ಕಡಿಮೆ ರೀಚಾರ್ಜ್ ಯೋಜನೆಗಳ (Recharge Plans) ಮೂಲಕ ಗ್ರಾಹಕರನ್ನು ಸೆಳೆದಿರುವ ಟೆಲಿಕಾಂ ಕಂಪನಿಯೆಂದರೆ ಅದು ರಿಲಯನ್ಸ್ ಜಿಯೋ (Reliance Jio). ಇದೀಗ ಹೊಸ ವರ್ಷ ಬರುತ್ತಿದ್ದಂತೆ ರಿಲಯನ್ಸ್ ಜಿಯೋ ಹೊಸ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಗ್ರಾಹಕರ ನೆಚ್ಚಿನ ರಿಲಯನ್ಸ್ ಜಿಯೋ (Reliance Jio) ತನ್ನ 2026ರ ಪ್ರಿಪೇಯ್ಡ್ ಯೋಜನೆಗಳ ಪಟ್ಟಿಯನ್ನು ಮತ್ತಷ್ಟು ವಿಸ್ತರಿಸಿದೆ. ಹೊಸದಾಗಿ ಬಿಡುಗಡೆಯಾಗಿರುವ ಪ್ರಿಪೇಯ್ಡ್ ಯೋಜನೆಗಳು ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ನೀಡುವುದಲ್ಲದೇ, ಓಟಿಟಿ ಚಂದಾದಾರಿಕೆಗಳನ್ನು ನೀಡಲಿದೆ. ಜನವರಿ 2, 2026ರಂದು ಪ್ರಕಟಗೊಂಡ ಈ ಯೋಜನೆಗಳು ಮೊಬೈಲ್ ಬಳಕೆದಾರರಿಗೆ ಬಂಪರ್ ಅಂತಾನೇ ಹೇಳಬಹುದು.

ಜಿಯೋ ಲಾಂಚ್ ಮಾಡಿರುವ ಪ್ರಿಪೇಯ್ಡ್ ಪ್ಲಾನ್‌ಗಳು ವಾರ್ಷಿಕ ಪ್ಯಾಕೇಜ್‌ಗಳಿಂದ ಹಿಡಿದು, ಹೆಚ್ಚಿನ ದೈನಂದಿನ ಡೇಟಾದೊಂದಿಗೆ, ಕಡಿಮೆ ಬೆಲೆಯಲ್ಲೂ ಲಭ್ಯವಿದೆ. ಅಲ್ಲದೇ ಟ್ರೂ 5ಜಿ ಸೇವೆಗಳ ಮೂಲಕವೂ ಉತ್ತಮ ಯೋಜನೆಗಳನ್ನು ಲಾಂಚ್ ಮಾಡಿದೆ.
ವಾರ್ಷಿಕ ಪ್ರಿಪೇಯ್ಡ್ ಯೋಜನೆ:
ವರ್ಷಪೂರ್ತಿ ಒಂದೇ ರೀಚಾರ್ಜ್ ಬಯಸುವವರಿಗೆ ₹3,999 ರೂ.ನ ಯೋಜನೆಯು ಉತ್ತಮ ಆಯ್ಕೆಯಾಗಿದೆ. ಇದು 365 ದಿನಗಳ ವ್ಯಾಲಿಡಿಟಿ ಹೊಂದಿದ್ದು, ದಿನನಿತ್ಯ 2.5GB ಡೇಟಾವನ್ನು ನೀಡುತ್ತದೆ. ಪದೇ ಪದೇ ರೀಚಾರ್ಜ್ ಮಾಡುವುಕ್ಕಿಂತ, ಹೆಚ್ಚಿನ ಡೇಟಾ ಬಳಸುವವರಿಗೆ ಇದು ಉತ್ತಮವಾಗಿದೆ. ಇದೇ ರೀತಿ, ₹3,599 ಯೋಜನೆಯು ಸಹ 365 ದಿನಗಳ ಮಾನ್ಯತೆ ಹೊಂದಿದೆ. ಪ್ರತಿದಿನ 2.5GB ಡೇಟಾ ಸೌಲಭ್ಯದೊಂದಿಗೆ, ವರ್ಷಪೂರ್ತಿ ಬಳಕೆ ಮಾಡಬಹುದು. ಅಲ್ಲದೇ ಸಾಮಾನ್ಯವಾಗಿ ಅನಿಯಮಿತ ಕರೆಗಳು ಇದ್ದೇ ಇದೆ.
200 ದಿನಗಳ ಯೋಜನೆ:
ಕಡಿಮೆ ಹಣದೊಂದಿಗೆ ಹೆಚ್ಚಿನ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಬಯಸುವವರಿಗೆ, ₹2,025 ರೂ. ಯೋಜನೆ ಉತ್ತಮವಾಗಿದೆ. ಇದು 200 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2.5GB ಡೇಟಾವನ್ನು ಬಳಸಬಹುದು. ಇದರ ಜೊತೆಗೆ ₹1,799 ಯೋಜನೆಯು ಇದೆ. ಇದು 84 ದಿನಗಳ ಮಾನ್ಯತೆ, 3GB ದೈನಂದಿನ ಡೇಟಾ ಮತ್ತು ಬಂಡಲ್ಡ್ OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಯೊಂದಿಗೆ ಬರುತ್ತದೆ.
ಮನರಂಜನೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಬಳಕೆದಾರರಿಗಾಗಿ, ₹1,299 ಯೋಜನೆಯು ಉತ್ತಮವಾಗಿದೆ. 84 ದಿನಗಳ ವ್ಯಾಲಿಡಿಟಿ ಮತ್ತು ಪ್ರತಿದಿನ 2GB ಡೇಟಾವನ್ನು ಬಳಸಬಹುದು. ಇದರೊಂದಿಗೆ, ಇದು ಅನೇಕ OTT ಚಂದಾದಾರಿಕೆಗಳನ್ನು ಸಹ ನೀಡುತ್ತಿದೆ.
ಇನ್ನೂ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಯೋಜನೆ ಬಯಸುವವರಿಗೆ, ₹1,049 ಯೋಜನೆ ಉತ್ತಮವಾಗಿದೆ. 84 ದಿನಗಳ ಕಾಲ ಪ್ರತಿದಿನ 2GB ಡೇಟಾ ಬಳಸಬಹುದು. ಅಲ್ಲದೇ SonyLIV ಮತ್ತು Zee5 ಚಂದಾದಾರಿಕೆಯನ್ನು ಹೊಂದಿದೆ. ಸ್ಟ್ರೀಮಿಂಗ್ ವಿಷಯಕ್ಕೆ ಆದ್ಯತೆ ನೀಡುವವರಿಗೆ ಇದು ಬಹಳ ಆಕರ್ಷಕವೆಂದು ಪರಿಗಣಿಸಲಾಗಿದೆ. ಇದೇ ರೀತಿ, ₹1,029 ಯೋಜನೆಯು ಸಹ 84 ದಿನಗಳ ಮಾನ್ಯತೆ ಮತ್ತು ಪ್ರತಿದಿನ 2GB ಡೇಟಾ ಸೌಲಭ್ಯ ಒದಗಿಸುತ್ತದೆ. ಇದರೊಂದಿಗೆ Amazon Prime ಪ್ರಯೋಜನಗಳನ್ನು ಒಳಗೊಂಡಿದೆ.
ಕಡಿಮೆ ಬೆಲೆಯ ಪ್ಲಾನ್‌ಗಳು:
ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಬಯಸುವವರಿಗೆ, ₹449 ಯೋಜನೆಯು ಉತ್ತಮವಾಗಿದೆ. ಇದು 28 ದಿನಗಳ ಮಾನ್ಯತೆಯೊಂದಿಗೆ, ಪ್ರತಿದಿನ 3GB ಡೇಟಾವನ್ನು ಬಳಸಬಹುದು. ಇದು ಒಂದು ತಿಂಗಳ ಅವಧಿಯಲ್ಲಿ ಹೆಚ್ಚಿನ ಡೇಟಾ ಬಳಕೆ ಮಾಡುವವರಿಗೆ ಸೂಕ್ತವಾಗಿದೆ. ಅಲ್ಲದೇ ಕೊನೆಯದಾಗಿ, ₹399 ಯೋಜನೆಯು ಅಸ್ತಿತ್ವದಲ್ಲಿದ್ದು, 28 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2.5GB ಡೇಟಾವನ್ನು ಬಳಸಬಹುದು.


Click it and Unblock the Notifications