ಹೂಡಿಕೆ ಮಾಡುವುದು (Investment) ಹಲವರ ಕನಸು. ಅದರಲ್ಲೂ ಹೂಡಿಕೆ ಮಾಡಿದ ಹಣಕ್ಕೆ ತಕ್ಕ ಲಾಭವೂ ಸಿಗಬೇಕೆಂದು ಹೆಚ್ಚಿನವರು ಬಯಸುತ್ತಾರೆ. ತಾವು ದುಡಿದ ಸಂಪಾದನೆಯಲ್ಲಿ ಸ್ವಲ್ಪ ಹಣವನ್ನು ಹೂಡಿಕೆಗಾಗಿ (Savings) ಹೆಚ್ಚಿನವರು ಮೀಸಲಿಡುತ್ತಾರೆ. ಅಲ್ಲದೇ ಸರ್ಕಾರ, ಬ್ಯಾಂಕ್‌ಗಳು ಕೂಡಾ ಸಾರ್ವಜನಿಕರಿಗಾಗಿ ಹಲವು ಹೂಡಿಕೆ ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲೂ ಪೋಸ್ಟ್ ಆಫೀಸ್‌ನಲ್ಲಿ (Post Office) ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಹೀಗೆ ಹಲವು ಹೂಡಿಕೆ ಯೋಜನೆಗಳಿವೆ. ಕೆಲವು ಸ್ಕೀಮ್‌ಗಳು ಹೆಚ್ಚು ಬಡ್ಡಿದರಗಳನ್ನು ನೀಡಿದರೆ, ಇನ್ನೂ ಕೆಲವು ಕಡಿಮೆ ಬಡ್ಡಿದರಗಳನ್ನು ನೀಡುತ್ತದೆ.

ಈ ಯೋಜನೆ ಹೂಡಿಕೆದಾರರಿಗೆ ಬೆಸ್ಟ್!
ಪೋಸ್ಟ್ ಆಫೀಸ್ ಹಿರಿಯ ನಾಗರಿಕರಿಗಾಗಿ ಹಿರಿಯ ನಾಗರಿಗರ ಉಳಿತಾಯ ಯೋಜನೆ (SCSS) ಪರಿಚಯಿಸಿದೆ. ಇದು ಸಂಪೂರ್ಣವಾಗಿ ಸರ್ಕಾರ ಅಧೀನದಲ್ಲಿ ಬರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ವಾರ್ಷಿಕವಾಗಿ 8.2% ಬಡ್ಡಿದರವನ್ನು ಪಡೆಯಬಹುದು. ಈ ಬಡ್ಡಿದರದ ಮೂಲಕ ಹೂಡಿಕೆದಾರರು ಮಾಸಿಕವಾಗಿ ಉತ್ತಮ ಆದಾಯ ಪಡೆಯಬಹುದು. ಅಲ್ಲದೇ ನಿಮ್ಮ ಹೂಡಿಕೆ ಹೂಡಿಕೆಯ ಹಣ ಸುರಕ್ಷಿತವಾಗಿರುತ್ತದೆ. ನಿಮ್ಮ ಹೂಡಿಕೆ ಹಣಕ್ಕೆ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಜಮಾ ಮಾಡಲಾಗುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ ಹೇಗೆ ತೆರೆಯುವುದು?
- ಈ ಯೋಜನೆ ತೆರೆಯಲು ಹತ್ತಿರದ ಪೋಸ್ಟ್ ಆಫೀಸ್‌ಗೆ ಹೋಗಬೇಕು. ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕು.
- ಅಲ್ಲದೇ ನೀವು ಅಧಿಕೃತ ವೆಬ್‌ಸೈಟ್‌ನಲ್ಲೂ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
- ನಂತರ ಅರ್ಜಿಯಲ್ಲಿ ನಿಮ್ಮ ಎಲ್ಲಾ ಮಾಹಿತಿಯನ್ನು ಬರೆಯಬೇಕಾಗುತ್ತದೆ.
- ಆ ಬಳಿಕ ನಿಮ್ಮ ಪಾಸ್‌ಪೋರ್ಟ್ ಸೈಜ್ ಫೋಟೋ ನೀಡಬೇಕು.
- ನಿಮ್ಮ ಆಧಾರ್, ಪ್ಯಾನ್ ಹೀಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಲಕ್ಷಣಗಳು:
- ಈ ಯೋಜನೆಯಲ್ಲಿ ಕನಿಷ್ಠ ಅಂದರೆ 1 ಸಾವಿರ ರೂ. ಹೂಡಿಕೆ ಮಾಡಬಹುದು. ಗರಿಷ್ಠ 30 ಲಕ್ಷದವರೆಗೆ ಠೇವಣಿ ಇಡಬಹುದು.
- ಇನ್ನು ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ಎರಡು ಖಾತೆಗಳನ್ನು ತೆರೆಯಬಹುದು.
- ಅಲ್ಲದೇ ಗಂಡ-ಹೆಂಡತಿ ಜಂಟಿ ಖಾತೆಯನ್ನು ತೆರೆಯುವ ಅವಕಾಶ ನೀಡಲಾಗಿದೆ.
30 ಲಕ್ಷ ಠೇವಣಿ ಇಟ್ಟರೆ ಎಷ್ಟು ಹಣ ಬರುತ್ತದೆ?
- ಹಿರಿಯ ನಾಗರಿಕರ ಯೋಜನೆಯ ವಾರ್ಷಿಕ ಬಡ್ಡಿದರ 8.2%
- ಅವಧಿ: 5 ವರ್ಷಗಳು
- ಕನಿಷ್ಠ ಠೇವಣಿ: 1000 ರೂ.
- ಗರಿಷ್ಠ ಠೇವಣಿ: 30 ಲಕ್ಷ ರೂ.
- 3 ತಿಂಗಳಿಗೊಮ್ಮೆ ಬಡ್ಡಿ ಜಮಾ: 61,500 ರೂ.
- ಮಾಸಿಕ ಬಡ್ಡಿ: 20,500 ರೂ.
- 5 ವರ್ಷದಲ್ಲಿ ಒಟ್ಟು ಆದಾಯ: 12,30,000 ರೂ.
- ಅಂದರೆ ಒಟ್ಟು 42,30,000 ಸಾವಿರ ಹಣ ಹಿಂಪಡೆಯಬಹುದು.
ಹೆಚ್ಚಿನವರು ಇಂತಹ ಹೂಡಿಕೆ ಯೋಜನೆ ಹುಡುಕುತ್ತಾ ಇರುತ್ತಾರೆ. ಆದ್ರೆ ಕೆಲವರಿಗೆ ಮಾಹಿತಿಯ ಕೊರತೆಯಿಂದ ಇಂತಹ ಯೋಜನೆ ಬಗ್ಗೆ ಗೊತ್ತೇ ಇರಲ್ಲ. ಆದ್ದರಿಂದ ಸರಿಯಾದ ಮಾಹಿತಿ ಪಡೆದುಕೊಂಡು, ಉತ್ತಮ ಆದಾಯ ಬರುವ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಆದ್ರೆ ಹಣಕಾಸು ತಜ್ಞರಿಂದ ಸಲಹೆ ಪಡೆದರೆ ಉತ್ತಮ.
(ಈ ವಿಶ್ಲೇಷಣೆ ಮತ್ತು ಶಿಫಾರಸುಗಳು ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆಗೆ ಖಾತರಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟವನ್ನು ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸ್ವತಂತ್ರವಾಗಿ ಪರಿಶೀಲಿಸಬೇಕು.)


Click it and Unblock the Notifications