ಹಣದ ಅಗತ್ಯ ಯಾವಾಗ ಬರುತ್ತೆ ಅಂತ ಹೇಳೋಕಾಗಲ್ಲ. ಅಂಥ ಸಮಯದಲ್ಲಿ ಹೆಚ್ಚು ಮಂದಿ ಸಾಲವನ್ನು ಅವಲಂಬಿಸುತ್ತಾರೆ. ಅಂಥವರ ಪೈಕಿ ಚಿನ್ನವನ್ನು ತಕ್ಷಣದ ಆರ್ಥಿಕ ಸಾಧನವನ್ನಾಗಿ ಪರಿಗಣಿಸಿ, ಚಿನ್ನದ ಸಾಲ ಮೊರೆ ಹೋಗುತ್ತಾರೆ. ಏಕೆಂದರೆ ಚಿನ್ನದ ಸಾಲವು ಅತೀ ಬೇಗ ಪರಿಹಾರ ನೀಡುವ ಉತ್ತಮ ಮಾರ್ಗವಾಗಿದೆ.

ಹೌದು, ಕೆಲವರು ಚಿನ್ನದ ಆಭರಣಗಳು ಅಥವಾ ಚಿನ್ನದ ನಾಣ್ಯಗಳನ್ನ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗೆ ಒತ್ತೆ ಇಡುತ್ತಾರೆ. ಇದರ ಮೂಲಕ ತ್ವರಿತವಾಗಿ ಹಣದ ತುರ್ತು ಅಗತ್ಯವನ್ನು ಪೂರೈಸಿಕೊಳ್ಳುತ್ತಾರೆ. ಇನ್ನು ಚಿನ್ನದ ಸಾಲಕ್ಕೆ ಬಡ್ಡಿದರ ಕಡಿಮೆ ಇರುವ ಕಾರಣ ಇದು ಅತ್ಯಂತ ಸುಲಭ. ಹಾಗಾದರೆ 2026ರಲ್ಲಿ ಚಿನ್ನದ ಸಾಲ ಪಡೆಯುತ್ತಿರುವವರು ತಿಳಿಯಬೇಕಾದ್ದೇನು? ಈ ವರ್ಷ ಹಲವು ಆರ್ಥಿಕ ಬದಲಾವಣೆಗಳಾಗಿವೆ. ಈ ನಡುವೆ ಚಿನ್ನದ ಸಾಲ ಪಡೆಯುವವರು ಈ ವಿಚಾರವನ್ನ ತಿಳಿಯಲೇಬೇಕು.
ಚಿನ್ನದ ಸಾಲಕ್ಕೆ ಅರ್ಹತೆ:
ಚಿನ್ನದ ಸಾಲದಲ್ಲಿ ಒತ್ತೆ ಇಡುವ ಅವಕಾಶ ಚಿನ್ನಾಭರಣ ಮತ್ತು ನಾಣ್ಯಗಳಿಗೆ ಮಾತ್ರ ಅವಕಾಶವಿದೆ. ಅಂದರೆ ಚಿನ್ನದ ಬಾರ್‍ಗಳು, ಬಿಸ್ಕತ್‌ಗಳು ಅಥವಾ ಇಟಿಎಫ್‌ಗಳ ಮೇಲೆ ಸಾಲ ನೀಡಲಾಗಲ್ಲ. ಆರ್‍ಬಿಐ ನೀಡಿರುವ ಮಾರ್ಗಸೂಚಿ ಪ್ರಕಾರ, ಪ್ರಾಥಮಿಕ ಚಿನ್ನದ ಮೇಲೆ ಸಾಲ ನೀಡುವುದು ನಿಷಿದ್ಧವಾಗಿದೆ. ಇದು ಹಳದಿ ಲೋಹದ ಶುದ್ಧತೆ, ಮಾರುಕಟ್ಟೆ ಸ್ಥಿರತೆ ಮತ್ತು ಸಾಲದ ಸುರಕ್ಷತೆ ಬಗ್ಗೆ ಕಾಳಜಿ ಮೂಡಿಸಿದೆ.
ಚಿನ್ನದ ಮೇಲೆ ಎಷ್ಟು ಸಾಲ ಪಡೆಯಬಹುದು?
ಸಾಲದ ಮೊತ್ತವು ನಿಮ್ಮ ಒತ್ತೆ ಇಟ್ಟ ಚಿನ್ನದ ಮೌಲ್ಯ ಮತ್ತು ಲೋನ್-ಟು-ವ್ಯಾಲ್ಯೂ (LTV) ಅನುಪಾತದ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ, 1 ಕಿಲೋಗ್ರಾಂ ಚಿನ್ನದ ಆಭರಣಗಳಿಗಾಗಿ ಪ್ರತಿ ಗ್ರಾಂ ₹14,750 ದರದಲ್ಲಿ, 75% LTV ಹೊಂದಿದರೆ, ನೀವು ₹1.37 ಕೋಟಿ ಸಾಲ ಪಡೆಯಬಹುದು. ಆದರೆ, ಬಹುತೇಕ ಬ್ಯಾಂಕುಗಳು ಗರಿಷ್ಠ ₹50 ಲಕ್ಷದವರೆಗೂ ಸಾಲ ನೀಡುತ್ತವೆ. ಚಿನ್ನದ ನಾಣ್ಯಗಳ ಬಗ್ಗೆ RBI ನಿಯಮದ ಪ್ರಕಾರ, ಒಟ್ಟೂ ತೂಕ 50 ಗ್ರಾಂ ಮೀರಬಾರದು. ಇದು ಸುಮಾರು ₹5.25 ಲಕ್ಷ ಸಾಲಕ್ಕೆ ಸಮಾನವಾಗಿದೆ.
ಸಾಲದ ಮೌಲ್ಯ ಲೆಕ್ಕಾಚಾರ:
ಸಾಲದ ಮೌಲ್ಯವನ್ನು ಲೆಕ್ಕ ಹಾಕುವಾಗ, ಸಾಲದಾತರು ಚಿನ್ನದ ಶುದ್ಧತೆ ಮತ್ತು ಮಾರುಕಟ್ಟೆ ದರವನ್ನು ಪರಿಗಣಿಸುತ್ತಾರೆ. ಅಮೂಲ್ಯ ಕಲ್ಲುಗಳು ಅಥವಾ ಅಲಂಕಾರಗಳಿಗೆ ಹೆಚ್ಚುವರಿ ಮೌಲ್ಯ ಲೆಕ್ಕಿಸಲಾಗುವುದಿಲ್ಲ. LTV ಅನುಪಾತವು ಸಾಲದ ಮೊತ್ತವನ್ನು ನಿಗಧಿಪಡಿಸುತ್ತದೆ:
• ₹2.5 ಲಕ್ಷದವರೆಗಿನ ಸಾಲಕ್ಕೆ - 85%
• ₹2.5 ಲಕ್ಷದಿಂದ ₹5 ಲಕ್ಷದವರೆಗಿನ ಸಾಲಕ್ಕೆ - 80%
• ₹5 ಲಕ್ಷಕ್ಕಿಂತ ಹೆಚ್ಚು ಸಾಲಕ್ಕೆ - 75%
• ಹಾನಿ ಅಥವಾ ನಷ್ಟದ ಪರಿಣಾಮ:
ಅಡವಿಟ್ಟ ಚಿನ್ನದ ಸುರಕ್ಷತೆಗೆ ಸಾಲದಾತನು ಜವಾಬ್ದಾರಿಯಾಗಿರುತ್ತಾನೆ. ಸಾಲದ ಅವಧಿಯಲ್ಲಿ ಚಿನ್ನಕ್ಕೆ ಏನಾದರೂ ಹಾನಿ ಸಂಭವಿಸಿದರೆ, ಅದರ ದುರಸ್ತಿ ವೆಚ್ಚವನ್ನು ಸಾಲದಾತನು ಭರಿಸಬೇಕು. ಚಿನ್ನದ ತೂಕ ಅಥವಾ ಶುದ್ಧತೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ, ಅದು ಕೂಡ ಸಾಲದಾತನು ಸರಿಪಡಿಸಬೇಕಾಗಿದೆ.
ಮರುಪಾವತಿಯ ನಂತರ ಚಿನ್ನ ಬಿಡುಗಡೆ:
ಸಂಪೂರ್ಣ ಮರುಪಾವತಿಯ ನಂತರ ಚಿನ್ನವನ್ನು ಬಿಡುಗಡೆ ಮಾಡಲು ವಿಳಂಬವಾದರೆ, ದಿನಕ್ಕೆ ₹5,000 ಪರಿಹಾರ ನೀಡಲು ಸಾಲದಾತನು ಬಾಧ್ಯನಾಗುತ್ತಾನೆ. ವಿಳಂಬವು ಸಾಲದಾತ ಕಾರಣವಲ್ಲದಿದ್ದರೆ, ಕಾರಣಗಳನ್ನು ಸಾಲಗಾರ ಅಥವಾ ಕಾನೂನುಬದ್ಧ ಅಧಿಕಾರಿಗಳಿಗೆ ತಿಳಿಸಬೇಕು.
ಚಿನ್ನದ ಸಾಲ ಪಡೆಯುವ ಮುನ್ನ ಇದನ್ನು ಗಮನಿಸಿ:
ಅಂದಹಾಗೆ ನೀವು ಚಿನ್ನದ ಸಾಲ ಪಡೆಯೋ ಸಂದರ್ಭದಲ್ಲಿ ಒಂದಷ್ಟು ವಿಚಾರಗಳನ್ನು ಗಮನಿಸಬೇಕು. ಅಂದರೆ ನಿಮ್ಮ ಚಿನ್ನದ ಮೌಲ್ಯ ಎಷ್ಟು ಸಾಲಕ್ಕೆ ಪರಿಗಣಿಸಲಾಗುತ್ತದೆ ಎಂದು LTV ಮಿತಿಯನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಹಾಗೂ ಸಾಲ ಪಡೆಯುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸಬೇಕು. ಮರುಪಾವತಿ ಸಮಯದಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಚಿನ್ನದ ಭದ್ರತೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕು. ಹಾಗೂ ಚಿನ್ನದ ದರಗಳು ಏರಿಕೆ ಇಳಿಕೆ ಆಗುವುದರಿಂದ, ಪ್ರಸ್ತುತ ದರಗಳ ಪ್ರಕಾರ ಸಾಲವನ್ನು ಯೋಜಿಸಬೇಕು.
ಒಟ್ಟನಿಲ್ಲಿ ಚಿನ್ನದ ಸಾಲವು ತ್ವರಿತ ಹಣಕಾಸು ಅಗತ್ಯಗಳನ್ನು ಪೂರೈಸಲು ಬಹಳ ಉಪಯುಕ್ತವಾಗಿದೆ. ಆದರೆ ಸಾಲವನ್ನು ತೆಗೆದುಕೊಳ್ಳುವ ಮುನ್ನ ಎಲ್ಲಾ ನಿಯಮಗಳು, LTV ಪ್ರಮಾಣಗಳು, ಹಾನಿ ಅಥವಾ ವಿಳಂಬದ ಫಲಿತಾಂಶಗಳನ್ನು ಗಮನಿಸುವುದು ಅತ್ಯಂತ ಮುಖ್ಯ. ಸರಿಯಾದ ಯೋಜನೆಯೊಂದಿಗೆ, ಚಿನ್ನದ ಸಾಲವು ನಿಮ್ಮ ಹಣಕಾಸು ನಿರ್ವಹಣೆಗೆ ಸಹಾಯಕವಾಗಬಹುದು.
(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)
More From GoodReturns

Gold-Silver Today Rates Live Updates: ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ಸಂಪೂರ್ಣ ಮಾಹಿತಿ ಇಲ್ಲಿದೆ

Gold Price Today: ಯುಗಾದಿ ದಿನವೇ ಚಿನ್ನ ಪ್ರಿಯರಿಗೆ ಬಂಪರ್; 2,090 ರೂ. ಇಳಿಕೆ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

Silver Rates Today: ಭಾರತೀಯ ಬೆಳ್ಳಿ ಖರೀದಿದಾರರಿಗೆ ಸಿಹಿಸುದ್ದಿ; 5000 ರೂ.ನಷ್ಟು ಇಳಿಕೆ

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications