ನವದೆಹಲಿ, ಆಗಸ್ಟ್ 11: ಆಸ್ತಿ ಕೊಳ್ಳುವುದು ಪ್ರತಿಯೊಬ್ಬರ ಜೀವನದ ದೊಡ್ಡ ಕನಸು. ಅದರೆ ಆಸ್ತಿ ಕೊಳ್ಳುವ ಮುನ್ನೆ ನೂರಾರು ಸಂಗತಿಗಳನ್ನು ಗಮನಿಸಬೇಕು. ಅದರಲ್ಲಿ ಕೆಲವೊಂದಿಷ್ಟು ಸಂಗತಿಗಳನ್ನು ನಿಮ್ಮ ಮುಂದೆ ಇಡುವ ಕೆಲಸ ಮಾಡುತ್ತೇವೆ.
ಲಕ್ಷಾಂತರ ಜನರು ಸೈಟ್ ಕೊಂಡುಕೊಂಡಿರುತ್ತಾರೆ. ಆದರೆ ಅದೆ ಸೈಟ್ ಗೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಂಡು ಬಂದ ಇನ್ನೊಬ್ಬ ವ್ಯಕ್ತಿ ಕೋರ್ಟ್ ಮೊರೆ ಹೋಗುತ್ತಾರೆ. ಇಲ್ಲಿ ಕಾನೂನು ಹೋರಾಟ ಮಾಡಬೇಕಾಗುತ್ತದೆ. ದಾಖಲಾತಿಗಳನ್ನು ಪರಿಶೀಲನೆ ಮಾಡುವುದು ಎಷ್ಟು ಮುಖ್ಯ ಎನ್ನುವುದು ನಿಮಗೆ ಈ ಒಂದು ಸಣ್ಣ ಉದಾಹರಣೆಯ ಮೂಲಕ ಗೊತ್ತಾಗುತ್ತದೆ. ಲಕ್ಷಾಂತರ ಜನರು ಗೊತ್ತಿದ್ದೋ-ಗೊತ್ತಿಲ್ಲದೆಯೋ ಇಂತಹ ತೊಂದರೆಗಳಲ್ಲಿ ಸಿಲುಕಿಬಿಡ್ತಾರೆ. ಇದೇ ಕಾರಣಕ್ಕಾಗಿ, ಸ್ವತ್ತುಗಳನ್ನು ಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಸ್ವತ್ತಿನ ಎಲ್ಲಾ ಕಾಗದಪತ್ರಗಳನ್ನು ಸರಿಯಾದ ರೀತಿಯಲ್ಲಿ ಗಮನವಿಟ್ಟು ಪರಿಶೀಲಿಸಬೇಕು.

ಭಾರತದಲ್ಲಿ ಸುಮಾರು 25 ಲಕ್ಷ ಹೆಕ್ಟೇರುಗಳಷ್ಟು ಭೂಮಿ ಈ ವಿವಾದಗಳಿಗೆ ಸಂಬಂಧಿಸಿದ್ದಾಗಿವೆ ಎಂದು ವರದಿಗಳು ಹೇಳುತ್ತವೆ. ದೇಶದ ಎಲ್ಲಾ ನಾಗರಿಕ ನ್ಯಾಯಾಂಗ ಪ್ರಕರಣಗಳಲ್ಲಿ ಸುಮಾರು ಶೇ. 66ರಷ್ಟು ಭೂಮಿ ಅಥವಾ ಸ್ವತ್ತುಗಳಿಗೆ ಸಂಬಂಧಿಸಿವೆ. ಸುಪ್ರೀಂ ಕೋರ್ಟ್ ನಲ್ಲಿಯೂ ಅನೇಕ ಪ್ರಕರಣಗಳಿವೆ.
ಮೂಲ ದಸ್ತಾವೇಜು (ಟೈಟಲ್ ಡೀಡ್) ಅಥವಾ ನೋಂದಣಿ ದಾಖಲೆ:
ನೀವು ಮನೆ ಕೊಂಡರೂ ಅಥವಾ ಭೂಮಿ ಕೊಂಡರೂ, ಅದರ ಮೂಲ ದಾಖಲೆಪತ್ರಗಳನ್ನು ಗಂಭೀರವಾಗಿ ಪರಿಶೀಲಿಸಲೇಬೇಕು. ಸ್ವತ್ತಿನ ಈಗಿನ ಮಾಲಿಕರು ಯಾರು ಎಂಬುವುದು ಇದರಿಂದ ನಿಮಗೆ ಗೊತ್ತಾಗುತ್ತದೆ. ಇದಲ್ಲದೆ, ಎನ್ಕಂಬ್ರೆನ್ಸ್ ಪ್ರಮಾಣಪತ್ರ ಮತ್ತು ಹುಡುಕಾಟದ ಪ್ರಮಾಣಪತ್ರಗಳು ಸ್ವತ್ತಿನ ಈ ಹಿಂದಿನ ಎಲ್ಲಾ ಮಾಲಿಕರ ವಿವರಗಳನ್ನೂ ಒದಗಿಸುತ್ತವೆ.
ಲೇ ಔಟ್ ಪ್ಲಾನ್:
ಭೂಮಿಯ ವಿಷಯಕ್ಕೆ ಬಂದ್ರೆ, ಸ್ಥಳ ಪರಿಶೀಲನೆ ಮಾಡಿಸಿ ಖಚಿತಪಡಿಸಿಕೊಳ್ಳಿ. ಒಂದು ವೇಳೆ, ಭೂಮಿಯು ಯಾವುದಾದರೂ ಪ್ರಾಧಿಕಾರ ಅಥವಾ ನೋಂದಾಯಿತ ಸಂಘದ ಸ್ವತ್ತಾಗಿದ್ದರೆ, ಅದರ ಲೇ-ಔಟ್ ಪ್ಲಾನ್ ಪರಿಶೀಲಿಸಿ. ಇದೇ ರೀತಿ, ನೀವೇನಾದ್ರೂ, ಒಂದು ಫ್ಲಾಟ್ ಕೊಳ್ಳುತ್ತಿದ್ದರೆ, ಅದನ್ನು ನಿರ್ಮಿಸುತ್ತಿರುವವರು ಅದಕ್ಕೆ ಬೇಕಾದ ಎಲ್ಲಾ ಅನುಮತಿಗಳನ್ನೂ ಹಾಗೂ ನಿರಾಕ್ಷೇಪಣಾ ಪತ್ರಗಳನ್ನೂ (ಎನ್ಓಸಿ) ಪಡೆದುಕೊಂಡಿದ್ದಾರೆಯೇ ಎಂದು ಪರಿಶೀಲಿಸಿ. ಈ ಅನುಮತಿ ಪತ್ರಗಳಲ್ಲಿ ಅನುಮೋದಿತ ಬಿಲ್ಡಿಂಗ್ ಪ್ಲಾನ್, ಕಂಪ್ಲೀಷನ್ ಸರ್ಟಿಫಿಕೇಟ್, ಮತ್ತು ಆಕ್ಯುಪೆನ್ಸಿ ಸರ್ಟಿಫಿಕೇಟ್ಗಳು ಸೇರಿವೆ. ನಿರ್ಮಾಣ ಯೋಜನೆಯು ಭೂವ್ಯವಹಾರಗಳ ನಿಯಂತ್ರಣ ಪ್ರಾಧಿಕಾರದಲ್ಲಿ (RERA-ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ) ನೋಂದಾಯಿಸಲ್ಪಟ್ಟಿದೆಯೇ ಎಂಬುದನ್ನೂ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ.
ಸ್ವತ್ತಿನ ಮ್ಯುಟೇಷನ್ :
ಯಾವುದೇ ಒಂದು ಸ್ವತ್ತು ಮಾರಾಟವಾದಾಗ ಅಥವಾ ಬೇರೊಬ್ಬರ ಹೆಸರಿಗೆ ವರ್ಗಾವಣೆಗೊಂಡಾಗ, ಫೈಲಿಂಗ್ ಅಂಡ್ರಿಜೆಕ್ಷನ್ ಅಥವಾ ಮ್ಯುಟೇಷನ್ ಪ್ರಕ್ರಿಯೆಗೆ ಒಳಗಾಗುತ್ತದೆ. ಅಂದರೆ, ಸ್ವತ್ತಿನ ಸರಕಾರಿ ದಾಖಲೆಪತ್ರಗಳಲ್ಲಿ (ಪುರಸಭೆ/ತಾಲ್ಲೂಕು ಕಚೇರಿ/ಅಭಿವೃದ್ಧಿ ಪ್ರಾಧಿಕಾರ) ಅದರ ಹಳೆಯ ಮಾಲಿಕನ ಹೆಸರನ್ನು ತೆಗೆದುಹಾಕಿ ಹೊಸ ಮಾಲಿಕನ ಹೆಸರನ್ನು ಸೇರಿಸುವುದೇ ಈ ಪ್ರಕ್ರಿಯೆಯಾಗಿದೆ. ಇಂತಹ ಸ್ಥಿತಿಯಲ್ಲಿ, ಸರಕಾರಿ ದಾಖಲೆಪತ್ರಗಳಲ್ಲಿ ಮಾಲಿಕನ ಹೆಸರನ್ನು ಬರೆಯಲಾಗಿರುತ್ತದೆ. ಆದರೆ, ಒಂದು ವೇಳೆ, ಸ್ವತ್ತನ್ನು ಗುತ್ತಿಗೆ ಅಥವಾ ಬಾಡಿಗೆ ನೀಡಿದ್ದರೆ, ಇದು ಪ್ರಾಧಿಕಾರದ ಗಮನಕ್ಕೆ ಬಂದಿರಲ್ಲ. ಸ್ವತ್ತನ್ನು ಗುತ್ತಿಗೆಗೆ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬದನ್ನೂ ನೀವು ಖಚಿತಪಡಿಸಿಕೊಳ್ಳಬೇಕು.
ಸಾಲದಿಂದ ಮುಕ್ತವಾಗಿದೆಯೆ?:
ಸಾಲ ಮತ್ತಿತರ ಅಡಚಣೆಗಳಿಂದ ನೀವು ಕೊಳ್ಳುತ್ತಿರುವ ಸ್ವತ್ತು ಮುಕ್ತವಾಗಿರಬೇಕು ಆಸ್ತಿಯೊಂದನ್ನು ಕೊಳ್ಳುವ ಮೊದಲು ಅದರ ಮೇಲೆ ಯಾವುದಾದರೂ ಸಾಲಗಳಿವೆಯೇ? ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಹಾಗೇನಾದರೂ ಸಾಲವಿದ್ದರೆ, ನೀವು ಅದರ ಮಾಲಿಕನಿಗೆ ಆ ಸಾಲವನ್ನು ತೀರಿಸಿಬಿಡಲು ಹೇಳಬೇಕು. ಆಸ್ತಿಯು ಯಾವುದಾದರೂ ಕಾನೂನು ಪ್ರಕರಣಗಳಲ್ಲಿ ಸಿಕ್ಕಿಕೊಂಡಿದೆಯೇ ಅಥವಾ ಮಾಲಿಕನು ಈ ಮೊದಲೆ ಬೇರೊಬ್ಬರೊಂದಿಗೆ ಇನ್ನಾವುದೇ ರೀತಿಯ ಒಪ್ಪಂದ ಮಾಡಿಕೊಂಡಿದ್ದಾನೆಯೇ? ಎಂಬುದನ್ನೂ ನೀವು ಪರಿಶೀಲಿಸಬೇಕು. ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೀವು ಇದನ್ನು ಪರಿಶೀಲಿಸಬಹುದು.
ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಬಾಕಿ ಇದೆಯಾ?:
ಹಳೆಯ ಮನೆಯೊಂದನ್ನು ಕೊಳ್ಳುವಾಗ ಮನೆಯ ಮಾಲಿಕನಿಂದ ಆಸ್ತಿ ತೆರಿಗೆ ಪಾವತಿಸಿದ ರಸೀದಿಗಳನ್ನು ಪಡೆದುಕೊಳ್ಳಿ. ಅದರಲ್ಲಿ ಬಾಕಿ ಏನಾದರೂ ಇದೆಯೇ ಎಂದು ಪರಿಶೀಲಿಸಿ. ಇದೇ ಮಾಹಿತಿಯನ್ನು ನೀವು ಸ್ಥಳೀಯ ಸರಕಾರಿ ಕಚೇರಿಯಿಂದಲೂ (ಪುರಸಭೆ/ನಗರಸಭೆ/ಅಭಿವೃದ್ಧಿ ಪ್ರಾಧಿಕಾರ) ಪಡೆದುಕೊಳ್ಳಬಹುದು. ಹಾಗೆಯೇ, ಮನೆಯ ವಿದ್ಯುತ್ಮ ಮತ್ತು ನೀರಿನ ಶುಲ್ಕಗಳನ್ನೂ ಬಾಕಿ ಇಲ್ಲದಂತೆ ಪಾವತಿಸಿದ್ದಾರೆಯೇ ಎಂಬುದನ್ನೂ ಪರಿಶೀಲಿಸಿ. ಇಲ್ಲದಿದ್ದರೆ, ನೀವೇ ಅದನ್ನು ಕಟ್ಟಬೇಕಾಗಬಹುದು.
ಒಂದು ಆಸ್ತಿಯನ್ನು ಅದು ಫ್ಲಾಟ್ ಆಗಿರಬಹುದು, ಮನೆ ಆಗಿರಬಹುದು ಇಲ್ಲವೆ ನಿವೇಶನ ಆಗಿರಬಹುದು ಅದನ್ನು ಖರೀದಿ ಮಾಡುವ ಮುನ್ನ ಈ ಬಗೆಯ ವಿಚಾರಗಳನ್ನು ಗಮನಿಸಿಕೊಂಡು ಹೆಜ್ಜೆ ಇಡಬೇಕಾಗುತ್ತದೆ. ಇಲ್ಲವಾದರೆ ಮುಂದೆ ಕಾನೂನು ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications