ಇ- ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್ ಕಾರ್ಟ್ ನಿಂದ ಗ್ರಾಹಕರಿಗೆ ಬಜಾಜ್ ಅಲಾಯನ್ಸ್ ಜನರಲ್ ಇನ್ಷೂರೆನ್ಸ್ ಮತ್ತು ಕೇರ್ ಹೆಲ್ತ್ ಇನ್ಷೂರೆನ್ಸ್ ನೀಡುವ ಗ್ರೂಪ್ ಇನ್ಷೂರೆನ್ಸ್ ಘೋಷಣೆ ಮಾಡಿದೆ. ದೇಶಾದ್ಯಂತ ಇರುವ ಗ್ರಾಹಕರಿಗೆ ಈ ಗ್ರೂಪ್ ಇನ್ಷೂರೆನ್ಸ್ ಸೌಲಭ್ಯವನ್ನು ಫ್ಲಿಪ್ ಕಾರ್ಟ್ ಒದಗಿಸುತ್ತಿದೆ.
ಇನ್ಷೂರೆನ್ಸ್ ಉದ್ಯಮದ ವರದಿಗಳ ಪ್ರಕಾರ, ಭಾರತದಲ್ಲಿ ಶೇಕಡಾ 56 ಮಂದಿ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡಿಲ್ಲ. ಬಹುತೇಕ ಶೇಕಡಾ 36 ರಷ್ಟು ಅಸಮರ್ಪಕವಾಗಿ ಕವರ್ ಆಗುತ್ತಿವೆ. ಈ ಆರೋಗ್ಯ ವಿಮೆಯ ಕುರಿತಾದ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಫ್ಲಿಪ್ ಕಾರ್ಟ್ ಈ ಗ್ರೂಪ್ ಹೆಲ್ತ್ ಇನ್ಷೂರೆನ್ಸ್ ಪರಿಚಯಿಸುತ್ತಿದೆ. ಈ ಗ್ರೂಪ್ ಯೋಜನೆಗಳ ಮೂಲಕ ಗ್ರಾಹಕರಿಗೆ ಆಸ್ಪತ್ರೆಗೆ ದಾಖಲಾಗುವುದು ಮತ್ತು ಚಿಕಿತ್ಸೆ ವೆಚ್ಚಗಳು ಸೇರಿದಂತೆ ಇನ್ನಿತರೆ ಪ್ರಯೋಜನಗಳನ್ನು ನೀಡಲಿದೆ.
ಈ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ನ ಫಿನ್ ಟೆಕ್ ಅಂಡ್ ಪೇಮೆಂಟ್ ಗ್ರೂಪ್ ನ ಮುಖ್ಯಸ್ಥ ರಂಜಿತ್ ಬೊಯನಪಲ್ಲಿ, "ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವ ದಿಸೆಯಲ್ಲಿ ನಮ್ಮ ಪ್ಲಾಟ್ ಫಾರ್ಮ್ ಗೆ ಬರುವ ಗ್ರಾಹಕರೆಲ್ಲರಿಗೂ ಮೌಲ್ಯಾಧಾರಿತ ಪರಿಹಾರಗಳನ್ನು ನೀಡಲು ಫ್ಲಿಪ್ ಕಾರ್ಟ್ ಸದಾ ಪ್ರಯತ್ನಿಸುತ್ತಿರುತ್ತದೆ.

"ಆರೋಗ್ಯ ವಿಮೆ ವಿಚಾರದಲ್ಲಿ ಭಾರತ ಹಿಂದೆ ಬಿದ್ದಿದೆ. ಪ್ರಸ್ತುತ ಸಂಕಷ್ಟದ ಸಮಯದಲ್ಲಿ ಎದುರಾಗುವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಬೇಕಾಗುವ ಅಗತ್ಯಗಳನ್ನು ಪೂರೈಸಲು ಆರೋಗ್ಯ ವಿಮೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಆರೋಗ್ಯ ವಿಮೆಯ ಪ್ರಾಮುಖ್ಯ ಮನಗಂಡಿದ್ದೇವೆ ಮತ್ತು ನಮ್ಮ ಲಕ್ಷಾಂತರ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ವಿಮೆ ಲಭ್ಯವಾಗುವಂತೆ ಪ್ರಯತ್ನ ನಡೆಸಿದ್ದೇವೆ.
ಯಾವುದೇ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಿಲ್ಲ
"ದೇಶದಲ್ಲಿರುವ ಆರೋಗ್ಯ ವಿಮೆ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉತ್ತಮ ಬ್ರ್ಯಾಂಡ್ ಗಳ ಜತೆಯಲ್ಲಿ ಫ್ಲಿಪ್ ಕಾರ್ಟ್ ಒಪ್ಪಂದ ಮಾಡಿಕೊಂಡಿದ್ದು, ಇವುಗಳ ಮೂಲಕ ಗ್ರಾಹಕರಿಗೆ ವಿಮೆಯನ್ನು ಒದಗಿಸುತ್ತಿದ್ದೇವೆ'' ಎಂದು ತಿಳಿಸಿದರು.
ಫ್ಲಿಪ್ ಕಾರ್ಟ್ ನಲ್ಲಿ ಬಜಾಜ್ ಅಲಾಯನ್ಸ್ ಜನರಲ್ ಇನ್ಷೂರೆನ್ಸ್ ಮತ್ತು ಕೇರ್ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರು ಯಾವುದೇ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಿಲ್ಲ. ಉತ್ತಮ ಆರೋಗ್ಯದ ಪ್ರಮಾಣಪತ್ರದ ಆಧಾರದಲ್ಲಿ ಪಾಲಿಸಿಯನ್ನು ನೀಡಲಾಗುತ್ತದೆ.
ಈ ಮೂಲಕ ಗ್ರಾಹಕರ ಆರೋಗ್ಯಕ್ಕೆ ಸಂಬಂಧಿಸಿದ ಭೀತಿಯನ್ನು ಹೋಗಲಾಡಿಸುತ್ತದೆ. ಈ ಪಾಲಿಸಿಗಳು ಪಾಲಿಸಿದಾರರಿಗೆ ವೈದ್ಯಕೀಯ ವೆಚ್ಚಗಳು ಮತ್ತು ಆಸ್ಪತ್ರೆಗೆ ದಾಖಲಾದಾಗ ಆಗುವ ವೆಚ್ಚಗಳಿಂದ ರಕ್ಷಣೆ ನೀಡುತ್ತವೆ. ಅಲ್ಲದೇ, ಆಯುರ್ವೇದ ಮತ್ತು ಹೋಮಿಯೋಪತಿ ವಿಧಾನಗಳ ಚಿಕಿತ್ಸೆಗಳಿಗೆ ತಗಲುವ ವೆಚ್ಚವನ್ನೂ ಕವರ್ ಮಾಡಲಿವೆ.
18 ರಿಂದ 50 ವರ್ಷದವರಿಗೆ ಅವಕಾಶ
ಆದರೆ, ವಿಮೆ ಮಾಡಿಸಿದ ಹಣದ ಮೇಲೆ ಇಂತಿಷ್ಟು ಶೇಕಡಾ ವೆಚ್ಚವನ್ನು ಮಾತ್ರ ಈ ವಿಧಾನಗಳಿಗೆ ಭರಿಸಲಾಗುತ್ತದೆ. ಬಜಾಜ್ ಅಲಾಯನ್ಸ್ ಜನರಲ್ ಇನ್ಷೂರೆನ್ಸ್ ಹಾಸ್ಪಿಟಲ್ ಡೈಲಿ ಕ್ಯಾಶ್, ಒಳರೋಗಿಯ ಕೊಠಡಿ ಬಾಡಿಗೆ, ಐಸಿಯು ಶುಲ್ಕಗಳು, ವೈದ್ಯರು/ವಿಶೇಷತಜ್ಞರ ಶುಲ್ಕಗಳು, ಔಷಧಿ ವೆಚ್ಚಗಳು ಮತ್ತು ಇನ್ನೂ ಹಲವಾರು ಸೌಲಭ್ಯಗಳನ್ನು ಒದಗಿಸುತ್ತದೆ.
ಈ ವಿಮೆಯನ್ನು ಪಡೆಯಲು 18 ರಿಂದ 50 ವರ್ಷದವರಿಗೆ ಅವಕಾಶವಿರುತ್ತದೆ. 3 ರಿಂದ 5 ಲಕ್ಷ ರುಪಾಯಿವರೆಗಿನ ಆರೋಗ್ಯ ವಿಮೆಯ ಕವರೇಜ್ ಸಿಗಲಿದೆ.
ಬಜಾಜ್ ಅಲಾಯನ್ಸ್ ಜನರಲ್ ಇನ್ಷೂರೆನ್ಸ್ ಐಟಿ, ವೆಬ್ ಸೇಲ್ಸ್ ಮತ್ತು ಟ್ರಾವೆಲ್ ಅಧ್ಯಕ್ಷ- ಮುಖ್ಯಸ್ಥ ಸೌರಭ್ ಚಟರ್ಜಿ ಮಾತನಾಡಿ, ಆರೋಗ್ಯ ವಿಮೆಯು ತುರ್ತು ಸಂದರ್ಭದಲ್ಲಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಅನಿವಾರ್ಯವಾದ ಸಾಧನವಾಗಿದೆ ಎಂದಿದ್ದಾರೆ.
ಕೇರ್ ಹೆಲ್ತ್ ಇನ್ಷೂರೆನ್ಸ್ (ಈ ಹಿಂದೆ ರೆಲಿಗೇರ್ ಹೆಲ್ತ್ ಇನ್ಷೂರೆನ್ಸ್ ಹೆಸರಿನಲ್ಲಿತ್ತು) ಹಲವು ಆಯ್ಕೆಗಳನ್ನು ನೀಡುತ್ತದೆ. 3 ಲಕ್ಷದಿಂದ 20 ಲಕ್ಷ ರುಪಾಯಿವರೆಗಿನ ಆಯ್ಕೆಗಳನ್ನು ನೀಡುತ್ತದೆ. ಒಳಗೋಗಿಗಳ ಆಸ್ಪತ್ರೆಗೆ ದಾಖಲು ಕವರೇಜ್ ನಿಂದ ಆಸ್ಪತ್ರೆಗೆ ದಾಖಲಾಗುವ ಮುನ್ನ 30 ದಿನಗಳು ಮತ್ತು ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ 30 ದಿನಗಳವರೆಗಿನ ವೆಚ್ಚಗಳನ್ನೂ ಕವರ್ ಮಾಡುತ್ತದೆ.
ಜತೆಗೆ ಮನೆಯಲ್ಲೇ ಚಿಕಿತ್ಸೆಗಳನ್ನು ಪಡೆದುಕೊಂಡರೆ ಅದಕ್ಕಾಗುವ ವೆಚ್ಚವನ್ನು ಸಹ ಕವರ್ ಮಾಡುತ್ತದೆ. ಪರ್ಯಾಯ ಚಿಕಿತ್ಸೆಗಳು, ಅಂಗಾಂಗ ದಾನ, ಆಂಬ್ಯುಲೆನ್ಸ್ ಸೇವೆಗಳು ಮತ್ತು ವಾರ್ಷಿಕ ಆರೋಗ್ಯ ತಪಾಸಣೆಗೆ ತಗುಲುವ ವೆಚ್ಚವನ್ನೂ ಈ ವಿಮೆ ಕವರ್ ಮಾಡಲಿದೆ.
ಈ ಗ್ರೂಪ್ ಇನ್ಷೂರೆನ್ಸ್ ಯೋಜನೆಯನ್ನು ಕೇರ್ ಹೆಲ್ತ್ ಇನ್ಷೂರೆನ್ಸ್ ನೀಡಲಿದ್ದು, ಫ್ಲಿಪ್ ಕಾರ್ಟ್ ಗ್ರೂಪ್ ಪಾಲಿಸಿದಾರನಾಗಿರುತ್ತದೆ ಮತ್ತು ಫ್ಲಿಪ್ ಕಾರ್ಟ್ಗ್ರಾಹಕರು ಈ ವಿಮೆಗೆ ನೋಂದಣಿ ಮಾಡಿಕೊಳ್ಳಲು ಅರ್ಹವಾಗಿರುತ್ತದೆ.
ಕೇರ್ ಹೆಲ್ತ್ ಇನ್ಷೂರೆನ್ಸ್ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅನುಜ್ ಗುಲಾಟಿ ಮಾತನಾಡಿ, ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಅವರ ಹಣಕ್ಕೆ ತಕ್ಕಂತಹ ಮೌಲ್ಯದ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಸಹಯೋಗ ವಹಿಸುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಈ ಮೂಲಕ ಗ್ರಾಹಕರಿಗೆ ತಂತ್ರಜ್ಞಾನ ಆಧಾರಿತವಾಗಿ ಸಮಗ್ರ, ದೀರ್ಘಾವಧಿಯ ಆರೋಗ್ಯ ವಿಮೆ ಮತ್ತು ಯೋಗಕ್ಷೇಮದ ಪರಿಹಾರಗಳನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.


Click it and Unblock the Notifications