ಬೆಂಗಳೂರು, ಆಗಸ್ಟ್ 19: ಸಾಲ ಬೇಕೆಂದು ನೀವು ಯಾವುದೇ ಬ್ಯಾಂಕ್ ಬಾಗಿಲು ಬಡಿದರೂ ಅವರು ಮೊದಲು ಕೇಳುವುದು ನಿಮ್ಮ ಕ್ರೆಡಿಟ್ ಸ್ಕೋರ್? ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಷ್ಟು ನಿಮಗೆ ಬೇಗ ಸಾಲ ಸಿಗುತ್ತದೆ. ಅಲ್ಲದೇ ನಿಮಗೆ ಕಡಿಮೆ ಬಡ್ಡಿ ದರದಲ್ಲಿಯೂ ಸಾಲ ಸಿಗುತ್ತದೆ. ಹಾಗಿದ್ದರೆ ಈ ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳಲು ಏನು ಮಾಡಬೇಕು? ನಮ್ಮ ಹಣಕಾಸಿನ ಶಿಸ್ತು ಹೇಗಿರಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು.
ಉತ್ತಮ ಸ್ಕೋರ್ ಇದ್ದರೆ ನಿಮಗೆ ಸುಲಭವಾಗಿ ಸಾಲ ಸಿಗುತ್ತದೆ. ಅದರಲ್ಲೂ ತುರ್ತಾಗಿ ನಿಮಗೆ ಪರ್ಸನಲ್ ಲೋನ್ ಬೇಕಾಗಿದ್ದರೆ ಕ್ರೆಡಿಟ್ ಸ್ಕೋರ್ ಅದಕ್ಕೆ ಆಧಾರವಾಗಿರುತ್ತದೆ. ಸಾಲದ ಅವಶ್ಯಕತೆ ಈಗ ಇಲ್ಲ ಎಂದಾದರೂ ಭವಿಷ್ಯದ ದೃಷ್ಟಿಯಿಂದ ಹಣಕಾಸು ಆರೋಗ್ಯದ ಸಂಕೇತವಾಗಿರುವ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುವುದು ಅವಶ್ಯಕವಾಗಿದೆ.

ಕ್ರೆಡಿಟ್ ಸ್ಕೋರ್ ಎಂದರೇನು?
ಮೊದಲಿಗೆ, ಕ್ರೆಡಿಟ್ ಸ್ಕೋರ್ ಎಂದರೇನು? ಕ್ರೆಡಿಟ್ ರಿಪೋರ್ಟ್ ಎಂದರೇನು? ಎನ್ನುವುದನ್ನು ತಿಳಿದುಕೊಳ್ಳೋಣ. ಕ್ರೆಡಿಟ್ ಸ್ಕೋರ್ ಎನ್ನುವುದು ನಿಮ್ಮ ಕ್ರೆಡಿಟ್ ವರ್ತಿನೆಸ್ ತೋರಿಸುವ ಮೂರು ಅಂಕಿಗಳ ಸಂಖ್ಯೆ. ಕ್ರೆಡಿಟ್ ವರ್ತಿನೆಸ್ ಅಂದರೆ ಸಾಲ ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯ. ಮತ್ತೊಂದು ಕಡೆ ಕ್ರೆಡಿಟ್ ರಿಪೋರ್ಟ್ ಎನ್ನುವುದು ನಿಮ್ಮ ಹಣಕಾಸಿನ ಅಂಕಿಅಂಶಗಳ ವಿಸ್ತೃತ ಸಾರಾಂಶ. ಇದು ನಿಮ್ಮ ಕ್ರೆಡಿಟ್ ಹಿಸ್ಟರಿ, ಬಾಕಿ ಇರುವ ಸಾಲ, ಕ್ರೆಡಿಟ್ ಕಾರ್ಡ್ ಬಳಕೆ ಮತ್ತು ಸಾಲ ಮರುಪಾವತಿಯ ಟ್ರ್ಯಾಕ್ ರೆಕಾರ್ಡ್ ಮೊದಲಾವುಗಳ ಬಗ್ಗೆ ತಿಳಿಸುತ್ತದೆ. ನಿಮ್ಮ ಕ್ರೆಡಿಟ್ ರಿಪೋರ್ಟ್ ಆಧರಿಸಿ ಕ್ರೆಡಿಟ್ ಬ್ಯೂರೋಗಳು ನಿಮ್ಮ ಕ್ರೆಡಿಟ್ ಸ್ಕೋರ್ ಜನರೇಟ್ ಮಾಡುತ್ತದೆ.
ನೀವು ಸಾಲ ಮರುಪಾವತಿ, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಇತ್ಯಾದಿಯನ್ನು ಹೇಗೆ ಮಾಡುತ್ತಾ ಬಂದಿದ್ದೀರಿ? ನಿಮ್ಮ ಸಾಲ ಕಾಲಕಾಲಕ್ಕೆ ಸರಿಯಾಗಿ ಮರುಪಾವತಿ ಆಗುತ್ತಾ ಇದೆಯಾ? ಈ ಎಲ್ಲಾಂಶಗಳ ಕನ್ನಡಿಯೇ ಕ್ರೆಡಿಟ್ ಸ್ಕೋರ್. 300 ರಿಂದ 850 ಅಂಕಗಳ ಶ್ರೇಣಿಯಲ್ಲಿ ಸ್ಕೋರ್ ಇರುತ್ತದೆ. 650ಕ್ಕಿಂತ ಮೇಲ್ಪಟ್ಟ ಸ್ಕೋರ್ ಅನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ.
ಟ್ರಾನ್ಸ್ ಯೂನಿಯನ್ ಸಿಬಿಲ್, ಈಕ್ವಿಫ್ಯಾಕ್ಸ್, ಎಕ್ಸ್‌ಪಿರಿಯನ್ ಮೊದಲಾದ ವಿವಿಧ ಕ್ರೆಡಿಟ್ ಬ್ಯೂರೋಗಳು ಕ್ರೆಡಿಟ್ ಸ್ಕೋರ್ ಗಳನ್ನ ನೀಡುತ್ತದೆ. ಟ್ರಾನ್ಸ್ ಯೂನಿಯಲ್ ಸಿಬಿಲ್ ಕೊಡೋ ಕ್ರೆಡಿಟ್ ಸ್ಕೋರ್ ಗೆ ವ್ಯಾಪಕ ಮನ್ನಣೆ ಇದೆ. ಈಕ್ವಿಫ್ಯಾಕ್ಸ್ ಮತ್ತು ಎಕ್ಸ್ಪೆರಿಯನ್ ನಲ್ಲಿ ಕ್ರೆಡಿಟ್ ಸ್ಕೋರ್ 300 ರಿಂದ 850ರ ನಡುವೆ ಇರಲಿದೆ. ಕೆಲವು ಬ್ಯಾಂಕ್ ಗಳು 700 ಕ್ಕಿಂತ ಹೆಚ್ಚಿದ್ದರೆ, ಆ ಸಿಬಿಲ್ ಸ್ಕೋರ್ ಅನ್ನ ಉತ್ತಮ ಅಂತಾ ಪರಿಗಣಿಸುವುದು ಇದೆ.
ಕ್ರೆಡಿಟ್ ಸ್ಕೋರ್ ಹೆಚ್ಚಿಸುವ ಟಿಪ್ಸ್!
ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಳಸದೇ ಇದ್ದವರಿಗೆ ಕ್ರೆಡಿಟ್ ಸ್ಕೋರ್ ಇರುವುದಿಲ್ಲ. ಅವರ ಸಿಬಿಲ್ ಸ್ಕೋರ್ ಮೈನಸ್ 1 ಎಂದು ತೋರಿಸಬಹುದು. ಇಂಥವರು ಕ್ರೆಡಿಟ್ ಸ್ಕೋರ್ ಪಡೆಯುವುದು ಹೇಗೆ ಎನ್ನುವ ಟಿಪ್ಸ್ ಸಹ ನಿಮಗೆ ನೀಡುತ್ತೇವೆ.
ಸಣ್ಣ ಪ್ರಮಾಣದ ಸಾಲ
ನೀವು ಕ್ರೆಡಿಟ್ ಸ್ಕೋರ್ ಪಡೆಯಲು ಸಾಲ ಮಾಡಿ ಅದನ್ನು ತೀರಿಸುವುದು ಅವಶ್ಯಕ. ಸಣ್ಣ ಮೊತ್ತದ ಸಾಲ ಮಾಡಿ ಅದನ್ನು ಸಕಾಲಕ್ಕೆ ತೀರಿಸಿದ್ದೀರಿ ಎಂದಾದರೆ ನಿಮ್ಮ ಮಾರ್ಕ್ಸ್ ಏರುತ್ತದೆ. ಉದಾಹರಣೆಗೆ, ಐವತ್ತು ಸಾವಿರ ರೂ ಸಾಲ ಪಡೆದು, ಮಾಸಿಕ ಇಎಂಐ ಅನ್ನು ತಪ್ಪದೇ ಕಟ್ಟಿರಿ ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತಾ ಹೋಗುತ್ತದೆ. ಅದು ಮುಗಿದ ಬಳಿಕ ಮತ್ತೆ ಸಣ್ಣದಾದ ಹೊಸ ಸಾಲ ಮಾಡಬಹುದು. ಇವೆಲ್ಲವೂ ಕ್ರೆಡಿಟ್ ಸ್ಕೋರ್ ಹೆಚ್ಚಳಕ್ಕೆ ಸಹಾಯವಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಳಕೆ
ನೀವು ಕ್ರೆಡಿಟ್ ಕಾರ್ಡ್ ಪಡೆದು ಅದನ್ನು ಸ್ವಲ್ಪ ಸ್ವಲ್ಪವೇ ಬಳಸಿರಿ. ಅದರ ಬಿಲ್ ಅನ್ನು ಸಕಾಲಕ್ಕೆ ಪಾವತಿಸುವುದನ್ನು ಮರೆಯಬೇಡಿ. ನಿಮ್ಮ ಕಾರ್ಡ್ನ ಕ್ರೆಡಿಟ್ ಮಿತಿಯ ಶೇ. 40ಕ್ಕಿಂತ ಕಡಿಮೆ ಮೊತ್ತವನ್ನು ಮಾತ್ರ ವ್ಯಯಿಸಿ. ಕ್ರೆಡಿಟ್ ಲಿಮಿಟ್ ಇದೆ ಎನ್ನುವ ಕಾರಣಕ್ಕೆ ಹಣ ಖರ್ಚು ಮಾಡಿಕೊಂಡರೆಡ ನೆಗೆಟಿವ್ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗೇನಾದರೂ ಇದ್ದಲ್ಲಿ ಇನ್ನೊಂದು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಿ. ಒಂದೇ ಕಾರ್ಡ್ ನ ಲಿಮಿಟ್ ಮೀರುವುದು ಉಚಿತವಲ್ಲ.
ನೀವು ಬ್ಯಾಂಕ್ ನಲ್ಲಿ ಸಾಲಕ್ಕೆ ಅಥವಾ ಕ್ರೆಡಿಟ್ ಕಾರ್ಡ್ ಗೆ ಅಪ್ಲೈ ಮಾಡಬೇಕಾದರೆ, ಕ್ರೆಡಿಟ್ ಬ್ಯೂರೋಗಳು ಕೊಡುವ ಕ್ರೆಡಿಟ್ ರಿಪೋರ್ಟ್ ಮತ್ತು ಕ್ರೆಡಿಟ್ ಸ್ಕೋರ್ ಗಳನ್ನ ಬ್ಯಾಂಕ್ ಗಳಲ್ಲಿ ಕೇಳುತ್ತಾರೆ. ನೀವು ಎಷ್ಟು ಸಾಲ ಪಡೆದಿದ್ದೀರಾ ಅಥವಾ ನಿಮ್ಮ ಬಳಿ ಎಷ್ಟು ಕ್ರೆಡಿಟ್ ಕಾರ್ಡ್ ಇದೆ, ನೀವು ಸಮಯಕ್ಕೆ ಸರಿಯಾಗಿ ಪಾವತಿಗಳನ್ನು ಮಾಡಿದ್ದೀರಾ ಅಥವಾ ಇಲ್ಲವಾ ಎನ್ನುವುದನ್ನು ಬ್ಯಾಂಕ್ ಗಳು ನಿಮ್ಮ ಕ್ರೆಡಿಟ್ ರಿಪೋರ್ಟ್‌ನಿಂದ ತಿಳಿದುಕೊಳ್ಳುತ್ತದೆ. ಒಂದು ವೇಳೆ, ಹಳೆ ಸಾಲದ ಕಂತುಗಳ ಪಾವತಿಯಲ್ಲಿ ಯಾವುದೇ ವಿಳಂಬ ಆಗಿದ್ದರೆ ಅಥವಾ ಬಾಕಿ ಮೊತ್ತ ಸೆಟಲ್ ಆಗಿದ್ದರೆ ಈ ಲೋಪಗಳನ್ನೆಲ್ಲಾ ನಿಮ್ಮ ರಿಪೋರ್ಟ್ ನಲ್ಲಿ ದೀರ್ಘಾವಧಿಯಲ್ಲಿ ರೆಕಾರ್ಡ್ ಆಗಿರುತ್ತದೆ.
ಸಾಮಾನ್ಯವಾಗಿ, ಇಂತಹ ಲೋಪದೋಷಗಳು ನಿಮ್ಮ ಕ್ರೆಡಿಟ್ ರಿಪೋರ್ಟ್ ನಲ್ಲಿ ಏಳು ವರ್ಷಗಳವರೆಗೆ ಇರುತ್ತದೆ. ನೀವು ಎಷ್ಟು ದಿನ ವಿಳಂಬ ಮಾಡಿದೀರಾ ಅಥವಾ ಯಾವ ರೀತಿಯ ದೋಷ ಆಗಿದೆ ಎನ್ನುವುದನ್ನು ಆಧರಿಸಿ ಇದು ನಿಮ್ಮ ರಿಪೋರ್ಟ್ ಗಳಲ್ಲಿ ವರದಿಯಾಗುವ ಅವಧಿ ಹೆಷ್ಚೂ ಆಗಬಹುದು ಅಥವಾ ಕಡಿಮೆ ಕೂಡ ಆಗಬಹುದು.
ಉದಾಹರಣೆಗೆ, ನೀವು ಪಾವತಿಯನ್ನ ಮಧ್ಯರಾತ್ರಿ ಮಾಡಿದರೆ ನೀವು ನಿಗದಿತ ದಿನಾಂಕದೊಳಗೆ ಪಾವತಿ ಮಾಡದೇ ಹೋದರೆ ಆಗ ಆ ಮಾಹಿತಿ ಸಿಬಿಲ್ ಮತ್ತು ಇತರ ಕ್ರೆಡಿಟ್ ರಿಪೋರ್ಟ್ ಗಳಲ್ಲಿ 7 ವರ್ಷಗಳವರೆಗೆ ಇರುತ್ತದೆ. ಕ್ರೆಡಿಟ್ ಬ್ಯೂರೋ ಈಕ್ವಿಫ್ಯಾಕ್ಸ್ ಹೇಳುವ ಪ್ರಕಾರ, ಹಳೆ ಸಾಲ ತೀರಿಸಿದರೂ ಕೂಡ, ಈ ವಿಳಂಬ ಪಾವತಿ ವಿವರಗಳು ರಿಪೋರ್ಟ್ ನಲ್ಲಿ ಇನ್ನೂ ಇರುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?



Click it and Unblock the Notifications