ಅಂತೂ ಇಂತು 2025 ಮುಗಿದೇ ಹೋಯ್ತು, 2026 ಆಗಮನವಾಯ್ತು. ಹೂಡಿಕೆದಾರರಂತೂ ಈ ವರ್ಷದಲ್ಲಿ ಹಲವು ನಿರೀಕ್ಷೆಗಳನ್ನು, ಯೋಜನೆಗಳನ್ನು ರೂಪಿಸಿಕೊಂಡಿರುತ್ತಾರೆ. ಅದರಲ್ಲೂ ಚಿನ್ನ, ಬೆಳ್ಳಿ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆದ್ದರಿಂದ 2026 ಪ್ರಾರಂಭವಾಗುತ್ತಿದ್ದಂತೆ, ಚಿನ್ನ ಅಥವಾ ಬೆಳ್ಳಿ, ಯಾವುದರಲ್ಲಿ ಹೂಡಿಕೆ ಮಾಡಬೇಕು ಎಂಬ ಗೊಂದಲಗಳು ಶುರುವಾಗಿದೆ. ಅಲ್ಲದೇ ಕೆಲವರಂತೂ ತಜ್ಞರಲ್ಲಿ ಬಿಟ್ಟುಬಿಡದೆ ಪ್ರಶ್ನೆ ಮಾಡುತ್ತಿದ್ದಾರೆ.

ಇತ್ತೀಚಿನ ಹೂಡಿಕೆದಾರರು ಚಿನ್ನ, ಬೆಳ್ಳಿ ಮೇಲಿನ ವ್ಯಾಮೋಹಕ್ಕಿಂತ ಅದರಿಂದ ಲಾಭ ಗಳಿಸುವುದೇ ಮುಖ್ಯ ಗುರಿಯಾಗಿದೆ. ಅಲ್ಲದೇ ಇದೇ ಹೂಡಿಕೆದಾರರ ಬೇಡಿಕೆಯಿಂದಾಗಿ 2025 ರಲ್ಲಿ ದಾಖಲೆ ಬೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಕಂಡಿತ್ತು. 2025ರಲ್ಲಿ ಚಿನ್ನದ ಬೆಲೆ ಶೇ. 70%ಕ್ಕೂ ಅಧಿಕ ಹೆಚ್ಚಳವಾದ್ರೆ, ಬೆಳ್ಳಿ ಶೇ.140% ರಷ್ಟು ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದೆ.
2025ರಲ್ಲಿ ಚಿನ್ನ, ಬೆಳ್ಳಿ ದರ ಏರಿಕೆಯಾಗಿದ್ದರಿಂದಲೇ ಇದೀಗ, 2026ರಲ್ಲಿ ಯಾವ ಲೋಹವು ಹೆಚ್ಚು ಲಾಭದಾಯಕ ಹೂಡಿಕೆಯಾಗಲಿದೆ ಎಂಬ ಚರ್ಚೆ ಶುರವಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 1 ಗ್ರಾಂಗೆ ಸುಮಾರು ₹13,620 ಆಗಿದ್ದರೆ, 10 ಗ್ರಾಂ ಚಿನ್ನಕ್ಕೆ ₹1,36,200 ತಲುಪಿದೆ. ಇನ್ನು ಬೆಳ್ಳಿ ಬೆಲೆ ಕೆ.ಜಿ.ಗೆ ₹2,42,000 ರೂ.ಗೆ ತಲುಪಿದೆ.
2026 ರಲ್ಲಿ ಚಿನ್ನ ಏರಿಕೆಯಾಗುತ್ತಾ?
2026ರ ಚಿನ್ನದ ಬೆಲೆ ಬಗ್ಗೆ ತಜ್ಞರು ಮಿಶ್ರ ಅಭಿಪ್ರಾಯವನ್ನು ಹೊಂದಿದ್ದಾರೆ. ವಿಶ್ವ ಬ್ಯಾಂಕುಗಳು ಮತ್ತು ಆರ್ಥಿಕ ತಜ್ಞರ ಅಂದಾಜಿನ ಪ್ರಕಾರ, ಪ್ರತಿ ಔನ್ಸ್ ಚಿನ್ನದ ಬೆಲೆ ಸರಾಸರಿ $4,500 ರಿಂದ $5,000 ತಲುಪುವ ನಿರೀಕ್ಷೆಯಿದೆ. ಅಂದರೆ ಭಾರತೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹1,85,000 ರಿಂದ ₹2,00,000ಕ್ಕೆ ತಲುಪಬಹುದು ಎಂದು ವರದಿಯಾಗಿದೆ.
ಗೋಲ್ಡ್‌ಮನ್ ಸ್ಯಾಚ್ಸ್ ಮತ್ತು ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನಂತಹ ಪ್ರಮುಖ ಸಂಸ್ಥೆಗಳು ಆರ್ಥಿಕ ಅನಿಶ್ಚಿತತೆ ಹಾಗೂ ಹಣದುಬ್ಬರದ ಅಪಾಯಗಳ ಹಿನ್ನೆಲೆಯಲ್ಲಿ ಚಿನ್ನವು ಸುರಕ್ಷಿತ ಹೂಡಿಕೆಯಾಗಿ ಮುಂದುವರಿಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕಾಗಿ ಹೂಡಿಕೆದಾರರು ಚಿನ್ನದ ಮೇಲೆ ಸುರಕ್ಷಿತ ಆದಾಯವಾಗಿ ವಿಶ್ವಾಸ ಇಟ್ಟುಕೊಳ್ಳಬಹುದು ಎಂದು ಹೇಳಿದೆ.
ಬೆಳ್ಳಿ ದರ ಇಳಿಕೆಯಾಗುತ್ತಾ?
2026ರಲ್ಲಿ ಬೆಳ್ಳಿ ಮತ್ತಷ್ಟು ಭಾರಿ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅನೇಕ ತಜ್ಞರ ಪ್ರಕಾರ, ಬೆಳ್ಳಿ ಚಿನ್ನಕ್ಕಿಂತ ಹೆಚ್ಚು ಬೆಲೆ ಏರಿಕೆಗೊಂಡು ಹೂಡಿಕೆದಾರರಿಗೆ ಭಾರೀ ಆದಾಯ ತಂದುಕೊಡಲಿದೆ ಎಂದು ಹೇಲಲಾಗಿದೆ. ಜಾಗತಿಕವಾಗಿ ಬೆಳ್ಳಿಯ ಬೆಲೆ $85 ರಿಂದ $95 ರವರೆಗೆ, ಮತ್ತು ಕೆಲವು ತಜ್ಞರು $100ಕ್ಕೂ ಅಧಿಕ ಬೆಲೆಗೆ ತಲುಪಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ವರ್ಷ ಭಾರತದಲ್ಲಿ ಪ್ರತಿ ಕೆ.ಜಿ. ಬೆಳ್ಳಿ ₹2,80,000 ರಿಂದ ₹3,20,000ಕ್ಕೆ ಏರುವ ನಿರೀಕ್ಷೆಯಿದೆ.
ಮೋತಿಲಾಲ್ ಓಸ್ವಾಲ್ ಮತ್ತು ಕೊಠಾರಿ ಕಂಪನಿಗಳು ಸಹ ಈ ಬೆಲೆ ಏರಿಕೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ಅಂದರೆ ವರದಿ ಪ್ರಕಾರ, 2026ರಲ್ಲಿ ಚಿನ್ನಕ್ಕಿಂತ ಬೆಳ್ಳಿ ಮೇಲಿನ ಹೂಡಿಕೆ ಉತ್ತಮ ಎಂದು ಹೇಳಲಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
More From GoodReturns

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?



Click it and Unblock the Notifications