ಆರ್ಥಿಕ ತೊಂದರೆ ಅಥವಾ ತಕ್ಷಣದ ಹಣಕಾಸು ಅಗತ್ಯವಿದ್ದಾಗ ಚಿನ್ನದ ಸಾಲಗಳು ಸಹಾಯಕರಾಗಬಹುದು. ಶಿಕ್ಷಣ, ವೈದ್ಯಕೀಯ ವೆಚ್ಚ, ವ್ಯಾಪಾರ ವಿಸ್ತರಣೆ ಅಥವಾ ಮನೆ ನವೀಕರಣದಂತಹ ಅಗತ್ಯಗಳಿಗೆ ಚಿನ್ನದ ಸಾಲವು ತ್ವರಿತ ಪರಿಹಾರ ನೀಡುತ್ತದೆ. ಕಡಿಮೆ ದಾಖಲೆಗಳು, ನಗದು ತಕ್ಷಣ ಲಭ್ಯತೆ, ಮತ್ತು ಸರಳ ಪ್ರಕ್ರಿಯೆಯು ಇದನ್ನು ಆಕರ್ಷಕ ಆಯ್ಕೆಯನ್ನಾಗಿಸುತ್ತವೆ.

ಚಿನ್ನದ ಸಾಲ ಹೇಗೆ ಕೆಲಸ ಮಾಡುತ್ತದೆ ಎಂದರೆ, ನಿಮ್ಮ ಚಿನ್ನಾಭರಣಗಳನ್ನು ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಿಗೆ ಅಡವಿಟ್ಟು, ಆ ಚಿನ್ನದ ತೂಕ ಮತ್ತು ಶುದ್ಧತೆಯನ್ನು ಆಧರಿಸಿ ಹಣವನ್ನು ಪಡೆಯುವ ಪ್ರಕ್ರಿಯೆ. ಸಾಲದ ಮೊತ್ತವು ಚಿನ್ನದ ಶುದ್ಧತೆ (ಕ್ಯಾರೆಟ್) ಮತ್ತು ತೂಕಕ್ಕೆ ಅನುಗುಣವಾಗಿರುತ್ತದೆ.
ವಿವಿಧ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಚಿನ್ನದ ಸಾಲ:
- ಸಾರ್ವಜನಿಕ ಬ್ಯಾಂಕುಗಳು: SBI - 10%, PNB - 8.35%, Bank of India - 9.40%
- ಖಾಸಗಿ ಬ್ಯಾಂಕುಗಳು: HDFC - 9.30%, ICICI - 9.15%, Axis - 9.75%
- ಎನ್‌ಬಿಎಫ್‌ಸಿಗಳು: Bajaj Finserv - 9.50%, Muthoot Finance - 22%, Manappuram Finance - 15%
ಸುರಕ್ಷತೆಗಾಗಿ ಎಲ್ಲಾ ಚಿನ್ನಾ ವಸ್ತುಗಳು ಸಾಲಕ್ಕೆ ಅರ್ಹವಲ್ಲ. ಸಾಮಾನ್ಯವಾಗಿ 18 ರಿಂದ 22 ಕ್ಯಾರೆಟ್ ಶುದ್ಧ ಚಿನ್ನಾಭರಣಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ನಾಣ್ಯಗಳು, ಬಿಳಿ ಚಿನ್ನ, ವಜ್ರದ ಆಭರಣಗಳು, ಲೋಹ ಲೇಪಿತ ವಸ್ತುಗಳು ಮತ್ತು ಹಳೆಯ ಹಾಳಾದ ಚಿನ್ನಾಭರಣಗಳು ಸಾಮಾನ್ಯವಾಗಿ ಸ್ವೀಕರಿಸಲಾಗುವುದಿಲ್ಲ.
ಸಾಲವನ್ನು ಮರುಪಾವತಿಸಲು ಹಲವಾರು ಆಯ್ಕೆಗಳು ಲಭ್ಯವಿವೆ:
ಇಎಂಐ ಆಯ್ಕೆ: ಅಸಲು ಮೊತ್ತ ಮತ್ತು ಬಡ್ಡಿಯನ್ನು ನಿಗದಿತ ಮಾಸಿಕ ಪಾವತಿಗಳಲ್ಲಿ ಪಾವತಿಸಬಹುದು.
ಭಾಗಶಃ ಪಾವತಿ: ಬಡ್ಡಿ ಮತ್ತು ಅಸಲು ಎರಡನ್ನೂ ಬೇಕಾದಂತೆ ಪಾವತಿಸುವ ಅವಕಾಶ.
ಬುಲೆಟ್ ಮರುಪಾವತಿ: ಬಡ್ಡಿ ಮತ್ತು ಅಸಲು ಮೊತ್ತವನ್ನು ಸಾಲ ಅವಧಿಯ ಕೊನೆಯಲ್ಲಿ ಒಂದು ಬಾರಿ ಪಾವತಿಸುವುದು.
ಪೂರ್ವಪಾವತಿ: ಮೆಚುರಿಟಿ ಮುಂಚಿತವಾಗಿ ಸಾಲದ ಅಸಲು ಮೊತ್ತವನ್ನು ಪಾವತಿಸಲು ಅವಕಾಶ.
ಚಿನ್ನದ ಸಾಲ ಪಡೆಯುವಾಗ, ಸಾಲದ ಬಡ್ಡಿದರವನ್ನು ಗಮನಿಸಿ, ಮಾರುಕಟ್ಟೆ ಚಿನ್ನದ ದರ ತಿಳಿದುಕೊಳ್ಳಿ ಮತ್ತು ನಿಮ್ಮ ಹಣಕಾಸು ಪರಿಸ್ಥಿತಿಗೆ ತಕ್ಕಂತೆ ಮರುಪಾವತಿ ಆಯ್ಕೆಯನ್ನು ಆರಿಸಿ. ಇದು ಚಿನ್ನದ ಸಾಲವನ್ನು ಸುಲಭ, ಸುರಕ್ಷಿತ ಮತ್ತು ನಿಮ್ಮ ಅಗತ್ಯಕ್ಕೆ ಸೂಕ್ತವಾದ ಆಯ್ಕೆಯಾಗಿ ಮಾಡುತ್ತದೆ.
(Disclaimer: The views and recommendations expressed are solely those of the individual analysts or entities and do not reflect the views of Goodreturns.in or Greynium Information Technologies Private Limited (together referred as "we"). We do not guarantee, endorse or take responsibility for the accuracy, completeness or reliability of any content, nor do we provide any investment advice or solicit the purchase or sale of securities. All information is provided for informational and educational purposes only and should be independently verified from licensed financial advisors before making any investment decisions.)
More From GoodReturns

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ



Click it and Unblock the Notifications