ಕಳೆದ ಕೆಲವು ವಾರಗಳಲ್ಲಿ ಬೆಳ್ಳುಳ್ಳಿ ಬೆಲೆಗಳು ಗಗನಕ್ಕೇರಿದೆ. ದೇಶದ ಹಲವಾರು ಭಾಗಗಳಲ್ಲಿ ರಿಟೇಲ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳುಳ್ಳಿ ದರವು ಸುಮಾರು 300-400 ರೂಪಾಯಿಗೆ ತಲುಪಿದೆ. ಬೆಳ್ಳುಳ್ಳಿ ಬೆಲೆಗಳು ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಹೆಚ್ಚಾಗುತ್ತವೆ.
ಇನ್ನು ವೋಲ್‌ಸೇಲ್ ಅಥವಾ ಸಗಟು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಪ್ರತಿ ಕೆಜಿಗೆ 130-140 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಅತ್ಯುತ್ತಮ ಗುಣಮಟ್ಟದ ಬೆಳ್ಳುಳ್ಳಿಯ ಸಗಟು ದರವು ಕೆಜಿಗೆ 220-250 ರೂಪಾಯಿಯ ನಡುವೆ ಇದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಈ ಬೆಲೆ ಏರಿಕೆಗೆ ಕಾರಣ ಕೆಳಗಿದೆ. ಮುಂದೆ ಓದಿ....

ಬೆಳ್ಳುಳ್ಳಿ ಬೆಲೆ ಡಬಲ್ ಆಗಲು ಕಾರಣವೇನು?
ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಅನೇಕ ನಗರಗಳಲ್ಲಿ ತೀವ್ರ ಬೆಳೆ ಹಾನಿಯಾಗಿದೆ. ಈ ನಡುವೆ ಈರುಳ್ಳಿ, ಬೆಳ್ಳುಳ್ಳಿಯಂತಹ ಮಸಾಲೆಗೆ ಪ್ರಮುಖವಾಗಿರುವ ಆಹಾರ ವಸ್ತುಗಳ ದರವು ಒಂದು ವಾರದೊಳಗೆ ದ್ವಿಗುಣಗೊಂಡಿದೆ. ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಳು ಹಾನಿಗೊಳಗಾದ ಕಾರಣ ಬೆಲೆ ಏರಿಕೆಯಾಗುತ್ತಿದೆ.
ಭಾರತದ ಕೆಲವು ಭಾಗಗಳಲ್ಲಿ ಮಿಚಾಂಗ್ ಚಂಡಮಾರುತದಿಂದ ಉಂಟಾದ ಅಕಾಲಿಕ ಮಳೆಯು ಹೆಚ್ಚಿನ ಪ್ರಮಾಣದ ಬೆಳ್ಳುಳ್ಳಿ ಬೆಳೆಗಳನ್ನು ನಾಶಮಾಡಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಕೊರತೆ ಉಂಟಾಗಿದೆ. ಇದರಿಂದ ಬೆಲೆ ದ್ವಿಗುಣವಾಗಿದೆ.
ಈರುಳ್ಳಿ ಪೂರೈಕೆಯಲ್ಲಿ ಕೊರತೆಯ ಬಳಿಕ ಈಗ ಬೆಳ್ಳುಳ್ಳಿ ಬೆಲೆಯಲ್ಲಿ ಅನಿರೀಕ್ಷಿತ ಏರಿಕೆಯಾಗಿದೆ. ಕೇಂದ್ರವು ಬೆಲೆ ಇಳಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ದರಗಳು ರಿಟೇಲ್ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ. ಇನ್ನು ಅಗತ್ಯ ಹಣ್ಣುಗಳು ಮತ್ತು ತರಕಾರಿಗಳ ಬೆಲೆಯಲ್ಲಿಯೂ ಏರಿಕೆಯಾಗಿದೆ.
ಎಪಿಎಂಸಿ ವ್ಯಾಪಾರಿಗಳ ಪ್ರಕಾರ ಈ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಶೀಘ್ರವೇ ಸುಧಾರಿಸುವ ಸಾಧ್ಯತೆಯಿಲ್ಲ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮಹಾರಾಷ್ಟ್ರದಲ್ಲಿ ಕಳಪೆ ಬೆಳೆಗೆ ಕಾರಣವಾಗಿವೆ. ಆದರೆ ದಕ್ಷಿಣದ ರಾಜ್ಯಗಳಿಂದ ಸರಬರಾಜು ಕಡಿಮೆಯಾಗಿದೆ.
ಪಶ್ಚಿಮ ರಾಜ್ಯದ ಎಪಿಎಂಸಿ ಸಗಟು ಯಾರ್ಡ್‌ಗಳು ಈಗ ಬೆಳ್ಳುಳ್ಳಿಯನ್ನು ಕೆಜಿಗೆ 150-250 ರೂಪಾಯಿಯಂತೆ ಮಾರಾಟ ಮಾಡುತ್ತಿದೆ. ಇದರಿಂದಾಗಿ ಆ ಪ್ರದೇಶಗಳಲ್ಲಿ ಬೆಳ್ಳುಳ್ಳಿ ರಿಟೇಲ್ ಬೆಲೆಗಳು ಪ್ರತಿ ಕೆಜಿಗೆ 300-400 ರೂಪಾಯಿಗೆ ತಲುಪಿದೆ.
ಈಗಾಗಲೇ ಈರುಳ್ಳಿ, ಟೊಮೆಟೊ ಬೆಲೆ ಹೆಚ್ಚಾದ್ದಂತೆ ಮನೆಯಲ್ಲಿ ತಯಾರಿಸಿದ ಒಂದು ಪ್ಲೇಟ್ ಊಟದ ದರವೂ ಏರಿಕೆಯಾಗಿದೆ. ಈಗ ಈ ಬೆಲೆ ಏರಿಕೆಗೆ ಬೆಳ್ಳುಳ್ಳಿಯು ತನ್ನ ಕೊಡುಗೆಯನ್ನು ಕೂಡಾ ನೀಡಿದೆ. ಮನೆಯಲ್ಲಿ ಬೇಯಿಸಿದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳ ವೆಚ್ಚವು ಕ್ರಮವಾಗಿ ತಿಂಗಳಿಗೆ ಶೇಕಡ 10 ರಷ್ಟು ಮತ್ತು ಶೇಕಡ 5 ರಷ್ಟು ಹೆಚ್ಚಳವಾಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications