ಚಿನ್ನ..ಇದು ಎಂದೂ ಕರಗದ ಸಂಪತ್ತು. ಮಹಿಳೆಯರ ಪಾಲಿಗೆ ಅಂದ ಕೊಡುವ ಆಭರಣ, ಹೂಡಿಕೆದಾರರಿಗೆ ಭವಿಷ್ಯದ ನಿಧಿ, ಪ್ರತಿಷ್ಠೆಯ ಸಂಕೇತ, ಪೂಜ್ಯತಾ ಸ್ವರೂಪ..ಹೀಗೆ ಎಲ್ಲಾ ರೀತಿಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿರುವ ಬಂಗಾರಕ್ಕೆ ಇರುವ ಡಿಮ್ಯಾಂಡ್ ಅಷ್ಟಿಷ್ಟಲ್ಲ. ಬೆಲೆ ಕೂಡ ಅಷ್ಟೇ ದುಬಾರಿ. ಕೊಳ್ಳುವುದಕ್ಕಿಂತ ಬೆಲೆ ಕೇಳಿದರೇನೇ ತಲೆ ತಿರುಗುತ್ತದೆ. ಅಷ್ಟಾಗಿದೆ ಚಿನ್ನದ ಬೆಲೆ. ಈಗ ಈ ಚಿನ್ನದ ಬೆಲೆ ಬಗ್ಗೆ ಇನ್ನೂ ಒಂದು ಶಾಕಿಂಗ್ ಸಂಗತಿ ಇದೆ.

ಹೌದು, ಭಾರತೀಯ ಭದ್ರತೆ ಹಾಗೂ ಪ್ರತಿಷ್ಠೆಯ ಸಂಕೇತವಾಗಿರುವ ಚಿನ್ನವು, ಮುಂದಿನ 12 ತಿಂಗಳುಗಳಲ್ಲಿ 10 ಗ್ರಾಂಗೆ ₹1.10 ಲಕ್ಷ ತಲುಪಬಹುದು ಎಂದು ವರದಿಗಳು ಹೇಳುತ್ತಿವೆ. ಈ ನಿರೀಕ್ಷೆಯು ಜಾಗೃತವಾಗಿದೆ. ಇನ್ನು ಈ ಸಂದರ್ಭದಲ್ಲಿಯೇ ಹೂಡಿಕೆದಾರರು ತಾವು ಏನು ಮಾಡಬೇಕು ಎಂಬ ಪ್ರಶ್ನೆಯಲ್ಲಿ ಮುಳುಗಿದ್ದಾರೆ. ಈ ಪ್ರಶ್ನೆಯು ಈಗ ಹೆಚ್ಚು ಮಹತ್ವ ಪಡೆದುಕೊಂಡಿದೆ. ಹಾಗಾದರೆ ಚಿನ್ನದ ಬೆಲೆ ಏರಿಕೆಯಾಗುವ ಸಂದರ್ಭದಲ್ಲಿ, ನೀವು ಏನೆಲ್ಲಾ ಮಾಡಬೇಕು ಎಂಬುದನ್ನು ಇಲ್ಲಿ ಓದಿ ತಿಳಿಯಿರಿ. ಅದಕ್ಕೂ ಮೊದಲು ಈ ಪರಿಯ ಬೆಲೆ ಏರಿಕೆಗೆ ಕಾರಣ ಏನು ಎಂದು ತಿಳಿಯಿರಿ.
ಜಾಗತಿಕ ಪರಿಸ್ಥಿತಿಗಳ ಪ್ರಭಾವ:
ಈ ಪರಿಯ ಬೆಲೆ ಏರಿಕೆಗೆ, ವಿಶ್ವ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಜಿಯೋಪಾಲಿಟಿಕ್ಸ್‌ನ ಅಸ್ಥಿರತೆ ಎನ್ನಬಹುದು. ಅಂದರೆ ರಷ್ಯಾ-ಉಕ್ರೇನ್ ಯುದ್ಧ, ಚೀನಾ-ತೈವಾನ್ ಉದ್ವಿಗ್ನತೆಯಂತಹವು.. ಇದರ ಜೊತೆಗೆ ಅಮೆರಿಕದಲ್ಲಿ ಉಂಟಾಗುತ್ತಿರುವ ಆರ್ಥಿಕ ಅಸ್ಥಿರತೆಗಳು ಕೂಡ, ಬಂಗಾರದ ಬೆಲೆ ಮೇಲೆ ನೇರವಾಗಿ ಪರಿಣಾಮ ಬೀರಿದೆ ಎಂದರೆ ತಪ್ಪಾಗಲ್ಲ.
ಕೇಂದ್ರ ಬ್ಯಾಂಕುಗಳ ಬಂಗಾರದ ಖರೀದಿ:
ಚಿನ್ನವು ಒಂದು ಅತ್ಯುತ್ತಮ ಹೂಡಿಕೆ ಸಾಧನವಾಗಿದೆ. ಹೀಗಾಗಿಯೇ ಭಾರತ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳ, ಕೇಂದ್ರ ಬ್ಯಾಂಕುಗಳು ಚಿನ್ನವನ್ನು ಖರೀದಿಸುತ್ತಿವೆ. ಅಂತಾರಾಷ್ಟ್ರೀಯ ಬಂಡವಾಳ ಮಾರುಕಟ್ಟೆಯಲ್ಲಿ ಡಾಲರ್‍ನ ಬದಲಾಗಿ, ಬಂಗಾರದ ಮೌಲ್ಯವರ್ಧನೆಗೆ ಇದು ಕಾರಣವಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸಹ ಈ ತರದಲ್ಲಿ ಚಿನ್ನದ ನಿಕ್ಷೇಪವನ್ನು ಹೆಚ್ಚಿಸುತ್ತಿದೆ.
ಇನ್ನು ಮಾರುಕಟ್ಟೆಯ ತಜ್ಞರ ಪ್ರಕಾರ, ಬಂಗಾರದ ಬೆಲೆ ಈಗ ₹93,000-₹94,000 ಬೆಲೆಯಲ್ಲೇ ತಿರುಗುತ್ತಿದೆ.. ತಾಂತ್ರಿಕವಾಗಿ ₹92,750 ಗೆ ಬೆಂಬಲ ಸಿಗುತ್ತಿದ್ದು, ₹94,400ನ್ನು ಮೀರಿದರೆ ನೇರವಾಗಿ ₹96,000-₹98,000 ಗಡಿ ಮುಟ್ಟಬಹುದು. ಮುಂದಿನ 12 ತಿಂಗಳಲ್ಲಿ ₹1.10 ಲಕ್ಷ ಎಂಬ ಗುರಿ ಅಸಾಧ್ಯವಲ್ಲ.
ಹೂಡಿಕೆ ಮಾಡಲು ಉತ್ತಮ ವಿಧಾನ:
ಫಿಸಿಕಲ್ ಗೋಲ್ಡ್:
ನೇರವಾಗಿ ನೀವು ಚಿನ್ನದ ಬಾರ್‍ಗಳು, ನಾಣ್ಯಗಳು ಅಥವಾ ಆಭರಣಗಳನ್ನು ಖರೀದಿಸುವುದು ಉತ್ತಮ ಎನ್ನಬಹುದು. ಏಕೆಂದರೆ ಇದು ಹೂಡಿಕೆಯ ಶ್ರೇಷ್ಠ ಮಾದರಿಯಾಗಿದೆ. ಆದರೆ ಇದನ್ನು ಸಂರಕ್ಷಿಸುವ ವಿಧಾನ ಮಾತ್ರ ಅಚ್ಚುಕಟ್ಟಾಗಿರಬೇಕು. ಇದರಲ್ಲಿ ಭದ್ರತೆ ಕಾಯ್ದುಕೊಳ್ಳುವುದು ಬಹಳ ಅಗತ್ಯ ಎನ್ನಬಹುದು.
ಗೋಲ್ಡ್ ಈಟಿಎಫ್ (ETF):
ಗೋಲ್ಡ್ ಇಟಿಎಫ್ ಎನ್ನುವುದು ಷೇರು ಮಾರುಕಟ್ಟೆಯಲ್ಲಿ ಲಭ್ಯವಿರುವ ಬಂಗಾರದ ಹೂಡಿಕೆಯ ಒಂದು ರೂಪ ಎಂದು ಕರೆಯುತ್ತಾರೆ. ಗೋಲ್ಡ್ ಇಟಿಎಳ್‌ನಲ್ಲಿ ನೇರವಾಗಿ ಬಂಗಾರ ಖರೀದಿಸುವ ಬದಲು, ಷೇರುಗಳ ಮೂಲಕ ಬಂಗಾರದ ಮೌಲ್ಯದಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಬಂಗಾರವನ್ನು ಡಿಜಿಟಲ್ ಫಾರ್ಮ್‌ನಲ್ಲಿ ಹೂಡಬಹುದಾಗಿದೆ, ಮತ್ತು ಅದನ್ನು ಖರೀದಿಸುವುದು, ಮಾರಾಟ ಮಾಡುವುದು ತುಂಬಾ ಸುಲಭ.
ಸಾವರಿನ್ ಗೋಲ್ಡ್ ಬಾಂಡ್‌ಗಳು:
ಸಾವರಿನ್ ಗೋಲ್ಡ್ ಬಾಂಡ್ ಎಂದರೆ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುವ ಬಾಂಡ್ ಎನ್ನಬಹುದು. ಇವುಗಳಲ್ಲಿ ಬಂಗಾರದ ಬೆಲೆಯ ಬೆಳವಣಿಗೆ ಜೊತೆಗೆ ಬಡ್ಡಿ ಆದಾಯವೂ ಸಿಗುತ್ತದೆ. ಹೀಗಾಗಿ ಇದು ಬಂದಾರದ ಹೂಡಿಕೆ ಮಾಡುವ ಮತ್ತೊಂದು ಸುರಕ್ಷಿತ ಮತ್ತು ಲಾಭದಾಯಕ ಮಾರ್ಗ ಎನ್ನಬಹುದು.
ಇನ್ನು ಹೆಚ್ಚು ಲಾಭ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಬಯಸುವ ಹೂಡಿಕೆದಾರರಿಗೆ, ಸಾವರಿನ್ ಗೋಲ್ಡ್ ಬಾಂಡ್ ಉತ್ತಮ ಆಯ್ಕೆ ಎನ್ನಬಹುದು. ಏಕೆಂದರೆ ಇದರಲ್ಲಿ ಹೆಚ್ಚು ಲಾಭ ಮತ್ತು ಕಡಿಮೆ ಜಾಗತಿಕ ಜಟಿಲತೆಗಳಿಲ್ಲದೇ ಸರಳವಾಗಿ ಹೂಡಿಕೆ ಮಾಡಬಹುದು. ಅಂತಹವರಿಗೆ ಇದು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಬಹುದಾಗಿದೆ.
ಹೂಡಿಕೆಗೆ ಸೂಕ್ತ ಸಮಯವೇ?
ಈ ಪರಿಯ ಬೆಲೆ ಏರಿಕೆಯನ್ನು ನೋಡಿದರೆ, ಬಂಗಾರದ ಮೇಲೆ ಹೂಡಿಕೆಗೆ ಇದೇ ಉತ್ತಮ ಸಮಯ ಎನ್ನಲಾಗುತ್ತಿದೆ. ಆದರೆ ಇದನ್ನು ಎಷ್ಟರ ಮಟ್ಟಿಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಗೊತ್ತಿರಬೇಕು. ಆಗಲೇ ಹೇಳಿದಂತೆ ಮುಂಬರುವ ದಿನಗಳಲ್ಲಿ ₹1.10 ಲಕ್ಷ ಗುರಿ ಇರಬಹುದು, ಆದರೆ ಹೂಡಿಕೆಗೆ ತ್ವರಿತ ನಿರ್ಧಾರಕ್ಕೆ ಬರುವುದಿಲ್ಲ. ಹಂತ ಹಂತವಾಗಿ ಖರೀದಿಸುವ "ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್" ವಿಧಾನ ಹೆಚ್ಚು ಪ್ರಯೋಜನಕಾರಿಯಾಗುತ್ತದೆ.
ಹೂಡಿಕೆದಾರರಿಗೆ ಕೊನೆಯ ಸಲಹೆ:
-ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೋದಲ್ಲಿ ಕನಿಷ್ಠವೆಂದರೂ 10% ಬಂಗಾರ ಇಟ್ಟುಕೊಂಡಿರಬೇಕು.
-ದೀರ್ಘಕಾಲಿಕ ಹೂಡಿಕೆಯನ್ನು ಆಯ್ಕೆ ಮಾಡಿ, ತಾತ್ಕಾಲಿಕ ಏರಿಳಿತಗಳಿಂದ ತಲೆಕೆಡಿಸಿಕೊಳ್ಳಬೇಡಿ.
-ಬಂಗಾರದ ಬೆಲೆ ತೀರಾ ಹೆಚ್ಚಾದಾಗ ಹೊಸ ಹೂಡಿಕೆಗೆ ಯೋಚಿಸಿ, ಆದರೆ ಇತ್ತೀಚಿನ ಕಾರೆಕ್ಷನ್ ಗಳನ್ನು ಗಮನದಲ್ಲಿಡಿ.
ಬಂಗಾರದ ಬೆಲೆ ₹1.10 ಲಕ್ಷ ತಲುಪಲು ಸಾಧ್ಯ ಎನ್ನುವ ನಿರೀಕ್ಷೆಯೇ ಈಗ ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸುತ್ತಿದೆ. ಹೂಡಿಕೆದಾರರು ಸಮಗ್ರ ಮಾಹಿತಿ ಆಧಾರಿತವಾಗಿ ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ. ಧೈರ್ಯ, ಧೈರ್ಯವಂತರಿಗೆ ಲಾಭ ಎಂಬ ಮಾತನ್ನು ನೆನಪಿಸಿಕೊಳ್ಳಿ - ಆದರೆ ಅದನ್ನು ಜವಾಬ್ದಾರಿ ಹಾಗೂ ತಂತ್ರಜ್ಞಾನದೊಂದಿಗೆ ಮಿಶ್ರಣ ಮಾಡಿದಾಗ ಮಾತ್ರ ನಿಜವಾದ ಹೂಡಿಕೆ ಸಾಧ್ಯ.


Click it and Unblock the Notifications