ಇಪಿಎಫ್‌ಓ ಎಂದರೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO). ಇದು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಇದು ಸಂಘಟಿತ ವಲಯದ ಉದ್ಯೋಗಿಗಳಿಗೆ ಉಳಿತಾಯ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಮುಖ್ಯ ಉದ್ದೇಶ ಹೊಂದಿದೆ. 1952 ರಲ್ಲಿ ಸ್ಥಾಪಿತವಾದ ಇದು ದೇಶದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾಗಿದೆ.

ಇದೀಗ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಜನವರಿ 2026ರಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಟ್ರಾನ್ಸ್‌ಜೆಂಡರ್‌ಗಳಿಗಾಗಿ ದೊಡ್ಡ ಸೌಲಭ್ಯವನ್ನು ಕೈಗೊಳ್ಳುವ ಉದ್ದೇಶದಿಂದ ಹೊಸ ಕ್ರಮ ಕೈಗೊಂಡಿದೆ. ಹೌದು, ಇಪಿಎಫ್‌ಒ, ರಾಷ್ಟ್ರೀಯ ಪೋರ್ಟಲ್‌ನಿಂದ (National Portal For Transgender Persons) ನೀಡಲಾಗುವ ಟ್ರಾನ್ಸ್‌ಜೆಂಡರ್ ಐಡೆಂಟಿಟಿ ಕಾರ್ಡ್ ಅನ್ನು EPF/UAN ದಾಖಲೆಗಳಲ್ಲಿ ಹೆಸರು ಮತ್ತು ಲಿಂಗ ಬದಲಾವಣೆಗೆ ಸಾಕ್ಷ್ಯವಾಗಿ ಸ್ವೀಕರಿಸಲಾಗುತ್ತದೆ.
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (EPFO) ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಸೇರಿದ ಸದಸ್ಯರಿಗಾಗಿ ಜಂಟಿ ಘೋಷಣಾ ಪ್ರಕ್ರಿಯೆಯನ್ನು ಸರಳೀಕರಿಸಿದೆ. ಆದ್ದರಿಂದ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ನೀಡಲಾದ ಐಡಿ ಕಾರ್ಡ್ ಅನ್ನೂ ಇನ್ಮೇಲೆ ಇಪಿಎಫ್ ದಾಖಲೆಗಳಲ್ಲಿ ಹೆಸರು ಮತ್ತು ಲಿಂಗ ಬದಲಾಯಿಸಲು ಮಾನ್ಯ ದಾಖಲೆಯಾಗಿ ಬಳಸಬಹುದು.
EPFO ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯ ಪ್ರಕಾರ, "ಸಮರ್ಥ ಪ್ರಾಧಿಕಾರವು https://transgender.dosje.gov.in/ ಜಾಲತಾಣದ ಮೂಲಕ ನೀಡಲಾದ ಟ್ರಾನ್ಸ್‌ಜೆಂಡರ್ ಪ್ರಮಾಣಪತ್ರ/ಕಾರ್ಡ್ ಅನ್ನು EPFO ದಾಖಲೆಗಳಲ್ಲಿ ಹೆಸರು ಮತ್ತು ಲಿಂಗ ಬದಲಾವಣೆಗಳನ್ನು ಜಾರಿಗೊಳಿಸುವ ಮಾನ್ಯ ದಾಖಲೆಯಾಗಿ ಸ್ವೀಕರಿಸಲು ನಿರ್ಧರಿಸಿದೆ" ಎಂದು ಸ್ಪಷ್ಟಪಡಿಸಿದೆ.
- ಹೊಸ ನಿಯಮದ ಪ್ರಕಾರ, ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ರಾಷ್ಟ್ರೀಯ ಪೋರ್ಟಲ್‌ನಿಂದ ಪಡೆದ ಐಡಿ ಕಾರ್ಡ್ ಅನ್ನು ಬಳಸಿ, ಇಪಿಎಫ್ ಅಕೌಂಟ್‌ನಲ್ಲಿ ಹೆಸರು ಮತ್ತು ಲಿಂಗವನ್ನು ಬದಲಾಯಿಸಬಹುದು.
- ಈಗಾಗಲೇ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಗೆಜೆಟ್ ನಾಟಿಫಿಕೇಶನ್‌ಗಳನ್ನು ಸ್ವೀಕರಿಸಲಾಗುತ್ತಿದೆ. ಇನ್ಮೇಲೆ ಇದೂ ಕೂಡಾ ಸ್ವೀಕಾರ್ಹ.
ಹೇಗೆ ಬದಲಾಯಿಸುವುದು?
- ಇಪಿಎಫ್‌ಒ ಯೂನಿಫೈಡ್ ಪೋರ್ಟಲ್ ಅಥವಾ UMANG ಆಪ್ ಮೂಲಕ ಬದಲಾಯಿಸಬಹುದು.
- Modify Basic Details ಆಯ್ಕೆಯಲ್ಲಿ ಟ್ರಾನ್ಸ್‌ಜೆಂಡರ್ ಐಡಿ ಕಾರ್ಡ್ ಅಪ್‌ಲೋಡ್ ಮಾಡಿ, ಅರ್ಜಿ ಸಲ್ಲಿಸಬಹುದು.
- ಕಂಪನಿ ಅನುಮೋದಿಸಿದರೆ, ಬದಲಾವಣೆಯಾಗುತ್ತದೆ.
ಹೊಸ ನಿಯಮದ ಪ್ರಯೋಜನಗಳೇನು?
ಈ ಹಿಂದೆ ಇಪಿಎಫ್‌ನಲ್ಲಿ ಜೆಸರು ಅಥವಾ ಲಿಂಗ ಬದಲಾವಣೆ ಮಾಡಬೇಕೆಂದರೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಗೆಜೆಟ್ ನೋಟಿಫಿಕೇಶನ್ ಅಥವಾ ಕೋರ್ಟ್ ಆದೇಶದ ಪ್ರತಿಗಳನ್ನು ದಾಖಲೆಯಾಗಿ ನೀಡಬೇಕಾಗಿತ್ತು. ಆದರೆ ಇನ್ಮೇಲೆ ಹೊಸ ನಿಯಮದ ಪ್ರಕಾರ ರಾಷ್ಟ್ರೀಯ ಪೋರ್ಟಲ್‌ನಿಂದ ನೀಡಿದ ಟ್ರಾನ್ಸ್‌ಜೆಂಡರ್ ಸರ್ಟಿಫಿಕೇಟ್ ಮತ್ತು ಐಡಿ ಕಾರ್ಡ್ ಅನ್ನು ಸಹ ಮೂಲ ದಾಖಲೆಯಾಗಿ ನೀಡಬಹುದು.
ಇಪಿಎಫ್‌ಒ ಸದಸ್ಯರು ತಮ್ಮ ಇಪಿಎಫ್ ದಾಖಲೆಗಳಲ್ಲಿ ಹೆಸರು ಮತ್ತು ಲಿಂಗ ಬದಲಾವಣೆಗೆ ಈ ಕೆಳಗಿನ ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕು:
- ಟ್ರಾನ್ಸ್‌ಜೆಂಡರ್ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಮರಣ ಪ್ರಮಾಣಪತ್ರ, ಜನನ ಪ್ರಮಾಣಪತ್ರ, ಡ್ರೈವಿಂಗ್ ಲೈಸೆನ್ಸ್.
- ಇದಲ್ಲದೆ, ಕೇಂದ್ರ/ರಾಜ್ಯ ಸರ್ಕಾರಗಳು/ಯುಟಿ ಸರ್ಕಾರ/ಪಿಎಸ್‌ಯು/ಬ್ಯಾಂಕ್‌ಗಳಿಂದ ನೀಡಲಾದ ಸೇವಾ ಫೋಟೋ ಗುರುತಿನ ಚೀಟಿ, ಶಾಲಾ ಬಿಡುಗಡೆ ಪ್ರಮಾಣಪತ್ರ (SSLC)/ಶಾಲಾ ವರ್ಗಾವಣೆ ಪ್ರಮಾಣಪತ್ರ (TC)/ಎಸ್‌ಎಸ್‌ಸಿ ಪ್ರಮಾಣಪತ್ರ ಅಥವಾ ಬೋರ್ಡ್/ವಿಶ್ವವಿದ್ಯಾಲಯ ನೀಡಿದ ಹೆಸರು ಇರುವ ಅಂಕಪಟ್ಟಿಗಳನ್ನು ಸಹ ಸಲ್ಲಿಸಬಹುದು.


Click it and Unblock the Notifications