ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪಾವತಿಗಾಗಿ ಬಳಸುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣೆ ವ್ಯವಸ್ಥೆಯೇ ಫಾಸ್ಟ್ಯಾಗ್ (FASTag) ಆಗಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ವಹಣೆ ಮಾಡುತ್ತದೆ. ಇದೀಗ ಫಾಸ್ಟ್ಯಾಗ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಶುಲ್ಕವನ್ನು ಹೆಚ್ಚಿಸಿದೆ (Annual Pass Fee Hike). ಹೊಸ ಹಣಕಾಸು ವರ್ಷ 2026-27ರಲ್ಲಿ ಜಾರಿಗೆ ಬರುವಂತೆ ಹೊಸ ಆದೇಶ ಹೊರಡಿಸಲಾಗಿದ್ದು, ಈ ಪರಿಷ್ಕೃತ ದರ ಏಪ್ರಿಲ್ 1, 2026 ರಿಂದ ಅನ್ವಯವಾಗಲಿದೆ.

ಹೌದು, ಇದೀಗ ಎನ್‌ಎಚ್‌ಎಐ ಫಾಸ್ಟ್ಯಾಗ್ ವಾರ್ಷಿಕ್ ಪಾಸ್ ದರವನ್ನು ಹೆಚ್ಚಳ ಮಾಡಿದೆ. ಪ್ರಸ್ತುತ ವಾರ್ಷಿಕವಾಗಿ 3,000 ರೂ. ಪಾವತಿಸುತ್ತಿದ್ದು, ಏಪ್ರಿಲ್ 1, 2026 ರಿಂದ 3,075 ರೂ. ಪಾವತಿಸಬೇಕಾಗಿದೆ. ಈ ಮೂಲಕ ಚಾಲಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ನಾನ್-ಕಮರ್ಷಿಯಲ್ ವಾಹನಗಳಿಗೆ ವಿಶೇಷ ಸೌಲಭ್ಯ
ಫಾಸ್ಟ್ಯಾಗ್ ಹೊಂದಿದ್ದರೆ, ಖಾಸಗಿ ವಾಹನಗಳ ಮಾಲೀಕರಿಗೆ (ನಾನ್-ಕಮರ್ಷಿಯಲ್ ವಾಹನಗಳು) ವಿಶೇಷ ಸೌಲಭ್ಯವನ್ನು ಪಡೆಯುತ್ತಾರೆ. ಅಂದರೆ ನಾನ್-ಕಮರ್ಷಿಯಲ್ ವಾಹನ ಮಾಲೀಕರು ವಾರ್ಷಿಕ ಫಾಸ್ಟ್ಯಾಗ್ ಪಾಸ್ ಖರೀದಿಸಿದರೆ ಒಂದು ವರ್ಷ ಅಥವಾ 200 ಟೋಲ್ ಕ್ರಾಸಿಂಗ್‌ಗಳವರೆಗೆ ಪ್ರತ್ಯೇಕ ಟೋಲ್ ಪಾವತಿಸುವ ಅಗತ್ಯವಿರುವುದಿಲ್ಲ. ಈ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣ ಮಾಡಬಹುದು. ಇದು ಆಗಾಗ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವವರಿಗೆ ಅನುಕೂಲವಾಗಲಿದೆ. ಅಲ್ಲದೇ ಈಗಾಗಲೇ ಈ ಪಾಸ್ ಅನ್ನು ಸುಮಾರು 56 ಲಕ್ಷಕ್ಕೂ ಅಧಿಕ ಜನರು ಬಳಕೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಏಪ್ರಿಲ್ 1 ರಿಂದ 75 ರೂ. ಹೆಚ್ಚಳ
ಇದೀಗ ಈ ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರವನ್ನು ಪರಿಷ್ಕರಿಸಲಾಗಿದೆ. ಈ ಶುಲ್ಕ ಪರಿಷ್ಕರಣೆಯನ್ನು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು, 2008ರ ಆಕ್ಟ್ ಪ್ರಕಾರ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ ನೀಡಿದೆ. ಆದ್ದರಿಂದ ನಿಯಮಗಳ ಆಧಾರದ ಮೇಲೆ ದರ ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳದಿಂದಾಗಿ ರಸ್ತೆ ಸುಧಾರಿಸಲು, ನಿರ್ವಹಿಸಲು ಮತ್ತು ಟೋಲ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫಾಸ್ಟ್ಯಾಗ್ ಪಾಸ್‌ನ ಪ್ರಯೋಜನಗಳು:
ಈ ಫಾಸ್ಟ್ಯಾಗ್‌ನಿಂದಾಗಿ ಟೋಲ್‌ಗಳಲ್ಲಿ ಗಂಟೆಗಟ್ಟಲೆ ಕಾಯುವಂತಿಲ್ಲ. ಡಿಜಿಟಲ್ ಪೇಮೆಂಟ್ ಮೂಲಕ ತಕ್ಷಣ ಹಣ ಡೆಬಿಟ್ ಆಗುತ್ತದೆ. ವಾರ್ಷಿಕವಾಗಿ ಒಮ್ಮೆ ಪಾವತಿಸಿದರೆ ಸಾಕು, ಪದೇ ಪದೇ ಪೇಮೆಂಟ್ ಮಾಡಬೇಕೆಂಬ ಅವಶ್ಯಕತೆ ಬರುವುದಿಲ್ಲ. ಅಲ್ಲದೇ ಈ ಪಾಸ್ ಇಲ್ಲದವರು ರಾಜಮಾರ್ಗ್ ಯಾತ್ರಾ ಆಪ್ ಅಥವಾ ಎನ್‌ಎಚ್‌ಎಐ/ಮೋರ್ಥ್ ವೆಬ್‌ಸೈಟ್ ಮೂಲಕ ಖರೀದಿ ಮಾಡಬಹುದು.
ಸದ್ಯ ಈ ಪರಿಷ್ಕೃತ ದರ ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. ಆದ್ದರಿಂದ ಏಪ್ರಿಲ್ 1ರ ಮೊದಲು ವಾರ್ಷಿಕ ಪಾಸ್ ಖರೀದಿಸುವವರಿಗೆ ಇದು ಅನ್ವಯವಾಗುವುದಿಲ್ಲ. ಇನ್ನು ಸಂಬಂಧಪಟ್ಟ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಪಾಸ್ ರೀಚಾರ್ಜ್ ಮಾಡಿಕೊಳ್ಳಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications