ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಅಪೆಕ್ಸ್ ನಿರ್ಧಾರ-ನಿರ್ಮಾಣ ಮಂಡಳಿಯು 2021-22ರ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗಳ ಮೇಲಿನ ಬಡ್ಡಿ ದರದ ಬಗ್ಗೆ ನಿರ್ಧಾರವನ್ನು ಮುಂದಿನ ತಿಂಗಳು ನಡೆಯುವ ಸಭೆಯಲ್ಲಿ ತೆಗೆದುಕೊಳ್ಳಲಿದೆ. ಈ ಬಗ್ಗೆ ಮಾರ್ಚ್‌ನಲ್ಲಿ 2021-22ರ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗಳ ಮೇಲಿನ ಬಡ್ಡಿ ದರವನ್ನು ಘೋಷಿಸಲಾಗುವುದು ಕಾರ್ಮಿಕ ಸಚಿವರು ಮಾಹಿತಿ ನೀಡಿದೆ.
2021-22 ರ ಇಪಿಎಫ್ ಬಡ್ಡಿ ದರದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ, "ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸಿಬಿಟಿ ಸಭೆಯು ಮಾರ್ಚ್‌ನಲ್ಲಿ ಗುವಾಹಟಿಯಲ್ಲಿ ನಡೆಯಲಿದೆ. ಹಣಕಾಸು ವರ್ಷದ ಅಂತ್ಯವಾಗಿರುವುದರಿಂದ ಅಲ್ಲಿ 2021-22 ರ ಬಡ್ಡಿದರದ ಪ್ರಸ್ತಾವನೆಯನ್ನು ಪಟ್ಟಿ ಮಾಡಲಾಗುವುದು," ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಪಿಟಿಐಗೆ ತಿಳಿಸಿದ್ದಾರೆ.
2020-21ರಲ್ಲಿ ನಿರ್ಧಾರ ಮಾಡಿದಂತೆ 2021-22ರ ಇಪಿಎಫ್ ಬಡ್ಡಿದರವನ್ನು ಕೂಡಾ ಶೇ 8.5ರಲ್ಲಿ ನಿಗದಿ ಮಾಡಲಾಗುತ್ತದೆಯೇ ಎಂದು ಮಾಧ್ಯಮಗಳು ಈ ಸಂದರ್ಭದಲ್ಲೇ ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಬಿಟಿಯ ಮುಖ್ಯಸ್ಥರೂ ಆಗಿರುವ, ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್, "ಆರ್ಥಿಕ ವರ್ಷದ ಆದಾಯದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು," ಎಂದು ಪ್ರತಿಕ್ರಿಯೆ ನೀಡಿದ್ದಾರೆ.

2020-21ರಲ್ಲಿ 8.5 ಶೇಕಡಾ ಬಡ್ಡಿ ದರ ನಿಗದಿ
2020-21ರ ಹಣಕಾಸು ವರ್ಷದಲ್ಲಿ ಇಪಿಎಫ್ ಖಾತೆಗಳ ಮೇಲೆ 8.5 ಶೇಕಡಾ ಬಡ್ಡಿ ದರವನ್ನು ನೀಡುವ ನಿರ್ಧಾರವನ್ನು ಮಾರ್ಚ್ 2021 ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ಕೈಗೊಂಡಿದ್ದಾರೆ. ಇದನ್ನು ಅಕ್ಟೋಬರ್ 2021 ರಲ್ಲಿ ಹಣಕಾಸು ಸಚಿವಾಲಯವು ಅನುಮೋದಿಸಿದೆ. ಬಳಿಕ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ 2020-21 ಹಣಕಾಸು ವರ್ಷದ ಶೇಕಡ 8.5 ಬಡ್ಡಿ ದರವನ್ನು ಇಪಿಎಫ್ ಚಂದಾದಾರರ ಖಾತೆಗೆ ಜಮಾ ಮಾಡಲು ನಿರ್ದೇಶನಗಳನ್ನು ನೀಡಿತು.
ಒಮ್ಮೆ ಸಿಬಿಟಿ ಒಂದು ಹಣಕಾಸಿನ ವರ್ಷಕ್ಕೆ ಇಪಿಎಫ್ ಖಾತೆಗಳ ಮೇಲಿನ ಬಡ್ಡಿ ದರವನ್ನು ನಿರ್ಧಾರ ಮಾಡಿದರೆ, ಅದನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಹಣಕಾಸು ಸಚಿವಾಲಯದ ಮೂಲಕ ಸರ್ಕಾರವು ಅನುಮೋದಿಸಿದ ನಂತರವೇ ಇಪಿಎಫ್‌ಒ ಬಡ್ಡಿದರವನ್ನು ಒದಗಿಸುತ್ತದೆ.
ಈ ಹಿಂದಿನ ಬಡ್ಡಿ ದರಗಳ ವಿವರ ಹೀಗಿದೆ
ಮಾರ್ಚ್ 2020 ರಲ್ಲಿ, ಇಪಿಎಫ್‌ಒ 2019-20 ಹಣಕಾಸು ವರ್ಷದ ಭವಿಷ್ಯ ನಿಧಿ ಖಾತೆಗಳ ಮೇಲಿನ ಮೇಲಿನ ಬಡ್ಡಿ ದರವನ್ನು 8.5 ಪ್ರತಿಶತಕ್ಕೆ ಇಳಿಸಿದೆ. ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2018-19ರ ಹಣಕಾಸು ವರ್ಷದಲ್ಲಿ 8.65 ಪ್ರತಿಶತ ಎಂದು ನಿಗದಿ ಮಾಡಲಾಗಿತ್ತು. 2019-20ರ ಹಣಕಾಸು ವರ್ಷದಲ್ಲಿ ಇಪಿಎಫ್ ಖಾತೆಗಳ ಮೇಲಿನ ಬಡ್ಡಿ ದರವನ್ನು ಏಳು ವರ್ಷಗಳ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಕೆ ಮಾಡಲಾಗಿದೆ. 2019-20ಕ್ಕೆ ಒದಗಿಸಲಾದ ಇಪಿಎಫ್ ಬಡ್ಡಿ ದರವು 2012-13ರ ನಂತರ ಅತ್ಯಂತ ಕಡಿಮೆಯಾಗಿದ್ದು, ಅದನ್ನು ಶೇ.8.5ಕ್ಕೆ ಇಳಿಸಲಾಗಿದೆ. ಇಪಿಎಫ್‌ಒ ತನ್ನ ಚಂದಾದಾರರಿಗೆ 2016-17ರಲ್ಲಿ ಶೇ 8.65 ಮತ್ತು 2017-18ರಲ್ಲಿ ಶೇ 8.55 ಬಡ್ಡಿ ದರವನ್ನು ಒದಗಿಸಿದೆ. 2015-16ರಲ್ಲಿ ಬಡ್ಡಿ ದರವು 8.8 ಶೇಕಡವಾಗಿದ್ದು, ಸ್ವಲ್ಪ ಹೆಚ್ಚಿತ್ತು. ಇನ್ನು ಇಪಿಎಫ್‌ಒ ಇದು 2013-14 ಮತ್ತು 2014-15 ರಲ್ಲಿ 8.75 ರಷ್ಟು ಬಡ್ಡಿದರವನ್ನು ನೀಡಿತು. 2012-13 ಕ್ಕೆ 8.5 ಶೇಕಡ ಬಡ್ಡಿ ದರ ನೀಡಲಾಗಿದೆ. 2011-12ರಲ್ಲಿ ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರ ಶೇ.8.25ರಷ್ಟಿತ್ತು.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications