ಭಾರತದ ಆರ್ಥಿಕತೆಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಆರ್‌ಬಿಐ ಇತ್ತೀಚೆಗಷ್ಟೇ ಮಹತ್ವದ ನಿರ್ಧಾರ ಕೈಗೊಂಡಿತ್ತು. ಆ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಸೆಂಬರ್ 5, 2025 ರಂದು ನಡೆದ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ರೆಪೊ ದರವನ್ನು 25 ಮೂಲ ಅಂಕಗಳಷ್ಟು (0.25%) ಕಡಿಮೆ ಮಾಡುವ ಮೂಲಕ, ಅದನ್ನು 5.25% ತಲುಪಿದೆ. ಇದು ಈ ವರ್ಷದಲ್ಲಿ ನಾಲ್ಕನೇ ಬಾರಿ ಇಳಿಸಲಾಗಿದ್ದು, ಒಟ್ಟು ಒಂದು ವರ್ಷದಲ್ಲಿ 1.25% ದರ ಕಡಿತವಾಗಿದೆ.

ಇನ್ನು ಆರ್‌ಬಿಐ ನಿರ್ಧಾರದ ಬೆನ್ನಲ್ಲೇ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವು ಬ್ಯಾಂಕುಗಳು ತಮ್ಮ ಸಾಲದ ಬಡ್ಡಿ ದರಗಳನ್ನೂ ಸಹ ಕಟ್ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಒದಗಿಸಿದೆ.
ಬ್ಯಾಂಕ್ ಆಫ್ ಬರೋಡಾ:
ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಬರೋಡಾ ತನ್ನ ಸಾಲದ ದರಗಳನ್ನು ಕಡಿತಗೊಳಿಸಿದೆ. ಇದೀಗ ಬ್ಯಾಂಕ್ ಆಫ್ ಬರೋಡಾ ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (BRLLR) ಅನ್ನು 8.15% ರಿಂದ 7.90% ಗೆ ಕಡಿತಗೊಳಿಸಿದೆ. ಈ ಪರಿಷ್ಕೃತ ದರಗಳು ಡಿಸೆಂಬರ್ 6, 2025 ರಿಂದ ಜಾರಿಯಾಗಿದ್ದು, ಸಾಲ ಪಡೆಯುವವರಿಗೆ ಅನುಕೂಲವಾಗಲಿದೆ.
ಇಂಡಿಯನ್ ಬ್ಯಾಂಕ್:
ಇಂಡಿಯನ್ ಬ್ಯಾಂಕ್ ತನ್ನ ರೆಪೊ-ಲಿಂಕ್ಡ್ ಬೆಂಚ್‌ಮಾರ್ಕ್ ಲೆಂಡಿಂಗ್ ರೇಟ್ (RBLR) ಅನ್ನು 8.20% ರಿಂದ 7.95% ಗೆ, ಹಾಗೂ MCLR ಅನ್ನು 5 ಬೇಸಿಸ್ ಪಾಯಿಂಟ್‌ಗಳಷ್ಟು ಕಟ್ ಮಾಡಿದೆ. ಇದೂ ಕೂಡಾ ಡಿಸೆಂಬರ್ 6 ರಿಂದ ಜಾರಿಗೆ ಬಂದಿದ್ದು, ಗ್ರಾಹಕರು ಇದರ ಅನುಕೂಲ ಪಡೆಯಬಹುದು.
ಪಂಜಾಬ್ ನ್ಯಾಷನಲ್ ಬ್ಯಾಂಕ್:
ಆರ್‌ಬಿಐ ನಿರ್ಧಾರದ ಬೆನ್ನಲ್ಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಕೂಡಾ ತನ್ನ ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (RLLR) ಅನ್ನು 8.35% ರಿಂದ 8.10% ಗೆ ಇಳಿಸಿದೆ. ಹೊಸ ದರಗಳಲ್ಲಿ 10 ಮೂಲ ಅಂಕಗಳ ಬೇಸಿಕ್ ಸರ್ವೀಸ್ ಪ್ರೈಸ್ (BSP) ಕೂಡಾ ಸೇರಿದೆ. ಆದಾಗ್ಯೂ, MCLR ಮತ್ತು ಬೇಸ್ ರೇಟ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಈ ದರಗಳು ಡಿಸೆಂಬರ್ 6, 2025 ರಿಂದ ಜಾರಿಗೆ ಬಂದಿದ್ದು, ಈ ಮೂಲಕ ಗೃಹಸಾಲ, ಕಾರ್ ಲೋನ್‌ನಲ್ಲಿ ಇಎಮ್‌ಐ ಕೂಡಾ ಕಡಿಮೆಯಾಗಲಿದೆ.
ಬ್ಯಾಂಕ್ ಆಫ್ ಇಂಡಿಯಾ:
ಬ್ಯಾಂಕ್ ಆಫ್ ಇಂಡಿಯಾ (BOI) ಕೂಡಾ ಆರ್‌ಬಿಐ ನಿರ್ಧಾರದ ಬೆನ್ನಲ್ಲೇ ತನ್ನ RBLR ಅನ್ನು 0.25% ಇಳಿಸಿದೆ. ಈ ಮೂಲಕ RBLR 8.35% ರಿಂದ 8.10% ನಲ್ಲಿದೆ.
ಕರೂರ್ ವೈಶ್ಯ ಬ್ಯಾಂಕ್:
ಖಾಸಗಿ ವಲಯದ ಕರೂರ್ ವೈಶ್ಯ ಬ್ಯಾಂಕ್ ತನ್ನ MCLR ಅನ್ನು 0.10% ರಷ್ಟು ಇಳಿಕೆ ಮಾಡಿದ್ದು, ಒಟ್ಟು 9.55% ರಿಂದ 9.45% ಕ್ಕೆ ಮುಟ್ಟಿದೆ. ಹೊಸ ದರಗಳು ಡಿಸೆಂಬರ್ 7 ರಿಂದ ಈಗಾಗಲೇ ಜಾರಿಯಲ್ಲಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ:
ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಮಹಾರಾಷ್ಟ್ರ (BOM) ಕೂಡಾ, ಡಿಸೆಂಬರ್ 7 ರಂದು ಮನೆ, ವಾಹನ, ಶಿಕ್ಷಣ ಹಾಗೂ ಇತರ RLLR-ಲಿಂಕ್ಡ್ ಸಾಲಗಳ ಬಡ್ಡಿ ದರಗಳನ್ನು 0.25% ಇಳಿಕೆ ಮಾಡಿದೆ. ಬಡ್ಡಿದರ ಕಡಿತದ ನಂತರ, ಗೃಹ ಸಾಲದ ಬಡ್ಡಿದರ 7.10% ರಿಂದ ಪ್ರಾರಂಭವಾದರೆ, ವಾಹನ ಸಾಲವು 7.45% ರಿಂದ ಪ್ರಾರಂಭವಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications