ಬ್ಯಾಂಕ್‌ಗಳಂತೆ ಅಂಚೆಕಚೇರಿಗಳು (Bank, Post Office) ಕೂಡಾ ಹಲವಾರು ಹೂಡಿಕೆ ಯೋಜನೆಗಳನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ. ಸಾಮಾನ್ಯವಾಗಿ ಬ್ಯಾಂಕುಗಳು ನೀಡುವ ಹೂಡಿಕೆ ಯೋಜನೆಗಳ ಮೇಲಿನ ಬಡ್ಡಿದರಗಳು ಸ್ವಲ್ಪ ಜಾಸ್ತಿಯೇ ಇರುತ್ತದೆ ಎಂಬುದು ಹಲವರ ಅಭಿಪ್ರಾಯ. ಆದರೆ ಇದಕ್ಕೆ ಪೈಪೋಟಿ ನೀಡುವಂತೆ ಇತ್ತೀಚೆಗೆ ಪೋಸ್ಟ್ ಆಫೀಸ್‌ನಿಂದಲೂ ಯೋಜನೆಗಳನ್ನು ಪರಿಚಯಿಸಿದೆ. ಜೊತೆಗೆ ಆಕರ್ಷಕ ಬಡ್ಡಿದರಗಳನ್ನೂ ನೀಡುತ್ತಿದೆ.

ಗ್ರಾಹಕರು ಮಾಡುವ ಸಣ್ಣ ಹೂಡಿಕೆಗಳು ದೀರ್ಘಾವಧಿಯಲ್ಲಿ ಸ್ಥಿರ ಆದಾಯ ನೀಡುತ್ತವೆ. ಪ್ರಸ್ತುತ ಅಂತಹ ಹಲವು ಹೂಡಿಕೆ ಆಯ್ಕೆಗಳಿದ್ದರೂ, ಬಹುತೇಕ ಹೂಡಿಕೆ ಯೋಜನೆಗಳು ಅಪಾಯವನ್ನು ಒಳಗೊಂಡಿರುತ್ತವೆ. ಆದರೆ ಈ ಎಲ್ಲಾ ಅಪಾಯಗಳಿಗೆ ವಿರುದ್ಧವಾಗಿ, ಸರ್ಕಾರಿ ಬೆಂಬಲಿತ ಯೋಜನೆಗಳು, ಬಾಂಡ್‌ಗಳು ಹಾಗೂ ಬ್ಯಾಂಕ್ ಡೆಪಾಸಿಟ್ ಯೋಜನೆಗಳು ಯಾವುದೇ ನಷ್ಟದ ಅಪಾಯವಿಲ್ಲದೇ, ಪಕ್ಕಾ ಆದಾಯ ನೀಡುತ್ತದೆ.
ಫಿಕ್ಸೆಡ್ ಡೆಪಾಸಿಟ್: ಠೇವಣಿ ಯೋಜನೆಗಳಲ್ಲಿ, ಸ್ಥಿರ ಠೇವಣಿಗಳು (FD) ಹೂಡಿಕೆದಾರರ ಮೊದಲ ಆಯ್ಕೆಯಾಗಿರುತ್ತವೆ. ಪ್ರಸ್ತುತ, ಬ್ಯಾಂಕ್‌ಗಳು ಎಫ್‌ಡಿಗಳಿಗೆ ಆಕರ್ಷಕ ಬಡ್ಡಿ ದರಗಳನ್ನು ನೀಡುತ್ತಿವೆ. ಹಿರಿಯ ನಾಗರಿಕರಿಗೆ ಇತರರಿಗಿಂತ ಸ್ವಲ್ಪ ಹೆಚ್ಚಿನ ಬಡ್ಡಿಗಳು ಇಲ್ಲಿ ಲಭ್ಯವಿದೆ. ಇಂತಹ ಎಫ್‌ಡಿಗಳನ್ನು ಕುಟುಂಬದ ಹಿರಿಯ ಸದಸ್ಯರ ಹೆಸರಿನಲ್ಲೂ ತೆರೆಯಬಹುದು.
ಸ್ಥಿರ ಠೇವಣಿಗಳು ಜನಪ್ರಿಯ ಆರ್ಥಿಕ ಆಯ್ಕೆಯಾದರೂ, ಪೋಸ್ಟ್ ಆಫೀಸ್‌ಗಳಿಗೆ ಹೋಲಿಸಿದ್ರೆ, ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಭಿನ್ನ. ಅಂಚೆ ಕಚೇರಿಗಳಲ್ಲೂ ಇದೇ ರೀತಿಯ ಆಕರ್ಷಕ ಬಡ್ಡಿದರಗಳನ್ನು ಸ್ಥಿರ ಠೇವಣಿಗಳಲ್ಲಿ ನೀಡುತ್ತದೆ. ಇವುಗಳನ್ನು 'ಟೈಮ್ ಡೆಪಾಸಿಟ್' (Time Deposit - TD) ಎಂದೂ ಕರೆಯಲಾಗುತ್ತದೆ.
ಟೈಂ ಡೆಪಾಸಿಟ್:
ಅಂಚೆ ಕಚೇರಿ ಟೈಮ್ ಡೆಪಾಸಿಟ್‌ಗಳನ್ನು 1 ರಿಂದ 5 ವರ್ಷಗಳ ಅವಧಿಗೆ ತೆರೆಯಬಹುದು. ಬ್ಯಾಂಕ್ ಎಫ್‌ಡಿಗಳಂತೆ ಇವು ನಿರ್ದಿಷ್ಟ ಅವಧಿಗೆ ಪಕ್ಕಾ ಆದಾಯ ನೀಡುತ್ತವೆ.
ಟೈಂ ಡೆಪಾಸಿಟ್‌ನಲ್ಲಿ ಪ್ರಸ್ತುತ ಬಡ್ಡಿ ದರಗಳು: 1 ವರ್ಷಕ್ಕೆ 6.9%, 2 ವರ್ಷಕ್ಕೆ 7.0%, 3 ವರ್ಷಕ್ಕೆ 7.1%, ಮತ್ತು 5 ವರ್ಷಕ್ಕೆ 7.5% ಬಡ್ಡಿದರಗಳನ್ನು ನೀಡುತ್ತದೆ. ಅಲ್ಲದೇ ಕನಿಷ್ಠ ಹೂಡಿಕೆ ಮಾಡಿದ್ರೆ ₹1,000 ಆಗಿದ್ದು, ಅದಕ್ಕೆ ಗರಿಷ್ಠ ಮಿತಿಯಿಲ್ಲ.
ಅಂಚೆ ಕಚೇರಿ ಟಿಡಿ ಯೋಜನೆ ತೆರೆಯಬೇಕೆಂದರೆ ವಯಸ್ಸು ಅಥವಾ ಲಿಂಗ ಪರಿಗಣನೆಗೆ ಬರುವುದಿಲ್ಲ. ಆದ್ದರಿಂದ ಎಲ್ಲಾ ಹೂಡಿಕೆದಾರರು ಒಂದೇ ಬಡ್ಡಿ ದರವನ್ನು ಪಡೆಯುತ್ತಾರೆ. ಇನ್ನು ಈ ಟೈಂ ಡೆಪಾಸಿಟ್‌ನಲ್ಲಿ ನಿಮ್ಮ ಸಂಗಾತಿಯ ಹೆಸರಿನಲ್ಲಿ ₹1,00,000 ಮೊತ್ತವನ್ನು 2 ವರ್ಷಗಳ (24 ತಿಂಗಳು) ಇನ್ವೆಸ್ಟ್ ಮಾಡಿದರೆ, ಮೆಚ್ಯೂರಿಟಿ ವೇಳೆ ₹1,14,888 ರೂ. ಸಿಗುತ್ತದೆ. ಇದರಲ್ಲಿ ₹14,888 ಬಡ್ಡಿ ಸಿಗುತ್ತದೆ. ಈ ಯೋಜನೆಯು ಯಾವುದೇ ನಷ್ಟದ ಅಪಾಯವಿಲ್ಲದೆ, ಆರಾಮವಾಗಿ ಹೂಡಿಕೆ ಮಾಡಬಹುದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications