ಸಾಮಾಜಿಕ ಮತ್ತು ಆರ್ಥಿಕ ಚಲನಶೀಲತೆಗೆ ಗುಣಮಟ್ಟದ ಶಿಕ್ಷಣವು ಶಕ್ತಿಶಾಲಿ ಸಾಧನವಾಗಿದೆ. ಗ್ರಾಮೀಣ ಭಾಗಗಳು ಹಾಗೂ ಅಭಿವೃದ್ದಿ ಹೊಂದದ ಕಡೆಗಳಲ್ಲಿ ಶಿಕ್ಷಣ ಪಡೆಯಲು ಹಣದ ವ್ಯವಸ್ಥೆ ಮಾಡುವುದು ಯಾವತ್ತೂ ಒಂದು ಪ್ರಮುಖ ಘಟ್ಟವನ್ನು ದಾಟಿದಂತೆ. ಯುಡಿಸೆ ಪ್ಲಸ್ ಮಾಡಿರುವ ವರದಿಯಂತೆ, ಭಾರತದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಶೇ.97.2, ಆದರೆ ಆರ್ಥಿಕ ಸಮಸ್ಯೆಯಿಂದಾಗಿ, ಶಿಕ್ಷಣ ಮುಗಿಸದೆ ಶಾಲೆ ಬಿಟ್ಟು ಹೋದವರ ಪ್ರಮಾಣ ದುಪ್ಪಟ್ಟಾಗಿದೆ. ಶಿಕ್ಷಣದ ವೆಚ್ಚ ಹೆಚ್ಚುತ್ತಿದ್ದಂತೆ, ತಮ್ಮ ಮಕ್ಕಳ ಭವಿಷ್ಯದ ಕುರಿತು, ಆಯಾ ಕುಟುಂಬಗಳು ಬಹು ಆತಂಕಿತರಾಗಿದ್ದಾರೆ. ಒಂದು ವೇಳೆ, ಗ್ರಾಮೀಣ ಪ್ರದೇಶದ ಮಕ್ಕಳು ಖಾಸಗಿ ಶಾಲೆಯಲ್ಲಿ ದಾಖಲಾತಿ ಪಡೆಯಬೇಕೆಂದರೆ ಅದಕ್ಕೆ 17 ಸಾವಿರ ರೂ ಶುಲ್ಕ ಪಾವತಿಸ ಬೇಕು. ಆದರೆ ಅದು ಕಡಿಮೆ ಆದಾಯ ಗಳಿಸುವ ಮಧ್ಯಮ ವರ್ಗದ ಕುಟುಂಬಕ್ಕೆ ಭರಿಸಲಾಗದ ವೆಚ್ಚದಂತೆಯೇ ಭಾಸವಾಗುವುದು ಎಂದು ಎ.ಎಸ್.ಇ.ಆರ್ ವರದಿ ತಿಳಿಸಿದೆ. ಹೀಗಾಗಿ, ಸಂಯೋ ಜಿತ ಹಣಕಾಸು ಪರಿವರ್ತಕ ಪರಿಹಾರವಾಗಿ ಹೊರಹೊಮ್ಮಿದೆ. ಈ ಮೂಲಕ ಸುಲಭ ಸಾಲ ಪಡೆ ಯುವ ಮತ್ತು ಶಿಕ್ಷಣಕ್ಕಿರುವ ಬೇಡಿಕೆ ನಡುವಿನ ದೊಡ್ಡ ಅಂತರವನ್ನು ಕಡಿಮೆ ಮಾಡಬಹುದು.

ಶಿಕ್ಷಣದಲ್ಲಿ ಸಂಯೋಜಿತ ಹಣಕಾಸಿನ ಪಾತ್ರವನ್ನು ತಿಳಿಯುವುದು
ಸಂಯೋಜಿತ ಹಣಕಾಸು ಎನ್ನುವುದು, ಸಾರ್ವಜನಿಕ, ಖಾಸಗಿ ಮತ್ತು ಲೋಕೋಪಕಾರಿ ಬಂಡ ವಾಳವನ್ನು ಶಿಕ್ಷಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ಹಣಕಾಸು ಒದಗಿಸುವ ಸುಸ್ಥಿರ ಕಾರ್ಯ ವಿಧಾನಗಳ ಅಭಿವೃದ್ಧಿ ಹಾಗೂ ಶೈಕ್ಷಣಿಕ ಪ್ರವೇಶದ ಸವಾಲನ್ನು ಎದುರಿಸಲು ಸಂಯೋಜಿತ ಹಣಕಾಸು ವಲಯವನ್ನು ರಚಿಸಬಹುದು. ಅತೀ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ಸೌಲಭ್ಯ ಒದಗಿಸುವ ಮೂಲಕ ಸಾರ್ವಜನಿಕ-ಖಾಸಗಿ ಸಹಭಾಗಿತ್ವಗಳು (ಪಿಪಿಪಿ ಗಳು) ಅಥವಾ ನೇರ ಸರ್ಕಾರಿ ಸಬ್ಸಿಡಿಗಳು ತಮ್ಮ ಪ್ರಭಾವವನ್ನು ವರ್ಧಿಸುತ್ತವೆ. ಇಂತಹ ಸಹಯೋಗಗಳೇ ಖಾಸಗಿ ವಲಯದ ಸಹಭಾಗಿತ್ವವನ್ನು ಪ್ರೋತ್ಸಾಹಿಸುವುದು ಹಾಗೂ ದೀರ್ಘಾವಧಿಯ ಸುಸ್ಥಿರ ಫಲಿತಾಂಶಗಳಿಗೆ ಉತ್ತೇಜನ ನೀಡುವುದು. ಸಾಂಪ್ರದಾಯಿಕ ಸಾಲದಾತರಿಗೆ ಸಂಯೋಜಿತ ಹಣಕಾಸು ಸಂಭಾವ್ಯ ಅಪಾಯಗಳನ್ನು ಕಡಿಮೆ ಮಾಡುತ್ತದೆ ಮತ್ತು ಕಡಿಮೆ ವಿಭಾಗಗಳಲ್ಲಿ ಹೂಡಿಕೆ ಮಾಡಲು ಆಕರ್ಷಿಸುವುದು.
NBFC, ಬ್ಯಾಂಕ್‌ಗಳು ಮತ್ತು ಪ್ರಭಾವಿ ಹೂಡಿಕೆದಾರರ ನಡುವಿನ ಪಾಲುದಾರಿಕೆಗಳು ಪರಿಸರ ವ್ಯವಸ್ಥೆ ನಿರ್ಮಿಸಲು ಸಹಾಯ ಮಾಡುತ್ತದೆ, ಈ ಮೂಲಕ ಹೆಚ್ಚಿನ ಕುಟುಂಬಗಳು ಮತ್ತು ಸಂಸ್ಥೆಗಳಿಗೆ ಅಗತ್ಯ ಸೇವೆ ನೀಡಬಹುದು. ಈ ಕೆಳಗಿ ನಂತೆ ಪ್ರತಿ ಹಣಕಾಸು ಸಂಸ್ಥೆಗಳು ತಮ್ಮ ಸಾಮರ್ಥ್ಯವನ್ನು ತೋರಿಸಬಲ್ಲದು.
NBFC ಸ್ಥಳೀಯ ಮಾರುಕಟ್ಟೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಶೇಷ ಪರಿಣತಿ ಹೊಂದಿದ್ದು ಮತ್ತು ಸಂಪರ್ಕದಲ್ಲಿಲ್ಲದ ಪ್ರದೇಶಗಳಲ್ಲಿ ಕೊನೆಯ ಹಂತದ ವರೆಗೂ ಸಂಪರ್ಕ ಹೊಂದಿವೆ.
ಬ್ಯಾಂಕುಗಳು: ಬಂಡವಾಳದ ದೊಡ್ಡ ಮಟ್ಟದ ಹರಿವಿಗೆ ರಹದಾರಿ ಕಲ್ಪಿಸುವುದು.
ಪ್ರಭಾವಿ ಹೂಡಿಕೆದಾರರು: ಸಮಾಜದ ಏರಿಳಿತಗಳತ್ತ ಗಮನ ಕೊಡುವ ಈ ಹೂಡಿಕೆದಾರರು
ಗಮನ ಹರಿಸುತ್ತಾರೆ, ಈ ನಡೆಯು ಹಣಕಾಸಿನ ಮಾದರಿಯು ಕಾರ್ಯಸಾಧ್ಯವಲ್ಲವಾದರೂ, ಉದ್ದೇಶ-ಚಾಲಿತ ಎಂದು ಖಚಿತಪಡಿಸುತ್ತದೆ.
ಶೈಕ್ಷಣಿಕ ಪ್ರವೇಶದಲ್ಲಿ ಸಂಯೋಜಿತ ಹಣಕಾಸಿನ ಪಾತ್ರ
ಸುಲಭ ರೂಪದಲ್ಲಿ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಂಯೋಜಿತ ಹಣಕಾಸು ವಲಯವು ಬಡ ಕುಟುಂಬಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಸಹಾಯ ಮಾಡಬಲ್ಲದು.
ವಿಸ್ತಾರಗೊಳಿಸುವಿಕೆ: ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಕೈಗೆಟುಕುವ ಸಾಲ ದಕ್ಕುವುದು ಗಮನಾರ್ಹ ಸಮಸ್ಯೆಯಾಗಿದೆ. ಆದರೆ, ಸಂಯೋಜಿತ ಹಣಕಾಸು ಪಾಲುದಾರಿಕೆಗಳು ಸಾಲದ ಉತ್ಪನ್ನಗಳನ್ನು ರಚಿಸಿ, ಅದು ಕುಟುಂಬದ ಆದಾಯದೊಂದಿಗೆ ಹೊಂದಿಕೆಯಾಗುತ್ತದೆ, ಈ ಮೂಲಕ ಆರ್ಥಿಕ ಒತ್ತಡವಿಲ್ಲದೆ ಗುಣಮಟ್ಟದ ಶಿಕ್ಷಣ ಕೈಗೆಟುಕುವಂತೆ ಮಾಡುತ್ತದೆ.
ಅಪಾಯದ ಅಂತರವನ್ನು ಕಡಿಮೆ ಮಾಡುವುದು: ಸಂಭಾವ್ಯ ಅಪಾಯದ ಎದುರಿಸಲಾಗದೆ ಕಡಿಮೆ ಆದಾಯ ಗಳಿಸುವ ಕುಟುಂಬಗಳು ಬ್ಯಾಂಕಿಂಗ್ ವ್ಯವಸ್ಥೆಯಿಂದ ದೂರ ಇರುತ್ತವೆ. ದೇಶ ದ ಶೇ.70ರಷ್ಟು ಭಾರತೀಯರು ಯಾವುದೇ ಬ್ಯಾಂಕ್ ಜತೆ ವ್ಯವಹಾರ ಇಟ್ಟುಕೊಳ್ಳದೆ ಉಳಿದಿವೆ. ಆದರೆ, ಕೇವಲ ಬೆರಳೆಣಿಕೆಯ ಕುಟುಂಬಗಳು ಬ್ಯಾಂಕಿಂಗ್ ವ್ಯವಸ್ಥೆಯ ಅಗತ್ಯತೆ ಯನ್ನು ಅರಿತುಕೊಂಡಿವೆ ಎಂದು ನೀತಿ ಆಯೋಗ ವರದಿ ತಿಳಿಸಿದೆ.
