ಲಿ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಇದೀಗ ದೇಶದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮಹತ್ವದ ಸುದ್ದಿಯೊಂದಿದೆ. ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಸಂಸ್ಥೆ (EPFO) ತನ್ನ ಸದಸ್ಯರಿಗೆ EPF ಹಣವನ್ನು ಯುಪಿಐ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.

ಹೌದು, ಇದೇ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿರುವ ಹೊಸ ಮೊಬೈಲ್ ಅಪ್ಲಿಕೇಶನ್ ಮೂಲಕ, ಇಪಿಎಫ್ ಖಾತೆದಾರರು ತಮ್ಮ ನೌಕರರ ಭವಿಷ್ಯ ನಿಧಿ (EPF) ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಯುಪಿಐ (UPI) ಪಾವತಿ ಗೇಟ್‌ವೇ ಬಳಸಿ ಹಿಂಪಡೆಯಲು ಸಾಧ್ಯವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದಕ್ಕಾಗಿ ಹೊಸ ಮೊಬೈಲ್ ಆಪ್ (New App) ಅನ್ನು ಏಪ್ರಿಲ್ 2026 ರಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಲಿದೆ.
ಇಪಿಎಫ್‌ಒ ಸದಸ್ಯರು ಈ ಹೊಸದಾಗಿ ಬರಲಿರುವ ಆಪ್ ಮೂಲಕ ತಮ್ಮ ಪಿಎಫ್ ಖಾತೆಯಲ್ಲಿರುವ ಹಣವನ್ನು ಇನ್ಮೇಲೆ ನೇರವಾಗಿ ಯುಪಿಐ ಪೇಮೆಂಟ್ ಗೇಟ್‌ವೇ ಬಳಸಿ ವಿಥ್‌ಡ್ರಾ ಮಾಡಬಹುದು. ಇದರಿಂದ ಹಣ ವರ್ಗಾವಣೆ ಕೂಡಾ ತಕ್ಷಣವೇ ಆಗುತ್ತದೆ ಮತ್ತು ಪೇಪರ್‌ಲೆಸ್, ತಡವಾಗುತ್ತೆ ಅನ್ನೋ ಯಾವುದೇ ಆತಂಕಗಳಿರುವುದಿಲ್ಲ.
ಕಾರ್ಮಿಕ ಸಚಿವಾಲಯವು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಪಿಎಫ್‌ನ ಒಂದು ನಿರ್ದಿಷ್ಟ ಭಾಗವನ್ನು ಫ್ರೀಜ್ ಮಾಡಲಾಗುತ್ತದೆ. ಉಳಿದ ದೊಡ್ಡ ಮೊತ್ತವನ್ನು ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಮೂಲಕ, ಬ್ಯಾಂಕ್ ಖಾತೆ ಮೂಲಕ ಹಿಂಪಡೆಯಲು ಅವಕಾಶ ನೀಡಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿದೆ.
ಇನ್ಮೇಲೆ ಪಿಎಫ್ ಹಣ ಪಡೆಯೋದು ಸುಲಭ!
ಇಪಿಎಫ್‌ಒ ಹೊಸ ಮೊಬೈಲ್ ಆ್ಯಪ್ ಅನ್ನು ಹೊರತರಲಿದ್ದು, ಸದಸ್ಯರು ಯುಪಿಐ ಬಳಸಿ ಇಪಿಎಫ್ ಹಣ ಹಿಂಪಡೆಯಲು ಹಾಗೂ ಪಾಸ್‌ಬುಕ್ ಬ್ಯಾಲೆನ್ಸ್ ಸೇರಿದಂತೆ ಇತರೆ ಸೇವೆಗಳನ್ನು ಪಡೆಯಲು ಇದರಿಂದ ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ, ಯುಎಎನ್ ಪೋರ್ಟಲ್ ಅಥವಾ ಉಮಾಂಗ್ ಆ್ಯಪ್ ಮೂಲಕ ಇಪಿಎಫ್ ಖಾತೆಗಳನ್ನು ನಿರ್ವಹಿಸಲು ಅವಕಾಶವಿದೆ. ಆದ್ರೆ ಮುಂದಿನ ದಿನಗಳಲ್ಲಿ ಈ ಸೇವೆಗಳು ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಮುಂದುವರಿಯಲಿದ್ದು, ಹೊಸ ಆ್ಯಪ್ ಇಪಿಎಫ್‌ಒ ಚಂದಾದಾರರಿಗೆ ಸೇವೆಗಳ ಪ್ರವೇಶ ಮತ್ತು ವಿತರಣೆಯನ್ನು ಮತ್ತಷ್ಟು ಸುಧಾರಿಸಲಿದೆ ಎಂದು ಹೇಳಲಾಗಿದೆ.
ಇನ್ನು ಜಾರಿಗೆ ಬರಲಿರುವ ಈ ಹೊಸ ವ್ಯವಸ್ಥೆಯಲ್ಲಿ, ಚಂದಾದಾರರು ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಲಭ್ಯವಿರುವ ಅರ್ಹ ಇಪಿಎಫ್ ಬ್ಯಾಲೆನ್ಸ್ ಅನ್ನು ಸಹ ಚೆಕ್ ಮಾಡಬಹುದು.
ಪ್ರಸ್ತುತ, ಇಪಿಎಫ್‌ಒ ಸದಸ್ಯರು ತಮ್ಮ ಇಪಿಎಫ್ ಹಣವನ್ನು ಕ್ಲೈಮ್ ಮಾಡಬೇಕೆಂದರೆ ಅರ್ಜಿ ಸಲ್ಲಿಸಬೇಕು. ಅಲ್ಲದೇ ಹಣ ಪಡೆಯಬೇಕೆಂದರೆ, ಹೆಚ್ಚು ದಿನಗಳು ಬೇಕಾಗುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ, ಈ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎನ್ನಲಾಗಿದೆ.


Click it and Unblock the Notifications