ಚಿನ್ನವು ಒಂದು ಹೂಡಿಕೆಯ ಸಾಧನ..ಕಳೆದ ಐದು ವರ್ಷಗಳಿಗೆ ಹೋಲಿಕೆ ಮಾಡಿಕೆ ಮಾಡಿದರೆ, ಹಳದಿ ಲೋಹವು ಒಂದು ಸುರಕ್ಷಿತ ಆಸ್ತಿಯ ಸ್ಥಾನಮಾನವನ್ನು ಮರಳಿ ಪಡೆದಿದೆ. ಕೋವಿಡ್ ನಂತರ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ರಷ್ಯಾ-ಉಕ್ರೇನ್ ಯುದ್ಧ, ಸುಂಕಗಳ ಮೇಲಿನ ಅನಿಶ್ಚಿತತೆಗಳನ್ನು ಜಗತ್ತು ಎದುರಿಸುವಂತಹ ಸಂದರ್ಭದಲ್ಲೇ ಬೆಲೆಗಳು ಏರಿಕೆಯಾಗಿದೆ.

ಇನ್ನು ವಿಶ್ವ ಚಿನ್ನ ಮಂಡಳಿಯು ತಿಳಿಸಿರುವ ಪ್ರಕಾರ, ಚಿನ್ನದ ಸ್ಪಾಟ್ ಬೆಲೆ ಐದು ವರ್ಷಗಳಲ್ಲಿ ಸುಮಾರು 110%ರಷ್ಟಕ್ಕೆ ಏರಿಕೆಯಾಗಿದೆ. ಇನ್ನು 2020ರ ಜುಲೈನಿಂದ ಹೋಲಿಕೆ ಮಾಡಿಕೊಂಡರೆ, ಪ್ರತಿ ಗ್ರಾಂಗೆ ₹4359 ರಿಂದ ಜುಲೈ 1, 2025 ರಂದು ಪ್ರತಿ ಗ್ರಾಂಗೆ ₹9142 ಕ್ಕೆ ತಲುಪಿದೆ. ಅಂದರೆ ಎಷ್ಟರ ಮಟ್ಟಿಗೆ ಚಿನ್ನದ ಬೆಲೆ ಏರಿಕೆಯಾಗಿದೆ ಎಂದು ನೀವೇ ನೋಡಿ. ಇನ್ನು ಇಲ್ಲಿನವರೆಗೆ 281% ರಷ್ಟು ಜಿಗಿದಿದೆ.
24 ಲಕ್ಷಕ್ಕಿಂತ ಹೆಚ್ಚು ಬಂಡವಾಳ ಸೃಷ್ಟಿ:
ಭಾರತದಲ್ಲಿ ಮ್ಯೂಚುವಲ್ ಫಂಡ್‌ಗಳ ಸಂಘ (AMFI) ನೀಡಿದ ಡೇಟಾ ಪ್ರಕಾರ, ₹1000 ಕೋಟಿ ಕ್ಕಿಂತ ಹೆಚ್ಚಿನ ದೈನಂದಿನ ಆಸ್ತಿ ನಿರ್ವಹಣೆ ಹೊಂದಿರುವ ಎಂಟು ಪ್ರಮುಖ ಚಿನ್ನದ ಇಟಿಎಫ್‌ಗಳು ಕಳೆದ ಒಂದರಿಂದ ಹತ್ತು ವರ್ಷಗಳ ಅವಧಿಯಲ್ಲಿ ಗಮನಾರ್ಹ ಲಾಭ ನೀಡಿವೆ. ಈ ಎಟಿಎಫ್‌ಗಳು ಕಳೆದ ಒಂದು ವರ್ಷದಲ್ಲಿ ಸರಾಸರಿ 34%, 3 ವರ್ಷಗಳಲ್ಲಿ 23%, 5 ವರ್ಷಗಳಲ್ಲಿ 14% ಹಾಗೂ 10 ವರ್ಷಗಳಲ್ಲಿ 12.6% ರಷ್ಟು ವಾರ್ಷಿಕ ಲಾಭವನ್ನು ನೀಡಿವೆ. ಈ ಎಟಿಎಫ್‌ಗಳಲ್ಲಿ ಪ್ರತಿಮಾಸ ₹10,000 ಹೂಡಿಕೆ ಮಾಡಿದಲ್ಲಿ, ಹತ್ತು ವರ್ಷಗಳಲ್ಲಿ ₹24 ಲಕ್ಷಕ್ಕಿಂತ ಹೆಚ್ಚು ಬಂಡವಾಳ ಸೃಷ್ಟಿಸಲು ಸಾಧ್ಯವಾಗಿದೆ ಎಂಬ ಲೆಕ್ಕಾಚಾರವಿದೆ.
ಚಿನ್ನದ ಇಟಿಎಫ್‌ಗಳ ಮುಖ್ಯ ವಿಶೇಷತೆ ಎಂದರೆ, ಇದನ್ನು ಡಿಮ್ಯಾಟ್ ಖಾತೆ ಮೂಲಕ ನೇರವಾಗಿ ಷೇರುಗಳಂತೆ ಖರೀದಿಸಬಹುದು. ಭೌತಿಕ ಚಿನ್ನದಂತೆ ಶುದ್ಧತೆ, ಸಂರಕ್ಷಣೆ, ಅಥವಾ ಮೇಕಿಂಗ್ ಚಾರ್ಜ್‌ಗಳ ತೊಂದರೆ ಇಲ್ಲ. ETFಗಳು ಬಹು ಕಡಿಮೆ ವೆಚ್ಚದ ಅನುಪಾತ ಹೊಂದಿವೆ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ವ್ಯಾಪಾರದ ಮೂಲಕ ಸುಲಭವಾಗಿ ಮಾರಾಟ ಮಾಡಬಹುದಾಗಿದೆ.
ಯಾರು ETFಗಳಲ್ಲಿ ಹೂಡಿಕೆ ಮಾಡಬೇಕು?
ಇಟ್ಟುಕೊಳ್ಳಬೇಕೆಂಬ ಆಸೆ ಇದ್ದರೂ ಸುರಕ್ಷತಾ ವಿಚಾರಗಳಲ್ಲಿ ಆತಂಕವಿರುವವರು, ನಿಜವಾದ ಮೌಲ್ಯವರ್ಧನೆಯ ಲಕ್ಷ್ಯವಿರುವ ದೀರ್ಘಕಾಲೀನ ಹೂಡಿಕೆದಾರರು, ಮತ್ತು ಭಿನ್ನ ಹೂಡಿಕೆ ಚಟುವಟಿಕೆಯನ್ನು ತವರುಬೀಳ್ಗೆ ತರುವವರು ETFಗಳಿಗೆ ಸೂಕ್ತ ಅಭ್ಯರ್ಥಿಗಳು. ಆದರೆ ETFಗಳಲ್ಲಿ ಹೂಡಿಕೆ ಮಾಡುವ ಮೊದಲು ಕೆಲವು ಅಂಶಗಳನ್ನು ಗಮನದಲ್ಲಿಡಬೇಕು.
ಮೊದಲನೆಯದಾಗಿ, ಟ್ರ್ಯಾಕಿಂಗ್ ದೋಷ ಎಂಬುದನ್ನು ಪರಿಶೀಲಿಸಬೇಕು. ಇದು ETF ಚಿನ್ನದ ಬೆಲೆಗೆ ಎಷ್ಟು ಸಮೀಪವಾಗಿದ್ದುದು ಎಂಬುದನ್ನು ತೋರಿಸುತ್ತದೆ. ಕಡಿಮೆ ಟ್ರ್ಯಾಕಿಂಗ್ ದೋಷವು ಉತ್ತಮ ನಿರ್ವಹಣೆಯ ಸೂಚನೆಯಾಗಿರುತ್ತದೆ. ಎರಡನೆಯದಾಗಿ, ETFನ ದ್ರವ್ಯತೆ ಮುಖ್ಯ. ದೈನಂದಿನ ವ್ಯಾಪಾರದ ಪ್ರಮಾಣ ಹೆಚ್ಚಿನದಾದರೆ, ನೀವು ಸುಲಭವಾಗಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲು ಸಾಧ್ಯ. ಕಡಿಮೆ ದ್ರವ್ಯತೆಯು ಬಂಡವಾಳವನ್ನು ರಿಯಾಯಿತಿಯಲ್ಲಿ ಮಾರಬೇಕಾದ ಅನಿವಾರ್ಯತೆಯನ್ನೂಂಟುಮಾಡಬಹುದು.
ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವುದು ಸುಲಭವಾದ, ಕಡಿಮೆ ಅಪಾಯದ, ಮತ್ತು ಹೆಚ್ಚು ಲಾಭದ ಹಾದಿಯಾಗಬಹುದು. ಆದಾಗ್ಯೂ, ಇದು ಮಾರುಕಟ್ಟೆ ಸಂಬಂಧಿತ ಉತ್ಪನ್ನವಾಗಿರುವ ಕಾರಣ, ಹೂಡಿಕೆಗೆ ಮುನ್ನ ನಿಮ್ಮ ಗುರಿ, ಸಮಯಾವಧಿ ಮತ್ತು ಅಪಾಯ ಸಹಿಷ್ಣುತೆಯನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಜಾಣ ಕ್ರಮವಾಗಿರುತ್ತದೆ. ನಿಮಗೆ ಅನುಮಾನವಿದ್ದರೆ, ಸೆಬಿ ಮಾನ್ಯತೆಯ ಹೂಡಿಕೆ ಸಲಹೆಗಾರರೊಂದಿಗಿನ ಸಂವಾದವೇ ಉತ್ತಮ ಆಯ್ಕೆ.


Click it and Unblock the Notifications