ಬ್ಯಾಂಕಿಂಗ್ ಯೇತರ ಹಣಕಾಸು ಸಂಸ್ಥೆಗಳು ಮತ್ತು ಪ್ರಭಾವಿ ಹೂಡಿಕೆದಾರರೊಂದಿಗೆ ಸಂಯೋ ಜಿತ ಹಣಕಾಸು ಮಾದರಿಗಳು ಜಂಟಿಯಾಗಿ ಗ್ಯಾರಂಟಿಗಳು ಅಥವಾ ಆರಂಭಿಕ -ನಷ್ಟ ಕಾರ್ಯ ವಿಧಾನಗಳನ್ನು ರಚಿಸಬಹುದು, ಇದು ಬ್ಯಾಂಕುಗಳಿಗೆ ಅಪಾಯಗಳನ್ನು ಕಡಿಮೆ ಮಾಡಲು ಹಾಗೂ ಸೇವೆ ಸಲ್ಲಿಸಲು ಸುಲಭವಾಗುತ್ತದೆ.
ಶಾಲೆಗಳು ಹಾಗೂ ಸಂಸ್ಥೆಗಳ ಸಬಲೀಕರಣ: ಅಸಮರ್ಪಕ ಮೂಲಸೌಕರ್ಯಗಳು, ಮೂಲ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಮತ್ತು ಡಿಜಿಟಲ್ ಉಪಕರಣಗಳಂತಹ ವ್ಯವಸ್ಥಿತ ಸಮಸ್ಯೆಗಳಿಗೆ ಕೈಗೆಟುಕುವ ಶಾಲಾ ಹಣಕಾಸು ವಲಯ ಒಂದು ಪ್ರಮುಖ ಪರಿಹಾರ.ಇಂತಹ ಸಮಸ್ಯೆಗಳಿಂದಾಗಿ ಹೆಚ್ಚಿನ ಖಾಸಗಿ ಶಾಲೆಗಳು ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಹಿಂದೆ ಬೀಳುತ್ತಿವೆ. ಹೀಗಾಗಿ, ಸಂಯೋ ಜಿತ ಹಣಕಾಸು ವಲಯಗಳು ಶಾಲೆಗಳಿಗೆ ಉತ್ತಮ ಸವಲತ್ತು, ಒಳ್ಳೆಯ ಕೊಠಡಿ ಹಾಗೂ ಡಿಜಿಟಲ್ ಸೌಲಭ್ಯ ಮತ್ತು ತರಬೇತಾದ ಶಿಕ್ಷಕರನ್ನು ಒದಗಿಸಲು ಅಡೆತಡೆಯಾಗುವ ಹಣಕಾಸು ವ್ಯವಸ್ಥೆಯಲ್ಲಿನ ಅಂತರವನ್ನು ತಗ್ಗಿಸು ತ್ತದೆ. ಸಂಪನ್ಮೂಲ ನಿರ್ಬಂಧಿತ ವ್ಯವಸ್ಥೆಯಲ್ಲಿಯೂ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಪೂರೈಸ ಲು ಮತ್ತು ಉನ್ನತ ಗುಣಮಟ್ಟದ ಶಿಕ್ಷಣ ನೀಡಲು ಸಂಸ್ಥೆಗಳು ಉತ್ತಮವಾಗಿ ಸಿದ್ಧವಾಗಿವೆ ಎಂಬುದನ್ನು ಇದು ಖಚಿತಪಡಿಸುತ್ತದೆ.
ಸುಸ್ಥಿರ ಹಣಕಾಸು: ನಿಧಿ ಬಳಕೆ ಹೊರತುಪಡಿಸಿ, ಈ ವಿಧಾನವು ಸಮರ್ಥನೀಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಪರಿಣಾಮವೆಂಬಂತೆ, ಪ್ರಭಾವಿ ಹೂಡಿಕೆದಾರರು ಸಾಕ್ಷರತೆ ಪ್ರಮಾಣದಲ್ಲಿ ಹೆಚ್ಚಳ ಮತ್ತು ಉತ್ತಮ ಕಲಿಕೆ ಫಲಿತಾಂಶಗಳಿಗೆ ಆದಾಯದ ಲಿಂಕ್ ಮಾಡುವ ಮೂಲಕ ತಮ್ಮ ಹೊಣೆಗಾರಿಕೆಯನ್ನು ಖಚಿತಪಡಿಸುವರು ಮತ್ತು ಈ ವಿಭಾಗಗಳಿಗೆ ಸೇವೆ ಸಲ್ಲಿಸಲು ಅವರನ್ನು ಪ್ರೋತ್ಸಾಹಿಸುತ್ತಾರೆ.
