ಹೊಸ ವರ್ಷ ಆಗಮಿಸುತ್ತಿದ್ದು, ಮುಂದಿನ ವರ್ಷಕ್ಕೆ ನಿಮ್ಮ ಹಣಕಾಸು ಅಥವಾ ಆರ್ಥಿಕ ಖರ್ಚು-ವೆಚ್ಚದ ಬಗ್ಗೆ ವ್ಯವಸ್ಥಿತವಾದ ಯೋಜನೆಯನ್ನು ರೂಪಿಸುವುದಕ್ಕೆ ಇದು ಸಕಾಲ. ಹಾಗಾದರೆ, 2024ರಲ್ಲಿ ನಿಮ್ಮ ಬದುಕಿನಲ್ಲಿ ಅತ್ಯುತ್ತಮವಾದ ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ ಹೇಗೆಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳೋಣ. ಇದು ಅತ್ಯಂತ ಸರಳವಾಗಿದ್ದು, ಜತೆಗೆ ಅನುಷ್ಠಾನ ಕೂಡ ಅಷ್ಟೊಂದು ಸುಲಭವಾಗಿದೆ.
ಹಂತ-1 ವಿಮೆಯೊಂದಿಗೆ ನಿಮ್ಮ ಬದುಕಿನ ಸುರಕ್ಷತೆಗೆ ಆದ್ಯತೆ ಇರಲಿ
ಮೊದಲನೆಯದಾಗಿ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳುವುದು. ಇದೊಂದು ಉತ್ತಮ ನಿರ್ಧಾರವಾಗಿದ್ದು, ಅತ್ಯಂತ ಅಗತ್ಯ ಕೂಡ. ಸಂಕಷ್ಟದ ಕಾಲದಲ್ಲಿ ಇದು ನಿಮಗೆ ಹಣಕಾಸಿನ ದೃಷ್ಟಿಯಿಂದಲೂ ಸುರಕ್ಷತೆಯನ್ನು ಒದಗಿಸುತ್ತದೆ. ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಈ ವಿಮಾ ವ್ಯಾಪ್ತಿಗೆ ಬರುವಂತೆ ನೋಡಿಕೊಳ್ಳಿ. ಅದರಲ್ಲಿ ಕುಟುಂಬದ ಆಧಾರಸ್ತಂಭವಾದವರಿಗೆ ಜೀವ ವಿಮೆಯೇ ಅತಿಮುಖ್ಯವಾದದ್ದು. ನಿಮ್ಮ ಜೀವ ವಿಮಾ ಪಾಲಿಸಿ ಕವರೇಜ್ ಮೊತ್ತವು ನಿಮ್ಮ ವರ್ಷದ ಕುಟುಂಬದ ವೆಚ್ಚಕ್ಕಿಂತ ಮೂರುಪಟ್ಟು ಜಾಸ್ತಿ ಇರಬೇಕು. ಇದರಿಂದ ನಿಮ್ಮ ಇಡೀ ಕುಟುಂಬ ಸುರಕ್ಷಿತವಾಗಿರುತ್ತದೆ.

ಹಂತ-2 ಇಎಂಐ ಮ್ಯಾನೇಜ್‌ಮೆಂಟ್-ಶೇ.40ರ ನಿಯಮ
ಸಾಲಗಳು ಸುಳ್ಳಾಗಿರಬಹುದು. ನಿಮಗೆ ಗೊತ್ತಾಗುವುದಕ್ಕಿಂತ ಮೊದಲ ನಿಮ್ಮ ಆದಾಯದಿಂದ ದೊಡ್ಡ ಮೊತ್ತವು ಕಡಿತಗೊಂಡಿರುತ್ತದೆ. ಇಲ್ಲಿ ನೀವು ಅವುಗಳ ಮೇಲೆ ನಿಗಾ ಇರಿಸುವುದಕ್ಕೆ ಅತ್ಯಂತ ಸರಳವಾದ ಶೇ.40 ನಿಯಮವನ್ನು ಪಾಲಿಸಿ. ಅಂದರೆ, ನಿಮ್ಮ ತಿಂಗಳ ಒಟ್ಟು ಆದಾಯದ ಶೇ.40ರಷ್ಟು ಪ್ರಮಾಣವನ್ನು ಸಾಲ ದಾಟಬಾರದು. ಇದು ನಿಮ್ಮ ಸಾಲವನ್ನು ನೀವು ಅತ್ಯುತ್ತಮವಾಗಿ ಯಾವುದೇ ಒತ್ತಡಗಳಿಲ್ಲದೆ ನಿಭಾಯಿಸಬಹುದು.
ಹಂತ 3: ತುರ್ತು ನಿಧಿ
ಜೀವನದಲ್ಲಿ ಯಾವುದೇ ಕ್ಷಣದಲ್ಲಿ ಏನುಬೇಕಾದರೂ ಸಂಭವಿಸಬಹುದು. ಅವೆಲ್ಲವೂ ಸಕಾರಾತ್ಮಕವಾಗಿ ಇರುವುದಿಲ್ಲ. ಇಂಥಹ ಸಂಕಷ್ಟದ ಸಮಯದಲ್ಲಿ ತುರ್ತು ನಿಧಿಯು ನಿಮ್ಮ ನೆರವಿಗೆ ಬರುತ್ತದೆ. ಕನಿಷ್ಠ ಮೂರು ತಿಂಗಳ ಮನೆಯ ವೆಚ್ಚದ ಮೊತ್ತವನ್ನು ಉಳಿಸುವ ಗುರಿಯನ್ನು ಇಟ್ಟುಕೊಳ್ಳಿ. ಇದು ಮಳೆಗಾಲಕ್ಕೆ ಆರ್ಥಿಕ ಛತ್ತಿ ಇದ್ದಂತೆ.
ಹಂತ-4: ಸಂಪತ್ತ ಗಳಿಸುವುದು- ಇದು ಸಮಯ
ನಿಮ್ಮ ಮೂಲಭೂತ ಅಗತ್ಯಗಳನ್ನು ಗುರುತಿಸಿಕೊಂಡ ಬಳಿಕ ನಿಮ್ಮ ಸಂಪತ್ತು ಅಥವಾ ಆದಾಯವನ್ನು ಹೆಚ್ಚಿಸುವ ಕಡೆಗೆ ಯೋಚಿಸಬೇಕು. ನಿಮ್ಮ ಆದಾಯದ ಶೇ.10ರಷ್ಟು ಹಣವನ್ನು ಹೂಡಿಕೆ ಮಾಡಿ. ಆದರೆ ಎಲ್ಲವನ್ನೂ ಒಂದೇ ಬುಟ್ಟಿಗೆ ಎಸೆಯುವ ರೀತಿಯ ಹೂಡಿಕೆ ಮಾಡಬೇಡಿ. ಈಕ್ವಿಟಿ, ಚಿನ್ನ ಮತ್ತು ಸ್ಥಿರ ಆದಾಯ ಗಳಿಸುವಂತ ಆಯ್ಕೆಗಳನ್ನು ಗಮನಹರಿಸಿ. ಅದನ್ನು ನೀವು ಹೇಗೆ ವರ್ಗೀಕರಿಸುತ್ತೀರಿ ಎನ್ನುವುದು ನಿಮ್ಮ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಕಿರಿಯ ಹೂಡಿಕೆದಾರರು ಈಕ್ವಿಟಿಯೊಂದಿಗೆ ಹೆಚ್ಚಿನ ಅಪಾಯಗಳನ್ನು ತೆಗೆದುಕೊಳ್ಳಬಹುದು. ಆದರೆ ನಿವೃತ್ತಿ ಅಂಚಿನಲ್ಲಿರುವವರು ಆದಾಯದ ಸ್ಥಿರತೆ ಕಡೆಗೆ ಆದ್ಯತೆ ನೀಡಬೇಕು.
ಹಂತ-5: ಹೂಡಿಕೆಯ ಜರ್ನಿ ಪ್ರಾರಂಭ
ನೀವು ಹೂಡಿಕೆಯನ್ನು ಆರಂಭಿಸದಿದ್ದರೆ ಇದಕ್ಕಿಂತ ಉತ್ತಮ ಸಮಯ ಬೇರೆ ಇಲ್ಲ. ಕೇವಲ ನಿಶ್ಚಿತ ಠೇವಣಿಗಳು ಮಾತ್ರ ದೀರ್ಘಾವಧಿಗೆ ಹಣದುಬ್ಬರವನ್ನು ಕಡಿಮೆಗೊಳಿಸುವುದಿಲ್ಲ. ನಿಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳಬೇಕಾದರೆ ಈಕ್ವಿಟಿ ವಲಯದಲ್ಲಿ ಹೂಡಿಕೆ ಮಾಡುವ ಮೂಲಕ ಒಂದಷ್ಟು ರಿಸ್ಕ್ ತೆಗೆದುಕೊಳ್ಳಬೇಕು. ಹಾಗಾದರೆ ಷೇರುಗಳಲ್ಲಿ ಎಷ್ಟು ಮೊತ್ತ ಹೂಡಿಕೆ ಮಾಡಬಹುದು. ಅದಕ್ಕೆ ನಿಮ್ಮ ವಯಸ್ಸನ್ನು 100ರಿಂದ ಕಳೆಯುವುದು ಉತ್ತಮ ಸೂತ್ರವಾಗಿರುತ್ತದೆ. ಅದು ಹೂಡಿಕೆಗಳಿಗೆ ಹೋಗಬಹುದಾದ ನಿಮ್ಮ ಹೂಡಿಕೆಯ ಶೇಕಡಾವಾರು ಮೊತ್ತ. ಉಳಿದ ಮೊತ್ತವನ್ನು ಸ್ಥಿರ ಆದಾಯ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಆದರೆ ಎಲ್ಲದಕ್ಕೂ ಉತ್ತಮ ಆರ್ಥಿಕ ತಜ್ಞರಿಂದ ಸಲಹೆಯನ್ನು ಪಡೆದುಕೊಳ್ಳಿ.
ಹಂತ:6 ಮ್ಯೂಚುವಲ್ ಫಂಡ್
ನೇರ ಷೇರು ಹೂಡಿಕೆಗೆ ನೇರವಾಗಿ ಜಿಗಿಯಬಹುದೇ? ಅಷ್ಟು ಬೇಗ ಮಾಡಬೇಕಿಲ್ಲ. ನೀವು ಹೂಡಿಕೆಯ ಜಗತ್ತಿಗೆ ಹೊಸಬರಾಗಿದ್ದರೆ ಮ್ಯೂಚುವಲ್ ಫಂಡ್‌ಗಳನ್ನು ಪ್ರಾರಂಭಿಸುವುದಕ್ಕೆ ಉತ್ತಮ ಸ್ಥಳವಾಗಿರುತ್ತದೆ. ಮ್ಯೂಚುವಲ್ ಫಂಡ್‌ನವರು ನೇರ ಹೂಡಿಕೆಗೆ ಸರಳವಾದ ಪರ್ಯಾಯವನ್ನು ನೀಡುತ್ತಾರೆ. ಒಂದುವೇಳೆ ನಿಮಗೆ ಸಮಯದ ಕೊರತೆಯಿದ್ದರೆ ಅಥವಾ ಆಳವಾದ ಮಾರುಕಟ್ಟೆ ಜ್ಞಾನದ ಕೊರತೆಯಿದ್ದರೆ ಮ್ಯೂಚುವಲ್ ಫಂಡ್‌ನೊಂದಿಗೆ ವೃತ್ತಿಪರರು ನಿರ್ವಹಿಸುವ ವೈವಿಧ್ಯಮಯ ಪೋರ್ಟ್‌ಫೋಲಿಯೊದಿಂದ ನೀವು ಪ್ರಯೋಜನ ಪಡೆಯಬಹುದು. ಈ ವಿಧಾನವು ಅಪಾಯವನ್ನು ಕಡಿಮೆಗೊಳಿಸಲು ನಿಮಗೆ ಸಹಾಯ ಮಾಡುತ್ತದೆ.
ಬೋನಸ್ ಟಿಪ್ಸ್: ತೆರಿಗೆ ಪ್ಲ್ಯಾನ್ ಮಾಡುವುದನ್ನು ಮರೆಯದಿರಿ
ಕೊನೆಯದಾಗಿ ತೆರಿಗೆಯನ್ನು ನಂತರದ ಆಲೋಚನೆಗಳು ಆಗುವುದಕ್ಕೆ ಬಿಡಬೇಡಿ. ಪರಿಣಾಮಕಾರಿಯಾದ ತೆರಿಗೆ ಯೋಜನೆಗಳು ಕೂಡ ಹೆಚ್ಚಿನ ಮೊತ್ತದ ಹಣವನ್ನು ಉಳಿತಾಯ ಮಾಡುತ್ತದೆ. ಉತ್ತಮ ತೆರಿಗೆ ಸಲಹೆ ಕೊಡುವವರನ್ನು ಸಂಪರ್ಕ ಮಾಡಿ ಹಾಗೂ ವರ್ಷದ ಕೊನೆಯಲ್ಲಿ ನಾನಾ ರೀತಿಯ ಒತ್ತಡಗಳಿಂದ ಮುಕ್ತಿ ನೀಡುತ್ತದೆ.
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು 2024ರ ಹೊಸ ವರ್ಷಕ್ಕೆ ನಿಮ್ಮ ಹಣಕಾಸಿನ ಅಥವಾ ಆದಾಯದ ನಿರ್ವಹಣೆಗೆ ಸಂಬಂಧಿಸಿದಂತೆ ಒಂದು ಉತ್ತಮ ದೂರದೃಷ್ಟಿಯ ಆರ್ಥಿಕ ಯೋಜನೆಯನ್ನು ರೂಪಿಸಿಕೊಳ್ಳಿ. ಇದರಿಂದ ರಾತ್ರಿ ಬೆಳಗಾಗುವುದರೊಳಗೆ ಎಲ್ಲವೂ ಬದಲಿಬಿಡುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ. ಆದರೆ, ನೀವು ಈ ವಿಚಾರದಲ್ಲಿ ತೆಗೆದುಕೊಳ್ಳುವ ಇಂಥಹ ಸಣ್ಣ ನಿರ್ಧಾರಗಳು ಉತ್ತಮ ಆರ್ಥಿಕ ಭವಿಷ್ಯ ರೂಪಿಸುವುದಕ್ಕೆ ಸಹಕಾರಿಯಾಗುತ್ತದೆ.


Click it and Unblock the Notifications