Personal Loan App: ಯಾವುದೇ ಒತ್ತಡವಿಲ್ಲದೇ, ಕ್ಷಣಮಾತ್ರದಲ್ಲಿ ಹಣ ಪಡೆಯಿರಿ! ಆಪ್‌ ಮೂಲಕ ಪರ್ಸನಲ್‌ ಲೋನ್‌ ಹೀಗೆ ಪಡೆಯಿರಿ

ಆದಾಯ (Income) ಇಲ್ಲದಿದ್ದಾಗ, ತುರ್ತು ಪರಿಸ್ಥಿತಿಗಳಲ್ಲಿ ಹೆಚ್ಚಿನವರು ಸಾಲ ಮಾಡುತ್ತಾರೆ. ಅಲ್ಲದೇ ಚಿನ್ನ, ಶಿಕ್ಷಣ, ಆರೋಗ್ಯ ಸಮಸ್ಯೆ ಅಂತಾನೂ ಲೋನ್‌ (Loan) ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ವೈಯಕ್ತಿಕ ಸಾಲಗಳಿಗೆ (Personal Loans) ಹೆಚ್ಚಿನವರು ಅರ್ಜಿ ಸಲ್ಲಿಸುತ್ತಾರೆ. ಸಾಲಗಳು ತುರ್ತಾಗಿ ಬೇಕಾದಾಗ ಬ್ಯಾಂಕಿನಲ್ಲಿ ಪಡೆಯೋದು ವಿಳಂಬವಾಗುತ್ತದೆ. ಆದ್ದರಿಂದ ಹೆಚ್ಚಿನವರು ಇತ್ತೀಚೆಗೆ ಡಿಜಿಟಲ್‌ ಸಾಲಗಳಿಗೆ (Digital Loan) ಹೆಚ್ಚಿನ ಆದ್ಯತೆ ನೀಡುತ್ತಾರೆ.

ಯಾವುದೇ ಒತ್ತಡವಿಲ್ಲದೇ, ಕ್ಷಣಮಾತ್ರದಲ್ಲಿ ಹಣ ಪಡೆಯಿರಿ!

ಸಾಮಾನ್ಯ ಸಾಲಗಳಿಗಿಂತ ಈ ಆ್ಯಪ್‌ಗಳು ಹೆಚ್ಚು ವೇಗವಾಗಿ ನಿಮ್ಮ ಸಾಲಗಳನ್ನು ನೀಡುತ್ತವೆ ಎಂಬುದು ಹಲವರ ಅಭಿಪ್ರಾಯ. ಇದಕ್ಕೆ ಪರ್ಯಾಯವಾಗಿ ಹಲವಾರು ಪರ್ಸನಲ್ ಲೋನ್ ಅಪ್ಲಿಕೇಶನ್‌ಗಳು ಬಳಕೆಯಲ್ಲಿದೆ. ಹಾಗಿದ್ರೆ ಇಂತಹ ಲೋನ್ ಆ್ಯಪ್‌ಗಳನ್ನು ಬಳಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ವೇಗದಲ್ಲಿ ಹಣ ಪಡೆಯುವುದು: ಪರ್ಸನಲ್ ಲೋನ್ ಆ್ಯಪ್ ಬಳಸಿದ್ರೆ, ಬ್ಯಾಂಕಿಗೆ ಹೋಗುವ, ಸರತಿ ಸಾಲಿನಲ್ಲಿ ನಿಲ್ಲುವ ಅಥವಾ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಕೆಲವೇ ನಿಮಿಷಗಳಲ್ಲಿ ಅಗತ್ಯವಿರುವ ಹಣ ನಿಮ್ಮ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಆದ್ದರಿಂದ ಅಗತ್ಯ ಸಂದರ್ಭದಲ್ಲಿ ಬಹಳ ಬೇಗನೆ ನೀವು ಹಣ ಪಡೆಯಬಹುದು.

ಸುಲಭ ಮತ್ತು ವೇಗದ ಅರ್ಜಿ ಪ್ರಕ್ರಿಯೆ: ಬ್ಯಾಂಕಿಗೆ ಹೋಗಿ ಸಲ್ಲಿಸುವ ಸಾಲದ ಅರ್ಜಿಗಳಿಗಿಂತ ಭಿನ್ನವಾಗಿ, ಈ ಆ್ಯಪ್‌ಗಳ ಮೂಲಕ ಅರ್ಜಿ ಸಲ್ಲಿಸುವುದು ಸುಲಭ. ಅನೇಕ ದಾಖಲೆಗಳನ್ನು ಸಲ್ಲಿಸುವ, ಉದ್ದ ಉದ್ದ ಫಾರ್ಮ್‌ಗಳನ್ನು ಭರ್ತಿ ಮಾಡುವ ಅಥವಾ ಮ್ಯಾನ್ಯುವಲ್ ಪರಿಶೀಲನೆಗಾಗಿ ಕಾಯುವ ಬದಲು, ನಿಮ್ಮ KYC ವಿವರಗಳನ್ನು ಸಲ್ಲಿಸಿದ್ರೆ ಸಾಕು, ಕೆಲವೇ ಕ್ಷಣಗಳಲ್ಲಿ ಸಾಲದ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಶೀಘ್ರ ಪರಿಶೀಲನೆ: ವೈಯಕ್ತಿಕ ಸಾಲ ಆ್ಯಪ್‌ಗಳಲ್ಲಿ ಅರ್ಜಿ ಸಲ್ಲಿಸಿದರೆ ಪರಿಶೀಲನಾ ಪ್ರಕ್ರಿಯೆಯೂ ಬಹಳ ಸುಲಭವಾಗಿರುತ್ತದೆ. ಇ-ಕೆವೈಸಿ, ದಾಖಲೆಗಳ ಪರಿಶೀಲನೆ ಎಲ್ಲವೂ ಆಟೋಮ್ಯಾಟಿಕ್‌ ಆಗಿರುತ್ತದೆ. ಇದರಿಂದ ಸಾಲ ಬೇಗ ಸಿಗಲು ಅನುವು ಮಾಡಿಕೊಡುತ್ತದೆ.

ನಿಯಮಗಳು: ಆ್ಯಪ್‌ಗಳು ಬಡ್ಡಿ ದರ, ಪ್ರೊಸೆಸ್ಸಿಂಗ್ ಶುಲ್ಕ, ಸಾಲ ಪಾವತಿ ಮತ್ತು ಒಟ್ಟು ಮರುಪಾವತಿಸಬೇಕಾದ ಹಣದ ಮಾಹಿತಿಯನ್ನು ಸರಿಯಾಗಿ ನೀಡುತ್ತದೆ ಅನೇಕ ಆ್ಯಪ್‌ಗಳು ಇಎಂಐ ಕ್ಯಾಲ್ಕುಲೇಟರ್‌ಗಳನ್ನು ಸಹ ಸಾಲ ಪಡೆಯುವಾಗಲೇ ನೀಡುತ್ತವೆ. ಇದು ಇಎಂಐ ಪಾವತಿಯನ್ನು ಮತ್ತಷ್ಟು ಸುಲಭಗೊಳಿಸುತ್ತದೆ.

ಸುರಕ್ಷಿತ ಹಾಗೂ ಬೆಸ್ಟ್‌: ಸಾಲದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವ ಮೊದಲು ಡೇಟಾ ಸುರಕ್ಷತೆ ಬಗ್ಗೆ ಹೆಚ್ಚಿನವರಿಗೆ ಗೊಂದಲಗಳಿರುತ್ತೆ. ಆದರೆ ಕೆಲವು ಅಧಿಕೃತ ಆಪ್‌ಗಳು, ಗ್ರಾಹಕರ ಡೇಟಾವನ್ನು ರಕ್ಷಿಸಲು ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ನೀಡುತ್ತದೆ. ಎನ್‌ಕ್ರಿಪ್ಶನ್ ಮತ್ತು ಸುರಕ್ಷಿತ ಸರ್ವರ್‌ಗಳನ್ನು ಬಳಸುವುದರಿಂದ ಗ್ರಾಹಕರು ನೀಡುವ ಎಲ್ಲಾ ಮಾಹಿತಿಯೂ ಸುರಕ್ಷಿತವಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತವೆ.

(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+