ಸಂಯೋಜಿತ ಹಣಕಾಸು ಮಾದರಿಗಳಲ್ಲಿ ಡಿಜಿಟಲ್ ಪರಿಕರಗಳ ಬಳಕೆ: ಸಾಲಗಳು ಮೌಲ್ಯಮಾಪನಗಳು ಮತ್ತು ನಿಧಿ ವಿತರಣೆಗಳನ್ನು ಸ್ವಯಂಚಾಲಿತಗೊಳಿಸುವುದು ತಂತ್ರ ಜ್ಞಾನದಿಂದ ಸಾಧ್ಯ. ಇದು ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡುತ್ತದೆ. ದತ್ತಾಂಶಗಳ ಬೆನ್ನಟ್ಟುವಿಕೆ ಮತ್ತು ವರದಿ ಮಾಡುವಿಕೆಯನ್ನು ಸಕ್ರಿಯಗೊಳಿಸಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಯನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ನೈಜ ಸಮಯದಲ್ಲಿ ಸುಲಭಗೊಳಿಸುತ್ತವೆ, ಇದು, ವೈವಿಧ್ಯಮಯ ಮಧ್ಯಸ್ಥಗಾರರನ್ನು ಆಕರ್ಷಿಸಲು ಮತ್ತು ಸಂಪನ್ಮೂಲ ಹಂಚಿಕೆಯನ್ನು ಉತ್ತಮಗೊಳಿಸುವಂತೆ ಮಾಡುತ್ತದೆ. ಹಿಂದುಳಿದ ಸಮುದಾಯಗಳಲ್ಲಿ ಬಂಡವಾಳವನ್ನು ಉತ್ತಮವಾಗಿ ಬಳಸಿಕೊಳ್ಳುವುದನ್ನು ಇದು ಖಚಿತಪಡಿಸುವುದಲ್ಲದೇ ಶಿಕ್ಷಣದ ಹಣಕಾಸಿನ ಫಲಿತಾಂಶಗಳಿಗೆ ಕಾರಣವಾಗುತ್ತದೆ.
ಒಂದು ಹಂತ ಮುಂದಕ್ಕೆ
ಹಣಕಾಸು ಸಂಸ್ಥೆಗಳು ಮತ್ತು ಪ್ರಭಾವಿ ಹೂಡಿಕೆದಾರರ ನಡುವೆ ಪಾಲುದಾರಿಕೆ ಬೆಳೆಸಲು ನೀತಿ ಸೃಷ್ಟಿಕರ್ತರು ಅಗತ್ಯ ಬೆಂಬಲ ನೀಡುವ ಚೌಕಟ್ಟನ್ನು ರಚಿಸಬೇಕು. ಅದೇ ರೀತಿ, ಸಾಲದ ಬಳಕೆಯ ಟ್ರ್ಯಾಕ್ ಮಾಡಲು ಮತ್ತು ಶೈಕ್ಷಣಿಕ ಫಲಿತಾಂಶಗಳ ಮೇಲ್ವಿಚಾರಣೆ ಮಾಡಲು ಡಿಜಿಟಲ್ ಉಪಕರಣಗಳನ್ನು ಬಳಸುವ ಮೂಲಕ ತಂತ್ರಜ್ಞಾನದ ಪ್ರಯತ್ನಗಳನ್ನು ಅಳೆಯ ಬಹುದು. ಈ ಮೂಲಕ ಸಾಲದ ಅರ್ಹತೆಯನ್ನು ನಿರ್ಣಯಿಸಬಹುದು.
ಶಿಕ್ಷಣವು ಹೂಡಿಕೆಯಲ್ಲಿ ಸಾರ್ವಜನಿಕ ಜಾಗೃತಿಯ ಅಗತ್ಯವಿರುತ್ತದೆ. ಸಮಸ್ಯೆಯೆಂದರೆ ಶಿಕ್ಷಣಕ್ಕಾಗಿ ಸಾಲವನ್ನು ಪಡೆಯಲು ಹಿಂಜರಿಯುವ ಕುಟುಂಬಗಳು ಅದನ್ನು ಒಂದು ಹೊರೆ, ಯಶಸ್ಸಿಗೆ ದಾರಿ ಮಾಡಿಕೊಡುವ ಮೆಟ್ಟಿಲು ಅಲ್ಲ ಎಂದು ಭಾವಿಸಿರುವುದು ಸಮಸ್ಯೆಯಾಗಿದೆ. ಒಟ್ಟಿನಲ್ಲಿ ಹಣಕಾಸಿನ ಸಾಕ್ಷರತೆಯು ಈ ರೀತಿಯ ಮನಸ್ಥಿತಿಯನ್ನು ಹೆಚ್ಚಿಸಬಹುದು.
ಸಾಮೂಹಿಕ ಹೊಣೆಗಾರಿಕೆ
ಪ್ರತಿ ಮಕ್ಕಳಿಗಾಗಿ ಶಿಕ್ಷಣ ವ್ಯವಸ್ಥೆಯು ಪರಮ ಅಧಿಕಾರ ಎಂಬುದು ಇಂದಿನಷ್ಟು ಮಹತ್ವ ದ್ದಾಗಿರಲಿಲ್ಲ. NBFC, ಬ್ಯಾಂಕ್‌ಗಳು ಮತ್ತು ಪ್ರಭಾವಿ ಹೂಡಿಕೆ ದಾರರನ್ನು ಸಂಯೋಜಿಸುವ ಮೂಲಕ ಇದನ್ನು ನಿಜ ಮಾಡುವಲ್ಲಿ ಅಂತಹ ಮಾದರಿಗಳು ಮಹತ್ವದ ಸಾಧನವಾಗಬಹುದು.
ನಮ್ಯತೆ, ಬಂಡವಾಳ ಮತ್ತು ಉದ್ದೇಶ-ಚಾಲಿತ ವಿಧಾನ ಮುಂತಾದವು, ಪ್ರತಿಯೊಂದು ಕುಟುಂಬಗಳು ಗುಣಮಟ್ಟದ ಶಿಕ್ಷಣ ಪಡೆಯಲು ಹಾಗೂ ಮಕ್ಕಳಿಗೆ ಅಗತ್ಯ ಸೌಕರ್ಯ ನೀಡುವಲ್ಲಿ ಪ್ರತಿ ಶಾಲೆಗಳು ಅರ್ಹವಾಗುವುದು.
ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಲು ಮಾತ್ರವಲ್ಲದೇ, ದೇಶಗಳು, ಸಮುದಾಯಗಳಲ್ಲಿ
ಉತ್ತಮ ಜೀವನ ನಡೆಸುವುದರ ಹಿಂದೆ ಗುಣಮಟ್ಟದ ಶಿಕ್ಷಣದ ಮೌಲ್ಯವನ್ನು ತಿಳಿದುಕೊಳ್ಳ ಬಹುದು.
ಸಮಾಜದಲ್ಲಿ ಸಮಾನತೆ ತರಲು, ಸಮಾಜದ ಮೂಲೆ ಮೂಲೆಗೂ ತೆರಳಿ ಸಂಯೋಜಿತ ಹಣಕಾಸು ವಲಯವು ಸಹಾಯ ನೀಡಲು ಕೈಚಾಚುವುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications