ದೇಶದಲ್ಲಿ ಯಾವುದೇ ಯೋಜನೆ, ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕೆಂದರೂ ರೇಷನ್ ಕಾರ್ಡ್ (Ration Card) ಇರಲೇಬೇಕು. ಅಲ್ಲದೇ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಬಡವರ ಅನುಕೂಲಕ್ಕಾಗಿ ಜಾರಿಗೆ ತಂದ ಯೋಜನೆಗಳಲ್ಲಿ ಅಕ್ಕಿ ಯೋಜನೆ ಕೂಡಾ ಒಂದು. ಕೇಂದ್ರ ಸರ್ಕಾರದ ಒನ್ ನೇಷನ್, ಒನ್ ರೇಷನ್ ಕಾರ್ಡ್ ಎಂಬ ಯೋಜನೆಯಡಿ ಜಾರಿಗೆ ಬಂದಿರುವ ಈ ರೇಷನ್ ಕಾರ್ಡ್ ಆಹಾರ ಧಾನ್ಯಗಳನ್ನು ಉಚಿತವಾಗಿ ಸರ್ಕಾರದಿಂದ ಪಡೆಯಬಹುದು. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ರೇಷನ್ ಕಾರ್ಡ್ ಮೂಲಕ ಬಡತನ ರೇಖೆಯಲ್ಲಿರುವ ಜನರು ಸಬ್ಸಿಡಿ ದರದಲ್ಲಿ (Subsidy) ಆಹಾರ ಧಾನ್ಯಗಳನ್ನುಬ ಪಡೆಯಬಹುದು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧೀನದಲ್ಲಿರುವ ಈ ಪಡಿತರ ಚೀಟಿ, ಹಲವು ಸೌಲಭ್ಯಗಳನ್ನು ನೀಡುತ್ತದೆ.

ಇಷ್ಟೆಲ್ಲಾ ಸೌಲಭ್ಯಗಳನ್ನು ನೀಡುವ ರೇಷನ್ ಕಾರ್ಡ್‌ನಲ್ಲಿ ಇದೀಗ ಮಹತ್ವದ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಕರ್ನಾಟಕ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಇದೀಗ ಹೊಸ ಮೊಬೈಲ್ ಅಪ್ಲಿಕೇಶನ್ ಲಾಂಚ್ ಮಾಡಲು ಸಜ್ಜಾಗಿದೆ. ರಾಜ್ಯದ ಲಕ್ಷಾಂತರ ಕುಟುಂಬಗಳು ಪ್ರತಿದಿನ ಅಕ್ಕಿ, ಗೋಧಿ, ಸಕ್ಕರೆ ಮುಂತಾದ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯುತ್ತಿದೆ. ಅದರಲ್ಲೂ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಕುಟುಂಬಗಳಿಗೆ ಈ ರೇಷನ್ ಕಾರ್ಡ್ ಯೋಜನೆಗಳು ಬಹಳ ಪ್ರಯೋಜನಕಾರಿಯಾಗಿದೆ.
ಕರ್ನಾಟಕ ಸರ್ಕಾರದಿಂದ ಮಹತ್ವದ ನಿರ್ಧಾರ
ಕರ್ನಾಟಕ ಸರ್ಕಾರ ಇದೀಗ ರೇಷನ್ ಕಾರ್ಡ್ ಸಂಬಂಧಿಸಿ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸ ಮೊಬೈಲ್ ಅಪ್ಲಿಕೇಶನ್ ಲಾಂಚ್ ಮಾಡಲಿದೆ ಎಂದು ವರದಿಯಾಗಿದೆ. ಒಂದು ವೇಳೆ ಈ ಆಪ್ ಲಾಂಚ್ ಆದ್ರೆ, ನ್ಯಾಯಬೆಲೆ ಅಂಗಡಿಗಳ ಆಹಾರ ವಿತರಣೆಗಳಲ್ಲಿ ಹೆಚ್ಚು ಪಾರದರ್ಶಕತೆ, ಅಕ್ರಮ ನಿಯಂತ್ರಣ, ಗ್ರಾಹಕರಿಗೆ ಹಲವು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.
ಹೊಸ ಆಪ್ ಬರಲು ಕಾರಣವೇನು?
ಸದ್ಯ ಕರ್ನಾಟಕದಲ್ಲಿ 20 ಸಾವಿರಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿದೆ. ಆದರೆ ದಿನೇ ದಿನೇ ನ್ಯಾಯಬೆಲೆ ಅಂಗಡಿಗಳ ಮೇಲಿನ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
- ಅಕ್ರಮವಾಗಿ ಮಾರಾಟ
- ಗೋದಾಮಿನ ಸ್ಟಾಕ್ ಅನ್ನು ತಪ್ಪಾಗಿ ರೆಕಾರ್ಡ್ ಮಾಡುವುದು
- ಫಲಾನುಭವಿಗಳ ಹೆಸರಿನಲ್ಲಾಗುತ್ತಿರುವ ವಂಚನೆ
- ಕಡಿಮೆ ತೂಕದಲ್ಲಿ ಅಕ್ಕಿ ವಿತರಣೆ ಮಾಡುವ ವಂಚನೆ
ಈ ಎಲ್ಲಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಆಹಾರ ಇಲಾಖೆ ಸಂಪೂರ್ಣ ಡಿಜಿಟಲೀಕರಣ ಮಾಡಲು ಮುಂದಾಗಿದೆ ಎನ್ನಲಾಗಿದೆ. ಒಂದು ವೇಳೆ ಈ ಆಪ್ ಲಾಂಚ್ ಆದ್ರೆ, ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುವ ಎಲ್ಲಾ ವ್ಯವಹಾರಗಳು ಸರ್ಕಾರದ ಸರ್ವರ್‌ನಲ್ಲಿ ದಾಖಲಾಗುತ್ತದೆ. ಸಾರ್ವಜನಿಕರೂ ಈ ಮೂಲಕ ಸಂಪೂರ್ಣ ಮಾಹಿತಿ ಪಡೆಯಬಹುದು.
ಈ ಆಪ್‌ನ ಪ್ರಮುಖ ಕಾರ್ಯ:
ಆಧಾರ್ ಆಧಾರಿತವಾಗಿ ಪರಿಶೀಲನೆ ನಡೆಸಲಾಗುತ್ತದೆ. ಗ್ರಾಹಕರು ರೇಷನ್ ಪಡೆಯಲು ಬಂದಾಗ, ಬಯೋಮೆಟ್ರಿಕ್, ಒಟಿಪಿ, ಆಧಾರ್ ನಂಬರ್ ಸ್ಕ್ಯಾನಿಂಗ್ ಮೂಲಕ ಮಾಹಿತಿಯನ್ನು ಪರಿಶೀಲನೆ ನಡೆಸಲಾಗುತ್ತದೆ. ಇದರಿಂದ ಯಾವುದೇ ಗ್ರಾಹಕರು ನಕಲಿ ಕಾರ್ಡ್‌ಗಳನ್ನು ತೋರಿಸಿ ಅಕ್ಕಿ ಪಡೆಯುವುದನ್ನು ತಡೆಯಲಾಗುತ್ತದೆ.
ಗ್ರಾಹಕರಿಗೆ ಪ್ರಯೋಜನಗಳು:
ತಮ್ಮ ಕಾರ್ಡ್‌ನಲ್ಲಿ ಸಿಗಬೇಕಾದ ಎಲ್ಲಾ ಸೌಲಭ್ಯಗಳ ಮಾಹಿತಿಯನ್ನು ಆಪ್ ಮೂಲಕ ಪಡೆಯಬಹುದು. ಈ ತಿಂಗಳಲ್ಲಿ ಎಷ್ಟು ಅಕ್ಕಿ ಸಿಗಬೇಕು, ಎಷ್ಟು ಪಡೆದಿದ್ದಾರೆ?, ಎಷ್ಟು ಬಾಕಿ ಇದೆ?, ಎಂಬ ಮಾಹಿತಿಯನ್ನು ಪಡೆಯಬಹುದು. ಯಾವುದೇ ದೂರುಗಳನ್ನು ಸಹ ಸಲ್ಲಿಸಬಹುದು. ಅಕ್ರಮಕ್ಕೆ ಬ್ರೇಕ್ ನೀಡಲಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications