EPFO ಚಂದಾದಾರರಿಗೆ ಗುಡ್‌ನ್ಯೂಸ್‌! ಕೆವೈಸಿಗಾಗಿ ಸ್ವಯಂ ದೃಢೀಕರಣ ಸೌಲಭ್ಯವನ್ನ ಪರಿಚಯಿಸಲು EPFO ಸಜ್ಜು!

ನೀವು EPFO ಸದಸ್ಯರಾಗಿದ್ದರೆ ಈಗ ನೀವು ನಿಮ್ಮ KYC ಮಾಡಿಕೊಳ್ಳುವುದು ಬಹಳ ಸುಲಭ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಸದ್ಯದಲ್ಲೇ ಸ್ವಯಂ-ದೃಢೀಕರಣ ಸೌಲಭ್ಯವನ್ನು ಪರಿಚಯಿಸಲು ಸಜ್ಜಾಗಿದೆ. ಈ ವರ್ಷದ ಜೂನ್‌ನಲ್ಲಿ ಈ ಯೋಜನೆಯನ್ನ EPFO ತನ್ನ ಸದಸ್ಯರಿಗೆ ಪರಿಚಯಿಸಲಿದೆ.

ಸಹಜವಾಗಿ KYC ಪ್ರಕ್ರಿಯೆಯನ್ನ ಪೂರ್ಣಗೊಳಿಸುವಾಗ ಉದ್ಯೋಗದಾತ ತನ್ನ ಉದ್ಯೋಗಿಗಳ ವಿವರಗಳನ್ನ ಅನುಮೋದಿಸಬಾಕಾಗುತ್ತಿತ್ತು. ಅಲ್ಲದೆ ಆ ಪ್ರಕ್ರಿಯೆ ದೀರ್ಘವಾಗಿದ್ದು ಕೆಲವೊಮ್ಮೆ ಸಾಕಷ್ಟು ಅಡಚಣೆಗಳನ್ನ ಕೂಡ ಎದುರಿಸಬೇಕಾಗುತ್ತದೆ. ಹೀಗಾಗಿ EPFO ಸದಸ್ಯರಿಗೆ ಸಹಾಯಕವಾಗಲೆಂದು KYCಗಾಗಿ ಸ್ವಯಂ ದೃಢೀಕರಣ ಸೌಲಭ್ಯವನ್ನ ಪರಿಚಯಿಸಲಿದೆ.

EPFO: ಕೆವೈಸಿಗಾಗಿ ಸ್ವಯಂ ದೃಢೀಕರಣ ಸೌಲಭ್ಯ!

ಈ ಸೌಲಭ್ಯವನ್ನ ನೀಡುವುದರಿಂದ ಸದಸ್ಯರು KYC ಪ್ರಕ್ರಿಯೆಯನ್ನ ಸುಲಭವಾಗಿ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಉದ್ಯೋಗದಾತರಿಂದ ಅನುಮೋದನೆ ಪಡೆಯಲು ಉದ್ಯೋಗಿಗಳಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಕೆಲವೊಮ್ಮೆ ಸಂಸ್ಥೆ ಮುಚ್ಚಿದರೆ ಸದಸ್ಯ ಅನುಮೋದನೆ ಪಡೆಯಲು ಕೂಡ ಸಾಧ್ಯವಾಗುವುದಿಲ್ಲ. ಈ ಹೊಸ ಸೌಲಭ್ಯದ ಮೂಲಕ ಅಂತಹ ಎಲ್ಲಾ ತೊಂದರೆಗಳನ್ನ ತಡೆಯಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

KYC ವಿವರಗಳೊಂದಿಗೆ ಸಾರ್ವತ್ರಿಕ ಖಾತೆ ಸಂಖ್ಯೆಯನ್ನು (UAN) ಲಿಂಕ್ ಮಾಡುವ ಮೂಲಕ ಚಂದಾದಾರರ ಗುರುತನ್ನ ಪರಿಶೀಲನೆ ಮಾಡಲು ಸಹಾಯ ಮಾಡುತ್ತದೆ. EPFO ತನ್ನ ಸದಸ್ಯರಿಗಾಗಿ ಸಹಾಯವಾಗುವ ನಿಟ್ಟಿನಲ್ಲಿ ಹಲವು ಹೊಸ ಕ್ರಮಗಳನ್ನ ಈಗಾಗಲೇ ಪರಿಚಯ ಮಾಡಿದೆ. ಆ ಹೊಸ ಕ್ರಮಗಳಲ್ಲಿ ಇದು ಕೂಡ ಒಂದಾಗಿದೆ.'

ಇನ್ನು ಇತ್ತೀಚೆಗೆ ಗ್ರಾಹಕರ ಸ್ನೇಹಿ EPFO 3.0 ವನ್ನ ಬಿಡುಗಡೆ ಮಾಡಲು ಕೂಡ ಸಿದ್ಧತೆಯನ್ನ ಮಾಡಿಕೊಳ್ತಿದೆ. EPFO 3.0 ಸಾಕಷ್ಟು ಸೌಲಭ್ಯಗಳನ್ನ ಒಳಗೊಂಡಿದೆ. ಇಪಿಎಫ್‌ಒ 3.0 ಜಾರಿಗೊಳಿಸುವ ಮೂಲಕ ಇಪಿಎಫ್‌ ಪ್ರಕ್ರಿಯೆಗಳನ್ನ ಸುಗಮಗೊಳಿಸುವ ಉದ್ದೇಶವನ್ನ ಹೊಂದಿದ್ದು, ಹಲವಾರು ವೈಶಿಷ್ಟ್ಯಗಳನ್ನು ತರಲಿದೆ ಎಂವಿಯಾದು ಕೇಂದ್ರ ಕಾರ್ಮಿಕರ ಸಚಿವ ಮನ್ಸುಖ್‌ ಮಾಂಡವಿಯಾ ಅವರು ಸ್ಪಷ್ಟನೆ ನೀಡಿದ್ದಾರೆ. ಇನ್ನು ಈ ಇಪಿಎಫ್‌ಒ 3.0ನ ಹೊಸ ವೈಶಿಷ್ಟ್ಯವೆಂದರೆ ಇಸು ಬಳಕೆದಾರರ ಸ್ನೇಹಿ ವೆಬ್‌ಸೈಟ್‌ ಆಗಿದ್ದು, ಇಪಿಎಫ್‌ ಸದಸ್ಯರಿಗೆ ಈ ಕಾತೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಈ ವ್ಯವಸ್ಥೆ ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯಂತೆ ಇರಲಿದೆ. ಉದ್ಯೋಗಿಗಳು ಅವರು ಇಚ್ಛೆಯಂತೆ ತಮ್ಮ ನಿವೃತ್ತಿ ಹಣವನ್ನ ಬಳಸಲು ಅನುವು ಮಾಡಿ ಕೊಡುತ್ತದೆ. ಇನ್ನು ಈ ವ್ಯವಸ್ಥೆ ಆರಂಭವಾದ ನಂತರ ಉಧ್ಯೋಗಿಗಳು ತಮ್ಮ ಇಪಿಎಫ್‌ ಉಳಿತಾಯವನ್ನು ನೇರವಾಗಿ ಎಟಿಎಂಗಳ ಮೂಲಕ ಹಿಂಪಡೆಯಬಹುದು. ಈ ಮೂಲಕ ಉದ್ಯೋಗಿಗಳಿಗೆ ಅವರ ಆರ್ಥಿಕ ಪರಿಸ್ಥಿತಿಗಳಿಗೆ ಇದು ಸಹಾಯ ಮಾಡುತ್ತದೆ. ಹಾಗೆ ಇದರ ಮೊದಲ ಹಂತದ ವೆಬ್‌ಸೈಟ್‌ ಮತ್ತು ಸಿಸ್ಟಮ್‌ ಅಪ್‌ಗ್ರೇಡ್‌ಗಳು ಜನವರಿ 2025ರ ಅಂತ್ಯದ ವೇಳೆಗೆ ಮುಗಿಯುವ ಸಾಧ್ಯತೆ ಇದೆ.

ಇಪಿಎಫ್‌ಒ ಸದಸ್ಯರು ತಮ್ಮ ನಿವೃತ್ತಿ ಹಣವನ್ನ ಎಟಿಎಂಗಳ ಮೂಲಕ ಹಿಂಪಡೆಯಬಹುದು. ನೌಕರರ ಪಿಂಚಣಿ ಯೋಜನೆಲ್ಲಿ ಇಪಿಎಫ್‌ಒ ಸಾಕಷ್ಟು ಬದಲಾವಣೆಗಳನ್ನ ಮಾಡಲಿದೆ. ಉದ್ಯೋಗಿಗಳಿಗೆ ಸರಿಹೊಂದುವ ಕೊಡುಗೆಗಳನ್ನ ಇದು ನೀಡುತ್ತಿದೆ.

ಸಧ್ಯ ಈಗ ಇಪಿಎಫ್‌ಒ ಸದಸ್ಯರಿಗೆ 12% ಕೊಡುಗೆಯನ್ನ ನೀಡುತ್ತಿದೆ. ಆದರೆ ಕೆಲವು ಬದಲಾವಣೆಗಳೊಂದಿಗೆ ಉದ್ಯೋಗಿಗಳು ತಮ್ಮ ಆದಾಯದ ಆಧಾರದ ಮೇಲೆ ಹೆಚ್ಚು ಕಡಿಮೆ ನೀಡುವಂತಹ ಆಯ್ಕೆಯನ್ನ ಹೊಂದಬಹುದು.

EPFO ದೇಶದಾದ್ಯಂತ ಎಷ್ಡು ಗ್ರಾಹಕರನ್ನ ಹೊಂದಿದೆ?

2024 ರ ಹೊತ್ತಿಗೆ, ಭಾರತವು EPFO ​​(ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಚಂದಾದಾರರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದೆ, ಇದು ದೇಶದ ಬೆಳೆಯುತ್ತಿರುವ ಔಪಚಾರಿಕ ಉದ್ಯೋಗಿಗಳನ್ನು ಪ್ರತಿಬಿಂಬಿಸುತ್ತದೆ. ಸಂಘಟಿತ ವಲಯದ ಉದ್ಯೋಗಿಗಳಿಗೆ ನಿವೃತ್ತಿ ಉಳಿತಾಯವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ EPFO ​​ಪ್ರಸ್ತುತ 27 ಕೋಟಿ (270 ಮಿಲಿಯನ್) ಚಂದಾದಾರರನ್ನು ಹೊಂದಿದೆ.

ಕಾರ್ಮಿಕ ಮಾರುಕಟ್ಟೆಯ ಔಪಚಾರಿಕೀಕರಣ, ಡಿಜಿಟಲೀಕರಣದ ಪ್ರಯತ್ನಗಳು ಮತ್ತು ಭವಿಷ್ಯ ನಿಧಿ ಯೋಜನೆಗಳ ಪ್ರಯೋಜನಗಳ ಬಗ್ಗೆ ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಅರಿವು ಸೇರಿದಂತೆ ಹಲವಾರು ಅಂಶಗಳಿಂದ ಈ ಸಂಖ್ಯೆಯಲ್ಲಿನ ಹೆಚ್ಚಳವನ್ನು ನಡೆಸಲಾಗುತ್ತದೆ. EPFO ವೇತನದಾರರ ಉದ್ಯೋಗಿಗಳಿಗೆ ಪಿಂಚಣಿ ಮತ್ತು ಗ್ರಾಚ್ಯುಟಿಯಂತಹ ನಿವೃತ್ತಿ ಪ್ರಯೋಜನಗಳನ್ನು ಒದಗಿಸುತ್ತದೆ ಮತ್ತು ಅದರ ವ್ಯಾಪ್ತಿಯು ಈಗ ಸರ್ಕಾರಿ, ಖಾಸಗಿ ಮತ್ತು ಸಾರ್ವಜನಿಕ ಉದ್ಯಮಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಿಸಿದೆ.

ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ಧನ್ ಯೋಜನೆ ಮತ್ತು ಸಾರ್ವತ್ರಿಕ ಖಾತೆ ಸಂಖ್ಯೆ (UAN) ರಚನೆಯಂತಹ ಸರ್ಕಾರದ ಉಪಕ್ರಮಗಳು ವ್ಯವಸ್ಥೆಯಲ್ಲಿ ಕಾರ್ಮಿಕರ ಸೇರ್ಪಡೆಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿವೆ, ಇದರಿಂದಾಗಿ ಅವರ ನಿವೃತ್ತಿ ಉಳಿತಾಯವನ್ನು ಪ್ರವೇಶಿಸಲು ಮತ್ತು ನಿರ್ವಹಿಸಲು ಅವರಿಗೆ ಸುಲಭವಾಗಿದೆ.

ಭಾರತೀಯ ಆರ್ಥಿಕತೆಯು ಬೆಳೆಯುತ್ತಿರುವಂತೆ, ಹೊಸ ಉದ್ಯೋಗಾವಕಾಶಗಳ ಮೂಲಕ ಅಥವಾ ಕಾರ್ಮಿಕ ಕಾನೂನುಗಳ ಅನುಸರಣೆಯ ಮೂಲಕ ಹೆಚ್ಚು ಕಾರ್ಮಿಕರನ್ನು EPFO ​​ಪದರಕ್ಕೆ ತರಲಾಗುತ್ತಿದೆ. ಈ ಹೆಚ್ಚುತ್ತಿರುವ ಚಂದಾದಾರರ ಸಂಖ್ಯೆಯು ಭಾರತದ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಉದ್ಯೋಗಿಗಳ ಲಕ್ಷಾಂತರ ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುವ ಕಡೆಗೆ ಧನಾತ್ಮಕ ಹೆಜ್ಜೆಯನ್ನು ಸೂಚಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+